ಕಾರ್ಬೆಟ್ ವಸ್ತು ಸಂಗ್ರಹಾಲಯವು ಕಾಲದುಂಗಿಯಲ್ಲಿ ನೆಲೆಸಿರುವ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಪ್ರಖ್ಯಾತ ಬ್ರಿಟೀಷ್ ಬೇಟೆಗಾರ ಮತ್ತು ವನ್ಯಜೀವಿ ಸಂರಕ್ಷಕರಾದ ಜಿಮ್ ಕಾರ್ಬೆಟ್‍ರವರಿಗೆ ಸೇರಿದ ಒಂದು ಪಾರಂಪರಿಕ ಕಟ್ಟಡವಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಇವರಿಗೆ ಸೇರಿದ ಕೆಲವು ವೈಯುಕ್ತಿಕ ವಸ್ತುಗಳನ್ನು, ಅವರ ಪತ್ರಗಳನ್ನು, ಪುರಾತನ ವಸ್ತುಗಳನ್ನು ಹಾಗು ಅಪರೂಪದ ಮತ್ತು ಹಳೆಯ ಛಾಯಾಚಿತ್ರಗಳನ್ನು ಸಂರಕ್ಷಿಸಿ ಇಡಲಾಗಿದೆ. ಇವೆಲ್ಲವು ಇವರ ಘನ ವ್ಯಕ್ತಿತ್ವವನ್ನು ಪ್ರವಾಸಿಗರಿಗೆ ಪರಿಚಯಿಸುತ್ತವೆ. ಇದರ ಒಳಗಡೆ ಪ್ರವೇಶಿಸಲು ಪ್ರವಾಸಿಗರು ಸ್ವಲ್ಪ ಪ್ರಮಾಣದ ಪ್ರವೇಶ ಶುಲ್ಕವನ್ನು ತೆರಬೇಕಾಗುತ್ತದೆಯಷ್ಟೇ.


Click it and Unblock the Notifications