ಅಣ್ಣಾ ಇಂಟರನ್ಯಾಷನಲ್ ಏರ್ಪೋರ್ಟ್ ಚೆನ್ನೈನಲ್ಲಿರುವ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಭಾರತದ ಪ್ರಮುಖ ಹಾಗು ಇತರೆ ನಗರಗಳೊಂದಿಗೆ ಉತ್ತಮ ವೈಮಾನಿಕ ಸಂಪರ್ಕವನ್ನು ಹೊಂದಿದೆ. ಸಿಂಗಾಪೂರ್ ಹಾಗು ಕೊಲಂಬೊಗಳಿಗೆ ನಿರಂತರವಾಗಿ ವಿಮಾನ ಹಾರಾಟಗಳು ಇದ್ದೆ ಇರುತ್ತದೆ. ಇದಲ್ಲದೆ, ಚೆನ್ನೈನಲ್ಲಿರುವ ಕಾಮರಾಜ್ ಡೊಮೆಸ್ಟಿಕ್ ವಿಮಾನ ನಿಲ್ದಾಣದಿಂದ ಹೈದರಾಬಾದ್, ದೆಹಲಿ, ಪೊರ್ಟ್ ಬ್ಲೇರ್ ಮತ್ತು ಮುಂಬೈ ನಗರಗಳಿಗೆ ನಿರಂತರವಾಗಿ ವಿಮಾನಗಳಿವೆ.