Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಹವಾಮಾನ

ವೇಣೂರು ಹವಾಮಾನ

ಚಳಿಗಾಲದಲ್ಲಿ ವಾತಾವರಣ ಅಹ್ಲಾದಕರವಾಗಿರುವುದರಿಂದ ಭೇಟಿಗೆ ಸೂಕ್ತವಾಗಿದೆ

ಬೇಸಿಗೆಗಾಲ

(ಮಾರ್ಚ ನಿಂದ ಮೇ): ಸಾಮಾನ್ಯವಾಗಿ ವೇಣೂರಿನಲ್ಲಿ ಈ ಸಮಯದಲ್ಲಿ 75 ಪ್ರತಿಶತ ಆರ್ದ್ರತೆ ಇರುವುದರಿಂದ ಯೋಗ್ಯವೆಂದು ಹೇಳಲಾಗದ ಪರಿಸ್ಥಿತಿಯಿದ್ದು, ಅತಿಶಯವಾದ ಶಾಖದ ಆಭಾಸವಾಗುತ್ತದೆ. ಗರಿಷ್ಠ ಉಷ್ಣಾಂಶ 38 ಡಿಗ್ರಿಯಿದ್ದು ಕನಿಷ್ಠ ಉಷ್ಣಾಂಶ 34 ಡಿಗ್ರಿ ದಾಖಲಾಗಿದೆ. ಆದ್ದರಿಂದ ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿ ಭೇಟಿ ನೀಡದಿರುವುದೆ ಉತ್ತಮವೆಂದು ಹೇಳಬಹುದು.

ಮಳೆಗಾಲ

(ಜೂನ ನಿಂದ ಸೆಪ್ಟಂಬರ): ನೈರುತ್ಯ ಮಾರುತಗಳ ಪ್ರಭಾವದಿಂದ ಈ ಪ್ರದೇಶವು ಮಳೆಗಾಲದಲ್ಲಿ ಭಾರಿ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಬೇಸಿಗೆ ಕಾಲಕ್ಕಿಂತ ಕಡಿಮೆ ಪ್ರಮಾಣದ ತಾಪಮಾನವಿದ್ದರೂ ಅಪಾರ ಮಳೆಯಿಂದಾಗಿ ಓಡಾಡುವುದು ಕಷ್ಟ.

ಚಳಿಗಾಲ

(ಡಿಸೆಂಬರ ನಿಂದ ಜನವರಿ): ಚಳಿಗಾಲವು ಅಹ್ಲಾದಕರವಾದ ವಾತಾವರಣ ಹೊಂದಿದ್ದು ತಾಪಮಾನವು 25 ರಿಂದ 32 ಡಿಗ್ರಿಗಳ ನಡುವೆ ಸರಿದಾಡುತ್ತಿರುತ್ತದೆ.ಈ ಸಮಯದಲ್ಲೂ ಕೆಲವೊಮ್ಮೆ ತುಂತುರು ಮಳೆಯಾಗುವುದರಿಂದ ವಾತಾವರಣವು ಮತ್ತಷ್ಟು ಸುಖಮಯವಾಗಿರುತ್ತದೆ.