Search
  • Follow NativePlanet
Share
ಮುಖಪುಟ » ಸ್ಥಳಗಳು» ವೈಶಾಲಿ

ವೈಶಾಲಿ : ಬುದ್ದನ ಮೇಲೊಂದು ಪದ

18

ಐತಿಹಾಸಿಕ ಭದ್ರ ಬುನಾದಿಯನ್ನು ಹೊಂದಿರುವ ಸ್ಥಳ ವೈಶಾಲಿ. ವೈಶಾಲಿ ನಗರವು ಸುಂದರವಾದ ಬಾಳೆಹಣ್ಣು, ಮಾವು ಮತ್ತು ಅಕ್ಕಿ ಬೆಳೆಯುವ ಪರಿಸರದಲ್ಲಿದೆ. ವೈಶಾಲಿ ಪ್ರವಾಸೋದ್ಯಮ ಹೆಸರುವಾಸಿಯಾಗಿರುವುದು ಅದ್ಭುತವಾದ ಬುದ್ದನ ಶ್ರೀಮಂತ ಆಸ್ತಿಪಾಸ್ತಿಗಳಿಗಾಗಿ. ವೈಶಾಲಿ ನಗರವು ಸ್ಪೂರ್ತಿ ನೀಡುವ ಸ್ಥಳವಾಗಿದ್ದು, ಈ ಹಿಂದೆ ಯಾರದಾರೂ ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಈ ಸ್ಥಳವನ್ನು ಎಂದೂ ಮರೆಯಲಾ. ಇತಿಹಾಸದ ಬಗ್ಗೆ ಹೇಳುವುದಾದರೆ, ವೈಶಾಲಿ ರಾಮಾಯಣ ಮತ್ತು ಮಹಾಭಾರತ ಕಾಲದ ಬುನಾದಿಯನ್ನು ಹೊಂದಿದೆ, ಯಾಕೆಂದರೆ ವಿಶಾಲ್ ಎನ್ನುವ ರಾಜನ ಮೂಲಕ.

ಭಗವಾನ್ ಮಹಾವೀರನ ಜನನಕ್ಕೂ ಮುನ್ನ ವೈಶಾಲಿ ನಗರವು ಲಿಚ್ಚವಿ ರಾಜ್ಯದ ರಾಜಧಾನಿಯಾಗಿತ್ತು. ಈ ಸ್ಥಳವು ಆದ್ಯಾತ್ಮಿಕವಾಗಿ ಪ್ರಸಿದ್ದಿಯನ್ನು ಹೊಂದಿದೆ, ವೈಶಾಲಿಯಲ್ಲಿ ಭಗವಾನ್ ಮಹಾವೀರ್ ಜನಿಸಿದ್ದು ಮತ್ತು ಭಗವಾನ್ ಬುದ್ದನಿಂದಾಗಿ ಈ ಸ್ಥಳವು ಇತಿಹಾಸ ಪ್ರಸಿದ್ದವಾಗಿದೆ. ನೂರಕ್ಕೂ ಹೆಚ್ಚು ವರ್ಷ ಬುದ್ದನ ಜ್ಞಾನಾರ್ಜನೆಯಿಂದ ಬೌದ್ದ ಧರ್ಮೀಯರಿಗೆ ಎರಡನೇ ಅತಿದೊಡ್ಡ ಪವಿತ್ರ ಸ್ಥಳವಾಗಿದೆ. ಇತಿಹಾಸ ತಜ್ಞರ ಪ್ರಕಾರ ವೈಶಾಲಿ ನಗರವು ವಿಶ್ವದ ಪ್ರಥಮ ಗಣರಾಜ್ಯವಾಗಿದ್ದು ಕ್ರಿ.ಪೂ ಆರನೇ ಶತಮಾನದಲ್ಲೇ ಜನರಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿತ್ತು. ವಾಣಿಜ್ಯವಾಗಿಯೂ ವೈಶಾಲಿ ದೊಡ್ಡ ಕೇಂದ್ರವಾಗಿದೆ.

ಮಾನವ ಗಾತ್ರದ ದೊಡ್ಡ ಸ್ಥಂಭ ಇಟ್ಟಿಗೆ ಕಲಾಹುವಾದ ಸ್ತುಪಾದ ಬಳಿ ನಿರ್ಮಿತವಾಗಿದೆ, ಈ ಸ್ಥಳದಲ್ಲಿ ಬುದ್ದ ಕೊನೆಯ ಸಾಮೂಹಿಕ ಪ್ರಾರ್ಥನೆ ನಡೆಸಿದ್ದ ಮತ್ತು ತನ್ನ ಮುಂದಿನ ನಿರ್ವಾಣದ ಬಗ್ಗೆಯೂ ತಿಳಿಸಿದ್ದ ಎನ್ನುವುದು ಇತಿಹಾಸ. ವೈಶಾಲಿ ಪ್ರವಾಸೋದ್ಯಮವು ಧಾರ್ಮಿಕ, ಸಾಂಸ್ಕ್ರುತಿಕ ಮತ್ತು ಭೌಗೋಳಿಕವಾಗಿ ಶ್ರೀಮಂತವಾಗಿದೆ.

ವೈಶಾಲಿ ಪ್ರವಾಸೋದ್ಯಮದ ಪ್ರಮುಖ ಆಕರ್ಷಣಾ ಕೇಂದ್ರವೆಂದರೆ ಅಶೋಕನ್ ಪಿಲ್ಲರ್ (ಸ್ಥಂಭ), ಬುದ್ದ ಸ್ತುಪಾ, ಕುಂದಾಲಪುರ, ರಾಜ್ ವಿಶಾಲ್ ಕಾ ಘರ್, ಪಟ್ಟಾಭಿಷೇಕವಾದ ಕೊಳ, ಬುದ್ದಿ ಮಾಯಿ, ರಾಮಚೌರಾ, ವೈಶಾಲಿ ಮ್ಯೂಸಿಯಂ, ವಿಶ್ವಶಾಂತಿಯ ಪಗೋಡ ಮುಂತಾದವು. ವೈಶಾಲಿ ಹೆಸರುವಾಸಿಯಾಗಿರುವುದು ವೈಶಾಲಿ ಮಹೋತ್ಸವಕ್ಕಾಗಿ, ಈ ಸಮಯದಲ್ಲಿ ಭಗವಾನ್ ಮಹಾವೀರನ ಹುಟ್ಟಿದ ಹಬ್ಬ ಆಚರಿಸಲಾಗುವುದು ಮತ್ತು ಸೋನೇಪುರ ಮೇಳ ಇಲ್ಲಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿ ನಡೆಯುತ್ತದೆ.

ಇದನ್ನು ಹೊರತು ಪಡಿಸಿ ವೈಶಾಲಿ ಪ್ರವಾಸೋದ್ಯಮದಲ್ಲಿ ಸಿಗುವ ಇತರ ಆಕರ್ಷಣೆಯೆಂದರೆ ಮಧುಬಾನಿ ಪೈಂಟಿಂಗ್. ಕಲ್ಲಿನ ಕೆತ್ತನೆ ಮತ್ತು ಸ್ಥಳೀಯ ಕೈಮಗ್ಗದ ವಸ್ತುಗಳು. ಈ ಶಿಲ್ಪಕಲೆಗಳು ಪ್ರವಾಸಿಗರಿಂದ ಪ್ರಶಂಸೆಗೆ ಒಳಗಾಗುತ್ತದೆ ಮತ್ತು ಪ್ರವಾಸಿಗರು ಸ್ಥಳೀಯ ಅಂಗಡಿಯಿಂದ ಖರೀದಿಸಬಹುದಾಗಿದೆ. ಸ್ಥಳೀಯವಾಗಿ ಇಲ್ಲಿ ಮನೆಯಲ್ಲಿ ನಿರ್ಮಿತವಾಗಿರುವ ಆಟಿಕೆಗಳು ಮತ್ತು ಲಕ್ಷ ಬಳೆಗಳು. ವೈಶ್ಯಾಲಿಯ ’ಸಿಕ್ಕಿ ಕೆಲಸ’ ಎಂದು ಕರೆಯಲ್ಪಡುವ ಇದು ಶಿಲ್ಪಿಯ ಕೈಕುಸಿರಿಗೆ ಸಾಕ್ಷಿಯಾಗುತ್ತದೆ, ಬಾಸ್ಕೆಟ್ ಮತ್ತು ಮ್ಯಾಟ್ ತಯಾರಿಸಲು ಹುಲ್ಲನ್ನು ಬಳಸಿಕೊಳ್ಳುತ್ತಾರೆ.  

ವೈಶಾಲಿಯ ತಾಜಾ ಲಿಚ್ಚಸ್ ಪಾನಪ್ರಿಯರಿಗೆ ಹೊಸ ಸ್ವಾದವನ್ನು ನೀಡುತ್ತದೆ. ವೈಶಾಲಿ ನಗರವನ್ನು ರಸ್ತೆ, ರೈಲು ಮತ್ತು ವಿಮಾನದ ಮೂಲಕ ತಲುಪಬಹುದು. ವೈಶಾಲಿ ನಗರದ ವಿಶೇಷತೆ ಏನಂದರೆ ಹಿಂದಿನ ಪರಂಪರೆಯನ್ನು ಇಂದಿಗೂ ಮುಂದುವರಿಸಿ ಕೊಂಡು ಬಂದಿರುವುದು, ಆ ಸೊಬಗನ್ನು ಪ್ರವಾಸಿಗರು ಗಮನಿಸ ಬಹುದು. ವೈಶಾಲಿ ನಗರದಲ್ಲಿ ಉಪ ಉಷ್ಣಾಂಸದ ವಾತಾವರಣ ವಿರುತ್ತದೆ, ಹಾಗಾಗಿ ವೈಶಾಲಿ ಪ್ರವಾಸೋದ್ಯಮಕ್ಕೆ ಸೂಕ್ತ ಸಮಯವೆಂದರೆ ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳ ಸಮಯದಲ್ಲಿ. ವೈಶಾಲಿಯಿಂದ ಮೂವತ್ತೈದು ಕಿಲೋಮೀಟರ್ ದೂರದಲ್ಲಿ ಮುಜಫರ್ ನಗರವಿದೆ.

ಭೇಟಿ ನೀಡಲು ಯಾವ ಸಮಯ ಸೂಕ್ತ

ವೈಶಾಲಿಯಲ್ಲಿ ಗಂಗಾನದಿಯ ಭಾಗದಲ್ಲಿರುವಂತೆ ತೀವ್ರ ವಾತಾವರಣವಿರುತ್ತದೆ. ಬೇಸಿಗೆಯಲ್ಲಂತೂ ಸುಡು ಬಿಸಿಲಿನ ವಾತಾವರಣವಿದ್ದು ತಾಪಾಂಸ 45 ಡಿಗ್ರಿಯವರೆಗೆ ಸಾಗುತ್ತದೆ ಮತ್ತು ಚಳಿಗಾಲದಲ್ಲಿ ತಾಪಾಂಸ ಆರು ಡಿಗ್ರಿಯವರೆಗೆ ಇಳಿಯುತ್ತದೆ. ವೈಶಾಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತ ಸಮಯವೆಂದರೆ ಚಳಿಗಾಲದಲ್ಲಿ ಅದು ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಅವಧಿಯಲ್ಲಿ.

ವೈಶಾಲಿ ಪ್ರಸಿದ್ಧವಾಗಿದೆ

ವೈಶಾಲಿ ಹವಾಮಾನ

ಉತ್ತಮ ಸಮಯ ವೈಶಾಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವೈಶಾಲಿ

  • ರಸ್ತೆಯ ಮೂಲಕ
    ರಸ್ತೆ ಮೂಲಕ ವೈಶಾಲಿ ತಲುಪಲು ಅತ್ಯಂತ ಸೂಕ್ತವಾಗಿದೆ. ಇಲ್ಲಿಗೆ ದೈನಂದಿನ ಬಸ್ಸುಗಳು ಪಾಟ್ನಾಗಿದ್ದು, ಪಾಟ್ನಾದಿಂದ ಉತ್ತರ ಬಿಹಾರಿಗೆ ವೈಶಾಲಿಯಿಂದ ತಲುಪಬಹುದು. ಟೂರಿಸ್ಟ್ ಕೋಚ್ ಗೈಡುಗಳ ಸಹಾಯವನ್ನು ಪಾಟ್ನಾದಲ್ಲಿ ವೈಶಾಲಿಗೆ ಹೋಗಲು ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವೈಶಾಲಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಹಾಜೀಪುರ, ಮೂವತ್ತೈದು ಕಿಲೋಮೀಟರ್ ದೂರ, ಈ ರೈಲು ನಿಲ್ದಾಣದಿಂದ ಭಾರತದ ಪ್ರಮುಖ ನಗರಗಳಾದ ದೆಹಲಿ, ಕೊಲ್ಕತ್ತಾ, ಮುಂಬೈ, ಚೆನ್ನೈ ಮತ್ತು ವಾರಣಾಸಿಯಿಂದ ರೈಲು ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವೈಶಾಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಪಾಟ್ನಾ, ಇದು ಇಲ್ಲಿಂದ ಸುಮಾರು ಎಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಮೆಟ್ರೋಸಿಟಿಯನ್ನು ಹೊರತು ಪಡಿಸಿ ಕೂಡಾ ಇಲ್ಲಿಗೆ ವಿಮಾನ ಸಂಪರ್ಕವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu