Search
  • Follow NativePlanet
Share
» » ಬೆಂಗಳೂರು ಸುತ್ತ ಮುತ್ತ ಇರುವವರು ತಮಿಳ್ನಾಡಿನ ಈ ತಾಣಗಳನ್ನು ನೋಡಲೇ ಬೇಕು

ಬೆಂಗಳೂರು ಸುತ್ತ ಮುತ್ತ ಇರುವವರು ತಮಿಳ್ನಾಡಿನ ಈ ತಾಣಗಳನ್ನು ನೋಡಲೇ ಬೇಕು

ನಮ್ಮ ದೇಶದಲ್ಲಿ ಪ್ರವಾಸವನ್ನು ಇಷ್ಟಪಡುವವರು, ಪಿಕ್‌ನಿಕ್ ಹೋಗ ಬಯಸುವವರು ಬಹಳಷ್ಟು ಜನರಿದ್ದಾರೆ. ಅವರು ತಮ್ಮ ಆಸಕ್ತಿಗನುಗುಣವಾದ ವ್ಯಕ್ತಿಗಳನ್ನೇ ಸ್ನೇಹಿತರನ್ನಾಗಿಸುತ್ತಾರೆ. ಹೀಗಿರುವಾ ಚಾರಣ ಹೋಗುವವರು ತಮ್ಮದೇ ಆದ ಒಂದು ಗ್ಯಾಂಗ್‌ನ್ನು ಕಟ್ಟಿಕೊಂಡು ತಿಂಗಳಿಗೊಮ್ಮೆಯಾದರೂ ಚಾರಣ ಕೈಗೊಳ್ಳುತ್ತಾರೆ.

ಹೊಗೇನಕಲ್,ಕೃಷ್ಣಗಿರಿ

ಹೊಗೇನಕಲ್,ಕೃಷ್ಣಗಿರಿ

PC: KARTY JazZ

ಬೆಂಗಳೂರು ಅಥವಾ ಮೈಸೂರು ಸುತ್ತಮುತ್ತ ವಾಸಿಸುವವರಿಗೆ ಹೊರ ರಾಜ್ಯಗಳಿಗೆ ಪ್ರವಾಸ ಕೈಗೊಳ್ಳುವುದು ಏನೂ ಕಷ್ಟದ ಮಾತಲ್ಲ. ಕರ್ನಾಟಕದ ಗಡಿಯ ಸಮೀಪ ತಮಿಳುನಾಡಿನ ಎರಡು ಸುಂದರವಾದ ಸ್ಥಳಗಳಾದ ಹೊಗೇನಕಲ್ ಮತ್ತು ಕೃಷ್ಣಗಿರಿಗೆ ಪ್ರವಾಸ ಕೈಗೊಳ್ಳಬಹುದು.

ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !ಟಿಪ್ಪುವಿಗಿತ್ತಂತೆ ಇಲ್ಲಿಯ ಶ್ರೀಕಂಠನ ಮೇಲೆ ಅಪಾರ ನಂಬಿಕೆ !

 ಪ್ರಕೃತಿ ಮಡಿಲು

ಪ್ರಕೃತಿ ಮಡಿಲು

PC: Mithun Kundu

ಈ ಸಣ್ಣ ಹಳ್ಳಿಗಳೆರಡೂ ಪ್ರಕೃತಿಯ ಸೌಂದರ್ಯದಿಂದ ಕೂಡಿದೆ. ಹೊಗೇನಕಲ್ ತನ್ನ ನೈಸರ್ಗಿಕ ಜಲಪಾತಕ್ಕೆ ಹೆಸರುವಾಸಿಯಾದರೆ, ಕೃಷ್ಣಗಿರಿಯು ತನ್ನ ಮಾನವ ನಿರ್ಮಿತ ಜಲಪಾತ ಹಾಗೂ ಕೃಷ್ಣಗಿರಿ ಅಣೆಕಟ್ಟಿನಿಂದ ಪ್ರಸಿದ್ಧವಾಗಿದೆ. ಜೊತೆಗೆ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ಹೊಗೇನಕಲ್

ಹೊಗೇನಕಲ್

PC: KARTY JazZ

ಹೊಗೇನಕಲ್ ಬೆಂಗಳೂರಿನಿಂದ 151 ಕಿ.ಮೀ ದೂರದಲ್ಲಿದ್ದರೆ, ಕೃಷ್ಣಗಿರಿಯಿಂದ 89 ಕಿ,ಮೀ ದೂರದಲ್ಲಿದೆ. ಹೊಗೇನಕಲ್ ಸಿನಿಮಾದ ಶೂಟಿಂಗ್‌ಗೆ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಇಲ್ಲಿಗೆ ಬರುವ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸದೇ ಇರಲಾರದು.

ಈ ದೇವಾಲಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಹೊಡೆಯುತ್ತಾರೆ ಯಾಕೆ?ಈ ದೇವಾಲಯದಲ್ಲಿ ಭಕ್ತರ ತಲೆಗೆ ತೆಂಗಿನಕಾಯಿ ಹೊಡೆಯುತ್ತಾರೆ ಯಾಕೆ?

ಕೃಷ್ಣಗಿರಿ ಅಣೆಕಟ್ಟು

ಕೃಷ್ಣಗಿರಿ ಅಣೆಕಟ್ಟು

PC: TheZionView

ಕೃಷ್ಣಗಿರಿ ಅಣೆಕಟ್ಟು ಎಂಬುದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಧುದುಗನಹಳ್ಳಿ ಗ್ರಾಮದ ಮೂಲಕ ತೇನ್ಪೆನ್ನೈ ನದಿಯನ್ನು ವ್ಯಾಪಿಸಿದೆ. ಕೃಷ್ಣಗಿರಿಯಲ್ಲಿ ಜಲಾಶಯ, ಡ್ಯಾಮ್‌ನ್ನು ಹೊರತುಪಡಿಸಿ ಕೃಷ್ಣಗಿರಿ ತನ್ನ ಪ್ರಾಚೀನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಸಾಕಷ್ಟು ಜನರು ಟ್ರೆಕ್ಕಿಂಗ್ / ಹೈಕಿಂಗ್‌ಗಾಗಿ ಬರುತ್ತಿರುತ್ತಾರೆ.

ಅಣೆಕಟ್ಟು ಪಾರ್ಕ್

ಅಣೆಕಟ್ಟು ಪಾರ್ಕ್

ಕೆಆರ್‌ಪಿ ಅಣೆಕಟ್ಟು ಸಮೀಪದ ಕೆಆರ್‌ಪಿ ಅಣೆಕಟ್ಟು ಪಾರ್ಕ್ ತಮಿಳುನಾಡು ಪಬ್ಲಿಕ್ ವರ್ಕ್ಸ್ ಡಿಪಾರ್ಟ್ಮೆಂಟ್ ಅಭಿವೃದ್ಧಿಪಡಿಸಿದೆ. ಇದು ತಮಿಳುನಾಡಿನ ಪ್ರಮುಖ ಪ್ರವಾಸಿತಾಣವಾಗಿದ್ದು, ವಾರಾಂತ್ಯದಲ್ಲಿ ಜನರಿಂದ ತುಂಬಿರುತ್ತದೆ. ಕೆಆರ್‌ಪಿ ಡ್ಯಾಮ್ ಪಾರ್ಕ್‌ಗೆ ಒಬ್ಬರಿಗೆ ೫ ರೂ. ಟಿಕೇಟ್ ಇದೆ. ಪಾರ್ಕ್‌ನ ಬದಿಯಲ್ಲೇ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆಯೂ ಇದೆ.

ಕರ್ನಾಟಕದಲ್ಲಿದೆಯಂತೆ ಸ್ಪರ್ಶಿಸಿದ್ದೆಲ್ಲವೂ ಚಿನ್ನವಾಗಿಸುವ ಶಿವಲಿಂಗ !ಕರ್ನಾಟಕದಲ್ಲಿದೆಯಂತೆ ಸ್ಪರ್ಶಿಸಿದ್ದೆಲ್ಲವೂ ಚಿನ್ನವಾಗಿಸುವ ಶಿವಲಿಂಗ !

 ಪ್ರವಾಸಿ ತಾಣ

ಪ್ರವಾಸಿ ತಾಣ

ಬೆಂಗಳೂರಿಗರಿಗಂತೂ ಇದು ಬಹಳ ಸುಲಭದಲ್ಲಿ ಒಂದೆರಡು ದಿನಗಳಲ್ಲಿ ಹೋಗಿ ಬರಬಹುದಾದದಂತಹ ಪ್ರವಾಸಿ ತಾಣವಾಗಿದೆ. ಸ್ನೇಹಿತರ ಜೊತೆ ತಮ್ಮದೇ ಆದ ವಾಹನದ ಮೂಲಕ ರೋಡ್‌ ಟ್ರಿಪ್ ಮಾಡಿಕೊಂಡು ಈ ಎರಡು ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಕೃತಿಯ ಮಡಿಲಲ್ಲಿ ಮಜಾಪಡೆಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X