Search
  • Follow NativePlanet
Share
» »ಜುಲುಕ್‌ನ ಒಂದು ಜಲಕ್ ನೋಡಿದ್ರೆ ಮೈ ಮರೆತು ಬಿಡ್ತೀರಾ...

ಜುಲುಕ್‌ನ ಒಂದು ಜಲಕ್ ನೋಡಿದ್ರೆ ಮೈ ಮರೆತು ಬಿಡ್ತೀರಾ...

ಸಿಕ್ಕಿಂ ಒಂದು ಪರಿಪೂರ್ಣವಾದ ಸ್ವರ್ಗವಾಗಿದೆ, ವಿಶೇಷವಾಗಿ ಪರ್ವತಗಳ ರಮಣೀಯ ಸೌಂದರ್ಯವನ್ನು ಪ್ರೀತಿಸುವ ಜನರಿಗೆ ಇದೊಂದು ಸ್ವರ್ಗವೇ ಆಗಿದೆ. ಗ್ಯಾಂಗ್ಟಾಕ್, ಗುರುಡೊಂಗ್ಮಾರ್ ಲೇಕ್, ಟ್ಸೋಮೊ ಲೇಕ್ ಮುಂತಾದ ಸ್ಥಳಗಳು ಪ್ರಮುಖ ಪ್ರವಾಸಿ ಕೇಂದ್ರಗಳಾಗಿವೆ. . ನೀವು ಶಾಂತಿಯುತವಾಗಿ ಆನಂದಿಸಬಹುದಾದ ಸಿಕ್ಕಿಂನಲ್ಲಿ ಕೆಲವು ವಿಲಕ್ಷಣ ಸ್ಥಳವನ್ನು ಅನ್ವೇಷಿಸಲು ನೀವು ಬಯಸುತ್ತಿದ್ದರೆ ಜುಲುಕ್ ಅಥವಾ ಡಿಜುಲಕ್ ಒಂದು ಪರಿಪೂರ್ಣ ಸ್ಥಳವಾಗಿದೆ.

ಜುಲುಕ್‌ ಬೆಟ್ಟ

ಜುಲುಕ್‌ ಬೆಟ್ಟ

Madhumita Das

ಓಲ್ಡ್ ಸಿಲ್ಕ್ ರೂಟ್ ಮತ್ತು ಕಾಂಚನಜುಂಗಾ ಶ್ರೇಣಿಯ ಅದ್ಭುತ ನೋಟವನ್ನು ವೀಕ್ಷಿಸಲು ನೀವು ಬಯಸಿದರೆ ಜುಲುಕ್‌ ಉತ್ತಮ ಸ್ಥಳವಾಗಿದೆ. ನೀವು ಜುಲುಕ್‌ ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ನೀವು ಹಲವಾರು ಅಂಚುಗಳನ್ನು ಮತ್ತು ತಿರುವುಗಳನ್ನು ಹೊಂದಿರುವ ಒಂದು ಅಂತ್ಯವಿಲ್ಲದ ರಸ್ತೆಯನ್ನು ಕಾಣಬಹುದು.

ಸರಕು ಮಾರ್ಗ

ಸರಕು ಮಾರ್ಗ

Jakub Michankow

ಹಿಂದೆ ಜುಲುಕ್‌ ಟಿಬೆಟ್ ಮತ್ತು ಭಾರತದ ನಡುವಿನ ವ್ಯಾಪಾರದ ಕೇಂದ್ರಬಿಂದುವಾಗಿತ್ತು. ಸರಕು ಮಾರ್ಗವನ್ನು ಸಾಗಣೆಗಾಗಿ ವ್ಯಾಪಕವಾಗಿ ಬಳಸಲಾಗುತ್ತಿತ್ತು..

ಪರವಾನಿಗೆ ಅಗತ್ಯ

ಪರವಾನಿಗೆ ಅಗತ್ಯ

Surajit Roy

ಈ ಸ್ಥಳದ ಬಗ್ಗೆ ನೆನಪಿಟ್ಟುಕೊಳ್ಳ ಬೇಕಾದ ಒಂದು ವಿಷಯವೆಂದರೆ ಅದು ಚೀನಾಕ್ಕೆ ಬಹಳ ಹತ್ತಿರದಲ್ಲಿದೆ . ಹಾಗಾಗಿ ಕೆಲವು ಸ್ಥಳಗಳಿ ನಿರ್ಬಂಧಿತವಾಗಿದೆ ಮತ್ತು ಅನೇಕ ಭಾಗಗಳಿಗೆ ಹೋಗಲು ಪರವಾನಿಗೆ ಅಗತ್ಯವಿರುತ್ತದೆ. ಅಲ್ಲದೆ,

ಇತರ ಸ್ಥಳಗಳು

ಇತರ ಸ್ಥಳಗಳು

10,100 ಅಡಿ ಎತ್ತರದಲ್ಲಿರುವ ಜುಲುಕ್‌ ಈಸ್ಟ್ ಸಿಕ್ಕಿಂನಲ್ಲಿ ಕಡಿಮೆ ಪರಿಚಿತವಾದ ಹಳ್ಳಿಯಾಗಿದೆ. ಇಲ್ಲಿಂದ, ನಥುಲಾ ಪಾಸ್, ಟ್ಸೋಮೊಗೊ ಸರೋವರ, ಬಾಬಾ ಮಂದಿರ ಮುಂತಾದ ಹೆಚ್ಚಿನ ಸ್ಥಳಗಳಿಗೆ ಹೋಗಬಹುದು.. ಜುಲುಕ್‌ ಗ್ಯಾಂಗ್ಟಾಕ್‌ನಿಂದ 90 ಕಿಲೋಮೀಟರ್ ದೂರದಲ್ಲಿದೆ ಮತ್ತು ಈ ಗ್ರಾಮವನ್ನು ತಲುಪಲು ರಸ್ತೆಯು ಕಠಿಣಕರವಾಗಿದೆ.

ಜಲಪಾತಗಳಿವೆ

ಜಲಪಾತಗಳಿವೆ

ಗ್ಯಾಂಗ್ಟಾಕ್‌ನಿಂದ ಜುಲುಕ್‌ಗೆ ಪ್ರಯಾಣಿಸುವಾಗ ದಾರಿ ಮಧ್ಯೆ ನೀವು ಹಲವಾರು ಜಲಪಾತಗಳನ್ನು ಕಾಣುತ್ತೀರಿ. ನೀವು ನಿಜವಾಗಿಯೂ ಇಲ್ಲಿ ನಿಮ್ಮನ್ನು ಆನಂದಿಸಲು ಬಯಸಿದರೆ ಮಾನ್ಸೂನ್ ಈ ಜಲಪಾತಗಳನ್ನು ಭೇಟಿ ಮಾಡಲು ಉತ್ತಮ ಸಮಯವಾಗಿದೆ.

ಐಡಿ ಕಾರ್ಡ್ ಬೇಕು

ಐಡಿ ಕಾರ್ಡ್ ಬೇಕು

ಜುಲುಕ್ ಇದು ಪೂರ್ವದ ಹಿಮಾಲಯ ಪರ್ವತ ಶ್ರೇಣಿಗಳ ನೋಟವನ್ನು ಒದಗಿಸುತ್ತದೆ ಮತ್ತು ಇದು ಚೀನಾ ಗಡಿಯ ಸಮೀಪದಲ್ಲಿದೆ. ಅದಕ್ಕಾಗಿಯೇ ಇಲ್ಲಿಗೆ ತಲುಪಲು ಒಂದು ಪರವಾನಗಿಯನ್ನು ತೆಗೆದುಕೊಳ್ಳಬೇಕಾಗಿದೆ. ಗ್ಯಾಂಗ್ಟಾಕ್‌ನಲ್ಲಿ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗಿದೆ, ಇದಕ್ಕಾಗಿ ನಿಮ್ಮ ಗುರುತು ಪುರಾವೆಯ ಪೋಟೋಕಾಪಿಯನ್ನು ನೀವು ನೀಡಬೇಕಾಗುತ್ತದೆ..

ಏಜೆನ್ಸಿಗಳಿಂದ ಪರವಾನಿಗೆ

ಏಜೆನ್ಸಿಗಳಿಂದ ಪರವಾನಿಗೆ

ಗ್ಯಾಂಗ್ಟಾಕ್ನ ಮಾಲ್ ರೋಡ್ನಲ್ಲಿ ಕಂಡುಬರುವ ಪ್ರವಾಸೋದ್ಯಮ ಏಜೆನ್ಸಿಗಳಿಗೆ ಹೋಗಿ ಪರವಾನಿಗೆ ಪಡೆಯುವುದು ಉತ್ತಮ ಮಾರ್ಗವಾಗಿದೆ. ಪರವಾನಿಗೆ ಪಡೆಯಲು ಪ್ರಯಾಣದ ದಿನಾಂಕದಂದು ಬೆಳಿಗ್ಗೆ ಸಮಯದಲ್ಲಿ ಹೋದರೆ ಸಾಕು ಇದು ನಿಮ್ಮ ಸಮಯವನ್ನು ಉಳಿತಾಯ ಮಾಡುತ್ತದೆ. .

ಭಾರತೀಯರಿಗೆ ಎಲ್ಲಿಗೆಲ್ಲ ಪರವಾನಿಗೆ ಅಗತ್ಯ

ಭಾರತೀಯರಿಗೆ ಎಲ್ಲಿಗೆಲ್ಲ ಪರವಾನಿಗೆ ಅಗತ್ಯ

ಸಿಕ್ಕಿಂಗೆ ಪ್ರವೇಶಿಸಲು ಭಾರತೀಯರಿಗೆ ವಿಶೇಷ ಪರವಾನಗಿಯ ಅಗತ್ಯವಿಲ್ಲ . ಆದರೆ ಸೋಮೋಗೊ ಸರೋವರ, ಬಾಬಾ ಮಂದಿರ, ನಥುಲಾ ಪಾಸ್ ಮತ್ತು ಜುಲುಕ್ ತಲುಪಲು ಭಾರತೀಯರಿಗೆ ಅನುಮತಿ ಬೇಕು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

ಈ ಸ್ಥಳವು ಸಾಮಾನ್ಯವಾಗಿ ಚಳಿಗಾಲದಲ್ಲಿ ಮುಚ್ಚಲ್ಪಡುತ್ತದೆ ಏಕೆಂದರೆ ಚಳಿಗಾಲದಲ್ಲಿ ಇಲ್ಲಿನ ರಸ್ತೆಗಳು ಹಿಮದಿಂದ ಆವೃತವಾಗಿರುತ್ತದೆ. ನೀವು ನಿಜವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಲು ಬಯಸಿದರೆ, ನವೆಂಬರ್‌ನಲ್ಲಿ ಇಲ್ಲಿಗೆ ಭೇಟಿ ನೀಡಲು ಉತ್ತಮವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X