Search
  • Follow NativePlanet
Share
ಮುಖಪುಟ » ಸ್ಥಳಗಳು » ಯೇರ್ಕಾಡ್ » ಹವಾಮಾನ

ಯೇರ್ಕಾಡ್ ಹವಾಮಾನ

ಯಾವುದೇ ಹವಾಮಾನ್ಯ ವೈಪರೀತ್ಯಗಳಿಂದ ಹೊರತಾದ ಯೇರ್ಕಾಡ್‌ನಲ್ಲಿ ವರ್ಷಪೂರ್ತಿ ಆಹ್ಲಾದಕರ ವಾತಾವರಣ ಇರುತ್ತದೆ. ಇಲ್ಲಿರಬಹುದಾದ ಗರಿಷ್ಠ ಸರಾಸರಿ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ಮತ್ತು ಅತೀ ಕನಿಷ್ಠ ಸರಾಸರಿ ತಾಪಮಾನ 15 ಡಿಗ್ರಿ ಸೆಲ್ಶಿಯಸ್. ಪ್ರವಾಸಿಗರು ಅಕ್ಟೋಬರ್‌ನಿಂದ ಜೂನ್ ತಿಂಗಳ ನಡುವೆ ಇಲ್ಲಿಗೆ ಭೇಟಿ ಕೊಟ್ಟರೆ ಪ್ರಕೃತಿಯೊಂದಿಗೆ ಅದ್ಭುತವಾಗಿ ಸಮಯವನ್ನು ಕಳೆಯಬಹುದು. ಇನ್ನು ತಮ್ಮ ಕುಟುಂಬಿಕರು, ಸ್ನೇಹಿತರೊಂದಿಗೆ ದೂರದ ಪ್ರವಾಸ ಬಯಸುವ ಮಂದಿ, ಯೇರ್ಕಾಡ್‌ಗೆ ಒಂದು ಪ್ರವಾಸ ತೆರಳುವ ಯೋಚನೆ ಮಾಡಬಹುದು.

ಬೇಸಿಗೆಗಾಲ

ಯೇರ್ಕಾಡ್‌ನಲ್ಲಿ ಬೇಸಿಗೆ ಬಹಳ ಹಿತವಾಗಿರುತ್ತದೆ. ಸಾಮಾನ್ಯವಾಗಿ ಇಲ್ಲಿ ಬೇಸಿಗೆ ಕಾಲವು ಮಾರ್ಚ್‌ನಲ್ಲಿ ಆರಂಭಗೊಂಡು ಜೂನ್‌ವರೆಗೆ ಇರುತ್ತದೆ. ಇಲ್ಲಿ ದಾಖಲಾಗುವ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಶಿಯಸ್. ಬೇಸಿಗೆ ಕಾಲದಲ್ಲಿ ಇಲ್ಲಿ ಮಳೆ ಬೀಳುವುದು ಕಡಿಮೆ. ರಾತ್ರಿ ವೇಳೆಯು ತಂಪಾದ ಗಾಳಿಯೊಂದಿಗೆ ಬಹಳ ರಸವತ್ತಾಗಿರುತ್ತದೆ.

ಮಳೆಗಾಲ

ಯೇರ್ಕಾಡ್‌ನಲ್ಲಿ ಮಳೆಗಾಲದ ಅವಧಿ ಜುಲೈನಿಂದ ಸೆಪ್ಟೆಂಬರ್‌ವರೆಗೆ. ಭಾರೀ ಗಾಳಿಯೊಂದಿಗೆ ಗಾಢ ಮಳೆ ಇಲ್ಲಿ ಸುರಿಯುತ್ತದೆ. ಇಲ್ಲಿ ವಾರ್ಷಿಕ ಸರಾಸರಿ 279 ಮಿ.ಮೀ ಮಳೆ ಬೀಳುತ್ತದೆ. ಬೇಸಿಗೆಯಲ್ಲಿ 30 ಡಿಗ್ರಿ ಸೆಲ್ಶಿಯಸ್ ಇರುವ ಇಲ್ಲಿನ ತಾಪಮಾನ ಮಳೆಗಾಲದಲ್ಲಿ 14 ರಿಂದ 20 ಡಿಗ್ರಿ ಸೆಲ್ಶಿಯಸ್‌ಗೆ ಇಳಿಯುತ್ತದೆ. ಒಟ್ಟಿನಲ್ಲಿ ಇಲ್ಲಿ ಮಳೆಗಾಲ ಕೂಡಾ ಹಿತವಾಗಿದ್ದು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಚಳಿಗಾಲ

ಇನ್ನು ಯೇರ್ಕಾಡ್ ಅನ್ನು ತಂಪಾಗಿಡುವ ಕಾಲವೆಂದರೆ ಅದು ಚಳಿಗಾಲ. ಚಳಿಗಾಲದಲ್ಲಿ ಇಲ್ಲಿ ಮಂಜು ಮತ್ತು ತಂಪು ಆವರಿಸಿದ್ದು, ಜನವರಿ ತಿಂಗಳಲ್ಲಿ ಅತ್ಯಂತ ತಂಪಾದ ವಾತಾವರಣ ಇಲ್ಲಿರುತ್ತದೆ.