Search
  • Follow NativePlanet
Share
ಮುಖಪುಟ » ಸ್ಥಳಗಳು » ಭಗ್ಸು » ಹವಾಮಾನ

ಭಗ್ಸು ಹವಾಮಾನ

ಹಿಮಪಾತಕ್ಕೆ ಸಾಕ್ಷಿಯಾಗಲಿಚ್ಚಿಸುವವರು ಭಗ್ಸುವಿಗೆ ಚಳಿಗಾಲದಲ್ಲಿ ಭೇಟಿ ನೀಡಬಹುದು. ವಾತಾವರಣ ಹಿತಕರವಾಗಿರುವುದರಿಂದ ಬೇಸಿಗೆಯಲ್ಲೂ ಭೇಟಿ ನೀಡಬಹುದು.

ಬೇಸಿಗೆಗಾಲ

(ಮೇ-ಜೂನ್): ಮೇ ಮತ್ತು ಜೂನ್ ತಿಂಗಳಿನಲ್ಲಿ ಭಗ್ಸುವಿನಲ್ಲಿ ಬೇಸಿಗೆಯಿದ್ದು ಉಷ್ಣಾಂಶ 13 ಡಿಗ್ರಿಯಿಂದ 20 ಡಿಗ್ರಿಯಿರುತ್ತದೆ. ಹಿತಕರವಾದ ವಾತಾವರಣವಿರುವುದರಿಂದ ಬೇಸಿಗೆಯಲ್ಲಿ ಬಹಳಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.

ಮಳೆಗಾಲ

(ಜುಲೈ- ಆಗಸ್ಟ್): ಜುಲೈನಿಂದ ಆಗಸ್ಟ್ ವರೆಗೆ ಭಗ್ಸುವಿನಲ್ಲಿ ಮಳೆಗಾಲವಿದ್ದು ಸೆಪ್ಟೆಂಬರ್ ನಲ್ಲಿ ಮಳೆಯಿರದ ಕಾರಣ ಬಹುತೇಕ ಪ್ರವಾಸಿಗರು ಈ ಕಾಲದಲ್ಲಿ ಭೇಟಿ ನೀಡುತ್ತಾರೆ.

ಚಳಿಗಾಲ

(ನವೆಂಬರ್-ಫೇಬ್ರವರಿ): ಭಗ್ಸುವಿನಲ್ಲಿ ಚಳಿಗಾಲ ನವೆಂಬರ್ ನಿಂದ ಫೇಬ್ರವರಿಯವರೆಗೆ ಇರುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ 3 ಡಿಗ್ರಿಯಿಂದ 8 ಡಿಗ್ರಿಯವರೆಗೆ ಇರುತ್ತದೆ. ಡಿಸೆಂಬರ್ ನಿಂದ ಜನವರಿಯಲ್ಲಿ ಹಿಮಪಾತವಾಗುವುದರಿಂದ ಪ್ರವಾಸಿಗರು ಉಣ್ಣೆಯ ಬಟ್ಟೆಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು.