Search
 • Follow NativePlanet
Share
ಮುಖಪುಟ » ಸ್ಥಳಗಳು» ವಾರಣಾಸಿ

ಶಿವನ ನಗರ ವಾರಣಾಸಿ

60

ವಿಶ್ವದ ಅತ್ಯಂತ ಪ್ರಾಚೀನ, ನಿರಂತರ ಜನವಸತಿಯಿರುವ, ಬನಾರಸ್ ಮತ್ತು ಕಾಶಿ ಎಂದು ಕರೆಯಲ್ಪಡುವ ವಾರಣಾಸಿಯನ್ನು ಸೃಷ್ಟಿ ಹಾಗೂ ಲಯದ ದೇವರಾಗಿರುವ ಶಿವನ ನಗರವೆಂದು ಕೂಡ ಕರೆಯುತ್ತಾರೆ. ಇದು ಹಿಂದೂ ನಗರಗಳಲ್ಲಿ ಅತ್ಯಂತ ಪವಿತ್ರ ನಗರ. ಇಲ್ಲಿ ಸಾವನ್ನಪ್ಪುವ ಅಥವಾ ಅಂತ್ಯಕ್ರಿಯೆ ಮಾಡಲ್ಪಡುವ ವ್ಯಕ್ತಿಗೆ ಮೋಕ್ಷ (ವ್ಯಕ್ತಿಯ ಹುಟ್ಟು ಮತ್ತು ಸಾವಿನ ಚಕ್ರದಿಂದ ಶಾಶ್ವತವಾಗಿ ವಿಮೋಚನೆ) ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇದನ್ನು ಮುಕ್ತಿ ಸ್ಥಳ ಎಂದೂ ಕರೆಯಲಾಗುತ್ತದೆ. ಗಂಗೆಯಲ್ಲಿ ಒಮ್ಮೆ ಮಿಂದೆದ್ದರೆ ಎಲ್ಲಾ ಪಾಪಗಳು ಕಳೆದುಹೋಗುತ್ತದೆ ಎನ್ನುವ ನಂಬಿಕೆಯಿದೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆ ಪ್ರವಾಸಿಗಳು ಮತ್ತು ಯಾತ್ರಿಗಳು ಗಂಗಾ ನದಿಯಲ್ಲಿ ಸ್ನಾನ ಮಾಡುವ ದೃಶ ಸಮ್ಮೋಹನಗೊಳಿಸುವ ಅನುಭವ ನೀಡುತ್ತದೆ. ವಾರಣಾಸಿಯ ಮುಖ್ಯ ಘಟ್ಟದಲ್ಲಿ ಪ್ರತೀ ದಿನ ಸಂಜೆ ಪ್ರಾರ್ಥನೆ ನಡೆಯುತ್ತದೆ.

ಈ ಆಧ್ಯಾತ್ಮಿಕ ನಗರದ ಅತ್ಯಂತ ಆಕರ್ಷಕ ಅಂಶವೆಂದರೆ ಅನೇಕ ಘಾಟ್ (ಘಟ್ಟ)ಗಳಲ್ಲಿ ಧಾರ್ಮಿಕ ವಿಧಿ ಮತ್ತು ಆಚರಣೆಗಳು ನಡೆಯುತ್ತಿರುತ್ತದೆ. ಈ ಘಾಟ್ ಗಳಲ್ಲಿ ಸ್ನಾನದಿಂದ ಹಿಡಿದು ಆರತಿ(ಪ್ರಾರ್ಥನೆ) ಮತ್ತು ಶವದ ಅಂತ್ಯಸಂಸ್ಕಾರ ಕೂಡ ನಡೆಸಲಾಗುತ್ತದೆ. ಇದೆಲ್ಲವನ್ನು ಹೊರತುಪಡಿಸಿ ಯೋಗ, ಮಸಾಜ್, ಶಾವ್ಸ್ ಮತ್ತು ನದಿಯ ದಂಡೆಯಲ್ಲಿ ಕ್ರಿಕೆಟ್ ಕೂಡ ಆಡಲಾಗುತ್ತದೆ.

ವಾರಣಾಸಿ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ವಾರಣಾಸಿ ದೈವಿಕತೆ ಹಲವಾರು ಸ್ಥಾನಗಳಿವೆ. ಈ ನಗರದಲ್ಲಿ ಹಲವಾರು ಘಾಟ್(ಗಂಗಾ ನದಿಯ ನೀರಿಗೆ ಹೋಗುವ ಪ್ರಮುಖ ಪಾತ್ರ)ಗಳು. ಈ ಘಾಟ್ ಗಳಲ್ಲಿ ಪ್ರಮುಖವೆಂದರೆ ದಶಅಶ್ವಮೇಧ ಘಾಟ್. ಇಲ್ಲಿ ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಪ್ರಾರ್ಥನೆ ನಡೆಸಲಾಗುತ್ತದೆ. ದರ್ಬಾಂಗ್ ಘಾಟ್, ಹನುಮಾನ್ ಘಾಟ್ ಮತ್ತು ಮನ್ ಮಂದಿರ್ ಘಾಟ್ ಕೂಡ ಪ್ರಮುಖವಾದದ್ದು. `ಡೆತ್ ಟೂರಿಸಂ' ಮಾಡಿಕೊಂಡಿರುವ ವಿಶ್ವದ ಏಕೈಕ ನಗರ ವಾರಣಾಸಿ. ಮಣಿಕಾರ್ಣಿಕ ಘಾಟ್ ನಲ್ಲಿ ಎಲ್ಲರ ಎದುರಿನಲ್ಲೇ ಶವಗಳನ್ನು ಸುಡಲಾಗುತ್ತದೆ ಮತ್ತು ಬೂದಿಯನ್ನು ಗಂಗಾನದಿಯಲ್ಲಿ ಬಿಡಲಾಗುತ್ತದೆ. ಅಸ್ಸಿ ಘಾಟ್ ಅತೀ ಹೆಚ್ಚಿನ ಸಂಖ್ಯೆಯ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿರುವ ಸ್ಥಳ.

ಇವುಗಳಲ್ಲದೆ ತುಳಸಿ ಘಾಟ್, ಹರಿಶ್ಚಂದ್ರ ಘಾಟ್, ಶಿವಾಲ ಘಾಟ್ ಮತ್ತು ಹೆಚ್ಚು ಛಾಯಾಚಿತ್ರೀಕರಣವಾಗುವ ಕೆದಾರ್ ಘಾಟ್ ಇದೆ. ವಾರಣಾಸಿ ಎಂದರೆ ಶಿವನ ನಗರವೆಂದೇ ಪ್ರಸಿದ್ಧಿ. ಇದರಿಂದಾಗಿಯೇ ಶಿವನಿಗಾಗಿ ಕಾಶಿ ವಿಶ್ವನಾಥ ಮಂದಿರ ಮತ್ತು ನ್ಯೂ ವಿಶ್ವನಾಥ ಮಂದಿರವನ್ನು ಕಟ್ಟಲಾಗಿದೆ. ತುಳ್ಸಿ ಮಾನಸ್ ಮಂದಿರ ಮತ್ತು ದುರ್ಗಾ ಮಂದಿರ ಇತರ ಪ್ರಮುಖ ಮಂದಿರಗಳು. ಮುಸ್ಲಿಮರಿಗಾಗಿ ಅಲಮ್ಗಿರ್ ಮಸೀದಿ ಮತ್ತು ಇಲ್ಲಿರುವ ಜೈನಮಂದಿರದಲ್ಲಿ  ಜೈನರು ಶಾಂತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ.

ಧಾರ್ಮಿಕ ಕ್ಷೇತ್ರಗಳನ್ನು ಹೊರತುಪಡಿಸಿ ವಾರಣಾಸಿಯಲ್ಲಿ ನದಿಯ ಇನ್ನೊಂದು ಬದಿಯಲ್ಲಿ ರಾಮ್ ನಗರ ಕೋಟೆ ಮತ್ತು ಜಂತರ್ ಮಂತರ್ ಎನ್ನುವ ವೀಕ್ಷಣಾಲಯವಿದೆ. ಪ್ರಶಾಂತವಾಗಿರುವ ಕ್ಯಾಂಪಸ್ ಹೊಂದಿರುವ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವೂ ನಗರದಲ್ಲಿದೆ. ಈ ವಿಶ್ವವಿದ್ಯಾನಿಲಯವನ್ನು ಪೂರ್ವದ ಆಕ್ಸ್ ಫರ್ಡ್ ಎಂದೇ ಕರೆಯಲಾಗುತ್ತದೆ. ಶಾಸ್ತ್ರೀಯ ನೃತ್ಯ, ಸಂಗೀತ ಮತ್ತು ಯೋಗಕ್ಕೂ ನಗರ ಜನಪ್ರಿಯವಾಗಿದೆ.

ವಾರಣಾಸಿ ತಲುಪುವುದು ಹೇಗೆ

ವಾರಣಾಸಿಗೆ ರಸ್ತೆ, ರೈಲು ಮತ್ತು ವಿಮಾನ ಮೂಲಕ ತಲುಪಬಹುದು. ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವಿದೆ.

ವಾರಣಾಸಿಗೆ ಭೇಟಿ ನೀಡಲು ಸೂಕ್ತ ಸಮಯ

ಅಕ್ಟೋಬರ್ ನಿಂದ ಮಾರ್ಚ್ ತನಕ ವಾರಣಾಸಿಗೆ ಭೇಟಿ ನೀಡಲು ಸೂಕ್ತ ಸಮಯ.

ವಾರಣಾಸಿ ಪ್ರಸಿದ್ಧವಾಗಿದೆ

ವಾರಣಾಸಿ ಹವಾಮಾನ

ವಾರಣಾಸಿ
36oC / 97oF
 • Sunny
 • Wind: WSW 19 km/h

ಉತ್ತಮ ಸಮಯ ವಾರಣಾಸಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ವಾರಣಾಸಿ

 • ರಸ್ತೆಯ ಮೂಲಕ
  ಲಖನೌ(8ಗಂಟೆ), ಕಾನ್ಪುರ(9ಗಂಟೆ) ಮತ್ತು ಅಲಹಾಬಾದ್(3ಗಂಟೆ)ನಿಂದ ಬಸ್ ಗಳಿವೆ. ಬಸ್ ಗಳು ತುಂಬಾ ನಿಧಾನಗತಿಯಲ್ಲಿ ಸಾಗುತ್ತವೆ ಮತ್ತು ಅನನುಕೂಲಕರವಾಗಿರುತ್ತದೆ. ರೈಲು ಅಥವಾ ವಿಮಾನ ಮೂಲಕ ಪ್ರಯಾಣಿಸುವುದು ಉತ್ತಮ
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ವಾರಣಾಸಿಯಲ್ಲಿ ಎರಡು ಪ್ರಮುಖ ರೈಲು ನಿಲ್ದಾಣಗಳಿವೆ. ವಾರಣಾಸಿ ಜಂಕ್ಷನ್ ಮತ್ತು ನಗರದ ಪೂರ್ವದಲ್ಲಿ 15 ಕಿ.ಮೀ. ದೂರದಲ್ಲಿರುವ ಮುಘಲ್ ಸರೈ ಜಂಕ್ಷನ್ ಇದೆ. ವಾರಣಾಸಿಯಿಂದ ದೆಹಲಿ, ಆಗ್ರಾ, ಲಖನೌ, ಮುಂಬಯಿ ಮತ್ತು ಕೊಲ್ಕತ್ತಾಗೆ ಹಲವಾರು ದೈನಂದಿನ ರೈಲು ಸೇವೆಗಳಿವೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ ಮತ್ತು ಇದು ಇಲ್ಲಿಗೆ ಭಾರತದ ಪ್ರಮುಖ ನಗರಗಳಾದ ದೆಹಲಿ, ಲಖನೌ, ಮುಂಬಯಿ, ಖಜುರಾಹೊ ಮತ್ತು ಕೊಲ್ಕತ್ತಾದಿಂದ ವಿಮಾನಗಳಿವೆ.
  ಮಾರ್ಗಗಳ ಹುಡುಕಾಟ

ವಾರಣಾಸಿ ಲೇಖನಗಳು

One Way
Return
From (Departure City)
To (Destination City)
Depart On
09 Aug,Sun
Return On
10 Aug,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
09 Aug,Sun
Check Out
10 Aug,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
09 Aug,Sun
Return On
10 Aug,Mon
 • Today
  Varanasi
  36 OC
  97 OF
  UV Index: 9
  Sunny
 • Tomorrow
  Varanasi
  32 OC
  90 OF
  UV Index: 9
  Sunny
 • Day After
  Varanasi
  34 OC
  93 OF
  UV Index: 10
  Sunny