Search
  • Follow NativePlanet
Share
» »ಅಕ್ಬರನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾದ ಸ್ಮಾರಕಗಳಿಗೆ ಒಮ್ಮೆ ಭೇಟಿ ನೀಡಿ

ಅಕ್ಬರನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾದ ಸ್ಮಾರಕಗಳಿಗೆ ಒಮ್ಮೆ ಭೇಟಿ ನೀಡಿ

By Manjula Balaraj Tantry

ಜಲಾಲ್ -ಉದ್ದಿನ್ ಅಕ್ಬರ್ ಮೊಘಲ್ ಆಳ್ವಿಕೆಯ ಪ್ರಸಿದ್ದ ಚಕ್ರವರ್ತಿಯಾಗಿದ್ದನು, ಅಕ್ಬರನು ಅನೇಕ ಯುದ್ದಗಳನ್ನು ಜಯಿಸಿ ತನ್ನ ಸಂಸ್ಥಾನದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದನು.ಅವರ ಆಳ್ವಿಕೆಯು ಬಹಳ ಮಹತ್ವದ್ದಾಗಿತ್ತು. ಇತಿಹಾಸದ ಪಠ್ಯಪುಸ್ತಕಗಳು ಈಗ ಅವರ ಕಥೆಗಳನ್ನು ಪ್ರಶಂಸಿಸುತ್ತಿವೆ, ಅವುಗಳಲ್ಲಿ ಅವನ ಕೆಲಸ ಮತ್ತು ಮುಖ್ಯವಾಗಿ ಅವರ ವಾಸ್ತುಶಿಲ್ಪಗಳು ಹೆಸರುವಾಸಿಯಾದುದಾಗಿದೆ.

ಅಕ್ಬರನ ಆಳ್ವಿಕೆಯ ಸಮಯದಲ್ಲಿ ಅವನ ಸಾಮ್ರಾಜ್ಯದಲ್ಲಿ ನಿರ್ಮಿಸಲ್ಪಟ್ಟ ಅದ್ಭುತವಾದ ಸ್ಮಾರಕಗಳನ್ನು ಮೊಘಲ್ ಶೈಲಿಯ ವಾಸ್ತುಶಿಲ್ಪ ಎಂದು ವರ್ಗೀಕರಿಸಲಾಗಿದೆ ಇವು ಅವನ ಆಳ್ವಿಕೆಯ ಕಾಲದ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ನಮಗೆ ತಿಳಿದಿರುವಂತೆ ಅಕ್ಬರನ ಮಗನಾದ ಶಹಜಹಾನ್ ನಿಂದ ನಿರ್ಮಿಸಲ್ಪಟ್ಟ ಬೆರಗು ಗೊಳಿಸುವಂತಿರುವ ತಾಜ್ ಮಹಲ್ ಒಂದು ಉತ್ತಮ ಉದಾಹರಣೆಗಳಲ್ಲೊಂದಾಗಿದೆ. ಈ ಲೇಖನವು ಅಕ್ಬರನ ಕಾಲದಲ್ಲಿ ನಿರ್ಮಾಣವಾದ ಬೆರಗುಗೊಳಿಸುವ ಕಲಾಕೃತಿಗಳಿಗೆ ಸಂಪೂರ್ಣವಾಗಿ ಸಮರ್ಪಿಸಲಾಗಿದೆ. ಅಕ್ಬರನ ಆಳ್ವಿಕೆಯಲ್ಲಿ ನಿರ್ಮಿಸಿದ ಸ್ಮಾರಕಗಳು ಇಲ್ಲಿವೆ.

ಆಗ್ರಾ ಕೋಟೆ

ಆಗ್ರಾ ಕೋಟೆ

PC: Unknown

ಮಹಾನಗರದ ಆಗ್ರಾ ಕೋಟೆಯು 1638 ರವರೆಗೆ ಮೊಘಲ್ ಚಕ್ರವರ್ತಿಗಳ ಮುಖ್ಯ ನಿವಾಸವಾಗಿತ್ತು. ಕೋಟೆಯ ಗೋಡೆಗಳ ಅದ್ಭುತವಾದ ವಾಸ್ತುಶಿಲ್ಪವು ಪ್ರಸಿದ್ದಿ ಪಡೆದಿದ್ದು ಈ ಕೋಟೆಯನ್ನು ಯುನೆಸ್ಕೊದ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು. ಈ ಕೋಟೆ ನಿರ್ಮಿಸುವಲ್ಲಿ ಅನೇಕ ರಾಜರುಗಳ ಶ್ರಮವಿದೆ. ಇಟ್ಟಿಗೆ ಮತ್ತು ಮರಳುಗಲ್ಲು ಬಳಸಿ ನಾಶವಾದ ಕೋಟೆಯನ್ನು ಅಕ್ಬರನು ಪುನರುಜ್ಜೀವನಗೊಳಿಸಿದನು.

ಬುಲಂದ್ ದರ್ವಾಜಾ

ಬುಲಂದ್ ದರ್ವಾಜಾ

PC: Kuntal Guharaja

ಗುಜರಾತ್ ವಿರುದ್ಧ ವಿಜಯದ ನೆನಪಿಗಾಗಿ, ಅಕ್ಬರ್ ಆಗ್ರಾದಿಂದ 43 ಕಿ.ಮೀ ದೂರದಲ್ಲಿ ಬುಲಂದ್ ದರ್ವಾಜಾವನ್ನು ನಿರ್ಮಿಸಿದರು. ಇದು ಅಕ್ಷರಶಃ ಅತ್ಯದ್ಭುತವಾದ ದ್ವಾರವಾಗಿದ್ದುಇದು ನಿಜವಾಗಿಯೂ ವಿಶ್ವದ ಅತೀ ಎತ್ತರದ ದ್ವಾರವೆಂದು ಗುರುತಿಸಬೇಕಾಗಿತ್ತು.

ಇದು ಅದ್ಬುತವಾದ ಮೊಘಲ್ ವಾಸ್ತು ಶೈಲಿಗೊಂದು ಉತ್ತಮ ಉದಾಹರಣೆಯಾಗಿದೆ. ಇದನ್ನು ಕೆಂಪು ಮತ್ತು ಬಫ್ ಮರಳು ಗಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು ಬಿಳಿ ಮತ್ತು ಕಪ್ಪು ಅಮೃತ ಶಿಲೆಗಳನ್ನು ಬಳಸಿ ಉತ್ತಮವಾಗಿ ಅಲಂಕರಿಸಲ್ಪಟ್ಟಿದೆ. .

ಮೊಘಲ್ ವಾಸ್ತುಶೈಲಿಯ ಈ ಅತ್ಯುತ್ತಮ ಉದಾಹರಣೆ ಕೆಂಪು ಮತ್ತು ಬಫ್ ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ಬಿಳಿ ಮತ್ತು ಕಪ್ಪು ಅಮೃತಶಿಲೆಯ ಮೂಲಕ ಉತ್ತಮವಾಗಿ ಅಲಂಕರಿಸಲ್ಪಟ್ಟಿದೆ. ಈ ಸುಂದರವಾದ ರಚನೆಯನ್ನು ಪೂರ್ಣಗೊಳಿಸಲು 12 ವರ್ಷಗಳು ಬೇಕಾಯಿತು ಎಂದು ಹೇಳಲಾಗುತ್ತದೆ.

ಮರಿಯಮ್-ಉಜ್-ಜಮಾನಿ

ಮರಿಯಮ್-ಉಜ್-ಜಮಾನಿ

PC: Sanyam Bahga

ಫತೇಪುರ್ ಸಿಕ್ರಿಯಲ್ಲಿರುವ ಈ ಬೆರಗುಗೊಳಿಸುವಂತಹ ಅರಮನೆಯು ಅಕ್ಬರನ ಮಡದಿಯಾದ ಮರಿಯಮ್ ನ ವಾಸಸ್ಥಾನವಾಗಿತ್ತು . ಇಡೀ ಫತೇ ಪುರ್ ಸಿಕ್ರಿಯು ಅಕ್ಬರನಿಂದ ನಿರ್ಮಿಸಲ್ಪಟ್ಟಿತ್ತು. ಈ ಅರಮನೆಯು ಸುಂದರವಾದ ತೋಟಗಳಿಂದ ಸುತ್ತುವರಿಯಲ್ಪಟ್ಟಿದೆ ಮತ್ತು ಈ ಅರಮನೆಯ ನಿರ್ಮಾಣದ ವೇಳೆ ಕೆಂಪು ಮರಳುಗಲ್ಲುಗಳ ಬಳಕೆಯಿಂದಾಗಿ ಕೆಂಪುವರ್ಣದಿಂದ ಕೂಡಿದುದಾಗಿದೆ. .

ಅಕ್ಬರನ ಪ್ರೀತಿಯ ಹೆಂಡತಿಯಾದ ಜೋಧಾ ಬಾಯಿಗಾಗಿ ಅರಮನೆಯನ್ನು ನಿರ್ಮಿಸಲಾಗಿದೆ ಎಂದು ಮತ್ತೊಂದು ಕಥೆ ಹೇಳುತ್ತದೆ. ಇದನ್ನು ಹೆಚ್ಚಾಗಿ ಜೋಧಾಬಾಯಿಯ ಅರಮನೆಯೆಂದೂ ಗುರುತಿಸಲ್ಪಟ್ಟಿದೆ. ಈ ಅರಮನೆಯ ಸಮೀಪದಲ್ಲಿ ಕೃಷ್ಣ ದೇವರ ಸುಂದರವಾದ ಕಲಾಕೃತಿಯ ವರ್ಣಚಿತ್ರವಿದೆ.

ಅಕ್ಬರನ ಸಮಾಧಿ

ಅಕ್ಬರನ ಸಮಾಧಿ

PC: Jorge Lascar

ಈ ಸಮಾಧಿಯ ನಿರ್ಮಾಣವು ಅಕ್ಬರನ ಮಗನಾದ ಜಹಾಂಗೀರನಿಂದ ಪೂರ್ಣಗೊಳಿಸಲ್ಪಟ್ಟರೂ ಈ ಸಮಾಧಿಗೆ ಸೂಕ್ತ ಸ್ಥಳ ಹಾಗೂ ಅದರ ನಿರ್ಮಾಣವನ್ನು ಅಕ್ಬರ ತಾನೇ ಸ್ವತಃ ಯೋಜಿಸಿದನು ಎಂದು ಹೇಳಲಾಗುತ್ತದೆ.

ಇದು ಆಗ್ರಾದ ಉಪನಗರವಾದ ಸಿಕಂದ್ರಾದಲ್ಲಿದೆ. ಇದು ಮೊಘಲ್ ಸಾಮ್ರಾಜ್ಯದ ವಾಸ್ತುಶಿಲ್ಪದ ಮೇರುಕೃತಿಯಾಗಿದೆ. ಸಮಾಧಿಯು ನಾಲ್ಕು ಹಂತಗಳಿಂದ ಮಾಡಿದ ಒಂದು ಪಿರಮಿಡ್ ಮಾದರಿಯಾಗಿದ್ದು ಇದನ್ನು ಕೆಂಪು ಮರಳುಗಲ್ಲು ಮತ್ತು ಬಿಳಿ ಅಮೃತಶಿಲೆಗಳಿಂದ ನಿರ್ಮಿಸಲಾಗಿದೆ.

ಅಕ್ಬರನ ಸಮಾಧಿಯು ಒಂದು ಭೇಟಿ ನೀಡಲೇ ಬೇಕಾದ ಸ್ಥಳವಾಗಿದ್ದು ಇದರ ಮೇಲ್ಚಾವಣಿ ಮತ್ತು ಬಾಗಿಲು ಗಳಲ್ಲಿ ಕೆತ್ತಲ್ಪಟ್ಟ ಕೆತ್ತನೆಗಳು ಮತ್ತು ವರ್ಣಚಿತ್ರಗಳು ಈ ಇಡೀ ಸಂಕೀರ್ಣದ ವಿವರಣೆ ನೀಡುತ್ತದೆ. ಔರಂಗಜೇಬನ ಆಳ್ವಿಕೆಯಲ್ಲಿ ಜಾಟ್ಸನಿಂದ ಹೊಡೆತಗೊಳಗಾಗಿ ಅವನಿಂದ ಸಮಾಧಿಯ ಎಲ್ಲಾ ಆಭರಣಗಳು ಮತ್ತು ಸಂಪತ್ತು ಮತ್ತು ಶ್ರೀಮಂತಿಕೆಗಳು ಲೂಟಿಗೊಳಗಾಯಿತು.

ಅಲ್ಲಾಹಾಬಾದ್ ಕೋಟೆ

ಅಲ್ಲಾಹಾಬಾದ್ ಕೋಟೆ

PC: Anupamg

ಅಲ್ಲಾಹಾಬಾದ್ ನ ಕೋಟೆಯು ಯಮುನಾ ನದಿಯ ತಟದಲ್ಲಿದೆ. ಮತ್ತು ಇದು ಗಂಗಾ ನದಿಯನ್ನು ಸೇರುವ ಸ್ಥಳವಾಗಿದೆ. 1583ರಲ್ಲಿ ಅಕ್ಬರ್ ನಿರ್ಮಿಸಿದ ಕೋಟೆಯು ಭವ್ಯವಾದ ಎತ್ತರದ ಗೋಪುರಗಳು ಮತ್ತು ಕೋಟೆಯಲ್ಲಿ ಸುಂದರವಾದ ಗ್ಯಾಲರಿಗಳನ್ನು ಹೊಂದಿದೆ. ಇತ್ತೀಚೆಗೆ ಈ ಕೋಟೆಯ ಒಂದು ಭಾಗ ಮಾತ್ರ ಪ್ರವಾಸಿಗರ ಭೇಟಿಗೆ ಅನುವು ಮಾಡಿಕೊಡಲಾಗಿದೆ. ಉಳಿದ ಭಾಗ ಸೈನ್ಯದ ಉಸ್ತುವಾರಿಯಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X