Search
  • Follow NativePlanet
Share
» »ಚಳಿಗಾಲದ ರೋಡ್ ಟ್ರಿಪ್‌ಗೆ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ದರೆ ಈ ಸ್ಥಳಗಳನ್ನು ಮಿಸ್ ಮಾಡಲೇಬೇಡಿ

ಚಳಿಗಾಲದ ರೋಡ್ ಟ್ರಿಪ್‌ಗೆ ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ದರೆ ಈ ಸ್ಥಳಗಳನ್ನು ಮಿಸ್ ಮಾಡಲೇಬೇಡಿ

ಭಾರತ ವಿಶಾಲ ಮತ್ತು ವೈವಿಧ್ಯಮಯ ದೇಶ. ಭೌಗೋಳಿಕ ದೃಷ್ಟಿಯಿಂದ ಭಾರತ ಹವಾಮಾನದಿಂದ ಸ್ಥಳಾಕೃತಿಯವರೆಗೆ ಪ್ರತಿಯೊಂದು ಕಲ್ಪನೆಯಲ್ಲೂ ಬದಲಾಗುತ್ತ ಹೋಗುತ್ತದೆ. ಹಿಮಭರಿತ ಬೆಟ್ಟಗಳು, ಹೆದ್ದಾರಿಗಳು ಮತ್ತು ಬಯಲು ಪ್ರದೇಶಗಳ ಸೌಂದರ್ಯವನ್ನು ಸವಿಯಲು ರಸ್ತೆ ಪ್ರವಾಸವು ಉತ್ತಮ ಮಾರ್ಗವಾಗಿದೆ. ನೀವು ಆಶ್ಚರ್ಯ ಪಡುತ್ತಿರಬಹುದು; ಇದು ಚಳಿಗಾಲದ ಸಮಯ, ರಸ್ತೆ ಪ್ರವಾಸಕ್ಕೆ ಹೋಗಲು ಸೂಕ್ತವಲ್ಲ ಬೇಸಿಗೆ ಕಾಲ ಮಾತ್ರ ಸೂಕ್ತ ಎಂದು ಆದರೆ ಕುಟುಂಬದೊಂದಿಗೆ ಪ್ರಯಾಣಿಸುವಾಗ ಬೇಸಿಗೆ ಯಾವಾಗಲೂ ಅನುಕೂಲಕರವಾಗಿರುವುದಿಲ್ಲ. ಚಳಿಗಾಲವು ಅಸಾಂಪ್ರದಾಯಿಕವಾಗಿದ್ದರೂ, ಪ್ರಕೃತಿಯನ್ನು ನೀವು ನಿಜವಾಗಿಯೂ ಅನುಭವಿಸಲು ಇದು ಸೂಕ್ತ ಕಾಲ. ಚಳಿಗಾಲದಲ್ಲಿ ಭಾರತದ ಅತ್ಯುತ್ತಮ ರಸ್ತೆ ಪ್ರಯಾಣಗಳನ್ನು ಎಂಜಾಯ್ ಮಾಡಲು ಈ ಕೆಳಗಿನ ರೋಡ್ ಟ್ರಿಪ್ ಗಳನ್ನ ಕೈಗೊಳ್ಳಿ.

1.ನರ್ಕಂದಾ ಟು ಸಾಂಗ್ಲಾ

1.ನರ್ಕಂದಾ ಟು ಸಾಂಗ್ಲಾ

ನರ್ಕಂದದಿಂದ ಸಾಂಗ್ಲಾ ಭಾರತದಲ್ಲಿ ಕಡಿಮೆ ಜನರು ಬಳಸುವ ರಸ್ತೆಗಳಲ್ಲಿ ಒಂದಾಗಿದೆ. ಈ ರಸ್ತೆಮಾರ್ಗದ ಕೆಲವು ಭಾಗಗಳು ಪಾರದರ್ಶಕ ಮಂಜುಗಡ್ಡೆಯಿಂದ ಆವೃತವಾಗಿದ್ದರೂ, ನೀಲಿ ಆಕಾಶಗಳು, ಹಿಮ ತುಂಬಿದ ಪರ್ವತಗಳ ನೋಟವು ನಿಮ್ಮ ಪ್ರವಾಸವನ್ನು ಮೌಲ್ಯಯುತವಾಗಿಸುತ್ತದೆ! ಹಿಮ ಕಾಲವು ಅಕ್ಟೋಬರ್‌ನಿಂದ ಪ್ರಾರಂಭವಾಗುತ್ತದೆ. ಮತ್ತು ರಸ್ತೆಗಳು ವರ್ಷಪೂರ್ತಿ ತೆರೆದಿರುತ್ತವೆ, ನೀವು ಪ್ರಕೃತಿ ಪ್ರೇಮಿಯಾಗಿದ್ದರೆ, ಭಾರತದಲ್ಲಿ ಈ ಆಕರ್ಷಕ ಚಳಿಗಾಲದ ರಸ್ತೆ ಪ್ರವಾಸವನ್ನು ಮಿಸ್ ಮಾಡ್ಕೋಬೇಡಿ.

2. ಶಿಮ್ಲಾ ದಿಂದ ಕಲ್ಕಾ

2. ಶಿಮ್ಲಾ ದಿಂದ ಕಲ್ಕಾ

ಮಧುಚಂದ್ರದವರ ಸ್ವರ್ಗ ಎಂದು ಪ್ರಸಿದ್ಧವಾಗಿರುವ ಶಿಮ್ಲಾ ಅನೇಕ ಅದ್ಭುತಗಳ ನೆಲವಾಗಿದೆ. ಶಿಮ್ಲಾದಿಂದ ಕಲ್ಕಾಗೆ ಕೇವಲ 70 ಕಿ.ಮೀ ದೂರದಲ್ಲಿದೆ, ಆದಾಗ್ಯೂ, ಮರಗಳಿಂದ ಕೂಡಿದ ಪರ್ವತಗಳು ಮತ್ತು ಭೂದೃಶ್ಯಗಳು ನಿಮ್ಮನ್ನು ಬೆರಗುಗೊಳಿಸುತ್ತದೆ ಈ ರಸ್ತೆ ಮಾರ್ಗವು ಪ್ರಕೃತಿಯ ಅತ್ಯುತ್ತಮ ಕಲಾಕೃತಿಗಳನ್ನು ಪ್ರದರ್ಶಿಸುವ ಖ್ಯಾತಿಯನ್ನು ಗಳಿಸಿದೆ. ಸಾಟಿಯಿಲ್ಲದ ಪರ್ವತ ಶ್ರೇಣಿಗಳಿಂದ ಹಿಡಿದು ಪರ್ವತಗಳ ಮೂಲಕ ಶಿಮ್ಲಾದ ಉದ್ದಕ್ಕೂ ಕಲ್ಕಾಕ್ಕೆ ರಸ್ತೆ ಪ್ರಯಾಣವು ಭಾರತದ ಅತ್ಯುತ್ತಮ ಚಳಿಗಾಲದ ರಸ್ತೆ ಪ್ರಯಾಣದ ಅನುಭವವನ್ನು ನೀಡುತ್ತದೆ.

3. ಶ್ರೀನಗರದಿಂದ ಜವಾಹರ್

3. ಶ್ರೀನಗರದಿಂದ ಜವಾಹರ್

ಶ್ರೀನಗರ ದಿಂದ ಜವಾಹರ್ ಇತರ ರಸ್ತೆಮಾರ್ಗಗಳಿಗಿಂತ ಭಿನ್ನವಾಗಿದ್ದು, ಚಳಿಗಾಲದ ರಸ್ತೆ ಪ್ರವಾಸವು ಭಾರತದ ಅತ್ಯುತ್ತಮ ಸುರಂಗಮಾರ್ಗಗಳಲ್ಲಿ ಒಂದಾಗಿದೆ. ಹಿಮದಿಂದ ಆವೃತವಾದ ಪರ್ವತಗಳು ಮತ್ತು ಅರಣ್ಯದ ಹೊರತಾಗಿ, ಸುರಂಗದ ಮೂಲಕ ಸವಾರಿ ಮಾಡುವುದು ಭಾರತದಲ್ಲಿ ಚಳಿಗಾಲದ ವಿಶಿಷ್ಟ ರಸ್ತೆ ಪ್ರಯಾಣವನ್ನು ಮಾಡುತ್ತದೆ. ಮತ್ತು ಚಳಿಗಾಲದ ಪ್ರಾರಂಭವಾದಾಗ ಈ ಮಾರ್ಗವು ಸ್ವರ್ಗದಂತೆ ಮಾರ್ಪಾಡಾಗಿ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.

4. ಸೋನಮಾರ್ಗ್ ನಿಂದ ಗುಲ್ಮಾರ್ಗ್

4. ಸೋನಮಾರ್ಗ್ ನಿಂದ ಗುಲ್ಮಾರ್ಗ್

ಹಿಮಾಚಲದ ದೊಡ್ಡ ಮಂಜುಗಡ್ಡೆಯ ಪರ್ವತಗಳ ಮಧ್ಯೆ ನೀವು ವಿಸ್ಮಯಕಾರಿ ಸೌಂದರ್ಯವನ್ನು ಅನುಭವಿಸದಿದ್ದರೆ, ಚಳಿಗಾಲದ ಅನುಭವದ ನೀವು ಕಳೆದುಕೊಂಡಿದ್ದೀರಿ ಎಂದೇ ಅರ್ಥ. ಸೋನಮಾರ್ಗ್‌ನಿಂದ ಗುಲ್‌ಮಾರ್ಗ್‌ಗೆ ರಸ್ತೆ ಪ್ರಯಾಣವು ಮಂಜು ಮುಸುಕಿದ ಪರ್ವತಗಳು, ಹಚ್ಚ ಹಸಿರಿನ ತೇಪೆಗಳು ಮತ್ತು ಬಿಳಿ ಭೂದೃಶ್ಯಗಳು ನಿಮ್ಮನ್ನು ಬೆರಗುಗೊಳಿಸುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ನೀವು ತೆಗೆದುಕೊಳ್ಳಲೇಬೇಕಾದ ಭಾರತೀಯ ರಸ್ತೆ ಪ್ರಯಾಣಗಳಲ್ಲಿ ಇದು ಒಂದು.

5. ಗುವಾಹಟಿ ಟು ತವಾಂಗ್

5. ಗುವಾಹಟಿ ಟು ತವಾಂಗ್

500 ಕಿ.ಮೀ ಉದ್ದಕ್ಕೂ ಗುಹಾವತಿಯಿಂದ ತವಾಂಗ್ ವರೆಗೆ ವ್ಯಾಪಿಸಿರುವ ರಸ್ತೆ ಮಾರ್ಗವು ಭಾರತದ ಚಳಿಗಾಲದ ಅತ್ಯುತ್ತಮ ರಸ್ತೆ ಪ್ರಯಾಣವಾಗಿದೆ. ಈ ರಸ್ತೆಮಾರ್ಗವು ಹಿಮದಿಂದ ಕಂಬಳಿ ಹೊದಿಸಿದಂತೆ ಕಾಣುತ್ತದೆ. ಇಲ್ಲಿ ಅತಿ ಕಡಿಮೆ ಜನ ಪ್ರಯಾಣಿಸುವ ಕಾರಣ ತುಂಬಾ ಎಚ್ಚರಿಕೆಯಿಂದ ಪ್ಲಾನ್ ಮಾಡ್ಕೊಂಡ್ ಸೂಕ್ತವಾದ ವಾಹನವನ್ನು ಬಳಸಿಕೊಂಡು ಪ್ರಯಾಣಿಸಬೇಕಾಗುತ್ತದೆ. ಭೂದೃಶ್ಯಗಳು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಅರಣ್ಯದ ಉದ್ದದ ವಿಸ್ತಾರವಾದ ನೋಟವು ರಸ್ತೆ ಪ್ರವಾಸದಲ್ಲಿ ಸವಾರನು ನಿರೀಕ್ಷಿಸುವ ಅತ್ಯುತ್ತಮ ಚಳಿಗಾಲದ ಭಾವನೆಯನ್ನು ನೀಡುತ್ತದೆ.

6. ಪೆಲ್ಲಿಂಗ್‌ನಿಂದ ಡಾರ್ಜಿಲಿಂಗ್‌ಗೆ

6. ಪೆಲ್ಲಿಂಗ್‌ನಿಂದ ಡಾರ್ಜಿಲಿಂಗ್‌ಗೆ

ಟಿಕೆ ರೈಲು ಸವಾರಿಗಳಿಂದ ಸೈಕ್ಲಿಂಗ್‌ವರೆಗೆ, ಈ ಸ್ವಚ್ಛ ಚಳಿಗಾಲದ ರಸ್ತೆ ಮಾರ್ಗವು ಯಾವುದೇ ರೀತಿಯ ಸಾರಿಗೆ ವಾಹನಗಳಿಗೆ ಮುಕ್ತವಾಗಿದೆ. ಈಶಾನ್ಯದ ಹಿಮಭರಿತ ಪರ್ವತ ಶ್ರೇಣಿಗಳ ಮಧ್ಯೆ ಏಕಾಂತವಾಗಿರುವ ಈ ಅದ್ಭುತ ಮಾರ್ಗವು ತನ್ನದೇ ಆದ ರೀತಿಯಲ್ಲಿ ಸೊಗಸಾಗಿದ್ದು ಮತ್ತು ಆಕರ್ಷಕವಾಗಿದೆ! ಚಳಿಗಾಲದ ಸಮಯದಲ್ಲಿ, ಪ್ರಯಾಣಿಕರು ಮತ್ತು ಪ್ರವಾಸಿಗರು ಹಿಮದಿಂದ ಆವೃತವಾಗಿರುವ ವಿಹಂಗಮ ಭೂದೃಶ್ಯದ ನೋಟವನ್ನು ಪಡೆಯಬಹುದು. ಆದ್ದರಿಂದ, ಪೆಲ್ಲಿಂಗ್ ಮತ್ತು ಡಾರ್ಜಿಲಿಂಗ್ ನಡುವಿನ ರಸ್ತೆ ಮಾರ್ಗವು ಚಳಿಗಾಲದಲ್ಲಿ ತೆಗೆದುಕೊಳ್ಳಬೇಕಾದ ಅತ್ಯುತ್ತಮ ಭಾರತದ ರಸ್ತೆ ಪ್ರವಾಸಗಳಲ್ಲಿ ಒಂದಾಗಿದೆ.

7. ಗ್ಯಾಂಗ್ಟಾಕ್ ಟು ಜುಲುಕ್

7. ಗ್ಯಾಂಗ್ಟಾಕ್ ಟು ಜುಲುಕ್

ಈ ಮಾರ್ಗವು ವಿಶೇಷವಾಗಿ ಚಳಿಗಾಲದಲ್ಲಿ ಪ್ರಯಾಣಿಸಲು ಸೂಕ್ತವಾಗಿದೆ, ಏಕೆಂದರೆ ಇದು ಪ್ರಕೃತಿಯ ಅತ್ಯುತ್ತಮ ನೋಟವನ್ನು ಹೊಂದಿದೆ. ಈ ಹಿಮ ರಸ್ತೆ ಮಾರ್ಗವು ಕಡಿಮೆ ಜನದಟ್ಟಣೆ ಇರುವುದರಿಂದ ಇಲ್ಲಿಗೆ ಭೇಟಿ ನೀಡುವುದು ಹೆಚ್ಚು ಸ್ಮರಣೀಯವಾಗಿರುತ್ತದೆ. ಚಳಿಗಾಲದ ಈ ರಸ್ತೆ ಪ್ರವಾಸದ ಸಮಯದಲ್ಲಿ, ಹಿಮದಿಂದ ಆವೃತವಾದ ಕಣಿವೆಗಳು, ಹೆಪ್ಪುಗಟ್ಟಿದ ಸರೋವರಗಳು, ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿದ ವಿಶಾಲವಾದ ಅರಣ್ಯವನ್ನು ನೀವು ವೀಕ್ಷಿಸಬಹುದು.

8. ಮನಾಲಿ ಟು ಲೇಹ್

8. ಮನಾಲಿ ಟು ಲೇಹ್

ಈ ಪ್ರದೇಶವು ದೊಡ್ಡ ಹಿಮಾಲಯಗಲ ಮಧ್ಯೆ ಸುಮಾರು 16,600 ಅಡಿ ಎತ್ತರದಲ್ಲಿದೆ.ನೀವು ಡ್ರೈವ್ ಅಥವಾ ಸವಾರಿ ಮಾಡಲು ಇಷ್ಟಪಡುವಂತಿದ್ದರೆ ಈ ಸ್ಥಳ ನಿಮಗೆ ವಿಸ್ಮಯಕಾರಿ ಅನುಭವವನ್ನು ನೀಡುತ್ತದೆ. ಇದು ಭಾರತದಲ್ಲಿ ಪ್ರತ್ಯೇಕವಾಗಿ ಚಳಿಗಾಲದ ಸಮಯದಲ್ಲಿ ಹೆಚ್ಚು ಪ್ರಯಾಣಿಸುವ ರಸ್ತೆಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗವು ಅನೇಕ ಪ್ರವಾಸಿ ತಾಣಗಳಿಗೆ ಹೋಗುವ ಮಾರ್ಗಗಳಿಗೆ ಜೋಡಿಸ್ಪಟ್ಟಿದೆ . ಹಿಮದ ಹೊದಿಕೆ ಈ ಮಾರ್ಗವನ್ನು ನೈಸರ್ಗಿಕ ಅದ್ಭುತವಾಗಿ ಪರಿವರ್ತಿಸುತ್ತದೆ. ಇದು ಭಾರತದ ಅತ್ಯಂತ ಹೆಚ್ಚು ಇನ್‌ಸ್ಟಾಗ್ರಾಮ್ ಮತ್ತು ಫೋಟೋಗ್ರಪಿ ಮಾಡಿದ ರಸ್ತೆಮಾರ್ಗಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X