Search
  • Follow NativePlanet
Share
ಮುಖಪುಟ » ಸ್ಥಳಗಳು » ವಾರ್ಧಾ » ಹವಾಮಾನ

ವಾರ್ಧಾ ಹವಾಮಾನ

ವಾರ್ಧಾ ನಗರದಲ್ಲಿ ಸಾಮಾನ್ಯವಾಗಿ ಬಿಸಿಯಾದ ಬೇಸಿಗೆ ಮತ್ತು  ಸೌಮ್ಯವಾದ ಚಳಿಗಾಲವಿರುತ್ತದೆ. ಆದರೂ ವರ್ಷದ ಬಹುತೇಕ ಕಾಲವು ಬಿಸಿಯಾಗೇ ಇರುತ್ತಿದ್ದು, ಚಳಿಗಾಲದಲ್ಲಿ, ಒಣಹವೆ ಇರುತ್ತದೆ. ಆದರೂ, ವಾರ್ಧಾಕ್ಕೆ ಭೇಟಿ ನೀಡಲು ಚಳಿಗಾಲವೇ ಅತ್ಯಂತ ಸೂಕ್ತವಾಗಿದೆ. ಪರಿಸರದಲ್ಲಿನ ತಂಪು, ಮನೋಲ್ಲಾಸ ನೀಡುವದಲ್ಲದೇ ಪ್ರಯಾಣಕ್ಕೂ ಹಿತವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗಿನ ಅವಧಿ ವಾರ್ಧಾದಲ್ಲಿ ಬೇಸಿಗೆಗಾಲ. ಬೇಸಿಗೆಯು ಹೆಚ್ಚಿನ ಬಿಸಿಯಿಂದ ಕೂಡಿರುತ್ತದೆ. ತಾಪಮಾನವು ದಿನದ ಸಮಯದಲ್ಲಿ  30 ರ ಮಧ್ಯದಲ್ಲಿರುತ್ತಿದ್ದು ಕೆಲವೊಮ್ಮೆ ಗರಿಷ್ಠ 40 ° C  ಗೂ ತಲುಪುತ್ತದೆ ಹಾಗೂ ಕೆಲವೊಮ್ಮೆ  28 ° C ತನಕ ಕಡಿಮೆಯೂ ಆಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಪ್ರಯಾಣ ಅಷ್ಟು ಸೂಕ್ತವಲ್ಲ.

ಮಳೆಗಾಲ

ಜೂನ್ ನಿಂದ ಸೆಪ್ಟಂಬರ್ ಕಾಲಾವಧಿಯು ವಾರ್ಧಾದಲ್ಲಿ ಮಳೆಗಾಲ. ನೈರುತ್ಯ ಮಾರುತಗಳ ಫಲವಾಗಿ ವಾರ್ಧಾವು ಈ ಸಮಯದಲ್ಲಿ ಉತ್ತಮ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಬಿಸಿಲಿನ ಬೇಗೆಯಿಂದ ಬೆಂದ ವಾರ್ಧಾ ಜನತೆಗೆ ಇದೊಂದು ನಿರಾಳವಾಗಿ ನಿಟ್ಟುಸಿರು ಬಿಡುವ ಅವಕಾಶವಾಗಿ ಲಭಿಸುತ್ತದೆ. ಮಳೆಗಾಲ ನಂತರದ ಅವಧಿ ಅಂದರೆ ಅಕ್ಟೋಬರ್ ಹಾಗು ನವಂಬರ್, ಈ ಪ್ರದೇಶವನ್ನು ಅನ್ವೇಷಿಸಲು ಪ್ರಶಸ್ತವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿಂದ ಫೆಬ್ರುವರಿ ತಿಂಗಳವರೆಗೆ ಇರುವ ಚಳಿಗಾಲವು ಹವಾಮಾನದಲ್ಲಿ ಸ್ವಾಗತಾರ್ಹ ಬದಲಾವಣೆ ತರುತ್ತದೆ. ಡಿಸೆಂಬರ್ ತಿಂಗಳಲ್ಲಿರುವ ಕಡಿಮೆ ತಾಪಮಾನದಿಂದಾಗಿ ಇದನ್ನು ವರ್ಷದ ಅತ್ಯಂತ ತಂಪಾದ ತಿಂಗಳು ಎನ್ನಲಾಗುತ್ತದೆ. ಚಳಿಗಾಲದಲ್ಲಿ ಇಲ್ಲಿಯ ತಾಪಮಾನವು ಕನಿಷ್ಠ 15 ° C ನಿಂದ ಗರಿಷ್ಠ 28 ° C ವರೆಗೆ ಇರುತ್ತದೆ.