Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಹವಾಮಾನ

ವೆಲ್ಲೂರ್ ಹವಾಮಾನ

ಅಕ್ಟೋಬರ್ ನಿಂದ ಮಾರ್ಚ್ ತನಕದ ಅವಧಿ ಇಲ್ಲಿಗೆ ಭೇಟಿ ನೀಡಲು ಸರಿಯಾದ ಅವಧಿಯಾಗಿದೆ. ಈ ಅವಧಿಯಲ್ಲಿ ಇಲ್ಲಿನ ಹವಾಮಾನ ತಂಪಾಗಿರುತ್ತದೆ. ಉಷ್ಣ ವಾಯುಗುಣವನ್ನು ಗಮನದಲ್ಲಿಟ್ಟು ಇಲ್ಲಿಗೆ ಎಪ್ರಿಲ್ ನಿಂದ ಜೂನ್ ತನಕ ಭೇಟಿ ನೀಡದಿರುವುದು ಸೂಕ್ತ. ಚಳಿಗಾಲ ಶುಷ್ಕವಾಗಿದ್ದರೂ ಇದು ಭೇಟಿ ನೀಡಲು ಸರಿಯಾದ ಅವಧಿಯಾಗಿದೆ.

ಬೇಸಿಗೆಗಾಲ

ಬೇಸಿಗೆಯ ಸಮಯದಲ್ಲಿ ವೆಲ್ಲೂರಿನ ಹವಾಮಾನ ಬಹಳ ಬಿಸಿಯಾಗಿರುತ್ತದೆ. 45 ಸೆಲ್ಶಿಯಸ್ ಇಲ್ಲಿ ದಾಖಲಾದ ಅತಿ ಹೆಚ್ಚಿನ ಉಷ್ಣತೆಯಾಗಿದೆ. ಹಾಗೂ ಇಲ್ಲಿನ ಸರಾಸರಿ ಹೆಚ್ಚಿನ ಉಷ್ಣಾಂಶ 38.50  ಸೆಲ್ಶಿಯಸ್ ಆಗಿದೆ. ಇಲ್ಲಿ ಬೇಸಗೆಯ ಅವಧಿಯಲ್ಲಿ ಆದ್ರತೆ 40% ರಿಂದ 63% ತನಕ ಇರುತ್ತದೆ. ಹಾಗಾಗಿ ಇಲ್ಲಿ ಬೇಸಿಗೆಯ ಅವಧಿಯಲ್ಲಿ ಭೇಟಿ ನೀಡುವುದು ಅಷ್ಟು ಸೂಕ್ತವಲ್ಲ.

ಮಳೆಗಾಲ

ಇಲ್ಲಿ ಸಾಧಾರಣದಿಂದ ಸಾಮಾನ್ಯ ಮಳೆಯಾಗುತ್ತದೆ. ನೈಋತ್ಯ ಮಾನ್ಸೂನ್ ಮಾರುತಗಳು ಇಲ್ಲಿ ಅತೀ ಹೆಚ್ಚಿನ ಮಳೆ ತರುವ ಮಾರುತಗಳಾಗುತ್ತವೆ. ಇಲ್ಲಿ ವಾರ್ಷಿಕವಾಗಿ ಸರಾಸರಿ 996.7 ಮಿಲಿಮೀಟರ್ ಮಳೆಯಾಗುತ್ತದೆ. ಇಲ್ಲಿ ಅಕ್ಟೋಬರ್ ಮತ್ತು ನವಂಬರ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಇಲ್ಲಿ ಈಶಾನ್ಯ ಮಾನ್ಸೂನ್ ಮಾರುತಗಳೂ ಮಳೆ ತರುತ್ತವೆ.

ಚಳಿಗಾಲ

ಇಲ್ಲಿ ಶುಷ್ಕ ಚಳಿಗಾಲ ಇರುತ್ತದೆ. ಇಲ್ಲಿ ದಾಖಲಾದ ಅತಿ ಕಡಿಮೆ ಉಷ್ಣಾಂಶ 10 ಸೆಲ್ಶಿಯಸ್ ಆಗಿದೆ. ಚಳಿಗಾಲದ ಅವಧಿಯಲ್ಲಿ ಆದ್ರತೆ 67% ನಿಂದ 86% ತನಕ ಇರುತ್ತದೆ. ಚಳಿಗಾಲದ ಹೊರತಾಗಿಯೂ ಇಲ್ಲಿ ಹೆಚ್ಚಿನ ಜನರು ಡಿಸೆಂಬರ್ ಮತ್ತು ಜನವರಿಯ ಅವಧಿಯಲ್ಲಿ ಭೇಟಿ ನೀಡಲು ಇಷ್ಟ ಪಡುತ್ತಾರೆ. ಇಲ್ಲಿನ ಹಳೆಯ ಪರಂಪರೆ ಹಾಗೂ ಶ್ರೀಮಂತ ಸಂಸ್ಕೃತಿಯನ್ನು ಅನುಭವಿಸಲು ಇದೇ ಸರಿಯಾದ ಅವಧಿ ಎಂದು ಜನ ಹೇಳುತ್ತಾರೆ.