ಬಸ್ತಿ ಪ್ರಯಾಣಕ್ಕೆ ಉತ್ತಮವಾದ ಆಹ್ಲಾದಕರವಾದ ವಾತಾವರಣವಿರುವ ಅವಧಿಯೆಂದರೆ ನವೆಂಬರ್ ತಿಂಗಳಿನಿಂದ ಮಾರ್ಚ್ ವರೆಗೆ.
ಬಸ್ತಿ ನಗರದಲ್ಲಿ ಬೇಸಿಗೆ ಕಾಲವು ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಕಂಡುಬರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನ ಕನಿಷ್ಠ 25 ಡಿ.ಸೆ. ನಿಂದ ಗರಿಷ್ಠ 44 ಡಿ.ಸೆ ದಾಖಲಾಗುತ್ತದೆ. ಇದು ಅತ್ಯಂತ ಉಷ್ಣತೆಯನ್ನು ಹೊಂದಿರುವ ಸಮಯ. ಇತ್ತೀಚಿನ ಕೆಲವು ವರ್ಷಗಳಿಂದ ಬೇಸಿಗೆ ಕಾಲವು ಜೂನ್ ತಿಂಗಳ ಮಧ್ಯ ಭಾಗದವರೆಗೆ ಮುಂದುವರಿಯುತ್ತದೆ.
ಬಸ್ತಿ ಪ್ರದೇಶವು ಜುಲೈ ತಿಂಗಳಿನಿಂದ ಸೆಪ್ಟಂಬರ್ ತಿಂಗಳವರೆಗೆ ಮಳೆಗಾಲವನ್ನು ಅನುಭವಿಸುತ್ತದೆ. ಈ ಸಮಯದಲ್ಲಿ ಆರ್ದ್ರತೆಯಿಂದ ಕೂಡಿರುತ್ತದೆ. ಅಗಸ್ಟ್ ತಿಂಗಳಿನಲ್ಲಿ ಭಾರಿ ಮಳೆ ಕಂಡುಬರುತ್ತದೆ.
ಬಸ್ತಿಯಲ್ಲಿ ಚಳಿಗಾಲವು ಮಧ್ಯಮ ಮತ್ತು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಕನಿಷ್ಠ 9 ಡಿ.ಸೆ ನಿಂದ ಗರಿಷ್ಠ 25 ಡಿ.ಸೆ ದಾಖಲಾಗುತ್ತದೆ.