Search
  • Follow NativePlanet
Share
» »ಬೆಂಗಳೂರಿನ ವಂಡರ್ಫುಲ್ ವಂಡರ್ಲಾ

ಬೆಂಗಳೂರಿನ ವಂಡರ್ಫುಲ್ ವಂಡರ್ಲಾ

By Vijay

ಪ್ರಸ್ತುತ, ಇಂದಿನ ಜೀವನದಲ್ಲಿ ಕೆಲಸದೊತ್ತಡ ಬಹಳವೆ ಕಂಡುಬರುತ್ತದೆ ಎಂದರೆ ತಪ್ಪಾಗಲಾರದು. ಪ್ರತಿ ದಿನ ಬೆಳಿಗ್ಗೆ ಬೇಗನೆ ಏಳುವುದು, ಆಫಿಸ್ ಗೆ ಲೇಟ್ ಆಗುತ್ತೆ ಎಂದು ಅವಸರದಿಂದ ರೆಡಿಯಾಗುವುದು, ಟ್ರಾಫಿಕ್ ಎಂಬ ಭೂತದೊಂದಿಗೆ ಗುದ್ದಾಡುವುದು, ಬಸ್ಸಿನಲ್ಲಿ ಸಾಮಾನ್ಯವಾಗಿ ಸೀಟು ಸಿಗದೆ ನೇತಾಡುವುದು, ಇಷ್ಟೆಲ್ಲ ದೊಂಬರಾಟ ಮಾಡಿ ಕೊನೆಗೆ ಕಚೇರಿಯ ಸೀಟಿನಲ್ಲಿ ಕುಳಿತಾಗ ಎದ್ದು ಬಿದ್ದು ಉಳಿದಿದ್ದ ಕೊಂಚ ಚೈತನ್ಯವು ಅಲ್ಲೆ ಢಮಾರ್! ಇಂತಹ ಮನಸ್ಥಿತಿಯು ನಮ್ಮಲ್ಲಿ ಬಹು ಜನರಿಗೆ ಸಾಮಾನ್ಯವಾದದ್ದೆ. ಆದರೆ ಇದರಿಂದ ಹೊರಬರುವುದಾದರೂ ಹೇಗೆ?

ಹೌದು, ಖಂಡಿತವಾಗಿಯೂ ಇದರಿಂದ ಹೊರಬರಬಹುದು. ಇದು ನಮ್ಮಲ್ಲಿನ ಮನಸಿನ ಪ್ರಫುಲ್ಲತೆ, ಜೀವನೋತ್ಸಾಹ, ಸಹನೆ ಮುಂತಾದವುಗಳ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾದರೆ ಇವುಗಳನ್ನು ಹೇಗೆ ಪಡೇಯಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಕೆಲವರು ಪ್ರಾಣಾಯಮ, ಧ್ಯಾನ, ಯೋಗ ಮುಂತಾದವುಗಳನ್ನು ಆಚರಿಸಿ ಪಡೆದರೆ ಇನ್ನೂ ಕೆಲವರು ಪ್ರಕೃತಿಯೊಂದಿಗೆ ಹತ್ತಿರವಾಗಿ ಶಾಂತಮಯ ವಾತಾವರಣದಲ್ಲೊ ಅಥವಾ ಕ್ರಿಯಾತ್ಮಕ ಅಥವಾ ಸಾಹಸಮಯ ಕ್ರೀಡೆಗಳಲ್ಲಿ ತೊಡಗಿಕೊಂಡೊ ಉಲ್ಲಾಸಿತರಾಗುತ್ತಾರೆ. ಇದರಲ್ಲಿ ಎರಡನೆಯ ಬಗೆಯದು ಆನಂದಮಯವಾಗಿರುವುದು ಅಲ್ಲದೆ ಮನರಂಜನೆಯನ್ನೂ ಕೂಡ ಒದಗಿಸುತ್ತದೆ. ಇಂತಹ ಮನರಂಜನೆ ಪ್ಲಸ್ ವಿಶ್ರಾಂತಿಯನ್ನು ಮನರಂಜನಾ ಉದ್ಯಾನಗಳಲ್ಲಿ ಪಡೆಯಬಹುದಾಗಿದೆ. ಹಾಗಾದರೆ ಬನ್ನಿ....ಈ ಲೇಖನದ ಮೂಲಕ ಬೆಂಗಳೂರಿನ ವಂಡರ್ ಲಾ ಥೀಮ್ ಪಾರ್ಕಿನ ಪರಿಚಯ ಮಾಡಿಕೊಳ್ಳೊಣ.

ವಂಡರ್ಲಾ

ವಂಡರ್ಲಾ

ವಂಡರ್ಲಾ ಒಂದು ಅಮ್ಯೂಸ್‍ಮೆಂಟ್ ಪಾರ್ಕ್ ಆಗಿದ್ದು ಬೆಂಗಳೂರಿನಿಂದ 28 ಕಿ.ಮೀ ಗಳಷ್ಟು ದೂರವಿರುವ ಬಿಡದಿ ಪಟ್ಟಣದಲ್ಲಿ ನೆಲೆಗೊಂಡಿದೆ. 82 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಬೃಹತ್ತಾಗಿ ಆವರಿಸಿರುವ ಈ ಥೀಮ್ ಪಾರ್ಕ್ ಕೊಚ್ಚಿಯಲ್ಲಿ ನೆಲೆಸಿರುವ ವಿ ಗಾರ್ಡ್ ಇಂಡಸ್ಟ್ರೀಸ್ ನಿಯಮಿತ ರವರಿಂದ ನಿರ್ವಹಿಸಲ್ಪಡುತ್ತದೆ. ಒಟ್ಟಾರೆ 105 ಕೋಟಿ ರೂಪಾಯಿಗಳಷ್ಟು ವೆಚ್ಚದಲ್ಲಿ ನಿರ್ಮಾಣವಾದ ಈ ಉದ್ಯಾನವು ಅಕ್ಟೋಬರ್ 2005 ರಿಂದ ಕಾರ್ಯಾರಂಭಮಾಡಿದೆ.

ಚಿತ್ರಕೃಪೆ: Saad Faruque

ಮೋಜು, ಮಸ್ತಿ ಹೇರಳವಾಗಿ....

ಮೋಜು, ಮಸ್ತಿ ಹೇರಳವಾಗಿ....

ನೀರು ಹಾಗು ಭೂಮಿಯ ಮೇಲೆ ಅವಲಂಬಿತವಾಗಿರುವ ಸುಮಾರು 53 ಬಗೆಯ ವಿವಿಧ ಸವಾರಿಗಳನ್ನು ಇಲ್ಲಿ ಆಸ್ವಾದಿಸಬಹುದಾಗಿದೆ. ಅಲ್ಲದೆ ಸಂಗೀತ ಕಾರಂಜಿ, ಲೇಸರ್ ಪ್ರದರ್ಶನ, ಡ್ಯಾನ್ಸ್ ಫ್ಲೋರ್, ವರ್ಚ್ಯೂವಲ್ ರಿಯಾಲಿಟಿ ಶೊ ಗಳಂತಹ ವಿಭಿನ್ನ ಮನರಂಜನೆಗಳನ್ನೂ ಇಲ್ಲಿ ಆಸ್ವಾದಿಸಬಹುದಾಗಿದೆ.

ಚಿತ್ರಕೃಪೆ: Natesh Ramasamy

ಅತಿಥಿ ಕಾಳಜಿ:

ಅತಿಥಿ ಕಾಳಜಿ:

ವಂಡರ್ಲಾ ತನ್ನಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಿಕೊಂಡಿದ್ದು, ಸಾಮಾನ್ಯವಾಗಿ ಚಳಿಗಾಲದ ಸಮಯದಲ್ಲಿ ಸೌರಶಕ್ತಿಯ ಸಹಾಯದಿಂದ ನೀರನ್ನು ಬಳಸಲಾಗುತ್ತದೆ. ಪರಿಸರದ ದೃಷ್ಟಿಯಿಂದ 2000 ಕ್ಕೂ ಅಧಿಕ ಗಿಡಮರಗಳನ್ನು ಇಲ್ಲಿ ನೆಡಲಾಗಿದೆ.

ಚಿತ್ರಕೃಪೆ

ಊಟೋಪಚಾರಗಳು:

ಊಟೋಪಚಾರಗಳು:

ಐದು ರೆಸ್ಟಾರೆಂಟುಗಳು, ಲಾಕರ್ ರೂಮುಗಳು ಸೇರಿದಂತೆ ಸಾವಿರ ಜನ ಕೂಡಬಹುದಾದ ಬೃಹತ್ ಸಭಾಂಗಣವನ್ನು ಸಹ ಇಲ್ಲಿ ಕಾಣಬಹುದಾಗಿದೆ. ಆದ್ದರಿಂದ ವಿವಿಧ ಬಗೆಯ ಖಾದ್ಯಗಳನ್ನು ಇಲ್ಲಿ ನಿರಾಯಸವಾಗಿ ಕೊಂಡು ಆಸ್ವಾದಿಸಬಹುದು.

ಚಿತ್ರಕೃಪೆ

ಸುರಕ್ಷತೆ ಹಾಗು ನೈರ್ಮಲ್ಯ:

ಸುರಕ್ಷತೆ ಹಾಗು ನೈರ್ಮಲ್ಯ:

ಭಾರತದಲ್ಲಿ OHSAS 18001:2007 ಮಾನ್ಯತೆ ಪಡೆದಿರುವ ಎರಡೆ ಎರಡು ಮನರಂಜನಾ ಉದ್ಯಾನಗಳ ಪೈಕಿ ವಂಡರ್ಲಾ ಕೂಡ ಒಂದು. ಎಲ್ಲ ಬಗೆಯ ಸುರಕ್ಷತಾ ಕ್ರಮಗಳನ್ನು ಹೊಂದಿರುವ ಈ ಉದ್ಯಾನವು ಐದು ನೀರು ಶುದ್ಧಿಕರಣ ಘಟಕಳನ್ನು ಹೊಂದಿದೆ ಹಾಗು ಮಳೆ ನೀರು ಕೊಯ್ಲನ್ನು ಅಳವಡಿಸಿಕೊಂಡಿದೆ. ಇನ್ನೇನು ಭೇಟಿ ನೀಡಬೇಕಾ? ಈ ಕೊಂಡಿಯನ್ನು ಉಪಯೋಗಿಸಿ.

ಚಿತ್ರಕೃಪೆ: Avoided blue

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X