Search
  • Follow NativePlanet
Share
» »ವಿಶ್ವ ಪ್ರವಾಸೋದ್ಯಮ ದಿನ 2019: ಇತಿಹಾಸ, ಮಹತ್ವ, ಆತಿಥ್ಯ ದೇಶ ಮತ್ತು ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು

ವಿಶ್ವ ಪ್ರವಾಸೋದ್ಯಮ ದಿನ 2019: ಇತಿಹಾಸ, ಮಹತ್ವ, ಆತಿಥ್ಯ ದೇಶ ಮತ್ತು ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳು

By Lekhaka

ಚಿತ್ರ ಕೃಪೆ: ಯುಎನ್ ಡಬ್ಲ್ಯೂಟಿಒ

ಪ್ರವಾಸದ ಅನುಭವವನ್ನು ಹಂಚಿಕೊಳ್ಳುವುದೇ ಒಂದು ವಿಶೇಷ ಅನುಭವ. ಅದರಲ್ಲೂ ಕೆಲವರು ಪ್ರವಾಸಕ್ಕೆ ಹೋಗಿ ಹಿಂತಿರುಗಿದ ಬಳಿಕ ಬರೆಯುವಂತಹ ಪ್ರವಾಸ ಕಥನವನ್ನು ಓದುವುದೇ ಥ್ರಿಲ್! ಯಾಕೆಂದರೆ ಅವರು ಪ್ರವಾಸ ಹೋಗಿರುವಂತಹ ಪ್ರದೇಶಗಳನ್ನು ಆ ರೀತಿಯಾಗಿ ವರ್ಣಿಸುತ್ತಿರುತ್ತಾರೆ. ನಾವೇ ಅಲ್ಲಿ ಹೋಗಿ ಬಂದಂತೆ ಆಗುವುದು. ವಿಶ್ವದ ಹೆಚ್ಚಿನ ರಾಷ್ಟ್ರಗಳಿಗೆ ಪ್ರವಾಸೋದ್ಯಮವೇ ಒಂದು ದೊಡ್ಡ ಆರ್ಥಿಕತೆ ಮೂಲ.

ವಿಶ್ವದೆಲ್ಲೆಡೆಯಲ್ಲಿ ವಿಶ್ವ ಪ್ರವಾಸೋದ್ಯಮ ದಿನ''ವನ್ನಾಗಿ ಸೆಪ್ಟೆಂಬರ್ 27ರಂದು ಆಚರಿಸಲಾಗುತ್ತಿದೆ. ವಿಶ್ವಮಟ್ಟದಲ್ಲಿ ಪ್ರವಾಸೋದ್ಯಮದ ಪ್ರಾಮುಖ್ಯತೆ ತಿಳಿಸುವುದು ಇದರ ಪ್ರಮುಖ ಉದ್ದೇಶ. ಸೆಪ್ಟೆಂಬರ್ 27ರಂದು ವಿಶ್ವದೆಲ್ಲೆಡೆಯಲ್ಲಿ ವಿವಿಧ ದೇಶಗಳು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಣೆ ಮಾಡುತ್ತವೆ. ವಿಶ್ವಸಂಸ್ಥೆಯ ವಿಶ್ವ ವ್ಯಾಪಾರ ಸಂಘಟನೆ(ಯುಎನ್ ಡಬ್ಲ್ಯೂಟಿಒ) ಇದರ ಆಯೋಜನೆ ಮಾಡುತ್ತಿದೆ.

ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ

ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ

1970 ಸೆಪ್ಟೆಂಬರ್ 27ರಂದು ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಆಫೀಶಿಯಲ್ ಟ್ರಾವೆಲ್ ಆರ್ಗನೈಶೇಷನ್(ಐಯುಒಟಿಒ) ಮೆಕ್ಸಿಕೋ ನಗರದಲ್ಲಿ ವಿಶೇಷ ಸಭೆ ನಡೆಸಿ ವಿಶ್ವ ಪ್ರವಾಸೋದ್ಯಮ ಸಂಘಟನೆಗೆ ಮಾನ್ಯತೆ ನೀಡಿತು. ಇದರ ಹತ್ತು ವರ್ಷಗಳ ಬಳಿಕ ಅಂದರೆ 1980ರಲ್ಲಿ ಈ ದಿನವನ್ನು ಅಧಿಕೃತವಾಗಿ ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಣೆ ಮಾಡಲಾಯಿತು.

ವಿಶ್ವ ಪ್ರವಾಸೋದ್ಯಮ ದಿನದ ಉದ್ದೇಶವೆಂದರೆ ಈ ದಿನವು ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮೌಲ್ಯದ ಮೇಲೆ ಪ್ರವಾಸೋದ್ಯಮವು ಯಾವ ರೀತಿ ಪರಿಣಾಮ ಬೀರುವುದು ಎಂದು ಸಾರ್ವಜನಿಕರಿಗೆ ತಿಳಿಸಿಕೊಡುವುದಾಗಿದೆ. 1997ರ ಅಕ್ಟೋಬರ್ ನಲ್ಲಿ ಅರ್ಕಿಯ ಇಸ್ತಾನಬುಲ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ವಿಶ್ವ ವ್ಯಾಪಾರ ಸಂಘಟನೆಯ ಸಾಮಾನ್ಯ ಸಭೆಯಲ್ಲಿ ಪ್ರತೀ ವರ್ಷ ವಿಶ್ವ ಪ್ರವಾಸೋದ್ಯಮ ದಿನದಂದು ಒಂದೊಂದು ರಾಷ್ಟ್ರಕ್ಕೆ ಆತಿಥ್ಯ ನೀಡುವುದು ಎಂದು ನಿರ್ಧಾರ ಮಾಡಲಾಯಿತು.

ವಿಶ್ವ ಪ್ರವಾಸೋದ್ಯಮ ದಿನದ ಪದ್ಧತಿ ಮತ್ತು ಆಚರಣೆಗಳು

ವಿಶ್ವ ಪ್ರವಾಸೋದ್ಯಮ ದಿನದ ಪದ್ಧತಿ ಮತ್ತು ಆಚರಣೆಗಳು

ವಿಶ್ವ ಪ್ರವಾಸೋದ್ಯಮ ದಿನವನ್ನು ವಿವಿಧ ವಿಧಾನಗಳಿಂದ ಆಚರಣೆ ಮಾಡಲಾಗುತ್ತದೆ. ಅಮ್ಯೂಸ್ ಮೆಂಟ್ ಪಾರ್ಕ್, ಮ್ಯೂಸಿಯಂ ಮತ್ತು ಇತರ ಕೆಲವೊಂದು ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗಳನ್ನು ಸೆಳೆಯುವುದು ಮತ್ತು ಈ ದಿನದಂದು ಉಚಿತ ಅಥವಾ ರಿಯಾಯಿತಿ ದರದಲ್ಲಿ ಪ್ರವೇಶ ನೀಡುವುದು ಇದೆ. ಅದಾಗ್ಯೂ, ಪ್ರವಾಸೋದ್ಯಮ ದಿನದಂದು ಜನರು ತಾವು ಭೇಟಿಯಾಗಲು ಬಯಸಿದಂತಹ ದೇಶಗಳಿಗೆ ಭೇಟಿ ನೀಡಲು ಹೋಗಿ.

ಪ್ರವಾಸೋದ್ಯಮ ದಿನಕ್ಕೆ ಪ್ರತೀ ವರ್ಷವೂ ಬೇರೆ ಬೇರೆ ಧ್ಯೇಯ ವಾಕ್ಯಗಳನ್ನು ಬರೆಯಲಾಗುತ್ತದೆ. 1980ರಲ್ಲಿ ``ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಶಾಂತಿ ಮತ್ತು ಪರಸ್ಪರ ತಿಳುವಳಿಕೆ ಪ್ರವಾಸೋದ್ಯಮದ ಕೊಡುಗೆ''. 1991ರಲ್ಲಿ ಇದ್ದ ಧ್ಯೇಯ ವಾಕ್ಯ`` ಸಂವಹಕ, ಮಾಹಿತಿ ಮತ್ತು ಶಿಕ್ಷಣ: ಪ್ರವಾಸೋದ್ಯಮ ಬೆಳವಣಿಗೆಯ ಶಕ್ತಿಯ ಮೂಲ'' ಮತ್ತು 2016ರಲ್ಲಿ ``ಪ್ರವಾಸೋದ್ಯಮ ಸರ್ವರಿಗೆ'' ಹೀಗೆ ವರ್ಷದಿಂದ ವರ್ಷಕ್ಕೆ ಇದು ಭಿನ್ನವಿದೆ.

2019 ಆತಿಥೆಯ ರಾಷ್ಟ್ರ ಭಾರತ

2019 ಆತಿಥೆಯ ರಾಷ್ಟ್ರ ಭಾರತ

2019ರಲ್ಲಿ ಅಂದರೆ ಈ ವರ್ಷ ಭಾರತವನ್ನು ವಿಶ್ವ ಪ್ರವಾಸೋದ್ಯಮ ದಿನಕ್ಕೆ ಆತಿಥೇಯ ರಾಷ್ಟ್ರವನ್ನಾಗಿ ಮಾಡಲಾಗಿದೆ. ಇದರ ಧ್ಯೇಯ ವಾಕ್ಯ,``ಪ್ರವಾಸೋದ್ಯಮ ಮತ್ತು ಉದ್ಯೋಗ: ಸರ್ವರಿಗೂ ಒಂದು ಒಳ್ಳೆಯ ಭವಿಷ್ಯ.'' ವಿಶ್ವದೆಲ್ಲೆಡೆಯಲ್ಲಿ ಪ್ರತೀ ವರ್ಷ ಸೆಪ್ಟೆಂಬರ್ 27ರಂದು ಆಚರಿಸಲ್ಪಡುವಂತಹ ವಿಶ್ವ ಪ್ರವಾಸೋದ್ಯಮ ದಿನಕ್ಕೆ ಈ ವರ್ಷ ಭಾರತ ಆತಿಥ್ಯ ವಹಿಸಲಿದೆ. ಪ್ರವಾಸೋದ್ಯಮ ಮತ್ತು ಅದರ ಸಾಮಾಜಿಕ, ಆರ್ಥಿಕ, ರಾಜಕೀಯ ಪ್ರಾಮುಖ್ಯತೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ವಿಶ್ವಸಂಸ್ಥೆಯ ಮಿಲೇನಿಯಂ ಡೆವಲ್ಪಮೆಂಟ್ ಗೋಲ್ಸ್(ಎಂಡಿಜಿ)ಯಲ್ಲಿ ಉಲ್ಲೇಖಿಸಿರುವ ಕೆಲವೊಂದು ವಿಶ್ವ ಮಟ್ಟದ ಸವಾಲುಗಳು ಮತ್ತು ಈ ಗುರಿಯನ್ನು ಮುಟ್ಟಲು ಪ್ರವಾಸೋದ್ಯಮದ ಪಾತ್ರವೇನು ಎನ್ನುವುದನ್ನು ಇಲ್ಲಿ ತಿಳಿಸಲಾಗುತ್ತದೆ.

ಕರ್ನಾಟಕದ ಅಗ್ರ ಪ್ರವಾಸಿ ತಾಣಗಳು

1. ಭಾರತದ ಸ್ಕಾಟ್ ಲೆಂಡ್, ಕೊಡಗು

1. ಭಾರತದ ಸ್ಕಾಟ್ ಲೆಂಡ್, ಕೊಡಗು

ಕರ್ನಾಟಕದ ಅತೀ ಜನಪ್ರಿಯ ಹಾಗೂ ಪ್ರಸಿದ್ಧಿ ಪಡೆದಿರುವಂತಹ ಗಿರಿಧಾಮಗಳಲ್ಲಿ ಕೊಡಗು ಒಂದು. ಮನಸೂರೆಗೊಳಿಸುವಂತಹ ಪ್ರಕೃತಿ ಸೌಂದರ್ಯ, ನಾಲ್ಕು ಸುತ್ತಲಿನ ಹಸಿರು ಪ್ರವಾಸಿಗರನ್ನು ಸೆಳೆಯುತ್ತದೆ. ಅರಣ್ಯಗಳನ್ನು ಸುತ್ತವರಿದಿರುವ ಬೆಟ್ಟಗಳು, ಮಸಾಲೆ ಮತ್ತು ಕಾಫಿ ತೋಟಗಳು ಇಲ್ಲಿ ಪ್ರಕೃತಿ ಸೌಂದರ್ಯಕ್ಕೆ ಮೆರಗು ನೀಡಿದೆ. ಮಡಿಕೇರಿ ಇಲ್ಲಿನ ಪ್ರಮುಖ ನಗರವಾಗಿದ್ದು, ಕೊಡಗಿನ ಬೇರೆಲ್ಲಾ ಸ್ಥಳಗಳಿಗೆ ಇಲ್ಲಿಂದಲೇ ಪ್ರಯಾಣಿಸಬಹುದು. ಕೊಡಗಿಗೆ ಪ್ರಯಾಣ ಬೆಳೆಸುವುದಿದ್ದರೆ ಆಗ ವಿರಾಜಪೇಟೆ, ಕುಶಾಲನಗರ, ಗೋಣಿಕೊಪ್ಪ, ಪೊಲ್ಲಿಬೆಟ್ಟ ಮತ್ತು ಸೋಮವಾರಪೇಟೆಗಳಿಗೆ ಭೇಟಿ ನೀಡಿ. ಇಲ್ಲಿನ ಹೋಂಸ್ಟೇಗಳಿಗೆ ಭೇಟಿ ನೀಡಿ ಪ್ರವಾಸದ ಆನಂದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ.

2. ತಾಳೆ ಮರಗಳು, ನೀಲಿ ಸಮುದ್ರ ಮತ್ತು ಬಂಗಾರದ ಮರಳು- ಗೋಕರ್ಣ

2. ತಾಳೆ ಮರಗಳು, ನೀಲಿ ಸಮುದ್ರ ಮತ್ತು ಬಂಗಾರದ ಮರಳು- ಗೋಕರ್ಣ

ಕಾರವಾರ ಕರಾವಳಿ ಭಾಗದಲ್ಲಿ ಇರುವಂತಹ ಗೋಕರ್ಣವು ಒಂದು ಸುಂದರ ಪುಟ್ಟ ನಗರ. ದೇವಸ್ಥಾನ ಮತ್ತು ಇಲ್ಲಿನ ಬೀಚ್ ಗಳಿಂದ ಗೋಕರ್ಣವನ್ನು ಎಲ್ಲರೂ ಗುರುತಿಸುವರು. ಗೋಕರ್ಣವು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಭಾವ ಉಂಟು ಮಾಡಬಹುದು. ಹೆಚ್ಚಿನ ವಿದೇಶಿ ಪ್ರವಾಸಿಗರ ಸಹಿತ ಗೋಕರ್ಣಕ್ಕೆ ಪ್ರತೀ ವರ್ಷ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುವರು. ಒಂದು ಕಡೆಯಲ್ಲಿ ಗೋಕರ್ಣದಲ್ಲಿನ ದೇವಸ್ಥಾನಗಳಲ್ಲಿ ಆಧ್ಯಾತ್ಮಿಕತೆಗೆ ಮಾರು ಹೋದರೆ, ಇನ್ನೊಂದು ಕಡೆಯಲ್ಲಿ ಪ್ರಕೃತಿ ಸೌಂದರ್ಯ ಬೀಚ್ ನಲ್ಲಿ ಸುತ್ತಾಡಲು ಬರುವವರು ಸಾವಿರಾರು ಮಂದಿ. ಇಲ್ಲಿನ ಕೆಲವೊಂದು ವಿಶೇಷ ಬೀಚ್ ಗಳಲ್ಲಿ ಹೆಚ್ಚಾಗಿ ವಿದೇಶಿಯರೇ ಕಾಣಸಿಗುವರು. ಇಲ್ಲಿನ ಬೀಚ್ ಗಳು ಪ್ರವಾಸದ ದಿನಗಳಲ್ಲಿ ಆರಾಮ ಮಾಡಲು ಮತ್ತು ಪ್ರತಿಯೊಂದಕ್ಕೂ ತುಂಬಾ ಒಳ್ಳೆಯದಿದೆ. ತೆಂಗಿನ ಹಾಗೂ ತಾಳೆ ಮರಗಳಿಂದ ತುಂಬಿರುವಂತಹ ಇಲ್ಲಿನ ಬೀಚ್ ಗಳು ಸುಂದರ, ಸ್ವಚ್ಛ ಮರಳಿಗೆ ಹೆಸರುವಾಸಿ. ಗೋಕರ್ಣವು ದೇಶದಲ್ಲೇ ಒಂದು ವಿಶೇಷ ತಾಣವೆಂದು ಹೇಳಬಹುದಾಗಿದೆ.

3. ಭಾರತದ ಉದ್ಯಾನ ನಗರಿ- ಬೆಂಗಳೂರು

3. ಭಾರತದ ಉದ್ಯಾನ ನಗರಿ- ಬೆಂಗಳೂರು

ಉದ್ಯಾನ ನಗರಿಯಿಂದ ಸಿಲಿಕಾನ್ ನಗರವಾಗಿ ಪರಿವರ್ತನೆಗೊಂಡಿರುವಂತಹ ಬೆಂಗಳೂರು ದೇಶದಲ್ಲಿ ಹೆಚ್ಚು ಜನರು ವಾಸಿಸಲು ಇಷ್ಟಪಡುವಂತಹ ಮೂರನೇ ನಗರ. ಇಲ್ಲಿನ ಆಹ್ಲಾದಕರ ಹವಾಮಾನ, ಸುಂದರ ಉದ್ಯಾನವನಗಳು, ನಗರದಲ್ಲಿನ ಕೆರೆಗಳು ಆಕರ್ಷಣೇಯವಾಗಿದೆ. ಬೆಂಗಳೂರಿಗೆ ಪ್ರವಾಸ ಮಾಡಿದವರು ಕಬ್ಬನ್ ಪಾರ್ಕ್ ನ ಹಸಿರು, ಆಧುನಿಕ ಮಾಲ್ ಗಳಲ್ಲಿ ಇರುವಂತಹ ಅಂಗಡಿಗಳು ಮತ್ತು ರಸ್ತೆ ಬದಿ ಮಾರುಕಟ್ಟೆ, ಬಿಸಿ ಹಾಗೂ ತಂಪಾದ ಕೆಲವೊಂದು ರುಚಿಕರ ಪಾನೀಯ ಸಿಗುವಂತಹ ಸ್ಥಳಗಳಿಗೆ ಭೇಟಿ ನೀಡಬಹುದು. ಬೆಂಗಳೂರು ನಗರವು ಹೋಟೆಲ್, ಬೀದಿಬದಿ ಆಹಾರ, ಕೆಫೆ, ಕಾಫಿ ರೋಸ್ಟರ್ ಮತ್ತು ಪಬ್ ಗಳಿಗೆ ತುಂಬಾ ಜನಪ್ರಿಯವಾಗಿದೆ. ಇಲ್ಲಿ ವಿಶ್ವದ ಎಲ್ಲಾ ಮೂಲೆಗಳ ಆಹಾರವು ನಿಮಗೆ ಲಭ್ಯವಾಗುವುದು. ಬರ್ಗರ್, ತಡರಾತ್ರಿ ಹೋಟೆಲ್ ಗಳು ಎಲ್ಲವೂ ಬೆಂಗಳೂರಿನಲ್ಲಿ ಲಭ್ಯ.

4. ``ಗತಕಾಲದ ಅವಶೇಷಗಳು, ತುಕ್ಕು ಬಣ್ಣಗಳು, ಆಕರ್ಷಕ ಭೂ ಸದೃಶ್ಯ’’ -ಹಂಪಿ

4. ``ಗತಕಾಲದ ಅವಶೇಷಗಳು, ತುಕ್ಕು ಬಣ್ಣಗಳು, ಆಕರ್ಷಕ ಭೂ ಸದೃಶ್ಯ’’ -ಹಂಪಿ

ಹಂಪಿ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಪುರಾತನ ದೇವಾಲಯಗಳು, ಅದರ ಮೂರ್ತಿಗಳು ಇತ್ಯಾದಿ. ಇಂದು ಹಂಪಿಯನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ. ಕಣಿವೆ ಹಾಗೂ ಬೆಟ್ಟದಲ್ಲಿರುವಂತಹ ಹಂಪಿಗೆ ಹಿಂದಿನಿಂದಲೂ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಲೇ ಇದ್ದಾರೆ. ಸುಮಾರು 500 ಪುರಾತನ ವಿಗ್ರಹಗಳು, ಸುಂದರ ದೇವಾಲಯಗಳು, ಬೀದಿಬದಿ ಮಾರುಕಟ್ಟೆ, ಪುರಾತನ ಕಟ್ಟಡಗಳು ಮತ್ತು ವಿಜಯನಗರ ಸಾಮಾಜ್ಯವನ್ನು ನೆನಪಿಸುವ ಗುರುತುಗಳು ಇಲ್ಲಿವೆ. ಹಂಪಿಯು ಸುಮಾರು 100 ಪ್ರದೇಶಗಳನ್ನು ಹೊಂದಿರುವಂತಹ ತೆರೆದ ಸಂಗ್ರಹಾಲಯ ಎಂದು ಹೇಳಬಹುದು ಮತ್ತು ಇತಿಹಾಸವನ್ನು ಅರಿಯಲು ಒಂದು ಸಲ ಹಂಪಿಗೆ ಭೇಟಿ ನೀಡಲೇಬೇಕು.

5. ದಕ್ಷಿಣ ಭಾರತದ ಒಂದು ನೋಟ- ಮೈಸೂರು

5. ದಕ್ಷಿಣ ಭಾರತದ ಒಂದು ನೋಟ- ಮೈಸೂರು

ಅರಮನೆ ನಗರಿ ಎಂದೇ ಕರೆಯಲ್ಪಡುವಂತಹ ಮೈಸೂರು ದೇಶದ ಅತ್ಯಂತ ಸುಂದರ ನಗರವೆಂದರೆ ತಪ್ಪಾಗದು. ರಾಜಮನೆತನದ ಬೆರಗುಗೊಳಿಸುವ ಪರಂಪರೆ, ಸಂಕೀರ್ಣ ವಾಸ್ತುಶಿಲ್ಪ, ಸಿಲ್ಕ್ ಸೀರೆ, ಯೋಗ ಮತ್ತು ಶ್ರೀಗಂಧ ಸಾಬೂನು ಇಲ್ಲಿನ ಕೆಲವು ವಿಶೇಷತೆಗಳು. ಅದರಲ್ಲೂ ಮೈಸರೂ ದಸರಾವಂತೂ ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡಿದೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವಂತಹ ಮೈಸೂರು ಕರ್ನಾಟಕದ ಮೂರನೇ ಅತೀ ಜನಪ್ರಿಯ ನಗರ. ಇಲ್ಲಿನ ಪರಂಪರೆ ಹಾಗೂ ಸೌಂದರ್ಯ ನೋಡಲು ಪ್ರತೀ ವರ್ಷ ಇಲ್ಲಿಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ.

6. ಗುಹೆ ಮಂದಿರಗಳ ನೆಲೆಬೀಡು- ಬಾದಾಮಿ

6. ಗುಹೆ ಮಂದಿರಗಳ ನೆಲೆಬೀಡು- ಬಾದಾಮಿ

ಅಗಸ್ತ್ಯ ಸರೋವರದಿಂದ ಸುತ್ತವರಿದು, ಸುಂದರ ಕೆಂಪುಮರಳಿನ ಕಣಿವೆಯಲ್ಲಿ ಇರುವಂತಹ ಬಾದಾಮಿಯು ಪುರಾತತ್ವ ಸಂಭ್ರಮಕ್ಕೆ ಒಂದು ಒಳ್ಳೆಯ ತಾಣವಾಗಿದೆ. ಇಲ್ಲಿನ ಕಲ್ಲಿನ ಕೆತ್ತನೆಯ ಗುಹಾ ದೇವಾಲಯಗಳು, ಕೋಟೆಗಳು ಹಾಗೂ ಕೆತ್ತನೆಗಳು ತುಂಬಾ ಸುಂದರವಾಗಿದೆ. ಚಾಲುಕ್ಯ ರಾಜರಿಗೆ ರಾಜಧಾನಿ ಆಗಿದ್ದಂತಹ ಬಾದಾಮಿಯು ಒಂದು ವಿಶೇಷ ತಾಣವಾಗಿದೆ. ಇಲ್ಲಿ ಹಿಂದೆ ದ್ರಾವಿಡರ ವಾಸ್ತುಶಿಲ್ಪಕ್ಕೆ ಹಲವಾರು ಉದಾಹರಣೆಗಳು ಇವೆ. ಅದೇ ರೀತಿಯಾಗಿ ದಕ್ಷಿಣ ಹಾಗೂ ಉತ್ತರದ ವಾಸ್ತುಶಿಲ್ಪ ಕಲೆಗಳಿಗೆ ಇದು ಸಾಕ್ಷಿಯಾಗಿದೆ. ಬಾದಾಮಿ ಗುಹೆಯಲ್ಲಿ ಮೂರು ಹಿಂದೂ ದೇವಾಲಯ ಮತ್ತು ಒಂದು ಜೈನ ಮಂದಿರವಿದೆ.

7. ಭವ್ಯ ಜಲಪಾತಗಳು- ಜೋಗ ಜಲಪಾತ

7. ಭವ್ಯ ಜಲಪಾತಗಳು- ಜೋಗ ಜಲಪಾತ

ಭಾರತದ ಎರಡನೇ ಅತೀ ದೊಡ್ಡ ಜಲಪಾತ ಇದಾಗಿದೆ. ಜೋಗ ಜಲಪಾತವು ಕರ್ನಾಟಕದ ಪ್ರಮುಖ ಹಾಗೂ ಆಕರ್ಷಣೀಯ ಪ್ರವಾಸಿ ತಾಣವಾಗಿದೆ. ಶಿವಮೊಗ್ಗ ಮತ್ತು ಉತ್ತರ ಕರ್ನಾಟಕ ಜಿಲ್ಲೆಯ ಗಡಿ ಭಾಗದಲ್ಲಿ ಇರುವ ಜೋಗ ಜಲಪಾತವು ರಾಜ್ಯದ ಅತೀ ದೊಡ್ಡ ಜಲಪಾತವಾಗಿದೆ. ಜೋಗ ಫಾಲ್ಸ್ ಅಥವಾ ಗೇರುಸೊಪ್ಪ ಫಾಲ್ಸ್ ಎಂದು ಕರೆಯಲ್ಪಡುವಂತಹ ಜೋಗ ಜಲಪಾತವು ದಕ್ಷಿಣ ಭಾರತದ ಅತೀ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದು. ಮೇಘಾಲಯದ ನೊಹ್ಕಾಲಿಕೈ ಜಲಪಾತದ ಬಳಿಕ 253 ಮೀ(850 ಅಡಿ) ಎತ್ತರದಿಂದ ನೀರು ಧುಮುಕುವಂತಹ ಭಾರತದ ಎರಡನೇ ಜಲಪಾತ ಇದಾಗಿದೆ.

8. ಶ್ರವಣ ಬೆಳಗೊಳ

8. ಶ್ರವಣ ಬೆಳಗೊಳ

ಜೈನರಿಗೆ ಅತೀ ಪವಿತ್ರವಾಗಿರುವಂತಹ ಸುಮಾರು 57 ಮೀಟರ್ ಎತ್ತರದ ಗೋಮಟೇಶ್ವರ ಮೂರ್ತಿ ಇರುವಂತಹ ಶ್ರವಣಬೆಳಗೊಳವು ಅತೀ ಜನಪ್ರಿಯ ಪ್ರವಾಸಿ ತಾಣ. ಹಾಸನ ಜಿಲ್ಲೆಯಲ್ಲಿರುವಂತಹ ಶ್ರವಣ ಬೆಳಗೊಳಕ್ಕೆ ಬೆಂಗಳೂರಿನಿಂದ ಸುಮಾರು 144 ಕಿ.ಮೀ. ದೂರವಿದೆ. ಶ್ರವಣ ಬೆಳಗೊಳದಲ್ಲಿ ಇರುವಂತಹ ಜೈನ ಮಂದಿರಗಳು ಪ್ರತೀ ವರ್ಷ ಇಲ್ಲಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಅದೇ ರೀತಿಯಾಗಿ ಪ್ರತೀ 12 ವರ್ಷಕ್ಕೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕವು ನಡೆಯುವುದು.

9. ಗೋಲ್ ಗುಂಬಜ್ ನಗರ- ಬಿಜಾಪುರ

9. ಗೋಲ್ ಗುಂಬಜ್ ನಗರ- ಬಿಜಾಪುರ

ವಿಶ್ವದ ಅತೀ ದೊಡ್ಡ ಗುಮ್ಮಟವನ್ನು ಹೊಂದಿರುವಂತಹ ಬಿಜಾಪುರವು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಬಿಜಾಪುರವು ಕರ್ನಾಟಕದ ಪ್ರಮುಖ ವಾಣಿಜ್ಯ ನಗರಿಯೂ ಹೌದು. ಕಲ್ಯಾಣಿ ಚಾಲುಕ್ಯರಿಂದ 10-11ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿರುವ ಬಿಜಾಪುರವನ್ನು ಅಂದಿನ ದಿನಗಳಲ್ಲಿ ವಿಜಯಪುರ ಎಂದೂ ಕರೆಯಲಾಗುತ್ತಿತ್ತು. ವಿಜಯಪುರವೆಂದರೆ ಅದು ಗೆಲುವಿನ ನಗರಿ ಎನ್ನುವ ಅರ್ಥ ಬರುವುದು. ಇಬ್ರಾಹಿಂ ರೌಜಾ ಬಿಜಾಪುರದ ಮತ್ತೊಂದು ಪ್ರಮುಖ ಸ್ಮಾರಕ ಮತ್ತು ಇದನ್ನು ದಕ್ಷಿಣದ ತಾಜ್ ಮಹಲ್ ಎಂದೂ ಕರೆಯಲಾಗುತ್ತದೆ. ಜುಮ್ಮಾ ಮಸೀದಿ, ಅರಮನೆ ಕೋಟೆಗಳು ಇತರ ಕೆಲವು ಪ್ರಮುಖ ಆಕರ್ಷಣೆಗಳಾಗಿವೆ.

10. ``ನೀಲಗಿರಿಯ ಹುಲಿ ಸಂರಕ್ಷಣಾ ತಾಣ’’- ಬಂಡೀಪುರ ರಾಷ್ಟ್ರೀಯ ಉದ್ಯಾನ

10. ``ನೀಲಗಿರಿಯ ಹುಲಿ ಸಂರಕ್ಷಣಾ ತಾಣ’’- ಬಂಡೀಪುರ ರಾಷ್ಟ್ರೀಯ ಉದ್ಯಾನ

ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಮೈಸೂರು ರಾಜರಿಗೆ ಬೇಟೆಯ ತಾಣವಾಗಿತ್ತು. 1974ರಲ್ಲಿ ಇದನ್ನು ಹುಲಿ ಸಂರಕ್ಷಿತ ತಾಣವೆಂದು ಘೋಷಿಸಲಾಯಿತು ಮತ್ತು ಇಲ್ಲಿನ ದಟ್ಟ ಅರಣ್ಯವು ಹಲವಾರು ವಿಧದ ವನ್ಯ ಪ್ರಾಣಿಗಳಿಂದ ತುಂಬಿಕೊಂಡಿದೆ. ಇದು ಇಲ್ಲಿನ ಪ್ರಮುಖ ಆಕರ್ಷಣೆ ಕೂಡ. ತಮಿಳುನಾಡಿನ ಪ್ರಮುಖ ಪ್ರವಾಸಿ ತಾಣವಾಗಿರುವ ಊಟಿಗೆ ತೆರಳುವ ಮಾರ್ಗದಲ್ಲಿ, ಮೈಸೂರಿನಿಂದ ಸುಮಾರು 80 ಕಿ.ಮೀ. ದೂರದಲ್ಲಿದೆ. ಪ್ರಾಣಿಗಳ ಸಂರಕ್ಷಣೆಗಾಗಿ ಇಲ್ಲಿನ ಹೆದ್ದಾರಿಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

Read more about: travel ಪ್ರವಾಸ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X