ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಪೂರ್ಣ ವಿವರ ಇಲ್ಲಿದೆ.
ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರಿನಿಂದ ಇಂದಿನಿಂದ ತನ್ನ ಮೊದಲ ಪ್ರಯಾಣವನ್ನು ಆರಂಭಿಸಲಿದೆ.
ಈ ರೈಲು ಚೆನ್ನೈ, ಬೆಂಗಳೂರು ಮತ್ತು ಮೈಸೂರು ಮೂಲಕ ಸಂಚರಿಸಲಿದೆ.
ಚೆನ್ನೈ ನಿಂದ ಮೈಸೂರಿಗೆ ಕಾರ್ ಚೇರ್ ಗೆ 1,200/-ರೂ, ಎಕ್ಸಿಕ್ಯುಟಿವ್ ಕ್ಲಾಸ್ ನಲ್ಲಿ 2,295/-ರೂ ಮತ್ತು ಮೈಸೂರಿನಿಂದ ಚೆನ್ನೈ ಗೆ 1,365/-ರೂ ಮತ್ತು
2,486/-ರೂ ಟಿಕೆಟ್ ದರಗಳನ್ನು ಪಾವತಿಸಬೇಕಿರುತ್ತದೆ.
ಈ ರೈಲು ಒಟ್ಟು 500 ಕಿ.ಮೀ ದೂರವನ್ನು 6 ಗಂಟೆ 30 ನಿಮಿಷಗಳಲ್ಲಿ ತಲುಪಲಿದ್ದು, ಬೆಂಗಳೂರು ಚೆನ್ನೈ ಮತ್ತು ಮೈಸೂರು ಕಾಟ್ಪಾಡಿ ಮತ್ತು ಬೆಂಗಳೂರಿನ ನಡುವೆ ಎರಡು ಭಾರಿ ನಿಲುಗಡೆಯನ್ನು ನೀಡಲಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುವ ಮಾರ್ಗ : ಚೆನ್ನೈ ಸೆಂಟ್ರಲ್, ಬೆಂಗಳೂರು ನಗರ ಮತ್ತು ಮೈಸೂರು. ಇದು ಪೆರಂಬೂರ್,
ವೆಪ್ಪಂಪಟ್ಟು, ವೆಲ್ಲೂರು ಕಾಟ್ಪಾಡಿ ಜಂಕ್ಷನ್, ಗುಡುಪಲ್ಲಿ ಮತ್ತು ಮಾಲೂರು ರೈಲು ನಿಲ್ದಾಣಗಳ ಮೂಲಕ ಹಾದು ಹೋಗಲಿದೆ.
ಚೆನ್ನೈ ಸೆಂಟ್ರಲ್ ಮತ್ತು ಮೈಸೂರು ಜಂಕ್ಷನ್ ನಡುವೆ ವೆಲ್ಲೂರಿನ ಕಾಟ್ಪಾಡಿ ಜಂಕ್ಷನ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಲ್ಲಿ ನಿಲುಗಡೆ ನೀಡಲಿದೆ.
ತಾಂತ್ರಿಕ ನಿಲುಗಡೆಗಾಗಿ ಜೋಲರ್‌ಪೆಟ್ಟಾಯ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಲಿದೆ.
ಹೆಚ್ಚಿನ ಟ್ರಾವೆಲ್ ಮಾಹಿತಿಗಾಗಿ ನೇಟಿವ್ ಪ್ಲಾನೆಟ್ ಕನ್ನಡಕ್ಕೆ ಭೇಟಿ ನೀಡಿ.