Search
  • Follow NativePlanet
Share
» »ಜರ್ವಾನಿ ಜಲಪಾತಕ್ಕೊಮ್ಮೆ ಭೇಟಿ ನೀಡಿ

ಜರ್ವಾನಿ ಜಲಪಾತಕ್ಕೊಮ್ಮೆ ಭೇಟಿ ನೀಡಿ

ದಟ್ಟವಾದ ಇಳಿಜಾರು ಕಾಡುಗಳಲ್ಲಿನ ಮೋಜಿನ ಸಾಹಸಕ್ಕಾಗಿ, ಪ್ರಕೃತಿಯ ಮಡಿಲಿನಲ್ಲಿ ಒಂದು ದಿನದ ಪಿಕ್ನಿಕ್ ನ ಅನುಭವವನ್ನು ಪಡೆಯಲು ಜರ್ವಾನಿ ಜಲಪಾತವು ನಿಮಗೆ ಪರಿಪೂರ್ಣ ತಾಣವಾಗಿದೆ.

ಗುಜರಾತಿನ ವರೋಡಾದಿಂದ ಸುಮಾರು 90 ಕಿ.ಮೀ ದೂರದಲ್ಲಿ ಜರ್ವಾನಿ ಜಲಪಾತವು ಭಾರತದ ನೈಸರ್ಗಿಕ ತಾಣಗಳಲ್ಲಿ ಒಂದಾಗಿದೆ. ನರ್ಮದಾ ಜಿಲ್ಲೆಯ ಸಮೀಪವಿರುವ ವನ್ಯಜೀವಿ ಅಭಯಾರಣ್ಯ, ದೀರ್ಘಕಾಲಿಕ ಮತ್ತು ಸೌಂದರ್ಯವಾದ ಜರ್ವಾನಿ ಜಲಪಾತಗಳು ಟ್ರೆಕಿಂಗ್‌ ಮಾಡಲು , ಪಿಕ್ನಿಕ್‌ಗೆ ಮತ್ತು ವನ್ಯಜೀವಿಗಳ ಛಾಯಾಗ್ರಹಣಕ್ಕೆ ಸೂಕ್ತವಾದ ತಾಣವಾಗಿದೆ.

 ಪ್ರಕೃತಿಯ ಮಡಿಲಲ್ಲಿ ಪಿಕ್ನಿಕ್ ಅನುಭವ

ಪ್ರಕೃತಿಯ ಮಡಿಲಲ್ಲಿ ಪಿಕ್ನಿಕ್ ಅನುಭವ

ದಟ್ಟವಾದ ಇಳಿಜಾರು ಕಾಡುಗಳಲ್ಲಿನ ಮೋಜಿನ ಸಾಹಸಕ್ಕಾಗಿ, ಪ್ರಕೃತಿಯ ಮಡಿಲಿನಲ್ಲಿ ಒಂದು ದಿನದ ಪಿಕ್ನಿಕ್ ನ ಅನುಭವವನ್ನು ಪಡೆಯಲು ಜರ್ವಾನಿ ಜಲಪಾತವು ನಿಮಗೆ ಪರಿಪೂರ್ಣ ತಾಣವಾಗಿದೆ. ನೀವು ಜರ್ವಾನಿ ಜಲಪಾತದ ಸಮೀಪದಲ್ಲಿದ್ದರೆ ನೀವು ಮಾಡಬಹುದಾದ ಸಾಕಷ್ಟು ಚಟುವಟಿಕೆಗಳಿವೆ. ಈ ಪ್ರಶಾಂತ ತಾಣವು ನಿಮಗೆ ವಿಶ್ರಾಂತಿ ನೀಡುವುದರ ಜೊತೆಗೆ ನೀವು ಹತ್ತಿರದ ಅರಣ್ಯಗಳನ್ನು ಕೂಡಾ ಅನ್ವೇಸಬಹುದು.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ


ಜರ್ವಾನಿ ಜಲಪಾತವನ್ನು ಭೇಟಿ ಮಾಡಲು ಸೂಕ್ತ ಸಮಯವೆಂದರೆ ನವೆಂಬರ್ ನಿಂದ ಫೆಬ್ರವರಿ ತಿಂಗಳಿನಲ್ಲಿ. ಈ ತಿಂಗಳ ತಾಪಮಾನವು ಮಧ್ಯಮ 20 ರಿಂದ 30 ಡಿಗ್ರಿಗಳಷ್ಟು ವ್ಯಾಪ್ತಿಯಲ್ಲಿದೆ. ಈ ಜಲಪಾತವನ್ನು ಬೇಸಿಗೆಯಲ್ಲಿ ಭೇಟಿ ಮಾಡುವುದರಿಂದ ಉಷ್ಣ ಮತ್ತು ತೇವಾಂಶವು ಕಾಡಿನಲ್ಲಿ ಟ್ರೆಕ್ ಮಾಡಲು ಮತ್ತು ಪಿಕ್ನಿಕ್‌ಗೆ ಅಹಿತಕರವಾಗುವುದರಿಂದ ಬೇಸಿಗೆಯಲ್ಲಿ ಭೇಟಿ ನೀಡುವುದು ಸೂಕ್ತವಲ್ಲ.

ತಲುಪುವುದು ಹೇಗೆ?

ತಲುಪುವುದು ಹೇಗೆ?


ವಿಮಾನದ ಮೂಲಕ: ಜರ್ವಾನಿ ಜಲಪಾತಕ್ಕೆ ಸಮೀಪದ ವಿಮಾನ ನಿಲ್ದಾಣವು ಬರೋಡಾ (ವಡೋದರಾ) ವಿಮಾನ ನಿಲ್ದಾಣವಾಗಿದೆ, ಇದು 97 ಕಿ.ಮೀ ದೂರದಲ್ಲಿದೆ,ವಿಮಾನ ನಿಲ್ದಾಣದಿಂದ ಸುಮಾರು ಎರಡು ಗಂಟೆ ಪ್ರಯಾಣ ಮಾಡಬೇಕು.
ರೈಲು ಮೂಲಕ: ನೀವು ವಡೋದರಾ ರೈಲು ನಿಲ್ದಾಣದಲ್ಲಿದ್ದರೆ ಜರ್ವಾನಿ ಜಲಪಾತವನ್ನು ತಲುಪಲು ಸುಮಾರು 2 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳಬೇಕು. ನೀವು ದೆಹಲಿ ಪ್ರದೇಶದಿಂದ ಪ್ರಯಾಣಿಸುತ್ತಿದ್ದರೆ, ರತ್ಲಂ ಮತ್ತು ಮಥುರಾಗಳಂತಹ ದೂರದ ಪ್ರದೇಶಗಳಿಗೆ ನಿಲ್ದಾಣವನ್ನು ಸಂಪರ್ಕಿಸಬೇಕು. ರೈಲು ಪ್ರಯಾಣಗಳು ನಿಮಗೆ ಗಮ್ಯಸ್ಥಾನ ಮತ್ತು ಅದರ ಸುತ್ತಲಿನ ಪ್ರದೇಶಗಳ ಹತ್ತಿರದ ನೋಟವನ್ನು ನೀಡುತ್ತದೆ.

ಜಲಪಾತಕ್ಕೆ ಹೋಗುವಾಗ ಇದನ್ನು ಗಮನದಲ್ಲಿಡಿ

ಜಲಪಾತಕ್ಕೆ ಹೋಗುವಾಗ ಇದನ್ನು ಗಮನದಲ್ಲಿಡಿ

ಜಲಪಾತದಲ್ಲಿ ಜಾರುವ ಬಂಡೆಗಳಿಗೆ ನಡೆಯುವಾಗ ಜಾಗರೂಕರವಾಗಿರಬೇಕು. ಜಲಪಾತ ಮತ್ತು ಅರಣ್ಯ ಪ್ರದೇಶದ ಭೇಟಿ ನಿಯಮಗಳ ಪ್ರಕಾರ ಧೂಮಪಾನವನ್ನು ನಿಷೇಧಿಸಲಾಗಿದೆ. ಟ್ರೆಕಿಂಗ್ ಒಳಗೊಂಡಿರುವ ಕಾರಣ ಸ್ಪೋಟ್ಸ್‌ ಶೂಗಳನ್ನು ಧರಿಸುವುದು ಸೂಕ್ತವಾಗಿದೆ. ಭಾರೀ ಚೀಲವನ್ನು ಕೊಂಡೊಯ್ಯುವುದಕ್ಕಿಂತ ಆದಷ್ಟು ಕಡಿಮೆ ಸಾಮಾನನ್ನು ಕೊಂಡೊಯ್ಯಿರಿ. ಈ ಜಲಪಾತಕ್ಕೆ ಭೇಟಿ ನೀಡಲು ನೀವು ಅರಣ್ಯಾಧಿಕಾರಿಯ ಅನುಮತಿಯನ್ನು ಪಡೆಯಬೇಕು.

ಬಸ್‌ ಮೂಲಕ ಪ್ರಯಾಣಿಸುವುದು


ವಡೋದರದ ಸ್ಥಳೀಯರಿಗೆ, ಜರ್ವಾನಿ ಜಲಪಾತಕ್ಕೆ ಪ್ರಯಾಣಿಸುವುದು ಕಷ್ಟಕರವಾಗಿರಬಾರದು. ಸಮೀಪದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವು ಈ ನಗರದಲ್ಲಿವೆ. ಇದು ಜಲಪಾತದಿಂದ 90 ಕಿಲೋಮೀಟರ್ ದೂರದಲ್ಲಿದೆ. ರಾಜ್ಪಿಪ್ಲಾದಿಂದ 28 ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ ನೀವು ಕಾರಿನಲ್ಲಿ ಅಥವಾ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರೆ, ನೀವು ರಾಷ್ಟ್ರೀಯ ಹೆದ್ದಾರಿ -8 ಮೂಲಕ ಹಾದು ಹೋಗುತ್ತದೆ, ಇದು ಮುಂಬೈ ಮತ್ತು ನವದೆಹಲಿಯಂತಹ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.

ಸರ್ದಾರ್ ಸರೋವರ್ ಅಣೆಕಟ್ಟು


ಸರ್ದಾರ್ ಸರೋವರ್ ಅಣೆಕಟ್ಟು ರಾಜ್ಪಿಪ್ಲಾ ಬಳಿ ಇದೆ. ನರ್ಮದಾ ನದಿಯ ಮೇಲೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಗುಜರಾತ್ ಸಮೀಪದ ರಾಜ್ಯಗಳಿಗೆ ಹೈಡ್ರೋಎಲೆಕ್ಟ್ರಿಕ್ ವಿದ್ಯುತ್ ಸರಬರಾಜು ಮಾಡುತ್ತದೆ. ಈ ಅಣೆಕಟ್ಟು ನೋಡಲು ಅದ್ಭುತವಾಗಿದೆ ಮತ್ತು ಹೆಚ್ಚು ಆಸಕ್ತಿಯ ತಾಣವಾಗಿದೆ. ಇಲ್ಲಿಗೆ ಭೇಟಿ ನೀಡುವವರು ಹೆಚ್ಚುವರಿಯಾಗಿ ಕ್ಯಾಚ್ಮೆಂಟ್ ಪ್ರದೇಶದೊಳಗೆ ಬೋಟಿಂಗ್ ಮಾಡಲು ಹೋಗಬಹುದು. ನೀವು ಜರ್ವಾನಿ ಜಲಪಾತವನ್ನು ಭೇಟಿ ಮಾಡುತ್ತಿದ್ದರೆ, ಈ ಅಣೆಕಟ್ಟುಗಳನ್ನು ನೀವು ತಪ್ಪಿಸಿಕೊಳ್ಳಬಾರದು.

ಶೂಲ್ಪಾನೇಶ್ವರ ವನ್ಯಜೀವಿ ಅಭಯಾರಣ್ಯ


ಸುಮಾರು 607 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಶೂಲ್ಪಾನೇಶ್ವರ ವನ್ಯಜೀವಿ ಅಭಯಾರಣ್ಯ ಭಾರತದ ಅತ್ಯಂತ ವೈವಿಧ್ಯಮಯ ಕಾಡುಗಳಲ್ಲಿ ಒಂದಾಗಿದೆ. ಜರ್ವಾನಿ ಜಲಪಾತಕ್ಕೆ ನೆಲೆಯಾಗಿದೆ. 575 ಕ್ಕಿಂತ ಹೆಚ್ಚು ಜಾತಿಯ ಪ್ರಾಣಿಗಳನ್ನು ಮತ್ತು ಎಲೆ ಉದುರುವ ಸಸ್ಯಗಳನ್ನು ಈ ಉಷ್ಣವಲಯದ ಕಾಡುಗಳು ಹೊಂದಿವೆ. ಈ ಪರಿಸರ ವ್ಯವಸ್ಥೆಯಲ್ಲಿ ಸಫಾರಿ ಹೋಗುವ ಅವಕಾಶವನ್ನು ನೀವು ತಪ್ಪಿಸಿಕೊಳ್ಳಬಾರದು. ಚಿರತೆಗಳು, ಅಪರೂಪದ ಮಂಗಗಳು, ಪೈಥಾನ್ಸ್, ಹಾರುವ ಅಳಿಲುಗಳು, ಕರಡಿಗಳು, ಅಳಿವಿನಂಚಿನಲ್ಲಿರುವ ಚುಕ್ಕೆ ಜಿಂಕೆಗಳು, ಪ್ಯಾಂಗೋಲಿನ್ಗಳು ಮತ್ತು ಕಾಡು ನಾಯಿಗಳಂತಹ ಬಹು ಜಾತಿಯ ವೈವಿಧ್ಯಮಯ ಪ್ರಾಣಿಗಳಿಗೆ ನೆಲೆಯಾಗಿದೆ.

ಸಮೋಟ್-ಮಲ್ಸಾಮೊಟ್

ಸಮೋಟ್-ಮಲ್ಸಾಮೊಟ್


ಸುಮಾರು 28 ಕಿ.ಮೀ ದೂರದಲ್ಲಿ, ರಾಜ್ಪಿಪ್ಲಾದಿಂದ ಎರಡು ಗಂಟೆ ಪ್ರಯಾಣ ಬೆಳೆಸಿದರೆ, ಈ ಶಿಬಿರವನ್ನು ತಲುಪಬಹುದು. ನೀವು ಎತ್ತರವಾದ ಮರಗಳೊಂದಿಗೆ ಪ್ರಶಾಂತ ಕಾಡುಗಳನ್ನು ಬಯಸಿದರೆ ಇದು ಅತ್ಯುತ್ತಮ ಸ್ಥಳವಾಗಿದೆ. ಅನೇಕ ತೇಗದ ಮರಗಳ ಜೊತೆಯಲ್ಲಿ, ಸಮೋಟ್-ಮಲ್ಸಾಮೊಟ್ ಕ್ಯಾಂಪ್ಸೈಟ್ ಕಣಿವೆಯ ಎದುರಿಸುತ್ತಿರುವ ಹಸಿರು ನೋಟವನ್ನು ಹೊಂದಿದೆ. ನೀವು ಇಲ್ಲಿ ಸೂರ್ಯಾಸ್ತ ಅಥವಾ ಸೂರ್ಯೋದಯವನ್ನು ನೋಡಬಹುದು ಏಕೆಂದರೆ ಸೂರ್ಯಾಸ್ತ ಹಾಗೂ ಸೂರ್ಯೋದಯಎರಡೂ ಸುಂದರವಾದ ದೃಶ್ಯವನ್ನು ನೀಡುತ್ತದೆ. ಇದು ಎತ್ತರವಾಗಿರುವ ಕಾರಣ, ಸ್ಥಳವು ಸ್ವಲ್ಪ ತಂಪಾದ ವಾತಾವರಣವನ್ನು ಹೊಂದಿದೆ. ಈ ಪ್ರದೇಶದ ಸ್ಥಳೀಯರು ಇಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡಿರುವುದರಿಂದ ನೀವು ಆಹಾರವನ್ನು ಕೊಂಡೊಯ್ಯುವ ಅಗತ್ಯ ಇರುವುದಿಲ್ಲ. ಸಮೀಪದಲ್ಲಿ ನಿನೈ ಎನ್ನುವ ಮತ್ತೊಂದು ಜಲಪಾತವಿದೆ. ಇದು ಜರ್ವಾನಿ ಜಲಪಾತಕ್ಕಿಂತ ಸಣ್ಣದಾಗಿದೆ, ಮತ್ತು ಸ್ವಲ್ಪ ಹಸಿರು ಬಣ್ಣದ್ದಾಗಿದೆ.

ಶೂಲ್ಪಾನೇಶ್ವರ ದೇವಾಲಯ

ಶೂಲ್ಪಾನೇಶ್ವರ ದೇವಾಲಯ


ಇದು ನರ್ಮದಾ ನದಿಯ ಬಳಿಯಿರುವ ಮಹಾದೇವ ದೇವಸ್ಥಾನ. ಇದು ಹಿಂದೆ ಸರ್ದಾರ್ ಸರೋವರ್ ಅಣೆಕಟ್ಟು ಬಳಿಯಿದ್ದ ಕಾರಣ, ಅಣೆಕಟ್ಟು ನಿರ್ಮಾಣ ಮಾಡುವಾಗ ಅದನ್ನು ಸರಿಸಬೇಕಾಯಿತು. ಇದು ಸುಂದರ ಕಾಡುಗಳಿಂದ ಆವೃತವಾಗಿದೆ ಮತ್ತು ಎರಡು ಗಂಟೆಗಳ ದೋಣಿ ಸವಾರಿಯ ಮೂಲಕ ಮಾತ್ರ ಇಲ್ಲಿಗೆ ತಲುಪಬಹುದು. ನೀವು ಬಾರೂಚ್ ನಗರದಿಂದ ಪ್ರಯಾಣಿಸಿದರೆ ಇದು 5 ಕಿಲೋ ಮೀಟರ್ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X