Search
  • Follow NativePlanet
Share
» »ಬಾಯಲ್ಲಿ ನೀರೂರಿಸುವ ಈ ರೈಲ್ವೆ ಸ್ಟೇಶನ್‌ಗಳ ಫುಡ್ ಟೇಸ್ಟ್ ಮಾಡಲೇ ಬೇಕು

ಬಾಯಲ್ಲಿ ನೀರೂರಿಸುವ ಈ ರೈಲ್ವೆ ಸ್ಟೇಶನ್‌ಗಳ ಫುಡ್ ಟೇಸ್ಟ್ ಮಾಡಲೇ ಬೇಕು

ಲೈಫ್‌ನಲ್ಲಿ ಒಮ್ಮೆಯಾದರೂ ಪ್ರತಿಯೊಬ್ಬರು ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ರೈಲಿನ ಪ್ರಯಾಣವು ಆರಾಮದಾಯಕವೂ ಆಗಿದೆ. ರೈಲಿನಲ್ಲಿ ಓಡಾಡುವ ಅನುಭವವೇ ಬೇರೆ. ಹಾಗೆಯೇ ಕೆಲವರಿಗೆ ರೈಲು ಪ್ರಯಾಣವು ಲೈಫ್‌ನ ಎಕ್ಸ್‌ಪೀರಿಯನ್ಸ್‌ಗಾಗಿ ಆದರೆ ಇನ್ನೂ ಕೆಲವರಿಗೆ ರೈಲ್ವೆ ನಿಲ್ದಾಣದಲ್ಲಿ ಸಿಗುವ ರುಚಿಕರ ಆಹಾರವನ್ನು ಸವಿಯುವುದೇ ಒಂದು ಖುಷಿ.

ಭಾರತದ ಈ ಐದು ಮಂದಿರಗಳ ರಹಸ್ಯವನ್ನು ನಂಬೋದು ಕಷ್ಟಭಾರತದ ಈ ಐದು ಮಂದಿರಗಳ ರಹಸ್ಯವನ್ನು ನಂಬೋದು ಕಷ್ಟ

ನೀವೂ ಕೂಡಾ ರೈಲ್ವೆ ಸ್ಟೇಶನ್‌ನಲ್ಲಿ ಸಿಗುವ ರುಚಿಕರ ಆಹಾರವನ್ನು ತಿನ್ನಲು ಇಷ್ಟಪಡುವವರಾಗಿದ್ದರೆ ಭಾರತದಲ್ಲಿ ರುಚಿಕರ ಆಹಾರ ಸಿಗುವ ಕೆಲವು ರೈಲ್ವೆ ಸ್ಟೇಶನ್ ಬಗ್ಗೆ ಇಲ್ಲಿ ನೀಡಲಾಗಿದೆ.

ಚೋಲೆ ಬಟೋರೆ- ಜಲಂಧರ್ ಸ್ಟೇಶನ್ , ಪಂಜಾಬ್

ಚೋಲೆ ಬಟೋರೆ- ಜಲಂಧರ್ ಸ್ಟೇಶನ್ , ಪಂಜಾಬ್

PC: youtube

ಪಂಜಾಬ್‌ನ ಜಲಂಧರ್ ರೈಲ್ವೆ ಸ್ಟೇಶನ್‌ನಲ್ಲಿರುವ ಚೋಲೆ ಬಟೋರೆಯ ರುಚಿಗೆ ಯಾವುದೂ ಸಾಟಿ ಇಲ್ಲ. ಬಿಸಿಬಿಸಿ ಹಾಗೂ ಫ್ರೆಶ್ ಆಗಿರುತ್ತದೆ. ನಾಲಗೆ ಚಪ್ಪರಿಸುವಂತಹ ರುಚಿ ಇಲ್ಲಿನ ಚೋಲೆ ಬಟೋರೆಗಿದೆ. ಮುಂದಿನ ಬಾರಿ ಪಂಜಾಬ್‌ಗೆ ಹೋಗುವಾಗ ಜಲಂಧರ್ ರೈಲ್ವೆ ಸ್ಟೇಶನ್‌ನಲ್ಲಿ ಇಳಿದು ಇದನ್ನು ತಿನ್ನೋದನ್ನು ಮಾತ್ರ ಮರಿಯಬೇಡಿ.

ಬಾಳೆಹಣ್ಣಿನ ಪೋಡಿ-ಎರ್ನಾಕುಲಂ ಜಂಕ್ಷನ್ ಕೇರಳ

ಬಾಳೆಹಣ್ಣಿನ ಪೋಡಿ-ಎರ್ನಾಕುಲಂ ಜಂಕ್ಷನ್ ಕೇರಳ

PC: youtube

ಪಾಳಂಪೋರಿ ಅಂದರೆ ಬಾಳೆಹಣ್ಣಿನಿಂದ ಮಾಡಲಾದ ಪೋಡಿ. ಹೆಚ್ಚಾಗಿ ಇದನ್ನು ಸಂಜೆಯ ಸ್ನಾಕ್ಸ್ ರೂಪದಲ್ಲಿ ಮಾಡಲಾಗುತ್ತದೆ. ಇದನ್ನು ಚಟ್ನಿ ಹಾಗೂ ಟೀ ಜೊತೆ ತಿನ್ನಬೇಕು. ಬಹಳ ರುಚಿಯಾಗಿರುತ್ತದೆ. ಕೇರಳದ ಏರ್ನಾಕುಲಂ ಜಂಕ್ಷನ್ ರೈಲ್ವೆಸ್ಟೇಶನ್ ಈ ಪೋಡಿಯನ್ನು ಸವಿಯಲು ಬೆಸ್ಟ್ ಸ್ಥಳವಾಗಿದೆ.

ಮದ್ದೂರು ವಡೆ-ಮದ್ದೂರು ರೈಲ್ವೆಸ್ಟೇಶನ್, ಕರ್ನಾಟಕ

ಮದ್ದೂರು ವಡೆ-ಮದ್ದೂರು ರೈಲ್ವೆಸ್ಟೇಶನ್, ಕರ್ನಾಟಕ

PC: youtube

ಮದ್ದೂರು ವಡೆ ಹೆಸರನ್ನು ನೀವು ಕೇಳಿರಬಹುದು. ನೀವು ಮದ್ದೂರಿಗೆ ಪ್ರಯಾಣಿಸುವಾಗ ಅಲ್ಲಿ ಸಿಗುವ ಮದ್ದೂರು ವಡೆಯನ್ನು ಸವಿಯಲೇ ಬೇಕು. ಮದ್ದೂರು ಸ್ಟೇಶನ್‌ನಲ್ಲಿ ಬೆಸ್ಟ್ ಮದ್ದೂರು ವಡಾವನ್ನು ನೀಡುತ್ತಾರೆ. ಇದು ಒಂದು ರೀತಿಯ ಸ್ನಾಕ್ಸ್‌ ಆಗಿದ್ದು ಚಟ್ನಿ ಜೊತೆ ತಿನ್ನಲು ರುಚಿಕರವಾಗಿದೆ.

 ಧಮ್‌ ಆಲೂ- ಖಾರಗ್‌ಪುರ್‌ ಜಂಕ್ಷನ್‌ ಪಶ್ಚಿಮ ಬಂಗಾಳ

ಧಮ್‌ ಆಲೂ- ಖಾರಗ್‌ಪುರ್‌ ಜಂಕ್ಷನ್‌ ಪಶ್ಚಿಮ ಬಂಗಾಳ

PC: youtube

ಪಶ್ಚಿಮಬಂಗಾಳದ ಖಾರಗ್‌ಪುರ್‌ ರೈಲ್ವೆ ಸ್ಟೇಶನ್‌ನಲ್ಲಿ ನಿಮ್ಮ ಮೂಗಿಗೆ ಬಡಿಯುವ ಧಮ್‌ ಆಲೂ ಪರಿಮಳದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರ ಪರಿಮಳ ಕೇಳಿಯೇ ನಿಮಗೆ ಧಮ್ ಆಲೂ ತಿನ್ನಬೇಕೆನಿಸುತ್ತದೆ. ಬಿಸಿ ಬಿಸಿ ಹಾಗೂ ಖಾರ ಧಮ್‌ ಆಲೂ ಜೊತೆ ಸ್ವಲ್ಪ ಗ್ರೇವಿ ಕೊಡ್ತಾರೆ ಅದನ್ನು ನೆಂಚಿಕೊಂಡು ತಿನ್ನೋದರಲ್ಲಿರುವ ರುಚಿ ಯಾವ ರೆಸ್ಟೋರೆಂಟ್‌ನಲ್ಲೂ ಸಿಗೋದಿಲ್ಲ.

ರಬ್‌ಡಿ -ಅಬು ರೋಡ್‌ ಸ್ಟೇಶನ್‌, ರಾಜಸ್ತಾನ

ರಬ್‌ಡಿ -ಅಬು ರೋಡ್‌ ಸ್ಟೇಶನ್‌, ರಾಜಸ್ತಾನ

PC: youtube

ನಿಮಗೆ ಎಂದಾದರೂ ರಾಜಸ್ತಾನದ ಅಬು ರೈಲ್ವೆ ಸ್ಟೇಶನ್‌ಗೆ ಪ್ರಯಾಣಿಸುವ ಅವಕಾಶ ದೊರೆತರೆ ರಬ್‌ಡಿ ತಿನ್ನೋದನ್ನು ಮಾತ್ರ ಮರೆಯಬೇಡಿ. ನೀವು ಅಬು ರೋಡ್‌ ಸ್ಟೇಶನ್ ತಲುಪುತ್ತಿದ್ದಂತೆ ನಿಮ್ಮ ಕಣ್ಣಿಗೆ ಕಾಣೋದೇ ರಬ್‌ಡಿ ಪ್ಲೇಟ್ ಹಿಡಿದು ನಿಂತಿರುವ ನೂರಾರು ಜನರು. ಹಾಲಿನಿಂದ ಮಾಡಲಾದ ಈ ಸಿಹಿಯ ಖಾದ್ಯವು ಇಲ್ಲಿ ಬಹಳ ಫೇಮಸ್ ಆಗಿದ್ದು ರುಚಿಕರವೂ ಆಗಿದೆ.

ಪೋಹ- ರಟ್‌ಲಾಮ್ ರೈಲ್ವೆ ಸ್ಟೇಶನ್, ಮಧ್ಯ ಪ್ರದೇಶ

ಪೋಹ- ರಟ್‌ಲಾಮ್ ರೈಲ್ವೆ ಸ್ಟೇಶನ್, ಮಧ್ಯ ಪ್ರದೇಶ

PC: youtube

ಬಾಲಿವುಡ್‌ ಸಿನಿಮಾ ಜಬ್‌ ವೀ ಮೆಟ್‌ ಬಂದ ನಂತರ ರಟಲಾಮ್ ರೈಲ್ವೆ ಸ್ಟೇಶನ್ ತುಂಬಾನೇ ಫೇಮಸ್ ಆಗಿದೆ. ಆದರೆ ಈ ಸ್ಟೇಶನ್ ಪೋಹ ಹಾಗೂ ಅಕ್ಕಿಯ ಆಹಾರಕ್ಕೆ ಬಹಳ ಫೇಮಸ್ ಆಗಿದೆ. ಬೆಳಗ್ಗಿನ ಉಪಹಾರಕ್ಕೆ ಹೇಳಿಮಾಡಿಸಿದ ಸ್ಥಳ ಇದಾಗಿದೆ. ಇಲ್ಲಿ ಬಿಸಿ ಬಿಸಿ ಪೋಹವನ್ನು ರಟಲಾಮಿ ಸೇವ್ ಹಾಗೂ ಹಸಿ ಈರುಳ್ಳಿ ಜೊತೆ ಕೊಡ್ತಾರೆ.

ಕೋಜಿಕೋಡ್‌ ಹಲ್ವಾ-ಕ್ಯಾಲಿಕಟ್ ಸ್ಟೇಶನ್, ಕೇರಳ

ಕೋಜಿಕೋಡ್‌ ಹಲ್ವಾ-ಕ್ಯಾಲಿಕಟ್ ಸ್ಟೇಶನ್, ಕೇರಳ

PC: youtube

ಈ ಹಲ್ವಾ ಎಲ್ಲಾ ಶೇಫ್ ಹಾಗೂ ಸೈಜ್‌ಗಳಲ್ಲಿ ಲಭ್ಯವಿದೆ. ಕ್ಯಾಲಿಕಟ್ ಸ್ಟೇಶನ್‌ನಲ್ಲಿ ಬೆಸ್ಟ್ ಹಲ್ವಾ ಸಿಗುತ್ತದೆ. ಇಡೀ ಸಿಟಿಯಲ್ಲೇ ಕೋಜಿಕೊಡ್ ಸ್ಟೇಶನ್ ಬೆಸ್ಟ್ ಹಲ್ವಾ ಮಾರಾಟ ಮಾಡುವುದಕ್ಕೆ ಪ್ರಸಿದ್ಧಿ ಹೊಂದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X