Search
  • Follow NativePlanet
Share
ಮುಖಪುಟ » ಸ್ಥಳಗಳು » ಬ್ರಹ್ಮಪುರ » ಹವಾಮಾನ

ಬ್ರಹ್ಮಪುರ ಹವಾಮಾನ

ಚಳಿಗಾಲದಲ್ಲಿ ಬೆರ್ಹಾಮ್‍ಪೂರನ್ನು ಭೇಟಿಮಾಡಲು ಅತ್ಯುತ್ತಮ ಸಮಯ.  ತಾಪಮಾನವು ತಂಪಾಗಿ ಹಾಗೂ ಹಿತಕರವಾಗಿರುತ್ತದೆ. ಚಳಿಗಾಲದಲ್ಲಿ ಆದ್ರತೆ (ಹ್ಯೂಮಿಡಿಟಿ) ಕಡಿಮೆಯಿದ್ದು ಬಹಳ ಆರಾಮದಾಯಕ ಕಾಲವಾಗಿರುತ್ತದೆ. ದಸರಾ ಹಬ್ಬವನ್ನು, ಅಕ್ಟೋಬರ್ ಮತ್ತು ನವೆಂಬರ್ ನಡುವೆ, ಸುಮಾರು ಎಲ್ಲಾ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಭೇಟಿಮಾಡಲು ಒಳ್ಳೆಯದು.

ಬೇಸಿಗೆಗಾಲ

ಬೆರ್ಹಾಮ್‍ಪೂರಿನಲ್ಲಿ ಮಾರ್ಚ್ ಮತ್ತು ಜೂನ್ ನಡುವೆ ಬೇಸಿಗೆ ಕಾಲವಿರುತ್ತದೆ.  ತಾಪಮಾನವು  ಹೆಚ್ಚು ಮತ್ತು ಕಡಿಮೆಯ ಆರ್ದ್ರತೆಯಿಂದ ಅಹಿತಕರವಾಗಿರುತ್ತದೆ. ತಾಪಮಾನವು 32 ರಿಂದ 45 ಡಿಗ್ರಿ ಯವರೆಗೆ ಬೇಸಿಗೆ ಕಾಲದಲ್ಲಿರುತ್ತದೆ. ಇದು ದೇವಾಲಯ ಮತ್ತು ಕಡಲತೀರದ ಪಟ್ಟಣವಾಗಿರುವುದರಿಂದ ಬೇಸಿಗೆ ಕಾಲದಲ್ಲಿ ಭೇಟಿಮಾಡುವುದು ಸರಿಯಾಗುವುದಿಲ್ಲ.

ಮಳೆಗಾಲ

ಮಳೆಗಾಲವು ಸಾಧಾರಣವಾಗಿ ಭಾರತದಲ್ಲಿ ಸುಂದರ ಕಾಲವಾಗಿರುತ್ತದೆ. ಬೇಸಿಗೆಯ ಅಸಹನೀಯ ತಾಪ ಮತ್ತು ಒಣ ಹವಾಮನದ ನಂತರ ಮಳೆ ಬೀಳುವುದು ಸ್ವಾಗತಾರ್ಹ.  ಬೆರ್ಹಾಮ್‍ಪೂರನ್ನು ಮಳೆಗಾಲದಲ್ಲಿ ಭೇಟಿಮಾಡವುದು ಅಂತಹ ಒಳ್ಳೆಯ ಕಲ್ಪನೆಯಲ್ಲ.  ಭಾರಿಮಳೆಯಿಂದ ರಸ್ತೆಗಳಲ್ಲಿ ಗುಂಡಿಗಳಾಗಿ ಚರಂಡಿ ನೀರು ಸೇರಿಕೊಂಡು ರಸ್ತೆಗಳಲ್ಲಿ ಸಂಚರಿಸುವುದು ಅನಾನುಕೂಲವಾಗಿರುತ್ತದೆ.

ಚಳಿಗಾಲ

ಚಳಿಗಾಲದ ಸಮಯವು ಭಾರದಲ್ಲಿ ಸಾಮಾನ್ಯವಾಗಿ ತಂಪು ಹವಾಮಾನವಿದ್ದು ಮಳೆಬೀಳುವ ಸಾಧ್ಯತೆಗಳು ಕಡಿಮೆಯಿರುತ್ತದೆ.  ಚಳಿಗಾಲವು ನವೆಂಬರ್ ಮೊದಲಿನಿಂದ ಶುರುವಾಗಿ ಫೆಬ್ರವರಿ ಮಧ್ಯದವರೆಗೆ ಇರುತ್ತದೆ.  ತಾಪಮಾನವು ಈ ಸಮಯದಲ್ಲಿ ಹೆಚ್ಚೆಂದರೆ 20 ಡಿಗ್ರಿ ಇರುತ್ತದೆ ಮತ್ತು ರಾತ್ರಿಯಲ್ಲಿ ಇನ್ನೂ ತಂಪಾಗಿ 11 ಡಿಗ್ರಿ ಇರುತ್ತದೆ. ಇಂತಹ ತಾಪಾಮಾನವು ಆರಾಮದಾಯಕವಾಗಿದ್ದು ಭಾರತದ  ಒಳಗಿನಿಂದಲೂ ಮತ್ತು ಹೊರಗಿನಿಂದಲೂ ಪ್ರವಾಸಿಗಳನ್ನು ಅಹ್ವಾನಿಸುತ್ತದೆ.