Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಲ್ಕಾ » ಹವಾಮಾನ

ಚಿಲ್ಕಾ ಹವಾಮಾನ

ಬೇಸಿಗೆಗಾಲ

ಬೇಸಿಗೆಯಲ್ಲಿ ಉಷ್ಣದ ವಾತಾವರಣವಿರುತ್ತದೆ. ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗಿನ ನಾಲ್ಕು ತಿಂಗಳು ಬೇಸಿಗೆ ಕಾಲವಾಗಿರುತ್ತದೆ. ಈ ಸಮಯದಲ್ಲಿ ಉಷ್ಣಾಂಸ 45 ಡಿಗ್ರಿಯವರೆಗೂ ಸಾಗುತ್ತದೆ ಮತ್ತು ಕಮ್ಮಿ ಉಷ್ಣಾಂಸವೆಂದರೆ 19 ಡಿಗ್ರಿಯವರೆಗೆ ಇಳಿಯುತ್ತದೆ. ಈ ಸಮಯದಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಗಳಿರುತ್ತದೆ.

ಮಳೆಗಾಲ

ಮಳೆಗಾಲ ಜುಲೈ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಸಾಗುತ್ತದೆ. ಚಿಲ್ಕಾದಲ್ಲಿ ಈ ಸಮಯದಲ್ಲಿ ಉತ್ತಮ ಮಳೆಯಾಗುತ್ತದೆ, ಈ ಅವಧಿಯಲ್ಲಿ ನೈಖುತ್ಯ ಮಾನ್ಸೂನಿನ ಪ್ರಭಾವದಿಂದ ಮಳೆಯಾಗುತ್ತದೆ. ಆದರೂ ಅಕ್ಟೋಬರ್ ತಿಂಗಳಲ್ಲಿ ಮಳೆ ಕೊಂಚ ಇಳಿಮುಖವಾಗುತ್ತದೆ. ಚಿಲ್ಕಾಗೆ ಮಳೆಗಾಲದಲ್ಲಿ ಭೇಟಿ ನೀಡುವುದು ಸೂಕ್ತವಲ್ಲ.

ಚಳಿಗಾಲ

ಚಳಿಗಾಲದ ಸಮಯದಲ್ಲಿ ಇಲ್ಲಿ ಹೆಚ್ಚಿನ ಚಳಿಯ ವಾತಾವರಣ ವಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶ 4ಡಿಗ್ರಿ ಸೆಲ್ಸಿಯಸ್ ನಿಂದ 22 ಡಿಗ್ರಿ ಸೆಲ್ಸಿಯಸ್ ವರೆಗಿರುತ್ತದೆ. ಚಳಿಗಾಲದ ಚಳಿಯ ಅನುಭವಾಗುತ್ತದೆ, ಫೆಬ್ರವರಿ ತಿಂಗಳಾಂತ್ಯದ ವರೆಗೆ ಇಲ್ಲಿ ಚಳಿಗಾಲದ ವಾತಾವರಣ ವಿರುತ್ತದೆ. ಚಳಿಗಾಲದ ದಿನದ ಸಮಯದಲ್ಲಿ ಅಹ್ಲಾದಕರ ವಾತಾವರಣವಿದ್ದು, ಪ್ರವಾಸಿಗರು ಪ್ರವಾಸದ ಮಜಾವನ್ನು ಸವಿಯ ಬಹುದಾಗಿದೆ.