ಸೂರ್ಯಾಸ್ತ ವೀಕ್ಷಿಸಲು ಬೆಂಗಳೂರು ಮತ್ತು ಸಮೀಪದ ಉತ್ತಮ ಸ್ಥಳಗಳಿವು
ನಂದಿ ಬೆಟ್ಟ :
ನಗರದ ಜನರಿಗೆ ನೆಚ್ಚಿನ ತಾಣವಾಗಿರುವ ನಂದಿ ಹಿಲ್ಸ್ ಬೆಂಗಳೂರಿನ ಹೊರವಲಯದಲ್ಲಿದ್ದು, ಸುಮಾರು 4,849 ಅಡಿ (1478 ಮೀಟರ್) ಎತ್ತರದಲ್ಲಿರುವ ಪುರಾತನ ಬೆಟ್ಟದ ಕೋಟೆಯಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಜನಸಂದಣಿಯು ಸೇರುವ ಜನಪ್ರಿಯ ಸ್ಥಳಗಳಲ್ಲಿ ಇದು ಒಂದಾಗಿದೆ.
ಹಲಸೂರು ಕೆರೆ :
123.6 ಎಕರೆಗಳು (50 ಹೆಕ್ಟೇರ್) ವ್ಯಾಪಿಸಿರುವ ಹಲಸೂರು ಸರೋವರವನ್ನು ಹಲಸೂರು ಕೆರೆ ಎಂದೂ ಕರೆಯುತ್ತಾರೆ. ಇದು ಬೆಂಗಳೂರಿನ ಹೆಚ್ಚು ಭೇಟಿ ನೀಡುವ ಆಕರ್ಷಣೆಗಳಲ್ಲಿ ಒಂದಾಗಿದೆ. ಇದು ನಗರದ ಅತಿದೊಡ್ಡ ಕೆರೆಗಳಲ್ಲಿ ಒಂದಾಗಿದೆ.
ಸ್ಯಾಂಕಿ ಟ್ಯಾಂಕ್ :
ಮಲ್ಲೇಶ್ವರಂನ ಹೃದಯಭಾಗದಲ್ಲಿರುವ ಸ್ಯಾಂಕಿ ಟ್ಯಾಂಕ್ ಸುಂದರವಾದ ಮಾನವ ನಿರ್ಮಿತ ಸರೋವರವಾಗಿದ್ದು, ಬೆಂಗಳೂರಿನ ನಿವಾಸಿಗಳಿಗೆ ನೀರನ್ನು ಒದಗಿಸಲು 19ನೇ ಶತಮಾನದದಲ್ಲಿ ನಿರ್ಮಿಸಲಾಗಿದೆ.
ಹೆಸರಘಟ್ಟ ಕೆರೆ :
ಬೆಂಗಳೂರಿನ ವಾಯುವ್ಯಕ್ಕೆ 18 ಕಿಲೋಮೀಟರ್ (11.18 ಮೈಲುಗಳು) ದೂರದಲ್ಲಿದ್ದು, ಹೆಸರಘಟ್ಟ ಸರೋವರವು 19ನೇ ಶತಮಾನದಲ್ಲಿ ನಗರದ ನಿವಾಸಿಗಳ ನೀರಿನ ಬೇಡಿಕೆಗಳನ್ನು ಪೂರೈಸಲು ಸ್ಥಾಪಿಸಲಾದ ಮಾನವ ನಿರ್ಮಿತ ಸರೋವರವಾಗಿದೆ.
ಸ್ಕಂದಗಿರಿ ಬೆಟ್ಟ :
ನಗರದಿಂದ 62 ಕಿಮೀ (38.52 ಮೈಲುಗಳು) ದೂರದಲ್ಲಿರುವ ಸ್ಕಂದಗಿರಿ ಬೆಟ್ಟಗಳು ಭವ್ಯವಾದ ಸೂರ್ಯಾಸ್ತಕ್ಕೆ ಮತ್ತೊಂದು ಪರಿಪೂರ್ಣ ಸ್ಥಳವಾಗಿದೆ. ಕಲವಾರ ಎಂಬ ಹೆಸರಿನ ಕುಗ್ರಾಮವಿದ್ದು ಅದರ ತಪ್ಪಲಿನಲ್ಲಿ ನೀವು ಸೂರ್ಯಾಸ್ತವನ್ನು ಆನಂದಿಸಬಹುದು.
ಸಿದ್ದರಬೆಟ್ಟ :
ಬೆಂಗಳೂರಿನಿಂದ ಸುಮಾರು 100 ಕಿಮೀ (62.13 ಮೈಲುಗಳು) ಅಂತರದಲ್ಲಿದೆ. ಸಿದ್ದರ ಬೆಟ್ಟವು ಒಂದು ಕಲ್ಲಿನ ಪರ್ವತವಾಗಿದ್ದು, ಇದು ಚಾರಣಿಗರು, ರಾಕ್ ಕ್ಲೈಂಬರ್ಸ್ ಮತ್ತು ಯಾತ್ರಿಕರು ಗುಹೆಯೊಳಗೆ ಕೆತ್ತಿದ ಶಿವನ ದೇವಾಲಯಕ್ಕೆ ಗೌರವ ಸಲ್ಲಿಸಲು ಇಲ್ಲಿಗೆ ಬರುತ್ತಾರೆ.
ಹೆಬ್ಬಾಳ ಕೆರೆ :
ಉತ್ತರ ಬೆಂಗಳೂರಿನಲ್ಲಿರುವ ಹೆಬ್ಬಾಳ ಕೆರೆಯು ನಗರದ ಅತ್ಯಂತ ಹಳೆಯ ಮತ್ತು ಜನಪ್ರಿಯ ಕೆರೆಗಳಲ್ಲಿ ಒಂದಾಗಿದೆ. ನಗರದ ಅನೇಕ ಜನರು ಬೆಳಿಗ್ಗೆ ಆರಾಮವಾಗಿ ನಡೆಯಲು ಇಲ್ಲಿಗೆ ಬರುತ್ತಾರೆ.
ಅಂತರಗಂಗೆ :
ಬೆಂಗಳೂರಿನಿಂದ ಸುಮಾರು 70 ಕಿಮೀ (43.49 ಮೈಲುಗಳು) ದೂರದಲ್ಲಿರುವ ಕೋಲಾರ ಜಿಲ್ಲೆಯಲ್ಲಿರುವ ಕಲ್ಲಿನ ಪರ್ವತವಾಗಿದೆ. ಸೂಯಾಸ್ತ ವೀಕ್ಷಿಸಲು ಉತ್ತಮ ಸ್ಥಳವಿದಾಗಿದೆ.
ರಾಮನಗರ :
ಬೆಟ್ಟಗುಡ್ಡಗಳಿಂದ ಸುತ್ತುವರಿದಿರುವ ರಾಮನಗರವು ಬೆಂಗಳೂರಿನಿಂದ ಸುಮಾರು 50 ಕಿಮೀ (31.06 ಮೈಲುಗಳು) ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಇದು ಪ್ರಕೃತಿ ಪ್ರಿಯರು, ಪಕ್ಷಿವೀಕ್ಷಕರು, ಚಾರಣ ಹೋಗಲು ಇಷ್ಟಪಡುವ ಜನರಲ್ಲಿ ಜನಪ್ರಿಯ ತಾಣವಾಗಿದೆ.