Search
  • Follow NativePlanet
Share
» »ಈ ಕೆಲವು ಸ್ಥಳಗಳು ಸೌಂದರ್ಯತೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ ಇಲ್ಲಿಯ ರೋಮಾಂಚಕಾರಿ ಸಂಸ್ಕೃತಿಗೂ ಸಾಕ್ಷಿಯಾಗಿದೆ

ಈ ಕೆಲವು ಸ್ಥಳಗಳು ಸೌಂದರ್ಯತೆಗೆ ಸಾಕ್ಷಿಯಾಗುವುದು ಮಾತ್ರವಲ್ಲದೆ ಇಲ್ಲಿಯ ರೋಮಾಂಚಕಾರಿ ಸಂಸ್ಕೃತಿಗೂ ಸಾಕ್ಷಿಯಾಗಿದೆ

ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸಂಸ್ಕೃತಿಗಳಿಗೆ ಕನ್ನಡಿಯಾಗಿರುವ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರವಾಗಿದೆ. ಇಲ್ಲಿನ ಜೀವನ ಶೈಲಿಗಳು ಹಾವ ಭಾವಗಳ ರೀತಿ ಇತ್ಯಾದಿಗಳು ನಿಜವಾಗಿಯೂ ಕುತೂಹಲಕಾರಿ ಮತ್ತು ಪರಿವರ್ತನಾಕಾರಿಯಾದುದಾಗಿದೆ. ಇಲ

By Manjula Balaraj Tantry

ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸಂಸ್ಕೃತಿಗಳಿಗೆ ಕನ್ನಡಿಯಾಗಿರುವ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರವಾಗಿದೆ. ಇಲ್ಲಿನ ಜೀವನ ಶೈಲಿಗಳು ಹಾವ ಭಾವಗಳ ರೀತಿ ಇತ್ಯಾದಿಗಳು ನಿಜವಾಗಿಯೂ ಕುತೂಹಲಕಾರಿ ಮತ್ತು ಪರಿವರ್ತನಾಕಾರಿಯಾದುದಾಗಿದೆ. ಇಲ್ಲಿ ಕೆಲವು ಅಂತಹ ಜಾಗಗಳು ಇದ್ದು ಇವು ತಮ್ಮೊಳಗೆ ಸೆಳೆಯುವುದು ಮಾತ್ರವಲ್ಲದೆ ಇದು ನಿಮ್ಮನ್ನು ಅವುಗಳ ಹೃದಯದಲ್ಲಿರುವ ಸಂಸ್ಕೃತಿಗಳೊಳಗೆ ನಿಮ್ಮನ್ನು ಕರೆದೊಯ್ಯುತ್ತದೆ.

ದಕ್ಷಿಣದಿಂದ ಉತ್ತರದ ತುತ್ತ ತುದಿಯವರೆಗೆ ಭಾರತವು ಕೆಲವು ವಿಶಿಷ್ಟವಾದ ಮತ್ತು ಆಕರ್ಷಕ ಸಂಸ್ಕೃತಿಗಳಿಗೆ ಕನ್ನಡಿಯಾಗಿರುವ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರವಾಗಿದೆ. ಇಲ್ಲಿನ ಜೀವನ ಶೈಲಿಗಳು ಹಾವ ಭಾವಗಳ ರೀತಿ ಇತ್ಯಾದಿಗಳು ನಿಜವಾಗಿಯೂ ಕುತೂಹಲಕಾರಿ ಮತ್ತು ಪರಿವರ್ತನಾಕಾರಿಯಾದುದಾಗಿದೆ.ಇಲ್ಲಿ ಕೆಲವು ಅಂತಹ ಜಾಗಗಳು ಇದ್ದು ಇವು ತಮ್ಮೊಳಗೆ ಸೆಳೆಯುವುದು ಮಾತ್ರವಲ್ಲದೆ ಇದು ನಿಮ್ಮನ್ನು ಅವುಗಳ ಹೃದಯದಲ್ಲಿರುವ ಸಂಸ್ಕೃತಿಗಳೊಳಗೆ ನಿಮ್ಮನ್ನು ಕರೆದೊಯ್ಯುತ್ತದೆ.

ಇಂತಹ ಸ್ಥಳಗಳ ಭೇಟಿಯು ಕೇವಲ ದೈಹಿಕವಾದ ಭೇಟಿ ಮಾತ್ರವಾಗಿರದೆ ಇದೊಂದು ನಿಮ್ಮನ್ನು ಒಂದು ವಿಭಿನ್ನ ಮಾರ್ಗದಲ್ಲಿ ನಿಮ್ಮನ್ನು ಪರಿವರ್ತನೆ ಮಾಡುವಂತಹ ಮತ್ತು ಸೆಳೆಯುವಂತೆ ಮಾಡುವುದಾಗಿರುತ್ತದೆ.

ಮೈಸೂರು

ಮೈಸೂರು

ಬೆಂಗಳೂರು ಐಟಿ ಉದ್ಯಮಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರೂ ಇದರ ಹತ್ತಿರವಿರುವ ಪಾರಂಪರಿಕ ನಗರವಾದ ಮೈಸೂರು ತನ್ನ ಪರಂಪರೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಮೈಸೂರು ಅರಮನೆ ಒಂದು ಖಂಡಿತವಾಗಿಯೂ ಪ್ರೇಕ್ಷಣೀಯ ಸ್ಥಳವಾಗಿದೆ ಮತ್ತು ಇಲ್ಲಿರುವ ಸುಂದರವಾದ ಜಗನ್ಮೋಹನ ಅರಮನೆಯೂ ಕೂಡಾ ತಪ್ಪದೆ ನೋಡಬೇಕಾದ ಸ್ಥಳವಾಗಿದೆ. ಇದು ಈಗ ಕಲಾ ಗ್ಯಾಲರಿಯಾಗಿ ಮಾರ್ಪಟ್ಟಿದೆ ಇದು ಭೇಟಿ ಮಾಡಲೇ ಬೇಕಾದ ಸ್ಥಳವಾಗಿದೆ.

ಈ ನಗರವು ಅನೇಕ ಸಂಖ್ಯೆಯ ಅರಮನೆಗಳು, ತೋಟಗಳು, ಕೊಳಗಳು, ಮತ್ತು ದೇವಾಲಯಗಳಿಗೆ ನೆಲೆಯಾಗಿದೆ ಇವುಗಳನ್ನು ಭೇಟಿ ಮಾಡಲು ಮರೆಯದಿರಿ.

PC: Deepak.bhupendra

ಅಹಮ್ಮದಾಬಾದ್

ಅಹಮ್ಮದಾಬಾದ್

ಭಾರತದ ಸಾಂಸ್ಕೃತಿಕ ನಗರಗಳ ಪಟ್ಟಿಯಲ್ಲಿ ಅಹಮ್ಮದಾಬಾದ್ ಗೆ ಸ್ಥಳವಿಲ್ಲವೆಂದರೆ ಅದು ಖಂಡಿತವಾಗಿಯೂ ತಪ್ಪೇ ಎನ್ನಬಹುದು. ಈ ನಗರದ ಸುತ್ತ ಒಂದು ನಡಿಗೆ ಹೊರಟರೆ ಇಲ್ಲಿ ಅನೇಕ ಸಂಖ್ಯೆಯಲ್ಲಿ ಹವೇಲಿಗಳು ಮತ್ತು ಇತರ ಸ್ಮಾರಕಗಳು ಕಾಣಸಿಗುತ್ತವೆ ಇವುಗಳಿಗೆ ಭೇಟಿ ನೀಡಲೇ ಬೇಕಾದವುಗಳು.

ಆದರೆ ನಿಲ್ಲಿ! ಇಲ್ಲಿ ಇನ್ನೂ ಅನೇಕ ನೋಡಬೇಕಾದ ಸ್ಥಳಗಳಿವೆ. ಅವುಗಳಲ್ಲಿ ಕ್ಯಾಲಿಕೊ ವಸ್ತುಸಂಗ್ರಹಾಲಯ, ಮೊಧೇರದಲ್ಲಿನ ಸೂರ್ಯ ದೇವಾಲಯ ಮತ್ತು ಪಟಾನ್ನ ಪ್ರಾಚೀನ ಸ್ಟೆಪ್ ವೆಲ್ ಇತ್ಯಾದಿ ಪ್ರಮುಖವಾದುದು.

PC: Aishwarya Dwivedi

ಕೊಚ್ಚಿ ಬಂದರು

ಕೊಚ್ಚಿ ಬಂದರು

ಸಂಸ್ಕೃತಿ ಪ್ರಿಯರಿಗೆ ಕೇರಳವು ಹೆಚ್ಚಿನದನ್ನೇ ಕೊಡುತ್ತದೆ. ಕೊಚ್ಚಿ ಬಂದರು ಒಂದು ವಿಭಿನ್ನ ಕೊಡುಗೆಯನ್ನು ನೀಡುತ್ತದೆ. ಈ ಸ್ಥಳವು ಪಾಶ್ಚಿಮಾತ್ಯಗಳ ಪ್ರಭಾವಗಳ ಸಂಗಮವನ್ನು ಸ್ಥಳೀಯ ಅಂಶಗಳೊಂದಿಗೆ ಪ್ರದರ್ಶಿಸುತ್ತದೆ;ಪಟ್ಟಣದ ಸಾಂಸ್ಕೃತಿಕ ವಾತಾವರಣ ತುಂಬಾ ಶಾಂತವಾಗಿದೆ ಆದರೆ ಅದೇ ಸಮಯದಲ್ಲಿ ಶ್ರೀಮಂತವಾಗಿದೆ.

ಹತ್ತಿರದ ಜ್ಯೂ ಪಟ್ಟಣವು ಭೇಟಿಗೆ ಯೋಗ್ಯವಾಗಿದ್ದು ಇದರೊಂದಿಗೆ ಹತ್ತಿರದ ಮಾರುಕಟ್ಟೆಯೂ ಕೂಡಾ ಭೇಟಿ ಮಾಡಲು ಯೋಗ್ಯವಾದ ಸ್ಥಳವಾಗಿದೆ . ಇಲ್ಲಿ ಪ್ರಾಚೀನ ವಸ್ತುಗಳಿಂದ ಹಿಡಿದು ಮಸಾಲೆಗಳವರೆಗೆ ಮಾರಾಟ ಮಾಡಲಾಗುತ್ತದೆ. ಇಲ್ಲಿಯ ಕಡಲ ತೀರಗಳಲ್ಲಿ ಚೈನಾದ ಮೀನು ಹಿಡಿಯುವ ಬಲೆಗಳನ್ನು ಕಾಣಬಹುದು ಇದು ಕಡಲತೀರವನ್ನು ಸುತ್ತಿದಂತೆ ಕಂಡುಬರುತ್ತದೆ.

PC: Shinuts

ಕೋಲ್ಕತ್ತಾ

ಕೋಲ್ಕತ್ತಾ

ಇದನ್ನು ಪ್ರೀತಿಯಿಂದ ಸಂತೋಷದ ನಗರವೆಂದು ಕರೆಯುತ್ತಾರೆ. ಇದು ಅತ್ಯಂತ ಶ್ರೀಮಂತ ಆಧುನಿಕ ಇತಿಹಾಸವನ್ನು ಹೊಂದಿರುವ ನಗರವೂ ​​ಹೌದು. ಕೊಲ್ಕತ್ತಾವು ವಿಕ್ಟೋರಿಯಾ ಮೆಮೋರಿಯಲ್, ಸೇಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಆಕರ್ಷಕ ರೈಟರ್ಸ್ ಕಟ್ಟಡಕ್ಕೆ ನೆಲೆಯಾಗಿದೆ.

ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿ ಫ್ರೆಂಚ್ ಕಾಲೊನಿಯಾದ ಚಂದನ್ನಗರ್ ಕಾಣಸಿಗುತ್ತದೆ. ಇಲ್ಲಿ ನಿಮ್ಮ ಕಣ್ಣೆದುರಿಗಿಗೆ ಸುಂದರವಾದ ಒಂದು ರಿವರ್ಸೈಡ್ ಸ್ಟ್ರಾಂಡ್ ಮತ್ತು ಉತ್ತಮ ವಾಸ್ತುಶಿಲ್ಪ. ಹೊಂದಿರುವ ಸ್ಮಾರಕಗಳು ಕಾಣಸಿಗುತ್ತದೆ


PC: shantanukashyap

ವಾರಣಾಸಿ

ವಾರಣಾಸಿ

ವಾರಣಾಸಿಯು ಪ್ರವಾಸಿಗರ ಪ್ರವಾಸ ಪಟ್ಟಿಯಲ್ಲಿ ತನ್ನ ಜಾಗವನ್ನು ಕಂಡುಕೊಂಡ ನಗರವಾಗಿದೆ. ಇಲ್ಲಿಯ ಎಲ್ಲಾ ಕ್ರೆಡಿಟ್ ನಾಗಾಸಾಧುಗಳಿಗೆ ಸಲ್ಲುತ್ತದೆ. ಇಲ್ಲಿ ಅಸಂಖ್ಯಾತ ದೇವಾಲಯಗಳು, ವರ್ಣಮಯವಾದ ಮಾರುಕಟ್ಟೆಗಳು ಮತ್ತು ಗಂಗಾ ನದಿ ಸುತ್ತಲಿರುವ ಘಟ್ಟಗಳು ಇತ್ಯಾದಿಗಳು ಯಾತ್ರಿಗಳು ಮತ್ತು ಪ್ರವಾಸಿಗಳಿಂದ ತುಂಬಿದೆ.

ಗಂಗಾದ ಪವಿತ್ರ ನೀರಿನಲ್ಲಿ ಬೋಟ್ ಸವಾರಿಗಾಗಿ ಹೋಗಿ ಪಟ್ಟಣದ ಕಿರಿದಾದ ಕಾಲುದಾರಿಗಳ ಮೂಲಕ ನಿಮ್ಮ ದಾರಿ ಮಾಡಿಕೊಳ್ಳುವುದರ ಮೂಲಕ ನಿಮ್ಮ ಸಮಯ ಕಳೆಯಿರಿ.

PC: Unknown

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X