Search
  • Follow NativePlanet
Share
ಮುಖಪುಟ » ಸ್ಥಳಗಳು» ವಗಮೋನ್

ವಗಮೋನ್ : ನಿಸರ್ಗವೇ ಮೈವೆತ್ತಂತೆ..!

46

ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಗಡಿಯಲ್ಲಿರುವ ವಗಮೋನ್ , ಒಂದು ಗುಡ್ಡ ಪ್ರದೇಶ. ನವದಂಪತಿಗಳಿಗೆ ಕಾಲಕಳೆಯಲು ಸುಂದರವಾದ ತಾಣವಿದು. ವಿಶಾಲವಾಗಿ ಹರಡಿರುವ ಹಸಿರು, ನೀಲಿ ನೀಲಿ ಪರ್ವತಗಳು, ಸುಂದರ ನದಿಗಳು, ನೀರಝರಿಗಳು, ಆಹ್ಲಾದಕರವಾದ ವಾತಾವರಣ ಮತ್ತು ದಟ್ಟವಾದ ಅರಣ್ಯವಿರುವದರಿಂದ ವಗಮೋನ್‌ ಎಂಥವರ ಮನಸ್ಸನ್ನೂ ಸೆಳೆಯುತ್ತದೆ. ರಜಾಕಾಲದ ದಿನಗಳನ್ನು ಕಳೆಯಲು ಸೂಕ್ತವಾದ ತಾಣವಿದು. ಥಂಗಾಲ್‌ ಬೆಟ್ಟ, ಮುರುಗನ್‌ ಬೆಟ್ಟ ಮತ್ತು ಕುರಿಸುಮಾಲವು ನಿಸರ್ಗ ಸೌಂದರ್ಯವನ್ನು ಹೆಚ್ಚಿಸಿವೆ.

ಸೌಂದರ್ಯದ ಖನಿಯಲ್ಲಿ...

ಸೌಂದರ್ಯದ ಖನಿಯ ಹೊರತಾಗಿ ವಗಮೋನ್‌ನಲ್ಲಿ ಜನರ ನೋಡಬೇಕಾದ ಹಲವು ಸಂಗತಿಗಳಿವೆ. ಬಂಡೆ ಹತ್ತುವುದು, ಚಾರಣ, ಗುಡ್ಡ ಹತ್ತುವುದು ಮತ್ತು ಪ್ಯಾರಾಗ್ಲೈಡಿಂಗ್‌ನಂಥ ಚಟುವಟಿಕೆಗಳನ್ನು ಪ್ರವಾಸಿಗರು ನಡೆಸಬಹುದು. ಇನ್ನು ನೀವು ಸಾಹಸಿಗಳಲ್ಲದಿದ್ದರೆ ಸುತ್ತಲಿನ ಸುಂದವಾದ ಹಸಿರು ಪರಿಸರವನ್ನು ವೀಕ್ಷಿಸುತ್ತಾ ಕುಳಿತುಕೊಳ್ಳಬಹುದು. ಸಮುದ್ರ ಮಟ್ಟದಿಂದ ಸುಮಾರು 1,100 ಮೀಟರು ಎತ್ತರಕ್ಕೆ ಈ ಪ್ರದೇಶವಿದೆ. ಏಷ್ಯಾದ ಸ್ಕಾಟ್‌ಲ್ಯಾಂಡ್‌ ಎಂದು ವಗಮೋನ್‌ಅನ್ನು ಕರೆಯಲಾಗಿದೆ. ಭೇಟಿ ಮಾಡಲೇಬೇಕಾದ ಭಾರತದ 50 ಪ್ರದೇಶಗಳಲ್ಲಿ ಇದೂ ಒಂದೆಂಬ ಹೆಗ್ಗಳಿಕೆಯನ್ನು ನ್ಯಾಷನಲ್ ಜಿಯೋಗ್ರಾಫಿಕ್ ಪ್ರಕಾರ ಪಡೆದಿದೆ.

ವಗಮೋನ್‌ ಪ್ರದೇಶವನ್ನು ಕಂಡುಹಿಡಿದಿದ್ದು ಬ್ರಿಟಿಷರು. ಇವರು ತಮ್ಮ ಟೀ ಪ್ಲಾಂಟೇಷನ್ನಿಗೆ ಈ ತಾಣ ಸೂಕ್ತ ಎಂದು ಭಾವಿಸಿದ್ದರು. ನಂತರದಲ್ಲಿ ಕುರಿಸುಮಾಲಾದಲ್ಲಿ ಕ್ರಿಶ್ಚಿಯನ್‌ ಮಿಶಿನರಿಗಳನ್ನು ಸ್ಥಾಪಿಸಿದರು.

ವಗಮೋನ್‌ಗೆ ಹೋಗುವುದು...

ಕೊಟ್ಟಾಯಮ್‌ನಿಂದ ವಗಮೋನ್‌ಗೆ ಸುಮಾರು 65 ಕಿ.ಮೀ ದೂರ. ಸಮೀಪದ ವಿಮಾನ ನಿಲ್ದಾಣವೆಂದರೆ ಕೊಚಿನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸಮೀಪದ ರೈಲ್ವೆ ಸ್ಟೇಷನ್‌ ಕೊಟ್ಟಾಯಮ್‌ನಲ್ಲಿದೆ.

ಪ್ರವಾಸಿ ತಾಣಗಳು...

ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ರೆಸಾರ್ಟ್‌‌ಗಳು ಲಭ್ಯವಿದೆ. ತೆಕ್ಕಡಿ, ಪೀರ್‌ಮೇಡ್‌ ಮತ್ತು ಕುಲಮಾವುಗಳಿಗೆ ವಗಮೋನ್‌ನಿಂದ ಪ್ರವಾಸ ಕೈಗೊಳ್ಳಬಹುದು. ವರ್ಷಪೂರ್ತಿ ಇಲ್ಲಿನ ವಾತಾವರಣವು ಪ್ರವಾಸಿಗಳಿಗೆ ಸೂಕ್ತವಾಗಿರುತ್ತದೆ.

ವಗಮೋನ್ ಪ್ರಸಿದ್ಧವಾಗಿದೆ

ವಗಮೋನ್ ಹವಾಮಾನ

ಉತ್ತಮ ಸಮಯ ವಗಮೋನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ವಗಮೋನ್

  • ರಸ್ತೆಯ ಮೂಲಕ
    ವಾಗಮೋನ್‌ಗೆ ರಸ್ತೆಯ ಮೂಲಕವೂ ಹೋಗಬಹುದು. ವಾಗಮೋನ್‌ಗೆ ಹೋಗಲು ನೀವು ಸಮೀಪದ ನಗರಗಳಿಂದ ಬಸ್‌ ವ್ಯವಸ್ಥೆಯನ್ನು ಪಡೆಯಬಹುದು. ಇನ್ನು ಟ್ಯಾಕ್ಸಿಯನ್ನೂ ಕೂಡಾ ಬಾಡಿಗೆಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ವಗಮೋನ್‌ಗೆ ಸಮೀಪದ ರೈಲ್ವೆ ನಿಲ್ದಾಣವು ಕುಟ್ಟಿಕನಮ್‌ ಆಗಿದ್ದು, ಇದು ಸುಮಾರು 22 ಕಿ.ಮೀ ದೂರದಲ್ಲಿದೆ. ಇತರ ಸಮೀಪದ ರೈಲ್ವೆ ಸ್ಟೇಷನ್‌ಗಳೆಂದರೆ ಪಲಯ್‌, ಇದು 33 ಕಿ.ಮೀ ದೂರದಲ್ಲಿದೆ. ಇನ್ನು ತೊಡುಪುಳವು 39 ಕಿ.ಮೀ ದೂರದಲ್ಲಿದೆ. ಕುಮಿಲಿಯು 45 ಕಿ.ಮೀ ದೂರದಲ್ಲಿದೆ ಮತ್ತು ಕೊಟ್ಟಾಯಂ 65 ಕಿ.ಮೀ ದೂರದಲ್ಲಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಾಗಮೋನ್‌ಗೆ ಸಮೀಪದ ವಿಮಾನ ನಿಲ್ದಾಣವೆಮದರೆ ಕೊಚಿನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಕೊಚ್ಚಿನ್ ಮತ್ತು ವಗಮೋನ್‌ ಮಧ್ಯೆ ಅಂತರ 107 ಕಿ.ಮೀ. ಆದರೂ ಇದು ಬಸ್‌ ಅಥವಾ ಟ್ಯಾಕ್ಸಿಯಲ್ಲಿ ಕೇವಲ 2 ಗಂಟೆಯ ದೂರ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu