Search
  • Follow NativePlanet
Share
ಮುಖಪುಟ » ಸ್ಥಳಗಳು» ಉದಯಗಿರಿ

ಉದಯಗಿರಿ : ಬೌದ್ಧ ಯಾತ್ರಾಸ್ಥಳಗಳ ತವರುಭೂಮಿ

20

ಉದಯಗಿರಿಯು ಭಾರತದಲ್ಲಿನ ಅದ್ಭುತ ವಾಸ್ತುಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆ. ಈ ಊರನ್ನು ‘ಪ್ರಾಕೃತಿಕ ಸೌಂದರ್ಯ ಮತ್ತು ಮನುಷ್ಯ ಕಲೆಯ ಅಪರೂಪದ ಸಮ್ಮಿಲನ’ ಎಂದೇ ಕರೆಯಬಹುದು. ಈ ಸ್ಥಳವು ವಾಸ್ತುಶಿಲ್ಪ ಮತ್ತು ಐತಿಹಾಸಿಕ ದೃಷ್ಟಿಯಿಂದ ಮಹತ್ವದ್ದು. ಇಲ್ಲಿ ಬೌದ್ಧ ಮಠಗಳೂ, ಸ್ತೂಪಗಳು ಮತ್ತು ಜೈನ ವಾಸ್ತುಶಿಲ್ಪದ ಅವಶೇಷಗಳನ್ನು ಇಲ್ಲಿ ಅಗೆದು ಸಂಗ್ರಹಿಸಲಾಗಿದೆ. ಉದಯಗಿರಿಯು ‘ಸೂರ್ಯೋದಯದ ಬೆಟ್ಟಗಳಿಗೆ’ ಹೆಸರುವಾಸಿಯಾಗಿದೆ. ಇದು ಭುವನೇಶ್ವರದಿಂದ 85 ಕಿಮೀ ದೂರದಲ್ಲಿದೆ.ಇಲ್ಲಿ 18 ಗುಹೆಗಳಲ್ಲಿ ಕೆತ್ತಲಾಗಿರುವ ಶಿಲ್ಪಗಳು ಮತ್ತು ಶಾಸನಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಇಲ್ಲಿನ ಶಾಸನಗಳು ತಿಳಿಸುವಂತೆ ಈ ಗುಹೆಗಳನ್ನು ಕಲ್ಲುಗಳನ್ನು ಕೊರೆಯುವ ಮೂಲಕ ನಿರ್ಮಿಸಲಾಗಿದೆ. ಖರವೇಲರ ಕಾಲದಲ್ಲಿ ಜೈನ ಸಂನ್ಯಾಸಿಗಳ ವಸತಿಗಾಗಿ ಈ ಗುಹೆಗಳು ನಿರ್ಮಾಣವಾದವು.

ಸುತ್ತಮುತ್ತಲ ಪ್ರವಾಸಿ ಆಕರ್ಷಣೆಗಳು

ಉದಯಗಿರಿಯಲ್ಲಿ 18 ಗುಹೆಗಳಿದ್ದು ಇವು ಉದಯಗಿರಿ ಗುಹೆಗಳು ಎಂದೇ ಹೆಸರುವಾಸಿಯಾಗಿದೆ. ಉದಯಗಿರಿಯ ಸಮೀಪದಲ್ಲೇ ಇರುವ ಖಂದಗಿರಿಯಲ್ಲಿ 15 ಗುಹೆಗಳಿವೆ. ಇವೆರಡೂ ಸ್ಥಳಗಳು ಉದಯಗಿರಿ ಪ್ರವಾಸೋದ್ಯಮದ ಪ್ರಮುಖ ಸ್ಥಳಗಳು. ಈ ಬೆಟ್ಟಗಳಲ್ಲದೆ, ಲಂಗುಡಿ ಬೆಟ್ಟ, ಲಲಿತಗಿರಿ ಮತ್ತು ರತ್ನಗಿರಿ ಬೆಟ್ಟಗಳು ಬೌದ್ಧ ಪ್ರದೇಶಗಳಾಗಿ ಗುರುತಿಸಲ್ಪಟ್ಟಿವೆ. ಇವುಗಳಲ್ಲಿ ಲಲಿತಗಿರಿಯಲ್ಲಿ ಗೌತಮ ಬುದ್ಧನಿಗೆ ಸಂಬಂಧಿಸಿದ ಸ್ಮಾರಕಗಳಿವೆ. ಈ ಸ್ಥಳಗಳ ಆಕರ್ಷಣೆಯು ಉದಯಗಿರಿ ಪ್ರವಾಸೋದ್ಯಮಕ್ಕೆ ಲಾಭದಾಯಕವಾಗಿದೆ.

ಹವಾಮಾನ

ಉದಯಗಿರಿಯಲ್ಲಿ ಬೇಸಿಗೆ, ಮಳೆಗಾಲ ಮತ್ತು ಚಳಿಗಾಲಗಳನ್ನು ಕಾಣಬಹುದು. ಬೇಸಿಗೆ ಧಗೆ ಮತ್ತು ಉಷ್ಣಾಂಶ ಹೆಚ್ಚಿರುತ್ತದೆ. ಚಳಿಗಾಲಗಳು ಹೆಚ್ಚು ತಣ್ಣಗಿರುತ್ತವೆ.

ತಲುಪುವುದು ಹೇಗೆ?

ಉದಯಗಿರಿಯು ಒಡಿಸ್ಸಾಗೆ ಮಾತ್ರವಲ್ಲ ದೇಶಕ್ಕೆ ಕೂಡ ಬಹಳ ಮುಖ್ಯವಾದ ಸಾಂಸ್ಕೃತಿಕ ಪ್ರದೇಶ. ಹಾಗಾಗಿ ಇಲ್ಲಿಗೆ ತಲುಪುವುದು ತ್ರಾಸದಾಯಕವಲ್ಲ. ಇದು ಭುವನೇಶ್ವರಕ್ಕೆ ಸಮೀಪದಲ್ಲಿರುವುದರಿಂದ ಪ್ರವಾಸಿಗರು ವಿಮಾನ, ರೈಲು  ಅಥವ ರಸ್ತೆ ಮೂಲಕ ಇಲ್ಲಿಗೆ ತಲುಪಬಹುದು. ಕಟಕ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣ. ಅಕ್ಟೋಬರ್ – ಮಾರ್ಚ್ ಅವಧಿಯಲ್ಲಿ ಹವಾಮಾನವು ತಂಪಾಗಿ ಆಹ್ಲಾದಕರವಾಗಿರುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ.

ಉದಯಗಿರಿ ಪ್ರಸಿದ್ಧವಾಗಿದೆ

ಉದಯಗಿರಿ ಹವಾಮಾನ

ಉತ್ತಮ ಸಮಯ ಉದಯಗಿರಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಉದಯಗಿರಿ

  • ರಸ್ತೆಯ ಮೂಲಕ
    ಪ್ರವಾಸಿಗರು ಒಡಿಸ್ಸಾದ ಯಾವುದೇ ಭಾಗದಿಂದ ಬೇಕಾದರೂ ಬಸ್ ಹತ್ತಿ ಕೃಷ್ಣದಾಸ್ಪುರದಲ್ಲಿ ಇಳಿಯಬಹುದು. ಇದು ಉದಯಗಿರಿ ಮತ್ತು ರತ್ನಗಿರಿಗಳಿಗೆ ಹೋಗುವವರು ಇಳಿಯಬೇಕಾದ ಸ್ಥಳ(ಬಸ್ ಸ್ಟಾಪ್). ಇಲ್ಲಿಗೆ ಡೀಲಕ್ಸ್ ಮತ್ತು ಸೆಮಿ ಡೀಲಕ್ಸ್ ಬಸ್ಗಳು ಲಭ್ಯವಿವೆ. ಪ್ರವಾಸಿಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ ಹತ್ತಿ ಇಲ್ಲಿ ಇಳಿದು ಇಲ್ಲಿಂದ ಟ್ಯಾಕ್ಸಿ, ಆಟೋರಿಕ್ಷಾ ಅಥವ ಸೈಕಲ್ ರಿಕ್ಷಾ ಹತ್ತಿ ತಾವು ನೋಡಬೇಕಾದ ಸ್ಥಳ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಉದಯಗಿರಿಗೆ ಸಮೀಪದ ರೈಲು ನಿಲ್ದಾಣವೆಂದರೆ 258 ಕಿಮೀ ದೂರದಲ್ಲಿರುವ ಕಟಕ್ ರೈಲು ನಿಲ್ದಾಣ. ಇದು ಒಂದು ಪ್ರಮುಖ ರೈಲ್ವೇ ಜಂಕ್ಷನ್ ಆಗಿದ್ದು ಒಡಿಸ್ಸಾದ ಎಲ್ಲ ಮುಖ್ಯ ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಉದಯಗಿರಿಯ ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿಂದ ಉತ್ತಮ ಬಸ್ ಮತ್ತು ಟ್ಯಾಕ್ಸಿ ಸೌಲಭ್ಯಗಳನ್ನು ಒದಗಿಸಲಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಬಿಜು ಪಟ್ನಾಯಕ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಭುವನೇಶ್ವರದಲ್ಲಿದ್ದು ಇಲ್ಲಿಂದ ಸುಮಾರು 100 ಕಿಮೀ ದೂರದಲ್ಲಿದೆ. ದೇಶದ ಎಲ್ಲ ಭಾಗಗಳಿಂದ ಇಲ್ಲಿಗೆ ವಿಮಾನ ಸೌಲಭ್ಯವಿದೆ. ಅಂತರ-ರಾಷ್ಟ್ರೀಯ ವಿಮಾನ ಸೌಲಭ್ಯ ಕೂಡ ಲಭ್ಯವಿದೆ. ಭುವನೇಶ್ವರದಿಂದ ಉದಯಗಿರಿಗೆ ಬಸ್ ಮತ್ತು ಟ್ಯಾಕ್ಸಿ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat