Search
  • Follow NativePlanet
Share
ಮುಖಪುಟ » ಸ್ಥಳಗಳು » ಬೈಂದೂರು » ಹವಾಮಾನ

ಬೈಂದೂರು ಹವಾಮಾನ

ಅಗಸ್ಟ್ ಮತ್ತು ಮಾರ್ಚ್ ತಿಂಗಳುಗಳು ಪ್ರವಾಸಿಗರಿಗೆ ಬೈಂದೂರಿಗೆ ಬರಲು ಅನುಕೂಲ ವಾತಾವರಣವಿರುತ್ತದೆ. ಈ ಸಮಯದಲ್ಲಿ ಸಮುದ್ರದಲ್ಲಿ ಹಡಗು ಪ್ರಯಾಣ, ಸಮುದ್ರದಲ್ಲಿ ಸಾಹಸ ಕ್ರೀಡೆಗಳನ್ನು ಕೂಡ ಆಡಬಹುದಾಗಿದೆ.

ಬೇಸಿಗೆಗಾಲ

(ಫೆಬ್ರವರಿಯಿಂದ ಮೇ): ಕರಾವಳಿ ತೀರವಾಗಿರುವ ಬೈಂದೂರಿನಲ್ಲಿ ಹೆಚ್ಚಿನ ತಾಪಮಾನವಿರುತ್ತದೆ. ಗರಿಷ್ಠ 36 ಡಿ.ಸೆ. ಇದ್ದರೆ ಕನಿಷ್ಠ 24 ಡಿ.ಸೆ.ವರೆಗಿರುತ್ತದೆ.  

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್): ನೈರುತ್ಯ ಮಾನ್ಸೂನ್ ಪ್ರದೇಶದಲ್ಲಿ ಬರುವ ಬೈಂದೂರ ನಗರದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಇಲ್ಲಿಗೆ ಬರುವುದು ಅಷ್ಟೇನೂ ಒಳ್ಳೇಯದಲ್ಲ ಎನ್ನಬಹುದು.

ಚಳಿಗಾಲ

(ಅಕ್ಟೋಬರ್ ನಿಂದ ಜನೆವರಿ): ಬೈಂದೂರಿನಲ್ಲಿ ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಉಷ್ಣಾಂಶ 22 ಡಿ.ಸೆ.ವರೆಗೆ ಇರುವುದರಿಂದ ತಂಪಾದ ಹಿತಕರ ವಾತಾವರಣದಲ್ಲಿ ಪ್ರವಾಸಿಗರು ಪ್ರವಾಸದ ಮಜ ಅನುಭವಿಸಬಹುದು.