Search
  • Follow NativePlanet
Share
» »ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ

ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ

By Vijay

ಫ್ರೆಂಚ್ ಸಂಸ್ಕೃತಿ ಹಾಗೂ ತೆಲುಗು ಸಂಸ್ಕೃತಿ ಒಂದಕ್ಕೊಂದು ಗೆಳೆಯರಾಗಿ ಜೊತೆಯಾಗಿ ಸಾಗುತ್ತಿರುವುದನ್ನು ನೋಡಬೇಕಿದ್ದರೆ ಇಲ್ಲವೆ ಅನುಭವಿಸಬೇಕಿದ್ದರೆ ಒಮ್ಮೆ ಯಾನಂಗೆ ಭೇಟಿ ನೀಡಿ. ಒಮ್ಮೊಮ್ಮೆ ಇದನ್ನು ಫ್ರೆಂಚ್ ಯಾನಂ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ 30 ಚ.ಕಿ.ಮೀ ಪ್ರದೇಶದ ಪರಾವೃತ ನಗರವಾಗಿ ಗೋಚರಿಸುತ್ತದಾದರೂ ಇದು ಇರುವುದು ಪಾಂಡಿಚೆರಿಯಲ್ಲಿ.

ಮರಳಿಪ್ರಯಾಣಿಸುವ ವಿಮಾನ ಹಾರಾಟ ದರಗಳ ಮೇಲೆ ತುರ್ತಾಗಿ 300 ರೂಪಾಯಿಗಳ ಕಡಿತ ಪಡೆಯಲು ಇಲ್ಲಿ ಕ್ಲಿಕ್ಕಿಸಿ

ಹೆಚ್ಚಿನ ಓದು: ಕೇಂದ್ರಾಡಳಿತ ಪ್ರದೇಶಗಳ ಕೇಂದ್ರಾಕರ್ಷಣೆಗಳು

ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯ ನಾಲ್ಕು ಜಿಲ್ಲೆಗಳ ಪೈಕಿ ಒಂದಾದ ಯಾನಂ, ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ ಯಾನಂ ನಗರ. ಅಷ್ಟೆ ಏಕೆ ಪಾಂಡಿಚೆರಿಯಲ್ಲಿ ಮಾತ್ರವಲ್ಲದೆ ಇಡಿ ಭಾರತದಲ್ಲೆ ಉತ್ತಮ ವಿಧಾನ ಸಭೆ ಕ್ಷೇತ್ರಗಳ ಪೈಕಿ ಒಂದೆನಿಸಿದೆ. ಇಲ್ಲಿ ಅಭಿವೃದ್ಧಿಗಳು ಮಂದಗತಿಯಲ್ಲಲ್ಲದೆ ಶೀಘ್ರವಾಗಿ ಅನುಷ್ಠಾನಗೊಳ್ಳುತ್ತವೆ. ಇಂದು ಚಿಕ್ಕ ಹಾಗೂ ಚೊಕ್ಕದಾಗಿರುವ ಈ ಪಟ್ಟಣವು ಕುತೂಹಲಕರ ಪ್ರವಾಸಿ ತಾಣವಾಗಿದೆ.

ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ

ಚಿತ್ರಕೃಪೆ: Bsskchaitanya

ಹಿಂದೆ ಸುಮಾರು 200 ವರ್ಷಗಳ ಕಾಲ ಇದು ಫ್ರೆಂಚ್ ಕಾಲೋನಿಯಾಗಿತ್ತು. ಇಲ್ಲಿರುವ ಜನಸಂಖ್ಯೆಯಲ್ಲಿ ಬಹು ಮಟ್ಟಿಗಿನ ಜನರು ತೆಲುಗು ಭಾಷಿಕರಾಗಿದ್ದರೆ ಅಲ್ಪ ಪ್ರಮಾಣದಲ್ಲಿ ತಮಿಳು ಮಾತನಾಡುವವರು ಸಹ ಇಲ್ಲಿ ಕಂಡುಬರುತ್ತಾರೆ. ಫ್ರೆಂಚ್ ಆಡಳಿತವಿದ್ದಾಗ ಪ್ರತಿ ಮಂಗಳವಾರದಂದು ಇಲ್ಲಿ ಸಂತೆಯು ಆಯೋಜನೆಗೊಳ್ಳಲ್ಪಡುತ್ತಿತ್ತು ಹಾಗೂ ಇದು ಮದ್ರಾಸ್ ರಾಜ್ಯದಲ್ಲಿದ್ದ ತೆಲುಗು ಭಾಷಿಕರಿಗೆ ಆಕರ್ಷಕ ಸಂತೆಯಾಗಿತ್ತು.

ಪ್ರತಿ ವರ್ಷ ಜನವರಿ ಸಂದರ್ಭದಲ್ಲಿ ಯಾನಂ ಉತ್ಸವವನ್ನು ಆಚರಿಸಲಾಗುತ್ತಿತ್ತು. ಈ ಉತ್ಸವದಲ್ಲಿ ವಿದೇಶಗಳಿಂದ ಕಳುವು ಮಾಡಿ ತರಲಾದ ಉತ್ಪನ್ನಗಳು ನಿರಾಯಾಸವಾಗಿ ದೊರೆಯುತ್ತಿದ್ದುದರಿಂದ ಸುತ್ತಮುತ್ತಲಿನ ಸಾಕಷ್ಟು ಜನರು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದರು. ಹೀಗಾಗಿ ಇದೊಂದು ಜನಾಕರ್ಷಣೆಯ ಕೇಂದ್ರವಾಗಿತ್ತು.

ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ

ಚಿತ್ರಕೃಪೆ: Kartik Malik

ಈ ಮೊದಲು ಯಾನಂನಲ್ಲಿ ಫ್ರೆಂಚ್ ಅಧಿಕಾರವು ಪ್ರಖರವಾಗಿತ್ತು. ಆ ಸಮಯದಲ್ಲಿಎಲ್ಲೆಡೆ ರಾಷ್ಟ್ರೀಯ ಹೋರಾಟ ಚುರುಕು ಗತಿಯಲ್ಲಿ ಚಾಲ್ತಿಯಲ್ಲಿದ್ದ ಕಾರಣ ಕಾಲ ಜರಿದಂತೆ ಯಾನಂನಲ್ಲೂ ಸ್ವಾತಂತ್ರ್ಯದ ಕಹಳೆ [ಜಲಿಯನ್ ವಾಲಾ ಬಾಗ್]ಮೊಳಗತೊಡಗಿತು. ಅದಕ್ಕೆ ಪೂರಕವೆಂಬಂತೆ ಅಂದಿನ ಯಾನಂನ ಆಡಳಿತದ ಕೆಲ ಪ್ರಮುಖ ಅಧಿಕಾರಿಗಳು ವಿಲೀನ ಒಪ್ಪಂದಕ್ಕೆ ತಮ್ಮ ಒಪ್ಪಿಗೆ ಸೂಚಿಸತೊಡಗಿದರು.

ಇದಾದ ಕೆಲ ಸಮಯದಲ್ಲಿ ಭಾರತೀಯ ಪೊಲೀಸ್ ಇಲಾಖೆಯು ಯಾನಂ ಪ್ರವೇಶಿಸಿ ಭಾರತೀಯ ಧ್ವಜವನ್ನು ಹಾರಿಸಲಾಯಿತು. ಇದರ ಜೊತೆಗೆ ಯಾನಂ ಸ್ವತಂತ್ರವಾಯಿತು ಎಂದು ಪತ್ರಿಕಾ ಮಾಧ್ಯಮ ಹಾಗೂ ಆಲ್ ಇಂಡಿಯಾ ರೇಡಿಯೊದ ಮೂಲಕ ಎಲ್ಲೆಡೆ ಘೋಷಿಸಲಾಯಿತು. ಈ ಸುದ್ದಿಯಿಂದ ಯಾನಂನಲ್ಲಿದ್ದ ಫ್ರೆಂಚ್ ಅಧಿಕಾರಿಗಳು ಕೊಪಗೊಂಡರಾದರೂ ಕೊನೆಗೆ ಯಾನಂ ಭಾರತದ ಅವಿಭಾಜ್ಯ ಅಂಗವಾಯಿತು.

ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ

ಚಿತ್ರಕೃಪೆ: Bsskchaitanya

ಯಾನಂ ಸ್ವತಂತ್ರಗೊಂಡ ತರುವಾಯ ಫ್ರೆಂಚ್ ಸರ್ಕಾರವು ಫ್ರೆಂಚ್ ಭಾರತದ ಭಾಗಗಳಲ್ಲಿ ವಾಸಿಸುವ ಜನರಿಗೆ ಫ್ರೆಂಚ್ ನಾಗರೀಕತ್ವವನ್ನು ಕೊಡಲು ಮುಂದಾಯಿತು. ಅದರಂತೆ ಯಾನಂನ ಸುಮಾರು 10000 ದಷ್ಟು ಜನರು ಈ ನಾಗರೀಕತ್ವವನ್ನು ಸ್ವೀಕರಿಸಿದರು.

ಕೆಲ ದಾಖಲೆಗಳ ಪ್ರಕಾರ, ಫ್ರಾನ್ಸ್ ದೇಶದಲ್ಲಿ ಈಗಲೂ ಸುಮಾರು 150 ಸಂಖ್ಯೆಗಳಷ್ಟು ಯಾನಂನಿಂದ ವಲಸೆ ಹೋದ ತೆಲುಗು ಕುಟುಂಬಗಳು ವಾಸಿಸ್ಸುತ್ತಿದೆ ಎನ್ನಲಾಗಿದೆ. ಅಲ್ಲದೆ ಕೆಲ ಫ್ರಾನ್ಸ್ ದೇಶದ ಜನರು ಇಂದಿಗೂ ಯಾನಂನಲ್ಲಿ ವಾಸಿಸುತ್ತಿದ್ದು ಫ್ರೆಂಚ್ ಸರ್ಕಾರದ ವತಿಯಿಂದ ಪಿಂಚಣಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ

ಚಿತ್ರಕೃಪೆ: Bsskchaitanya

ಇಂದು ಯಾನಂನಲ್ಲಿ ತೆಲುಗು ಹಾಗೂ ಫ್ರೆಂಚ್ ಸಂಸ್ಕೃತಿಗಳೆರಡೂ ವಿಲೀನವಾಗಿರುವುದನ್ನು ಕಾಣಬಹುದಾಗಿದೆ. ಇಲ್ಲಿ ವಾಸಿಸುವ ಜನರು ತುಂಬ ಸ್ನೇಹಮಯವಾಗಿದ್ದು ಆದರಾತಿಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಇಲ್ಲಿರುವ ತೆಲುಗು ಭಾಷಿಕರನ್ನು ಕೂಡ ಇತರೆ ತೆಲುಗು ಭಾಷಿಕರಿಂದ ಅವರ ವಿಶಿಷ್ಟ ಸಂಸ್ಕೃತಿಯಿಂದ ಗುರುತಿಸಬಹುದಾಗಿದೆ.

ಯಾನಂ ತೆಲುಗು ಸಂಸ್ಕೃತಿಯ ಫ್ರೆಂಚ್ ಕಾಲೋನಿ

ಚಿತ್ರಕೃಪೆ: Bsskchaitanya

ಇಂದಿಗೂ ಯಾನಂ ಪ್ರವೇಶಿಸಿದಾಗ ಸೊಯೆಜ್ ಲೆ ಬೈನ್ವೆನ್ಯೂ (Soyez le bienvenue) ಅಂದರೆ ಫ್ರೆಂಚ್ ಭಾಷೆಯಲ್ಲಿ ಸ್ವಾಗತ ಎಂತಲೂ ನಿರ್ಗಮಿಸುವಾಗ ಮರ್ಸಿ ಬೈನ್ (Merci Bien) ಅಂದರೆ ತುಂಬಾ ಧನ್ಯವದಗಳು ಎಂಬ ಹೇಳಿಕೆಗಳನ್ನು ಪಾಂಡಿಚೆರಿ ಸರ್ಕಾರದಿಂದ ಪ್ರದರ್ಶಿಸಿರುವುದನ್ನು ಕಾಣಬಹುದಾಗಿದೆ.

ಯಾನಂ ಸುಂದರ ದೃಶ್ಯಗಳನ್ನು ಭೇಟಿ ನೀಡುವವರಿಗೆ ಒದಗಿಸುತ್ತದೆ. ಇಲ್ಲಿನ ಕಡಲ ತೀರವು ಆಕರ್ಷಕವಾಗಿದ್ದು ಚುಂಬಕದಂತೆ ಸೆಳೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X