Search
  • Follow NativePlanet
Share
ಮುಖಪುಟ » ಸ್ಥಳಗಳು» ಉತ್ತರ ಪ್ರದೇಶ

ಉತ್ತರ ಪ್ರದೇಶ : ಪಾವಿತ್ರ್ಯತೆ ಮತ್ತು ತೀರ್ಥಯಾತ್ರೆಯ ತೊಟ್ಟಿಲು

ಎಂದೂ ಮುಗಿಯದೇ ಇರುವ ಪ್ರವಾಸಿ ಆಕರ್ಷಣೆಗಳ ತವರೂರಾದ ಉತ್ತರ ಪ್ರದೇಶ ಪ್ರವಾಸೋದ್ಯಮ ಇಡಿ ವಿಶ್ವದ ಜನತೆಯನ್ನು ತನ್ನೆಡೆಗೆ ಆಕರ್ಷಿಸುತ್ತದೆ. ತಾಜ್ ಮಹಲ್ ನ ಭೂಮಿ, ಕಥಕ್ ಜನ್ಮತಾಳಿದ ಕರ್ಮಭೂಮಿ, ಪವಿತ್ರ ಹಿಂದೂ ಹಾಗೂ ವಾರಣಾಸಿ, ಶ್ರೀ ಕೃಷ್ಣನ ಹುಟ್ಟಿದ ಊರು, ಬುದ್ಧ ತನ್ನ ಪ್ರವಚನಗಳನ್ನು ನೀಡಿದ ಸ್ಥಳ ಈ ಎಲ್ಲವೂ ಉತ್ತರ ಪ್ರದೇಶದ ಭೂಮಿಯಲ್ಲೇ ನಡೆದ ಘಟನೆಗಳಾಗಿವೆ. ಉತ್ತರ ಪ್ರದೇಶವು ಉತ್ತರದಲ್ಲಿ ಉತ್ತರಾಂಚಲ, ಹಿಮಾಚಲ ಮತ್ತು ನೇಪಾಳದಿಂದ ದಕ್ಷಿಣದಲ್ಲಿ ಮಧ್ಯಪ್ರದೇಶ, ಪೂರ್ವದಲ್ಲಿ ಬಿಹಾರ ಮತ್ತು ಪಶ್ಚಿಮದಲ್ಲಿ ಹರ್ಯಾಣಾದಿಂದ ಸುತ್ತುವರೆದಿದೆ.

ಉತ್ತರಪ್ರದೇಶದ ಪ್ರಮುಖ ಯಾತ್ರಾ ಸ್ಥಳಗಳು

ಭಾರತದ ಧಾರ್ಮಿಕ ಪ್ರವಾಸೋದ್ಯಮದ ಮುಖ್ಯ ಅಂಗ ಉತ್ತರ ಪ್ರದೇಶ ಎಂದರೆ ತಪ್ಪಾಗಲಾರದು. ಇಲ್ಲಿರುವ ಕೆಲವು ಜಗದ್ವಿಖ್ಯಾತ ಪ್ರವಾಸಿ ತಾಣಗಳಿಂದಾಗಿ ಇದು ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದೆ. ಮುಕ್ತಿ ಸ್ಥಳ ಎಂದು ಕರೆಯಿಸಿಕೊಳ್ಳುವ ವಾರಣಾಸಿಯಿದ್ದು ಮುಕ್ತಿ ಪಡೆಯಬಯಸುವ ಹಿಂದೂ ಭಕ್ತ ಜನರಿಂದ ಎಲ್ಲಾ ಸಮಯದಲ್ಲು ಎಲ್ಲಾ ಕಡೆಗಳಿಂದಲೂ ಇದು ಆವರಿಸಿರುವ ಸ್ಥಳವಾಗಿದೆ. ಉತ್ತರ ಪ್ರದೇಶ ಒಂದು ಪವಿತ್ರ ಸ್ಥಳ ಜೊತೆಗೆ ವೈಷ್ಣವರಿಗೆ ಮಹತ್ವದ ಸ್ಥಳವೂ ಹೌದು. ಮಥುರಾ ಮತ್ತು ಅಯೋಧ್ಯಾ ಕೃಷ್ಣ ಮತ್ತು ರಾಮರ ಜನ್ಮ ಸ್ಥಳಗಳು ಎಂದು ಪರಿಗಣಿಸಲಾಗಿದ್ದು ಈ ರಾಜ್ಯದಲ್ಲೆ ನೆಲೆಸಿವೆ.

ಕೃಷ್ಣನ ಜೊತೆಗೆ ನಂಟನ್ನು ಇಟ್ಟು ಕೊಂಡಿರುವ ಇತರೆ ಸ್ಥಳಗಳಾದ ವೃಂದಾವನ ಮತ್ತು ಗೋವರ್ಧನ ವರ್ಷವಿಡಿ ಉತ್ಸವಗಳ ಕಾರಣದಿಂದಲೇ ಜನರನ್ನು ಆಕರ್ಷಿಸುವ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಕಾರಣವಾಗುವ ಸ್ಥಳಗಳಾಗಿವೆ. ಬಿಥೂರು ವಲ ಮತ್ತು ಕುಶರ ಜನ್ಮಭೂಮಿಯು ಕೂಡ ಇಲ್ಲೆ ಇವೆ. ಇವರಿಬ್ಬರು ರಾಮನ ಮಕ್ಕಳು. ಇಷ್ಟೆಲ್ಲಾ ಪುರಾಣ ಪ್ರಸಿದ್ಧ ಸ್ಥಳವಾದ ಮೇಲೆ ಇಲ್ಲಿ ಸಂತರಾದ ಕಬೀರ, ತುಲಸಿದಾಸ ಮತ್ತು ಸೂರದಾಸರು ಹಾಡಿ ಹೊಗಳಿರುವುದು ಸಹಜವೇ ಆಗಿದೆ. ಅಲಹಾಬಾದ್ ಬಹಳ ಹಳೆಯ ನಗರ ಎಂಬ ಹೆಗ್ಗಳಿಕೆ ಪಡೆದಿದೆ.

ಇದರ ಜೊತೆಗೆ ಭಾರತದ ಮೂರು ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾಗುವ ಸ್ಥಳ ಇದೇ ಆಗಿದೆ. ಇದೇ ಸ್ಥಳದಲ್ಲಿ ಜಗತ್ಪ್ರಸಿದ್ಧ ಕುಂಭಮೇಳ ನಡೆಯುತ್ತದೆ. ಇಲ್ಲಿಗೆ ದೇಶ ವಿದೇಶದ ಮೂಲೆ ಮೂಲೆಗಳಿಂದ ಜನರು ಬಂದು ಪವಿತ್ರ ಸ್ನಾನದ ಜೊತೆಗೆ ಪುಣ್ಯ ಸಂಪಾದನೆ ಮಾಡಿ ತೆರಳುತ್ತಾರೆ. ಇದು ಬೌದ್ಧ ಧರ್ಮೀಯರಿಗೂ ಬಹಳ ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಬುದ್ಧ ತನ್ನ ಮೊದಲ ಬೋಧನೆ ಮಾಡಿದ್ದಲ್ಲದೇ ಅಶೋಕ ಸ್ಥಂಭ ಸಿಕ್ಕಿದ ಕೌಶಂಬಿಯೂ ಇದೇ ಸ್ಥಳದಲ್ಲಿ ಇದೆ. ಇದೇ ಸ್ಥಳದಲ್ಲಿ ಬುದ್ಧ ಹಲವು ಧರ್ಮಬೋಧನೆಗಳನ್ನು ಮಾಡಿದ್ದನು.

ಶ್ರಾವಸ್ತಿಯಲ್ಲಿ ಬುದ್ಧ ಹಲವು ದಿನಗಳನ್ನು ಕಳೆದಿದ್ದನು ಹಾಗೂ ಕುಶಿನಗರದಲ್ಲಿ ದೇಹತ್ಯಾಗ ಮಾಡಿದ್ದನು. ಪ್ರಭಾಸಗಿರಿ ಹಿಂದೂ ಮತ್ತು ಜೈನರಿಗೆ ಸಮಾನ ಪ್ರಾಮುಖ್ಯತೆಯ ತಾಣವಾಗಿದೆ. ಉತ್ತರಪ್ರದೇಶದ ಸ್ಥಳಗಳಿಗೆ ಪುರಾಣದಲ್ಲಿ ಹಾಗೂ ಇತಿಹಾಸದಲ್ಲಿ ಬಹಳವೇ ಮಹತ್ವದ ಸ್ಥಾನವಿದೆ. ರಾಮಾಯಣ ಮತ್ತು ಮಹಾಭಾರತ ನಡೆದ ಸ್ಥಳಗಳೂ ಇಲ್ಲೇ ಇವೆ.     

ಉತ್ತರಪ್ರದೇಶದ ವನ್ಯಜೀವಿ ಮತ್ತು ವನ್ಯಜೀವನ

ರಾಯ್ ಬರೇಲಿಯ ಮಸ್ ಪುರ್ ಪಕ್ಷಿಧಾಮ, ಚಂಬಲ್ ವನ್ಯಜೀವಿ ಧಾಮ, ದುಧ್ವಾ ರಾಷ್ಟ್ರೀಯ ಉದ್ಯಾನ ಇತ್ಯಾದಿಗಳೆಲ್ಲಾ ಇಲ್ಲಿನ ಕೆಲವು ವನ್ಯಜೀವಿ ತಾಣಗಳ ಉದಾಹರಣೆಗಳು. ಇಂತಹ ಸ್ಥಳಗಳು ಉತ್ತರ ಪ್ರದೇಶವನ್ನು ಒಂದು ಸುಂದರವಾದ ರಾಜ್ಯವನ್ನಾಗಿ ಮಾಡಿವೆ.

ಶ್ರೀಮಂತ ಇತಿಹಾಸ

ಉತ್ತರ ಪ್ರದೇಶದಲ್ಲಿರುವ ಇತಿಹಾಸ ಪ್ರಸಿದ್ಧ ಸ್ಮಾರಕಗಳಿಂದಾಗಿ ಇದು ವಿಶ್ವದೆಲ್ಲೆಡೆ ಹೆಸರು ಮಾಡಿದೆ. ಜಗತ್ತಿನ ಅಧ್ಬುತಗಳಲ್ಲಿ ಒಂದಾದ ಆಗ್ರಾದ ತಾಜ್ ಮಹಲ್ ಅನ್ನು ಹೊರತು ಪಡಿಸಿ ಝಾನ್ಸಿ, ಲಖನೌ, ಮೀರತ್ ಮತ್ತು ಅಕ್ಬರ ಕಟ್ಟಿಸಿದ ಫತೇಪುರ್ ಸಿಕ್ರಿ, ಪ್ರತಾಪ್ ಗಡ್, ಬಾರಾಬಾಂಕಿ, ಜೌನಪುರ್, ಮಹೋಬಾ, ದೇವಗಡ್ ಇವು ಇಲ್ಲಿನ ಇನ್ನಿತರೆ ಸ್ಥಳಗಳಾಗಿವೆ. ಇವೆಲ್ಲವೂ ಉತ್ತರ ಪ್ರದೇಶದ ಇತಿಹಾಸದ ಬಗ್ಗೆ ಮಾತನಾಡುತ್ತವೆ ಹಾಗೂ ಇಲ್ಲಿನ ಶ್ರೀಮಂತ ಸಂಸ್ಕೃತಿಯ ಬಗ್ಗೆ ಕುರುಹುಗಳಾಗಿವೆ. ಇಲ್ಲಿನ ಆಲಿಗಡ್ ಶಿಕ್ಷಣ ಕ್ಷೇತ್ರದಲ್ಲಿ ಒಂದು ಪ್ರಸಿದ್ಧವಾದ ಹೆಸರಾಗಿದೆ. ಇದರ ಜೊತೆಗೆ ವಾರಣಾಸಿ, ಲಖನೌ, ಮೀರತ್, ಝಾನ್ಸಿ, ಗಾಝಿಯಾಬಾದ್, ಕಾನ್ಪುರ್, ಗೋರಖ್ಪುರ್, ನೋಯ್ಡಾ ಇಲ್ಲಿನ ಪ್ರಸಿದ್ಧ ನಗರಗಳಾಗಿವೆ.

ಸಂಸ್ಕೃತಿ, ಆಹಾರ ಮತ್ತು ಉತ್ತರ ಪ್ರದೇಶದ ಪಂಥ

ಭಾರತದಲ್ಲೆ ಪ್ರಖ್ಯಾತ ನೃತ್ಯ ವಿಧಾನವಾದ ಕಥಕ್ ಉತ್ತರಪ್ರದೇಶದಲ್ಲಿ ಜನ್ಮ ತಾಳಿತು. ಭಾರತದ ಇತರೆ ಭಾಗಗಳಂತೆ ಉತ್ತರ ಪ್ರದೇಶವೂ ತನ್ನದೇ ಆದ ಒಂದು ಸಂಸ್ಕೃತಿಯನ್ನು ಹೊಂದಿದೆ ಹಾಗೂ ಈ ಸಂಸ್ಕೃತಿ ಹಾಡುಗಳು ಮತ್ತು ನೃತ್ಯದ ರೂಪದಲ್ಲಿ ತನ್ನ ಅಸ್ತಿತ್ವವನ್ನು ಹೊರಹಾಕುತ್ತದೆ. ಉತ್ತರ ಪ್ರದೇಶ ಇಲ್ಲಿನ ಅತ್ಯಂತ ಸುಂದರವಾದ ಕರಕುಶಲ ವಸ್ತುಗಳಿಗೂ ಪ್ರಸಿದ್ಧವಾಗಿದೆ.

ಕೈಯಿಂದ ಮಾಡಿದ ವರ್ಣಚಿತ್ರಗಳು, ಜಮಖಾನೆಗಳು, ಬ್ರೊಕೆಡ್ ಕೆಲಸಗಳು, ತಾಮ್ರ ಮತ್ತು ಎಬೋನಿಯ ಕೆಲಸಗಳು ಇಲ್ಲಿನ ಪ್ರಸಿದ್ಧ ಕಲೆಗಳು. ಲಕ್ನೌವಿ ಚಿಕಾನ್ ಒಂದು ವಿಶಿಷ್ಟ ವಿಧಾನದ ಎಂಬ್ರಾಯ್ಡರಿ ರಚನೆ ಜಗತ್ತಿನಾದ್ಯಂತದ ಜನರನ್ನು ಆಕರ್ಷಿಸುತ್ತದೆ. ಇಲ್ಲಿನ ಸಂಸ್ಕೃತಿಯಲ್ಲಿ ಹಿಂದೂ ಮತ್ತು ಮೊಘಲ್ ಸಂಸ್ಕೃತಿಯ ಸಮ್ಮಿಶ್ರಣವನ್ನು ಕಾಣಬಹುದು ಇದೇ ಸಮನ್ವಯ ಇಲ್ಲಿನ ಸ್ಮಾರಕಗಳಲ್ಲೂ ಆಹಾರ ಪದ್ಧತಿಯಲ್ಲೂ ಕಾಣಬಹುದು.

ಅವಧಿ ಆಹಾರ ಪದ್ಧತಿ, ಕಬಾಬ್, ದಮ್ ಬಿರಿಯಾನಿ ಹಾಗೂ ಇನ್ನಿತರ ಮಾಂಸಾಹಾರಿ ಖಾದ್ಯಗಳು ನಿಮ್ಮ ಬಾಯಲ್ಲಿ ನೀರೂರಿಸುವ ಕೆಲವು ಖಾದ್ಯಗಳಾಗಿವೆ. ಜೊತೆಗೆ ರುಚಿರುಚಿಯಾದ ತಿಂಡಿಗಳು, ಚಾಟ್ ಗಳು, ಸಮೋಸಾ, ಪಕೋಡಾ ಇಲ್ಲಿನ ಪ್ರಸಿದ್ಧವಾದ ತಿನಿಸುಗಳಾಗಿವೆ. ಈ ಎಲ್ಲವೂ ಉತ್ತರ ಪ್ರದೇಶದಿಂದಲೇ ಆರಂಭವಾದ ತಿಂಡಿಗಳಾಗಿವೆ ಎಂದು ಹೇಳಲಾಗುತ್ತದೆ.ಉತ್ತರ ಪ್ರದೇಶ ಭೇಟಿಯಿಂದ ತಪ್ಪಿಸಿಕೊಳ್ಳುವ ಯಾವ ಅವಕಾಶವನ್ನೂ ಇಲ್ಲಿನ ಆಕರ್ಷಣೆಗಳು ನೀಡುವುದಿಲ್ಲ. ಇಲ್ಲಿ ಹಲವು ಬಗೆಯ ಆಕರ್ಷಣೆಗಳಿವೆ ಜೊತೆಗೆ ಹಲವು ನೆನಪುಗಳಿವೆ.

ಉತ್ತರ ಪ್ರದೇಶ ಸ್ಥಳಗಳು

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun