Search
  • Follow NativePlanet
Share
ಮುಖಪುಟ » ಸ್ಥಳಗಳು » ವಗಮೋನ್ » ಹವಾಮಾನ

ವಗಮೋನ್ ಹವಾಮಾನ

ಇಲ್ಲಿನ ಪ್ರಶಾಂತ ವಾತಾವರಣದಿಂದ ವಾಗಮೋನ್‌ ವರ್ಷದ ಯಾವುದೇ ಸಮಯದಲ್ಲೂ ಭೇಟಿ ಮಾಡಬಹುದು. ಬೇಸಿಗೆಕಾಲವು ವಾಗಮೋನ್‌ಗೆ ಭೇಟಿ ನೀಡಲು ಸೂಕ್ತ ಕಾಲ. ಈ ಅವಧಿಯಲ್ಲಿ ವಾತಾವರಣ ಮತ್ತು ಪರಿಸರ ಎಲ್ಲವೂ ಸುಂದರವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆಕಾಲವು ವಾಗಮೋನ್‌ನಲ್ಲಿ ತುಂಬಾ ಸಣ್ಣದು. ಬರಿ ಮೂರು ತಿಂಗಳು ಮಾತ್ರ. ಮಾರ್ಚ್‌ನಿಂದ ಮೇ ವರೆಗೆ ಮಾತ್ರ ಇಲ್ಲಿ ಬೇಸಿಗೆಕಾಲವಿರುತ್ತದೆ.  ಗರಿಷ್ಟ 25 ಡಿಗ್ರಿಯ ತನಕ ಮಾತ್ರ ತಾಪಮಾನವು ಇರುತ್ತದೆ. ಇದೇವೇಳೆ ಕನಿಷ್ಟ ತಾಪಮಾನವು 10 ಡಿಗ್ರಿ ಇರುತ್ತದೆ. ಈ ಅವಧಿಯಲ್ಲಿ ವಾಗಮೋನ್‌ಗೆ ಪ್ರವಾಸಿಗರು ಭೇಟಿ ನೀಡಬಹುದು.

ಮಳೆಗಾಲ

ಜೂನ್‌ನಲ್ಲಿ ಮಳೆಗಾಲವು ಆರಂಭವಾಗಿ ಸಪ್ಟೆಂಬರಿನ ತನಕವೂ ಮುಂದುವರಿಯುತ್ತದೆ. ಮಳೆಗಾಲವು ವಾಗಮೋನ್‌ಗೆ ಭೇಟಿ ನೀಡಲು ಸೂಕ್ತ ಕಾಲವಲ್ಲ. ಯಾಕೆಂದರೆ ಇಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ವಾಗಮೋನ್‌ನ ವಾತಾವರಣವು ಅತ್ಯಂತ ಶೀತವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿನ ವಾತಾವರಣದ ತಾಪಮಾನವು 10 ಡಿಗ್ರಿಯಿಂದ 25 ಡಿಗ್ರಿಯ ತನಕ ಇರುತ್ತದೆ. ಕೇರಳದ ಇತರ ಭಾಗಗಳನ್ನು ಹೋಲಿಸಿದರೆ ಇಲ್ಲಿನ ಚಳಿಗಾಲದ ಅವಧಿ ತುಂಬಾ ಹೆಚ್ಚು. ಅಕ್ಟೋಬರಿನಲ್ಲಿ ಚಳಿಗಾಲದ ಶೀತವನ್ನು ಅನುಭವಿಸಬಹುದು. ಫೆಬ್ರುವರಿಯ ತನಕವೂ ಈ ಚಳಿ ಮುಂದುವರಿಯುತ್ತದೆ. ರಾತ್ರಿಯ ಅವಧಿಯಲ್ಲಿ 0 ಡಿಗ್ರಿಯ ತನಕವೂ ತಾಪಮಾನ ಇಳಿಯುತ್ತದೆ. ಈ ಅವಧಿಯಲ್ಲಿ ನೀವು ವಾಗಮೋನ್‌ಗೆ ಭೇಟಿ ನೀಡಲು ಇಚ್ಛಿಸಿದರೆ ಬೆಚ್ಚಗಿನ ಬಟ್ಟೆಯನ್ನು ತೆಗೆದುಕೊಂಡು ಹೋಗಿ.