Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಗಿರಿ » ಹವಾಮಾನ

ಉದಯಗಿರಿ ಹವಾಮಾನ

ಅಕ್ಟೋಬರ್ನಲ್ಲಿ ಚಳಿಗಾಲದೊಂದಿಗೆ ಉದಯಗಿರಿಗೆ ಪ್ರವಾಸಿಗರ ಭೇಟಿ ಕೂಡ ಹೆಚ್ಚಾಗುತ್ತದೆ. ಹಲವು ಹಿಂದೂ ಹಬ್ಬಗಳೂ ಇದೇ ತಿಂಗಳಲ್ಲಿ ಬರುವುದರಿಂದ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಹವಾಮಾನವು ಪ್ರವಾಸಿ ಚಟುವಟಿಕೆಗಳಿಗೆ ಅನುಕೂಲಕರವಾಗಿರುತ್ತದೆ. ಹಾಗಾಗಿ ಚಳಿಗಾಲ ಉದಯಗಿರಿ ಪ್ರವಾಸಕ್ಕೆ ಸೂಕ್ತ ಸಮಯ.

ಬೇಸಿಗೆಗಾಲ

ಏಪ್ರಿಲ್-ಜೂನ್ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣಾಂಶವು 22 ಡಿಗ್ರಿಗಳಿಂದ 42 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ. ಈ ಸಮಯದಲ್ಲಿ ಬಿಸಿಗಾಳಿ ಬೀಸುವುದರಿಂದ ಪ್ರಯಾಣ ತ್ರಾಸದಾಯಕವಾಗಿರುತ್ತದೆ. ಹಾಗಾಗಿ ಪ್ರವಾಸಿಗರು ಕೊಡೆ ಮತ್ತು ಸನ್ಸ್ಕ್ರೀನ್ ಲೋಶನ್ಗಳನ್ನು ಕೊಂಡೊಯ್ಯುವುದು ಉತ್ತಮ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಹೆಚ್ಚು ಮಳೆಯಾಗದಿದ್ದರೂ ಹವಾಮಾನವು ಆಹ್ಲಾದಕರವಾಗಿರುತ್ತದೆ. ಆದರೂ ಈ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ. ಏಕೆಂದರೆ ಇಲ್ಲಿಗೆ ಸಮೀಪದ ಕೆಲಸ್ಥಳಗಳಲ್ಲಿ ಪ್ರವಾಹದ ಭೀತಿಯಿದ್ದು ಸಂಪರ್ಕ ಕಡಿದು ಹೋಗುವ ಸಾಧ್ಯತೆಯಿರುತ್ತದೆ.

ಚಳಿಗಾಲ

ಒಡಿಶಾದಲ್ಲಿ ಹೆಚ್ಚು ಕಾತರದಿಂದ ಕಾಯುವ ಕಾಲ ಚಳಿಗಾಲ. ಅಕ್ಟೋಬರ್-ಮಾರ್ಚ್ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 7 ಡಿಗ್ರಿ ಸೆಲ್ಸಿಯಸ್ಗಳಿಗೆ ಕುಸಿಯಬಹುದು. ಮೂಳೆಗಳು ಚುರುಗಟ್ಟುವಷ್ಟು ಶೀತಗಾಳಿಯು ಈ ಸಮಯದಲ್ಲಿ ಬೀಸುತ್ತದೆ. ಈ ಸಮಯದಲ್ಲಿ ಉದಯಗಿರಿಗೆ ಪ್ರವಾಸಕ್ಕೆ ಹೋಗುವುದು ನಿಜಕ್ಕೂ ಅದ್ಭುತ ಅನುಭವ. ಉಣ್ಣೆಯ ಉಡುಪುಗಳನ್ನು ಕೊಂಡೊಯ್ಯುವುದು ಅತ್ಯಗತ್ಯ.