ಬಿಷ್ಣುಪುರಕ್ಕೆ ಸಾರಿಗೆ ವ್ಯವಸ್ಥೆಯ ಎಲ್ಲಾ ಬಗೆಯಿಂದಲೂ ತಲುಪಬಹುದಾಗಿದೆ. ವಿಮಾನ ಯಾನದ ಮೂಲಕ ಬಿಷ್ಣುಪುರಕ್ಕೆ ತೆರಳಬಯಸುವ ಪ್ರಯಾಣಿಕರು, ಮಣಿಪುರದ ರಾಜಧಾನಿ ಇಂಫಾಲ್ ವಿಮಾನನಿಲ್ದಾಣದಲ್ಲಿ ಇಳಿದರೆ ಸಾಕು. ಅಲ್ಲಿಂದ ಬಿಷ್ಣುಪುರಕ್ಕೆ ಇರುವುದು ಕೇವಲ 27 ಕಿ. ಮೀ ಅಷ್ಟೇ. ದೆಹಲಿ, ಕೋಲ್ಕತಾ, ಗುವಾಹಟಿಯಿಂದ ಇಂಫಾಲ್‌ಗೆ ವಿಮಾನ ಸೌಕರ್ಯವಿದೆ.