ಔಂಧ ಮಹಾರಾಷ್ಟ್ರದ ಒಳ ಪ್ರದೇಶದಲ್ಲಿರುವುದರಿಂದ ಹಾಗು ಉಷ್ಣವಲಯದಲ್ಲಿರುವುದರಿಂದ ಇಲ್ಲಿನ ಹವಾಮಾನ ಬಹುತೇಕ ಶುಷ್ಕ ಹಾಗು ಶಾಖದಿಂದ ಕೂಡಿರುತ್ತದೆ. ಚಳಿಗಾಲ ಹಾಗು ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳು ಇಲ್ಲಿಗೆ ಭೇಟಿ ಕೊಡಲು ಅತ್ಯಂತ ಸೂಕ್ತವಾದ ಕಾಲ.
ಬೇಸಿಗೆಯಲ್ಲಿ, ಮುಖ್ಯವಾಗಿ ಏಪ್ರಿಲ್, ಮೇ ಹಾಗು ಜೂನ್ ತಿಂಗಳಲ್ಲಿ ಔಂಧ ನಾಗನಾಥ್ ದ ಹವಾಮಾನ ಬಹಳ ಶಾಖ ಮತ್ತು ಒಣ ಹವೆ ಇಂದ ಕೂಡಿರುತ್ತದೆ. ಬಿರು ಬೇಸಿಗೆ ಕಾಲದಲ್ಲಿ ಇಲ್ಲಿನ ಗರಿಷ್ಟ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ವರೆಗೂ ತಲುಪುತ್ತದೆ. ಹಾಗೆಯೆ ಇಲ್ಲಿನ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಶಿಯಸ್. ವರ್ಷದಲ್ಲಿ ಅತಿ ತಾಪಮನವಾದ ತಿಂಗಳೆಂದರೆ ಮೇ ತಿಂಗಳು. ಆದ್ದರಿಂದ ಪ್ರವಾಸಿಗರು ಈ ತಿಂಗಳಿನಲ್ಲಿ ಈ ಸ್ಥಳದಿಂದ ದೂರವೆ ಉಳಿಯುತ್ತಾರೆ, ಯಾಕೆಂದರೆ ಆ ಸುಡು ಬಿಸಿಲಿನಲ್ಲಿ ಯಾವುದೆ ಚಟುವಟಿಕೆಗಳನ್ನು ನಡೆಸುವುದು ಅಸಾಧ್ಯ..
ಔಂಧ ನಲ್ಲಿ ಸುಮಾರು ಜುಲೈ ತಿಂಗಳ ಹೊತ್ತಿಗೆ ಮುಂಗಾರು ಮಳೆ ಕಾಲಿಡುತ್ತದೆ ಮತ್ತು ಆಗಸ್ಟ್ ಹಾಗು ಸೆಪ್ಟೆಂಬರ್ ತಿಂಗಳವರೆಗೂ ಮಳೆಗರೆಯುತ್ತದೆ. ಈ ಸಮಯದಲ್ಲಿ ಇಲ್ಲಿನ ಪ್ರದೇಶ ಸಾಮಾನ್ಯ ಎನ್ನುವಂತಹ ಮಳೆ ಪಡೆಯುತ್ತದೆ. ನೀವು ಮುಂಗಾರು ಮಳೆ ಪ್ರಿಯರಾದರೆ ಈ ಸಮಯದಲ್ಲಿ ಇಲ್ಲಿನ ತುಂತುರು ಮಳೆಯನ್ನು ಖಂಡಿತವಾಗಿ ಅಸ್ವಾದಿಸುತ್ತೀರಿ.
ಚಳಿಗಾಲದಲ್ಲಿ ಇಲ್ಲಿ ಸಾಮಾನ್ಯವೆಂಬಂತೆ ಚಳಿ ಇದ್ದು ಅದು ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳ ಕೊನೆಯವರೆಗೂ ಹಾಗೆಯೆ ಮುಂದುವರೆಯುತ್ತದೆ. ಈ ಸಮಯದಲ್ಲಿ ಇಲ್ಲಿನ ಅತಿ ಗರಿಷ್ಟ ಉಷ್ಣಾಂಶ ಸುಮಾರು 33 ಡಿಗ್ರಿ ಸೆಲ್ಶಿಯಸ್ ಆದರೆ ಕನಿಷ್ಠ ತಾಪಮಾನ ತಣ್ಣನೆಯ 17 ಡಿಗ್ರಿ ಸೆಲ್ಶಿಯಸ್ ಗೆ ತಲುಪುತ್ತದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ಬಹಳವೆ ಆಹ್ಲಾದಕರವಾಗಿರುತ್ತದೆ ಹಾಗು ಇದೆ ಈ ಪ್ರದೇಶದಲ್ಲಿ ವಿಹರಿಸಲು ಸೂಕ್ತವಾದ ಸಮಯ ಎನ್ನಬಹುದು.