Search
  • Follow NativePlanet
Share
ಮುಖಪುಟ » ಸ್ಥಳಗಳು » ಭುಂತರ್ » ಹವಾಮಾನ

ಭುಂತರ್ ಹವಾಮಾನ

ಸಪ್ಟೆಂಬರ್‌ ಮತ್ತು ಮಾರ್ಚ್‌ ಅವಧಿಯಲ್ಲಿ ಭುಂತರಿಗೆ ಪ್ರಯಾಣಿಕರು ಪ್ರವಾಸ ಕೈಗೊಳ್ಳಬಹುದು. ಬಹುತೇಕ ಪ್ರವಾಸಿಗರು ಚಳಿಗಾಲದಲ್ಲೇ ಇಲ್ಲಿ ಬರಲು ಅಪೇಕ್ಷಿಸುತ್ತಾರೆ. ಯಾಕೆಂದರೆ ಇಲ್ಲಿನ ಮಂಜು ಸುರಿಯುವಿಕೆಯನ್ನು ನೋಡಿ ಅನುಭವಿಸುವುದು ಅತ್ಯಂತ ಖುಷಿಯ ಸಂಗತಿ.

ಬೇಸಿಗೆಗಾಲ

(ಮಾರ್ಚ್‌‌ನಿಂದ ಮೇ): ಮಾರ್ಚ್‌ ತಿಂಗಳು ಭುಂತರಿನಲ್ಲಿ ಬೇಸಿಗೆಕಾಲದ ಆರಂಭ. ಮೇ ತನಕವೂ ಬೇಸಿಗೆಯ ಬೇಗೆ ಇರುತ್ತದೆ. ಗರಿಷ್ಟ ತಾಪಮಾನವು 23 ಡಿಗ್ರಿ ದಾಖಲಾಗಿದ್ದು ಕನಿಷ್ಟ ತಾಪಮಾನವು 10 ಡಿಗ್ರಿ ಇರುತ್ತದೆ. ರಾತ್ರಿಯ ಅವಧಿಯಲ್ಲಿ ತಾಪಮಾನವು ಗಮನಾರ್ಹವಾಗಿ ಇಳಿಯುತ್ತದೆ. ಆದ್ದರಿಂದ ಬೇಸಿಗೆಗಾಲದಲ್ಲಿ ಬರುವ ಪ್ರವಾಸಿಗರು ವುಲನ್‌ ಬಟ್ಟೆಗಳನ್ನು ತರಲು ಸಲಹೆ ಮಾಡಲಾಗಿದೆ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ‍್) : ಜೂನ್‌ನಿಂದ ಸಪ್ಟೆಂಬರಿನ ಅವಧಿಯಲ್ಲಿ ಇಲ್ಲಿನ ಮಳೆಗಾಲ ವ್ಯಾಪಿಸಿಕೊಂಡಿರುತ್ತದೆ. ಪ್ರವಾಸಿಗರು ಈ ಅವಧಿಯಲ್ಲಿ ಇಲ್ಲಿ ಪ್ರಯಾಣ ಮಾಡದಿರುವುದು ಒಳಿತು. ಯಾಕೆಂದರೆ ಈ ಸಂದರ್ಭದಲ್ಲಿ ತೀವ್ರ ಮಳೆ ಸುರಿಯುತ್ತಿರುತ್ತದೆ, ಇದರಿಂದ ಹೊರಗೆ ಸುತ್ತಾಡಲು ಸಾಧ್ಯವಾಗುವುದಿಲ್ಲ.

ಚಳಿಗಾಲ

(ಡಿಸೆಂಬರಿನಿಂದ ಫೆಬ್ರವರಿ) : ಭುಂತರಿನ ಮಳೆಗಾಲದ ಅವಧಿಯು ಡಿಸೆಂಬರಿನಿಂದ ಫೆಬ್ರವರಿಯ ತನಕ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಅತ್ಯಂತ ಚಳಿ ಇರುತ್ತದೆ. ತಾಪಮಾನವು 5 ಡಿಗ್ರಿಯ ತನಕವೂ ಇಳಿಯುತ್ತದೆ. ಈ ಅವಧಿಯಲ್ಲಿ ದಾಖಲಾದ ಗರಿಷ್ಟ ತಾಪಮಾನ 15 ಡಿಗ್ರಿ.