Search
  • Follow NativePlanet
Share
ಮುಖಪುಟ » ಸ್ಥಳಗಳು » ಚಿಕಲ್ದಾರಾ » ಹವಾಮಾನ

ಚಿಕಲ್ದಾರಾ ಹವಾಮಾನ

ಅಕ್ಟೋಬರ್ ತಿಂಗಳಿನಿಂದ ಜೂನ್ ತಿಂಗಳು ಚಿಕಲ್ದಾರಾ ಪ್ರದೇಶದಲ್ಲಿ ಮೋಜಿನಿಂದ ಸಮಯ ಕಳೆಯಲು ಸೂಕ್ತವಾದ ಅವಧಿ. ಈ ಅವಧಿಯು ಚಳಿಗಾಲ ಹಾಗೂ ಮಳೆಗಾಲ ಎರಡೂ ಋತುಗಳ ಅನುಭವವನ್ನು ನೀಡುತ್ತವೆ.

ಬೇಸಿಗೆಗಾಲ

ಬೇಸಿಗೆ ಕಾಲದಲ್ಲಿ ಚಿಕಲ್ದಾರಾದಲ್ಲಿನ ಬೇಸಿಗೆಯು ಮಧ್ಯಮ ಪ್ರಮಾಣದಲ್ಲಿರುತ್ತದೆ. ಈ ಸಮಯದಲ್ಲಿ ತಾಪಮಾನದ ಪ್ರಮಾಣ 32 ಡಿ.ಸೆ ಹಾಗೂ 38 ಡಿ.ಸೆ ಮಧ್ಯದಲ್ಲಿರುತ್ತದೆ. ಮಾರ್ಚ್ ಹಾಗೂ ಮೇ ತಿಂಗಳಿನಲ್ಲಿ ಚಿಕಲ್ದಾರಾ ಪ್ರದೇಶಕ್ಕೆ ಪ್ರವಾಸಕ್ಕಾಗಿ ಬರಬಹುದಾಗಿದೆ.

ಮಳೆಗಾಲ

ಚಿಕಲ್ದಾರಾ ದಲ್ಲಿ ಮಳೆಗಾಲವು ಜೂನ್ ತಿಂಗಳಿನಿಂದ ಸೆಪ್ಟಂಬರ್ ತಿಂಗಳುಗಳವರೆಗೆ ಮುಂದುವರಿಯುತ್ತದೆ. ಹಾಗೂ ಈ ಸಮಯದಲ್ಲಿ ಮಳೆಯೂ ಅತ್ಯಧಿಕವಾಗಿ ಸುರಿಯುತ್ತದೆ. ಈ ಮಳೆಯಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಹೆಚ್ಚಾಗಿ ಕೈಗೊಳ್ಳಲಾಗುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿನಿಂದ ಫೆಬ್ರುವರಿ ತಿಂಗಳುಗಳು ಚಿಕಲ್ದಾರಾದಲ್ಲಿ ಚಳಿಗಾಲ. ಈ ಸಮಯದಲ್ಲಿ ತಾಪಮಾನವು 15 ಡಿ.ಸೆ ನಿಂದ 25 ಡಿ. ಸೆ ವರೆಗೆ ದಾಖಲಾಗುತ್ತದೆ. ವಾತಾವರಣವು ತಂಪಾಗಿದ್ದು ಬೆಟ್ಟಗಳ ಕೆಳಗೆ ಹಾಗೂ ಸುತ್ತಮುತ್ತಲಿನ ದೃಶ್ಯಗಳು ಮನಸೆಳೆಯುವಂತಿರುತ್ತದೆ.