Search
  • Follow NativePlanet
Share
» »ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!

ಯಾಣ - ಅತ್ಯದ್ಬುತ ಶಿಲೆಗಳಿರುವ ಇರುವ ತಾಣ!

ಯಾಣದ ಈ ಆಕರ್ಷಕ ಬಂಡೆಗಳು ಅತ್ಯಂತ ಪ್ರಸಿದ್ದಿಯನ್ನು ಪಡೆದಿವೆ.

ಯಾಣದ ಅಸಮಾನ್ಯ ಕಲ್ಲಿನ ರಚನೆಗಳು ಯಾತ್ರಾರ್ಥಿಗಳು, ಪ್ರಕೃತಿ ಪ್ರೇಮಿಗಳು ಹಾಗೂ ಚಾರುಣಿಗರನ್ನು ಹೆಚ್ಚಾಗಿ ಆಕರ್ಶಿಸುತ್ತದೆ. ಈ ಅದ್ಬುತ ಶಿಲೆಗಳು ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿರುವ ಸಣ್ಣ ಹಳ್ಳಿಯ ಮುಖ್ಯ ಆಕರ್ಷಣೆಗಳಾಗಿವೆ.

ಈ ಹಳ್ಳಿಯು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು ಕುಮುಟಾ (29 ಕಿ.ಮೀ) ಮತ್ತು ಶಿರ್ಸಿ (55 ಕಿ.ಮೀ) ಇವು ಇಲ್ಲಿಗೆ ಹತ್ತಿರದಲ್ಲಿರುವ ಪಟ್ಟಣಗಳು.

yana caves-1

ಯಾಣದ ಸುತ್ತ ಇರುವ ದಂತಕಥೆಗಳು - ಯಾಣದಲ್ಲಿರುವ ಪ್ರವಾಸಿ ತಾಣಗಳು ಪುರಾಣಗಳನ್ನು ಇಷ್ಟ ಪಡುವವರಿಗಾಗಿ ಯಾಣವು ಅತ್ಯಂತ ಮಹತ್ವದ ಸ್ಥಳವಾಗಿದೆ. ಈ ಸ್ಥಳದ ಹಾಗೂ ಅಲ್ಲಿರುವ ಕಲ್ಲಿನ ರಚನೆಯ ಕುರಿತಾದ ಹಲವಾರು ದಂತಕಥೆಗಳಿವೆ.

ರಾಕ್ಷಸರ ರಾಜ ಭಸ್ಮಾಸುರನು ಶಿವ ದೇವರನ್ನು ಬೆನ್ನಟ್ಟುವ ಸಂದರ್ಭದಲ್ಲಿ ಶಿವನು ಭೈರವೇಶ್ವರ ಶಿಖರ ಎಂದು ಕರೆಯಲ್ಪಡುವ ಬಂಡೆಯ ರಚನೆಯಲ್ಲಿ ಆಶ್ರಯ ಪಡೆದನು ಎಂಬ ಕಥೆಯು ಅತ್ಯಂತ ಜನಪ್ರಿಯವಾದ ಕಥೆಗಳಲ್ಲಿ ಒಂದೆನಿಸಿದೆ. ಜಗನ್ಮೋಹಿನಿ ಎಂದು ಕರೆಯಲ್ಪಡುವ ಇನ್ನೊಂದು ಬಂಡೆಯ ರಚನೆಯು ಶಿವನನ್ನು ರಕ್ಷಿಸಲು ಮೋಹಿನಿಯ ರೂಪವನ್ನು ಪಡೆದ ವಿಷ್ಣುವೆಂದು ಸೂಚಿಸುತ್ತದೆ.

ya caves-2na

ಈ ದಂತಕಥೆಗಳಿಗೆ ಸಾಕ್ಷಿ ಎಂಬಂತೆ ಇಲ್ಲಿ ಮಹಾಶಿವರಾತ್ರಿಯನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಪ್ರದರ್ಶನಗಳು ಹಾಗೂ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಯಾಣಕ್ಕೆ ಸಮೀಪದಲ್ಲಿ ಗುಹಾ ದೇವಾಲಯ ಮತ್ತು ಜಲಪಾತವೂ ಇದೆ.

yana-caves-3

ಯಾನಾ ತಲುಪುವುದು ಹೇಗೆ

ಹತ್ತಿರದ ವಿಮಾನ ನಿಲ್ದಾಣವೆಂದರೆ ಗೋವಾ ವಿಮಾನ ನಿಲ್ದಾಣ, ಇದು 181 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ರೈಲು ನಿಲ್ದಾಣವು ಯಾಣಕ್ಕೆ ಹತ್ತಿರದಲ್ಲಿದೆ. ರಾಜ್ಯ ಸಾರಿಗೆ ಬಸ್ಸುಗಳು ಕುಮಟಾ ಮತ್ತು ಶಿರಸಿಯಿಂದ ಕೂಡ ಸಂಚರಿಸುತ್ತವೆ. ಹುಬ್ಬಳ್ಳಿ ಯಾಣಕ್ಕೆ ಹತ್ತಿರದ ದೇಶೀಯ ವಿಮಾನ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X