ಚೌಲ್ ನಲ್ಲಿ ಬೇಸಿಗೆಯು ಮಾರ್ಚ್ ನಿಂದ ಜುಲೈವರೆಗೆ ಇದ್ದು ಹಿತಕರವಾದ ವಾತಾವರಣವನ್ನು ಹೊಂದಿರುತ್ತದೆ. ಉಷ್ಣಾಂಶವು ಗರಿಷ್ಟ 35° ಸೆಲ್ಶಿಯಸ್ ವರೆಗೆ ಏರುತ್ತದೆ. ಈ ಕಾಲ ಇಲ್ಲಿ ಸುತ್ತ ಮುತ್ತಲ ತಾಣಗಳನ್ನು ವೀಕ್ಷಿಸಲು ಹಾಗು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ಕಾಲವಾಗಿದೆ.
ಚೌಲ್ ಪ್ರಾಂತ್ಯವು ಮಿತ ಪ್ರಮಾಣದ ಮಳೆಯನ್ನು ಕಾಣುವ ಪ್ರದೇಶವಾಗಿರುವುದರಿದಂದ ಇಲ್ಲಿ ಮಳೆಗಾಲವು ಹಿತಕರವಾಗಿರುತ್ತದೆ. ಮಳೆಯನ್ನು ಆಸ್ವಾದಿಸಲು ನೀವು ಬಯಸುವಿರಾದರೆ ಚೌಲ್ ಗೆ ಭೇಟಿ ಕೊಡುವುದು ಉತ್ತಮ.
ಚೌಲ್ ನಲ್ಲಿ ಚಳಿಗಾಲದಲ್ಲಿ 12°ಸೆಲ್ಶಿಯಸ್ ನಷ್ಟು ಕನಿಷ್ಟ ಉಷ್ಣಾಂಶವಿದ್ದು, ಪ್ರವಾಸಿಗರಿಗೆ ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಸಮಯವಾಗಿದೆ. ಆಗ ಇಲ್ಲಿನ ಗರಿಷ್ಟ ಉಷ್ಣಾಂಶವು 28° ಸೆಲ್ಶಿಯಸ್ ನ ಆಸು ಪಾಸಿನಲ್ಲಿರುತ್ತದೆ. ಚಳಿಗಾಲವು ನವಂಬರ್ ನಿಂದ ಫೆಬ್ರವರಿ ಮಧ್ಯಭಾಗದವರೆಗೆ ಇರುತ್ತದೆ.