Search
  • Follow NativePlanet
Share

ಉನಾ: ದೇವತೆಗಳ ನಿವಾಸವೆ ಸರಿ!

17

ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣ ಉನಾ. ಸ್ವಾನ್‌ ನದಿ ತೀರದಲ್ಲಿ ನೆಲೆಗೊಂಡಿರುವ ಈ ಪ್ರದೇಶ ಹಲವಾರು ಪ್ರವಾಸಿ ವಿಶೇಷತೆಗಳನ್ನು ಮೈವೆತ್ತಿಕೊಂಡು ವರ್ಷಪೂರ್ತಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಮನಸ್ಸಿಗೆ ಮುದ ನೀಡುವ ಹಲವಾರು ತಾಣಗಳು ಉನಾ ವ್ಯಾಪ್ತಿಯಲ್ಲಿದ್ದು ನಿಮ್ಮನ್ನು ಕೈಬೀಸಿ ಕರೆಯುತ್ತವೆ. ಸ್ಥಳೀಯರು ಹೇಳುವ ಪ್ರಕಾರ, ಸಿಖ್ಖರ 15 ನೇ ಗುರು ಅರ್ಜನ್‌ದೇವ್ ಈ ಪ್ರದೇಶಕ್ಕೆ ಉನಾ ಎಂಬ ಹೆಸರನ್ನು ನೀಡಿದ. ಹಿಂದಿಯ 'ಉನ್ನತಿ' ಎಂಬ ಪದದಿಂದ ಈ ಹೆಸರು ಬಂದಿದೆ. ಉನ್ನತಿ ಅಂದರೆ ಅಭಿವೃದ್ಧಿ ಎಂದರ್ಥ. ಪಂಜಾಬ್‌ನ ಹೋಶಿಯಾರ್‌ಪುರ್‌ ಜಿಲ್ಲೆಯಲ್ಲಿದ್ದ ಉನಾವನ್ನು 1972 ರಲ್ಲಿ ಹಿಮಾಚಲ ಪ್ರದೇಶದಲ್ಲಿ ಸೇರಿಸಲಾಯಿತು.

ಉನಾ ಪಟ್ಟಣವು, ಭರ್ಬಾಗ್‌ ಸಿಂಗ್ ಗುರುದ್ವಾರ, ಬಗನಾ ಲಾಥಿಯನ್‌ ಪಿಪ್ಲು ಮತ್ತು ಚಿಂತ್‌ಪೂರ್ಣಿ ಮುಂತಾದ ಶ್ರದ್ಧಾಕೇಂದ್ರಗಳಿಂದ ಪ್ರಸಿದ್ಧವಾಗಿದೆ.

ದೇರಾ ಬಾಬಾ ಭರ್ಬಾಗ್‌ ಸಿಂಗ್‌ ಗುರುದ್ವಾರ ಸಿಖ್‌ ಸಮುದಾಯದ ಜನಪ್ರಿಯ ಶ್ರದ್ಧಾ ಭಕ್ತಿ ಕೇಂದ್ರವಾಗಿದೆ. ಉನಾ ನಗರ ಕೇಂದ್ರದಿಂದ 40 ಕಿಲೋಮೀಟರ್‌ ಅಂತರದಲ್ಲಿರುವ ಈ ಪ್ರದೇಶದ ಸುತ್ತಲೂ ನೀಲಗಿರಿ ಮರಗಳು ದಟ್ಟವಾಗಿ ಬೆಳೆದಿದ್ದು ಇದರ ಸೊಬಗನ್ನು ಹೆಚ್ಚಿಸಿವೆ. ಇಲ್ಲಿಗೆ ಬಂದ ಪ್ರವಾಸಿಗರು ಸೋಲಾಹ್‌ ಸಿಂಘಿ ದಾರ್‌ನ ಮೇಲಿರುವ ಬಗನಾ ಲಾಥಿಯಾನ್‌ ಪಿಪ್ಲುವಿಗೂ ಸಹ ಭೇಟಿ ನೀಡಬಹುದಾಗಿದೆ. ಸಮೀಪದಲ್ಲೇ ಇರುವ ಗೋವಿಂದಸಾಗರ ಸರೋವರ ಅದ್ಭುತ ನೋಟವನ್ನು ಒದಗಿಸುತ್ತದೆ.

ಹಿಂದೂ ದೇವತೆ ಚಿಂತ್‌ಪೂರ್ಣಿಗೆ ಮೀಸಲಾದ ಚಿಂತ್ಪೂರ್ಣಿ ದೇವಾಲಯ ಸಮೀಪದಲ್ಲೇ ಇರುವ ಮತ್ತೊಂದು ಆಕರ್ಷಣೆ. ಸೋಲಾಹ್‌ ಸಿಂಘಿ ಧಾರ್, ಭರ್ವೈನ್, ಕುಟ್ಲೆಹಾರ್‌ ಕೋಟೆಗಳು, ಶೇತ್ಲಾ ದೇವಿ ದೇವಸ್ಥಾನ, ಬಾಬಾ ರುದ್ರಾನಂದ ಆಶ್ರಮ ಮತ್ತು ಆಂಬ್‌ ಪ್ರದೇಶಗಳು ಇಲ್ಲಿನ ಹೆಸರಾಂತ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾಗಿವೆ.

ಉನಾಗೆ ಬರಲಿಚ್ಚಿಸುವವರು ಬಸ್ಸು, ರೈಲು ಮತ್ತು ವಿಮಾನಗಳ ಮೂಲಕ ಬರಬಹುದಾಗಿದೆ. ದೇಶದ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುವ ಈ ಸಾರಿಗೆ ಸೌಲಭ್ಯ ಪ್ರವಾಸಿಗರಿಗೆ ಅನುಕೂಲಕರವಾಗಿದೆ. ಮಾರ್ಚ್‌ನಿಂದ ಮೇ ತಿಂಗಳವರೆಗೆ ಈ ಪ್ರದೇಶಕ್ಕೆ ಬರಲು ಸೂಕ್ತವಾದ ಕಾಲ. ಬೇಸಿಗೆಯಲ್ಲಿ ಇಲ್ಲಿಯ ವಾತಾವರಣ ಪ್ರವಾಸಯೋಗ್ಯವಾಗಿರುತ್ತದೆ.

ಉನಾ ಪ್ರಸಿದ್ಧವಾಗಿದೆ

ಉನಾ ಹವಾಮಾನ

ಉತ್ತಮ ಸಮಯ ಉನಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಉನಾ

  • ರಸ್ತೆಯ ಮೂಲಕ
    ರಸ್ತೆ ಮಾರ್ಗದಲ್ಲಿ ಉನಾಗೆ ತಲುಪಲು ಬಸ್‌ ಉತ್ತಮ ಸಂಪರ್ಕ ಸಾಧನ. ಲಗ್ಜುರಿ ಹಾಗೂ ಆರಾಮದಾಯಕ ಬಸ್‌ಗಳು ದೆಹಲಿ, ಪಾಣಿಪತ್‌, ಅಂಬಾಲಾ, ಚಂಡಿಗಡ ಹಾಗೂ ರೋಪರದಿಂದ ಉನಾಗೆ ತಲುಪಲು ಲಭ್ಯವಿದೆ. ಇದಲ್ಲದೆ ಉನಾದಿಂದ ಪ್ರವಾಸಿಗರು ಸಮೀಪದ ತಾಣಗಳಿಗೆ ಬಸ್‌ ಪಡೆದು ತೆರಳಬಹುದು. ಉದಾಹರಣೆಗೆ ಹೋಶಿಯಾರಪುರ, ಜಲಂಧರ್‌ ಹಾಗೂ ಅಮೃತ್‌ಸರ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಉನಾದಲ್ಲಿಯೇ ಒಂದು ಚಿಕ್ಕ ರೈಲು ನಿಲ್ದಾಣವಿದೆ. ಇದು ದೇಶದ ಪ್ರಮುಖ ನಗರಗಳನ್ನು ಅಂದರೆ ದೆಹಲಿ, ಚಂಡಿಗಡ ಹಾಗೂ ಹೋಶಿಯಾರ್‌ಪುರ ಸೇರಿದಂತೆ ಹಲವು ತಾಣವನ್ನು ಸಂಪರ್ಕಿಸುತ್ತದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಉನಾಗೆ ಹತ್ತಿರದ ವಿಮಾನ ನಿಲ್ದಾಣ ಜಲಂಧರ್‌. ಇದು 78 ಕಿ.ಮೀ. ದೂರದಲ್ಲಿದೆ. ಇದಲ್ಲದೇ ಅಮೃತಸರದ ಶ್ರೀ ಗುರು ರಾಮದಾಸ ಜೀ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್ ಉನಾಗೆ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಈ ನಿಲ್ದಾಣವು ಮಸ್ಕತ್‌, ಲಂಡನ್‌, ತಾಶ್ಕೆಂಟ್‌, ಶಾರ್ಜಾ ಗಳಿಗೆ ಸಂಪರ್ಕ ಹೊಂದಿದ್ದು, ಈ ನಿಲ್ದಾಣದಿಂದ ಉನಾಗೆ ತಲುಪಲು ಬಾಡಿಗೆ ಟ್ಯಾಕ್ಸಿಗಳು ಸಿಗುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun