Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮಾಶಂಕರ » ಹವಾಮಾನ

ಭೀಮಾಶಂಕರ ಹವಾಮಾನ

ಭೀಮಾಶಂಕರದಲ್ಲಿ ಹೆಚ್ಚಾಗಿ ಬಿಸಿ ಬೇಸಿಗೆಗಳು ಮತ್ತು ತಂಪಾದ ಚಳಿಗಾಲವಿರುತ್ತಿದ್ದು ಇದು ಸಮಶೀತೋಷ್ಣದ ಹವಾಮಾನವನ್ನು ಹೊಂದಿದೆ. ಅಕ್ಟೋಬರ್ ನಿಂದ ಫೆಬ್ರುವರಿ ಅವಧಿಯು ಇಲ್ಲಿನ ಪ್ರವಾಸಕ್ಕೆ ಉತ್ತಮ ಕಾಲವಾಗಿದೆ. ಈ ಕಾಲದಲ್ಲಿ ಕುಟುಂಬ ಸಮೇತರಾಗಿ ಹವಾಮಾನದ ಹಾಗು ಸ್ಥಳದ ಜ್ಯೋತಿರ್ಲಿಂಗದ ದರ್ಶನ ಪಡೆಯಬಹುದು.

ಬೇಸಿಗೆಗಾಲ

ಭೀಮಾಶಂಕರದಲ್ಲಿ ಬೇಸಿಗೆಯು, ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗಿದ್ದು, ಸಾಮಾನ್ಯವಾಗಿ ತಾಪಮಾನವು ಗರಿಷ್ಠ 40 ° C ಗೆ ಉಲ್ಬಣಿಸುವದಲ್ಲದೇ  ಬಹಳ ಬಿಸಿಯಾಗಿರುತ್ತದೆ . ಆದ್ದರಿಂದ ಈ ಋತುವಿನಲ್ಲಿ ಭೀಮಾಶಂಕರದ ಪ್ರವಾಸವು ಅಷ್ಟೇನೂ ಸೂಕ್ತವಲ್ಲ.

ಮಳೆಗಾಲ

ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ವಿಸ್ತರಿಸುವ ಮಳೆಗಾಲವು, ಭೀಮಾಶಂಕರದಲ್ಲಿ ಬೇಸಿಗೆಯ ಉಷ್ಣತೆಗೆ ಚೇತೋಹಾರಿಯಾಗುವಂತೆ ಮಧ್ಯಮ ಹಾಗೂ ಭಾರೀ ಪ್ರಮಾಣದ ಮಳೆಯನ್ನು ಸುರಿಸುತ್ತದೆ. ತಣ್ಣನೆಯ ತುಂತುರನ್ನು ಆನಂದಿಸಬಯಸುವ ಪ್ರವಾಸಿಗರು ಮಳೆಗಾಲದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರಬಹುದು.

ಚಳಿಗಾಲ

ನವಂಬರ್ ನಿಂದ ಫೆಬ್ರುವರಿ ಅವಧಿಯು, ಭೀಮಾಶಂಕರದಲ್ಲಿ ಚಳಿಗಾಲವಿರುತ್ತದೆ. ಈ ಋತುವಿನಲ್ಲಿ ತಾಪಮಾನ  10 ° ಡಿ.ಸೆ ಗೆ ಕುಸಿಯುತ್ತದೆ. ದಿನದಲ್ಲಿ  ಮಧ್ಯಮ ಗತಿಯ ಚಳಿಯಿದ್ದು ರಾತ್ರಿ ಸ್ವಲ್ಪ ತಂಪಾಗಿರುತ್ತದೆ.