ಬಿಲಾಸಪುರದ ವಾತಾವರಣ ಯುರೋಪಿನ ಮತ್ತು ಮಳೆಗಾಲದ ವಾತಾವರಣವನ್ನು ಹೊಂದಿದೆ. ಬೇಸಿಗೆಯಲ್ಲಿ ಸೆಖೆ ಮತ್ತು ಚಳಿಗಾಲದಲ್ಲಿ ಆಹ್ಲಾದಕರ ವಾತಾವರಣವಿರುತ್ತದೆ. ಮಳೆ ಕೆಲವೊಮ್ಮೆ ಕಾರಣಾಂತರದಿಂದ ಬದಲಾಗುತ್ತದೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಲಾಸಪುರದಲ್ಲಿ ಸೆಖೆ ಮತ್ತು ಬತ್ತಿದ ವಾತಾವರಣವಿದ್ದು 45 ಡಿಗ್ರಿಯವರೆಗೆ ಸಾಗುತ್ತದೆ. ಉಷ್ಣಾಂಸ ತೀವ್ರ ಮಟ್ಟಕ್ಕೆ ಏರುತ್ತದೆ. ಬೇಸಿಗೆ ಮಾರ್ಚ್ ಮಧ್ಯ ಭಾಗದಿಂದ ಜೂನ್ ಕೊನೆಯವರೆಗಿರುತ್ತದೆ. ಮಣ್ಣಿನ ಬಿರುಗಾಳಿ ಈ ಭಾಗದಲ್ಲಿ ಮತ್ತು ಈ ಸಮಯದಲ್ಲಿ ಮಾಮೂಲಿ.
ಜುಲೈ ನಿಂದ ಆರಂಭವಾಗುವ ಮಳೆ ಸೆಪ್ಟಂಬರ್ ವರೆಗೆ ಸಾಗುತ್ತದೆ. ಹೆಚ್ಚಿನ ಮಳೆಯು ಆಗ್ನೇಯ ಮಾನ್ಸೂನ್ ಆಗಿರುತ್ತದೆ. ಪಾಶ್ಚಿಮಾತ್ಯವಾಗಿ ಮಳೆಯನ್ನು ಸ್ವಾಗತಿಸುತ್ತದೆ. ಅಕ್ಟೋಬರ್ ನಿಂದ ನವೆಂಬರ್ ವರೆಗೆ ವಾತಾವರಣ ಸಾಧಾರಣವಾಗಿದ್ದು ಮಳೆಗಾಲ ಮತ್ತು ಚಳಿಗಾಲದ ಅವಧಿ ಮುಂದುವರಿಯುತ್ತದೆ. ವಾರ್ಷಿಕ ಮಳೆಯು 58ಸೆ.ಮಿ ಬೀಳುತ್ತದೆ, ಆದರೂ ಜನರಿಗೆ ತೊಂದರೆ ಯಾಗುವುದಿಲ್ಲ. ಮಳೆಯನ್ನು ಸೂಕ್ತವಾಗಿ ಬಳಸಿಕೊಳ್ಳುವ ಬಾವಿಗಳು, ನೀರಾವರಿ ಕೊಳವೆಗಳು ಸಮರ್ಪಕವಾಗಿಲ್ಲ.
ಚಳಿಗಾಲ ಇಲ್ಲಿ ನವೆಂಬರ್ ತಿಂಗಳಿನಿಂದ ಆರಂಭವಾಗಿ ಮಾರ್ಚ್ ವರೆಗೆ ಸಾಗುತ್ತದೆ. ಚಳಿಗಾಲ ಆಹ್ಲಾದಕರ ವಾಗಿರುತ್ತದೆ. ಕಮ್ಮಿ ಉಷ್ಣಾಂಸ ಹತ್ತು ಡಿಗ್ರಿಯವರೆಗಿರುತ್ತದೆ.