ಗುಜರಾತಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಹಮದಾಬಾದ್ ನಗರದ ಕೇಂದ್ರಭಾಗದಿಂದ ಕೇವಲ 15 ಕಿ.ಮೀ ಹಾಗು ಅಹಮದಾಬಾದ್ ರೈಲು ಮತ್ತು ಬಸ್ ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ರಾಜ್ಯದ ಒಳಗಿನ ನಡಿಯಡ್, ಸುರೇಂದ್ರನಗರ್, ಮೆಹ್ಸಾನದಂತಹ ನಗರಗಳಿಂದ ಹಾಗು ಮುಂಬಯಿ, ಬೆಂಗಳೂರು, ದೆಹಲಿ, ಕೊಲ್ಕಟಾ, ಚೆನ್ನೈ ಇತ್ಯಾದಿ ದೇಶಿಯ ನಗರಗಳಿಂದ ವಿಮಾನಗಳು ಬಂದು ಹೋಗುತ್ತಿರುತ್ತವೆ. ಇದಲ್ಲದೆ ಶಾರ್ಜಾ, ದುಬೈ, ಕುವೈತ್, ಕಾಬೂಲ್, ಅಬುದಾಭಿ, ಫ್ರಾಂಕ್ ಫರ್ಟ್, ಲಂಡನ್, ಪ್ಯಾರಿಸ್, ಚಿಕಾಗೊ, ಬ್ಯಾಂಕಾಕ್, ಸಿಂಗಾಪುರ್, ಶಾಂಘೈ, ಹಾಂಗ್‍ಕಾಂಗ್ ಇತ್ಯಾದಿ ನಗರಗಳಿಂದ ನೇರ ವಿಮಾನ ಸಂಪರ್ಕವನ್ನು ಈ ನಿಲ್ದಾಣವು ಹೊಂದಿದೆ.