Search
  • Follow NativePlanet
Share
ಮುಖಪುಟ » ಸ್ಥಳಗಳು» ವಾಲ್ಪಾರೈ

ವಾಲ್ಪಾರೈ - ಪ್ರಕೃತಿಯ ನಡುವೆ ಚಹಾ, ಕಾಫಿಗಳ ಪರಿಮಳ

23

ಗಿರಿಧಾಮವೆಂದರೆ ಪ್ರವಾಸಿಗರನ್ನು ಸೂಜಿಗಲ್ಲಿನೆಂತೆ ಸೆಳೆಯುವ ಅದ್ಭುತ ತಾಣ. ಯಾವುದೇ ಗಿರಿಧಾಮವಿರಲಿ ಅಲ್ಲಿಗೆ ಭೇಟಿ ನೀಡುವಾಗ ಸಿಗುವ ಖುಷಿ ಅಷ್ಟಿಷ್ಟಲ್ಲ. ಪ್ರವಾಸಿಗಳು ಗಿರಿಧಾಮಗಳಿರುವ ಊರುಗಳಿಗೆ ಭೇಟಿ ನೀಡಲು ತುಂಬಾ ಇಷ್ಟಪಡುತ್ತಾರೆ. ಪ್ರವಾಸಿಗಳಿಗೆ ಮುದ ನೀಡುವಂತಹ ಗಿರಿಧಾಮವೊಂದು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಅಣ್ಣಮಲೈ ಪರ್ವತಶ್ರೇಣೆಯಲ್ಲಿದೆ. ಅದೇ ವಾಲ್ಪಾರೈ ಗಿರಿಧಾಮ. ಈ ಗಿರಿಧಾಮವು ಸಮುದ್ರ ಮಟ್ಟಕ್ಕಿಂತ ಸುಮಾರು 3500 ಅಡಿ ಎತ್ತರದಲ್ಲಿದ್ದು, ತಮಿಳುನಾಡಿನ ಅತ್ಯಂತ ಸುಂದರ ಗಿರಿಧಾಮ ಇದಾಗಿದೆ. ಈ ಗಿರಿಧಾಮದಲ್ಲಿ ಮಾನವ ಕಾಲಿಟ್ಟು ಸುಮಾರು 170 ವರ್ಷ ದಾಟಿದೆ. ಆದರೂ ಅಲ್ಲಿ ನೈಸರ್ಗಿಕ ಕಾಡಿನೊಂದಿಗೆ ಮಾನವ ನಿರ್ಮಿತ ಕಾಫಿ ಮತ್ತು ಟೀ ತೋಟಗಳು ಸ್ವಚ್ಛಂದವಾಗಿ ಬೆಳೆಯುತ್ತಿದೆ. ನಿಸರ್ಗ ಸಹಜ ಜಲಪಾತಗಳು ಮತ್ತು ತೊರೆಗಳು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಸಂಶಯವೇ ಇಲ್ಲ.

ಈ ಗಿರಿಧಾಮಕ್ಕೆ ಪ್ರಯಾಣಿಸುವುದೇ ದೊಡ್ಡ ಸಾಹಸವೆನ್ನಬಹುದು. ಅಝಿಯಾರ್ ನಿಂದ ವಾಲ್ಪಾರೈಗೆ ಸುಮಾರು 40ಕ್ಕಿಂತಲೂ ಹೆಚ್ಚಿನ ಕಡಿದಾದ ತಿರುವಿನಲ್ಲಿ ಪ್ರಯಾಣಿಸಬೇಕಾಗುತ್ತದೆ. ವಾಲ್ಪಾರೈಗೆ ಪೊಲ್ಲಚ್ಚಿ ತುಂಬಾ ಸಮೀಪದ ಊರು. ಇಲ್ಲಿಂದ 65 ಕಿ.ಮೀ. ಕ್ರಮಿಸಿದರೆ ವಾಲ್ಪಾರೈಗೆ ತಲುಪಬಹುದು. ಕೊಯಮತ್ತೂರು ನಗರದಿಂದಾದರೆ ವಾಲ್ಪಾರೈ ಸುಮಾರು 100 ಕಿ.ಮೀ. ದೂರದಲ್ಲಿದೆ.

ವಾಲ್ಪಾರೈನ ಸುತ್ತಮುತ್ತಲಿನ ಪ್ರವಾಸಿ ತಾಣಗಳು:

ವಾಲ್ಪಾರೈಯ ಸುತ್ತಮುತ್ತ ಚಿನ್ನಕಲಾರ್ ಫಾಲ್ಸ್ ನ್ನು ಹೊರತುಪಡಿಸಿ ಹಲವಾರು ಪ್ರವಾಸಿ ತಾಣಗಳಿವೆ. ಇಲ್ಲಿನ ಬಾಲಾಜಿ ಮಂದಿರ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ನಿರಾರ್ ಅಣೆಕಟ್ಟು, ಗಣಪತಿ ಮಂದಿರ ಮತ್ತು ಅಣ್ಣೈ ವೆಲಂಕಣಿ ಚರ್ಚ್ ಗೆ ಪ್ರವಾಸಿಗಳು ಭೇಟಿ ನೀಡಬಹುದು. ಶೋಲಯಾರ್ ಅಣೆಕಟ್ಟು, ಗ್ರಾಸ್ ಹಿಲ್ ಮತ್ತು ವಿವ್ಯೂ ಪಾಯಿಂಟ್ ಪ್ರವಾಸಿಗಳು ವಾಲ್ಪಾರೈಗೆ ಭೇಟಿ ನೀಡುವಾಗ ನೋಡಲೇಬೇಕಾದ ಕೆಲವು ಆಕರ್ಷಕ ಪ್ರವಾಸಿ ತಾಣಗಳು.

ಸದಾ ಹಚ್ಚಹಸುರಿನ ನಾಡು:

ವಾಲ್ಪಾರೈಯಲ್ಲಿ ದಟ್ಟ ಕಾನನ, ವನ್ಯಜೀವಿ ರಕ್ಷಿತಾರಣ್ಯ ಮತ್ತು ಜಲಪಾತ ಸೇರಿದಂತೆ ಎಲ್ಲವೂ ನಿಸರ್ಗನಿರ್ಮಿತ. ದಟ್ಟ ಕಾನನದ ಕೆಲವು ಭಾಗಗಳಿಗೆ ಪ್ರವಾಸಿಗಳು ಹೋಗುವುದೇ ಕಷ್ಟವಾದರೂ ವನ್ಯಜೀವಿ ಸಂಪತ್ತನ್ನು ತಪ್ಪದೆ ನೋಡಲೇಬೇಕು. ದಕ್ಷಿಣ ಭಾರತದ ಚಿರಾಪೂಂಜಿ ಆಗಿರುವ ಚಿನ್ನಕಲ್ಲಾರ್ ಮತ್ತು ಇಂದಿರಾ ಗಾಂಧಿ ವನ್ಯಜೀವಿ ಅಭಯಾರಣ್ಯದಲ್ಲಿರುವ ಗ್ರಾಸ್ ಹಿಲ್ ಆಕರ್ಷಣೀಯವಾಗಿದೆ. ಇಲ್ಲಿ ಟೀ, ಕಾಫಿ ತೋಟಗಳು, ಟೀ ಫ್ಯಾಕ್ಟರಿ ಮತ್ತು ಅಣೆಕಟ್ಟುಗಳಿವೆ. ಇಲ್ಲಿನ ಕಾಫಿ ತೋಟಗಳಲ್ಲಿ ಮುಂಜಾನೆ ಎದ್ದು ನಡೆದಾಡಿದರೆ ಪ್ರಕೃತಿ ಮಡಿಲಿನಲ್ಲಿ ಮನಸ್ಸು ಪ್ರಪುಲ್ಲಿತಗೊಳ್ಳುತ್ತದೆ. ಅದರಲ್ಲೂ ಫೋಟೊಗ್ರಾಫಿ ಹವ್ಯಾಸವಿರುವವರಿಗೆ ಈ ಜಾಗ ಹೇಳಿ ಮಾಡಿಸಿದಂತಿದೆ.

ವಾಲ್ಪಾರೈಗೆ ತಲುಪುವುದು ಹೇಗೆ?

ರಸ್ತೆ ಮತ್ತು ರೈಲಿನ ಮೂಲಕ ವಾಲ್ಪಾರೈಗೆ ಪ್ರಯಾಣಿಸಬಹುದು. ವಾಲ್ಪಾರೈಗೆ ಅತ್ಯಂತ ಸನಿಹದ ವಿಮಾನನಿಲ್ದಾಣ ಕೊಯಮತ್ತೂರು. ಇಲ್ಲಿಂದ ವಾಲ್ಪಾರೈಗೆ 107 ಕಿ.ಮೀ. ಇದೆ. ರಸ್ತೆ ಮೂಲಕ ವಾಲ್ಪಾರೈಗೆ ಹೋಗುವುದು ಸುಲಭ. ಕೊಯಮತ್ತೂರಿನಿಂದ ವಾಲ್ಪಾರೈಗೆ ಟ್ಯಾಕ್ಸಿಗಳು ಸಾಮಾನ್ಯ ದರದಲ್ಲಿ ವಾಲ್ಪಾರೈಗೆ ಕರೆದೊಯ್ಯುತ್ತವೆ. ಕೊಯಮತ್ತೂರು ಮತ್ತು ಪೊಲ್ಲಚಿಯಿಂದ ಬಸ್ ಮೂಲಕವೂ ವಾಲ್ಪಾರೈಗೆ ಹೋಗಬಹುದು.

ವಾಲ್ಪಾರೈ ಹವಾಮಾನ:

ಗಿರಿಧಾಮದಲ್ಲಿ ಸಾಮಾನ್ಯವಾಗಿ ಇರುವಂತಹ ಹವಾಮಾನ ಇಲ್ಲಿದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಗಿರಿಧಾಮ ತುಂಬಾ ತಂಪಾಗಿರುತ್ತದೆ. ಈ ಎರಡು ಋತುವಿನಲ್ಲಿ ಅಲ್ಲಿಗೆ ಪ್ರಯಾಣ ಮಾಡದಿದ್ದರೆ ಒಳ್ಳೆಯದು. ಬೇಸಿಗೆಕಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದು. ಹವಾಮಾನ ಕೂಡ ಉತ್ತಮವಾಗಿರುತ್ತದೆ.

ವಾಲ್ಪಾರೈ ಪ್ರಸಿದ್ಧವಾಗಿದೆ

ವಾಲ್ಪಾರೈ ಹವಾಮಾನ

ಉತ್ತಮ ಸಮಯ ವಾಲ್ಪಾರೈ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಾಲ್ಪಾರೈ

  • ರಸ್ತೆಯ ಮೂಲಕ
    ರಸ್ತೆ ಮಾರ್ಗವಾಗಿ ಕೊಯಮತ್ತೂರು ಅಥವಾ ಪೊಲ್ಲಾಚಿಯಿಂದ ವಾಲ್ಪಾರೈಗೆ ಪ್ರಯಾಣಿಸಬಹುದು. ಕೊಯಮತ್ತೂರಿನಿಂದ ವಾಲ್ಪಾರೈಗೆ 100 ಕಿ.ಮೀ. ದೂರ ಮತ್ತು ಪೊಲ್ಲಾಚಿಯಿಂದ ಕೇವಲ 65 ಕಿ.ಮೀ. ರಾಷ್ಟ್ರಿಯ ಹೆದ್ದಾರಿ 83 ಮತ್ತು ರಾಜ್ಯ ಹೆದ್ದಾರಿ 78ರ ಮೂಲಕ ವಾಲ್ಪಾರೈಗೆ ಸಾಗಬಹುದು. ಇದು ಅತ್ಯಂತ ಸುಲಭ, ಅಗ್ಗ ಹಾಗೂ ಬೇಗನೆ ವಾಲ್ಪಾರೈಗೆ ತಲುಪಲು ಇರುವ ಮಾರ್ಗ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರೈಲಿನಲ್ಲಾದರೆ ವಾಲ್ಪಾರೈಗೆ ಹತ್ತಿರದ ನಿಲ್ದಾಣ ಪೊಲ್ಲಾಚಿ. ಕೊಯಮತ್ತೂರು ಮುಖ್ಯ ನಿಲ್ದಾಣ. ಕೊಯಮತ್ತೂರಿನಿಂದ ಪೊಲ್ಲಚಿಗೆ ಪ್ರಯಾಣಿಕ ರೈಲುಗಳಿವೆ. ಪೊಲ್ಲಾಚಿ ನಿಲ್ದಾಣದಿಂದ ರಸ್ತೆ ಮೂಲಕ ಪಾಲ್ಪಾರೈಗೆ ಪ್ರಯಾಣಿಸಬೇಕು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಯಮತ್ತೂರು ವಿಮಾನ ನಿಲ್ದಾಣ ವಾಲ್ಪಾರೈಗೆ ಅತ್ಯಂತ ಹತ್ತಿರದ ವಿಮಾನನಿಲ್ದಾಣ. ಕೊಯಮತ್ತೂರು ವಿಮಾನನಿಲ್ದಾಣದಿಂದ ವಾಲ್ಪಾರೈಗೆ 107 ಕಿ.ಮೀ. ದೂರ. ಕೊಯಮತ್ತೂರಿಗೆ ಅಂತಾರಾಷ್ಟ್ರೀಯ ವಿಮಾನಗಳು ಕಡಿಮೆ. ಇದರಿಂದ ದೇಶೀಯ ವಿಮಾನದಲ್ಲಿ ಕೊಯಮತ್ತೂರಿಗೆ ಬಂದು ಅಲ್ಲಿಂದ ವಾಲ್ಪಾರೈಗೆ ಟ್ಯಾಕ್ಸಿ ಮೂಲಕ ಪ್ರಯಾಣಿಸಿದರೆ ಹಣ ಕೂಡ ಉಳಿತಾಯ ಮಾಡಬಹುದು. ಕೊಯಮತ್ತೂರು ಮತ್ತು ಪೊಲ್ಲಚಿಯಿಂದ ಬಸ್ ಅಥವಾ ಬಾಡಿಗೆ ಕಾರಿನ ಮೂಲಕವೂ ವಾಲ್ಪಾರೈಗೆ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun