Search
  • Follow NativePlanet
Share
ಮುಖಪುಟ » ಸ್ಥಳಗಳು » ಭೀಮೇಶ್ವರಿ » ಹವಾಮಾನ

ಭೀಮೇಶ್ವರಿ ಹವಾಮಾನ

ಭೀಮೇಶ್ವರಿ ಪ್ರದೇಶಕ್ಕೆ ವರ್ಷದ ಯಾವುದೇ ಸಮಯದಲ್ಲೂ ಭೇಟಿ ನೀಡಬಹುದಾದರೂ ಅಕ್ಟೋಬರ್ ನಿಂದ ಮಾರ್ಚ್ ನಲ್ಲಿ ಕಾವೇರಿ ನದಿಯಲ್ಲಿ ನೀರಿನಲ್ಲಿ ಹರಿವು ಹೆಚ್ಚಾಗಿರುವುದರಿಂದ ಜಲಕ್ರೀಡೆಯಾಡುವವರಿಗೆ ಉತ್ತಮ ಸಮಯವೆನ್ನಬಹುದು. ಇನ್ನು ಜೂನ್  ನಿಂದ ಸೆಪ್ಟೆಂಬರ್ ವರೆಗೆ ಮೀನುಗಾರಿಕೆ ಆನಂದ ಪಡೆಯಬಯಸುವವರಿಗೆ ಉತ್ತಮ ಸಮಯ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆಯ ಸಮಯದಲ್ಲಿ ಭೀಮೇಶ್ವರಿ ಪ್ರದೇಶದಲ್ಲಿ ಹೆಚ್ಚಿನ ಉಷ್ಣಾಂಶವಿರುತ್ತದೆ. ಆದ್ದರಿಂದ ಪ್ರವಾಸಿಗರು ಬೇಸಿಗೆ ಕಾಲದಲ್ಲಿ ಇಲ್ಲಿಗೆ ಬರದಿರುವುದೇ ಒಳ್ಳೆಯದೆನ್ನಬಹುದು. ಅಲ್ಲದೇ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣವೂ ಕಡಿಮೆ ಇರುವುದರಿಂದ ವಿವಿಧ ಜಲಕ್ರೀಡೆಗಳನ್ನು ಇಲ್ಲಿ ಆನಂದಿಸಲಾಗುವುದು. ಈ ಸಮಯದಲ್ಲಿ 40 ಡಿ.ಸೆ.ವರೆಗೂ ಉಷ್ಣಾಂಶ ಏರಿರುತ್ತದೆ. ಕಡಿಮೆ ಎಂದರೆ 22 ಡಿ.ಸೆ. ಉಷ್ಣಾಂಶ ತಲುಪಿರುತ್ತದೆ. ಈ ಸಮಯದಲ್ಲಿ ಪ್ರವಾಸಿಗರು ಕೇವಲ ಪ್ರಕೃತಿ ಸೌಂದರ್ಯ ಸವಿಯಬಹುದು ಅಷ್ಟೇ.

ಮಳೆಗಾಲ

(ಜೂನ್  ನಿಂದ ಅಕ್ಟೋಬರ್ ): ಮಳೆಗಾಲದಲ್ಲಿ ಇಲ್ಲಿ ಅನಿಯಮಿತ ಮಳೆ ಸುರಿಯುವುದರಿಂದ ಇಲ್ಲಿ ತಂಪಾದ ವಾತಾವರಣವಿರುತ್ತದೆ. ಒಮ್ಮೆ ಸೆಖೆಯ ವಾತಾವರಣ ಅನುಭವಕ್ಕೆ ಬರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಮಳೆಗಾಲದಲ್ಲಿ ಭೀಮೇಶ್ವರಿಯು ಅತ್ಯುತ್ತಮ ವಾತಾವರಣ ಹೊಂದಿರುತ್ತದೆ. ಇಲ್ಲಿ 10 ಡಿ.ಸೆ.ವರೆಗೂ ಉಷ್ಣಾಂಶ ಇಳಿಕೆಯಾಗಿರುತ್ತದೆ. ಗರಿಷ್ಠ 32 ಡಿ.ಸೆ.ವರೆಗೂ ಏರಿರುತ್ತದೆ. ಈ ಸಮಯದಲ್ಲಿ ಭೀಮೇಶ್ವರಿಗೆ ಭೇಟಿ ನೀಡುವುದು ಪ್ರವಾಸಿಗರಿಗೆ ತುಂಬಾ ಲಾಭಕರವೆನ್ನಬಹುದು.