• Follow NativePlanet
Share
» »ನೀವು ಎಂದು ಕಂಡಿರದ ವನ್ಯಜೀವಿಗಳು ಎಲ್ಲೆಲ್ಲಿ ಇವೆ ಗೊತ್ತ?

ನೀವು ಎಂದು ಕಂಡಿರದ ವನ್ಯಜೀವಿಗಳು ಎಲ್ಲೆಲ್ಲಿ ಇವೆ ಗೊತ್ತ?

Written By:

ವನ್ಯಜೀವಿಗಳೆಂದರೆ ಎಲ್ಲರಿಗೂ ಒಂದು ರೀತಿಯ ಪ್ರೀತಿ ಇದ್ದರೆ ಇನ್ನೊಂದು ರೀತಿಯಲ್ಲಿ ಭಯವು ಆವರಿಸುತ್ತದೆ. ಹುಲಿ, ಸಿಂಹ, ಚಿರತೆ, ಆನೆ, ಹಲವಾರು ಬಗೆ ಬಗೆಯ ಪ್ರಾಣಿ-ಪಕ್ಷಿ ಸಂಕುಲಗಳನ್ನು ಒಮ್ಮೆ ಜೀವನದಲ್ಲಿ ನೇರವಾಗಿ ಕಾಣಬೇಕು ಎಂದು ಆಸೆ ಇರುವುದು ಸಾಮಾನ್ಯವಾದುದು.

ಇತ್ತೀಚೆಗೆ ನಮ್ಮ ದೇಶದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಹಾಗಾಗಿ ನಮ್ಮ ಭಾರತ ದೇಶ ಸರ್ಕಾರವು ಹಲವಾರು ವನ್ಯಜೀವಿ ಸಂಗ್ರಹಾಲಯವನ್ನು ಸ್ಥಾಪನೆ ಮಾಡಿದೆ. ಇಲ್ಲಿ ಹಲವಾರ ವನ್ಯಜೀವಿಗಳನ್ನು, ಪಕ್ಷಿಗಳನ್ನು, ಸರಿಸೃಪಗಳನ್ನು ಕಣ್ಣಾರೆ ಕಂಡು ಆನಂದಿಸಬಹುದಾಗಿದೆ.

ಅಪರೂಪದ ಪ್ರಾಣಿಗಳನ್ನು ಕೆಲವು ವನ್ಯ ಜೀವಿ ಸಂಗ್ರಾಹಲಯದಲ್ಲಿ ಮಾತ್ರ ಕಾಣಲು ಸಾಧ್ಯವಾಗಿದೆ. ಅವುಗಳು ಯಾವುವೆಂದರೆ....

ಲಡಾಖ್‍ನಲ್ಲಿರುವ ಹಿಮ ಚಿರತೆ

ಲಡಾಖ್‍ನಲ್ಲಿರುವ ಹಿಮ ಚಿರತೆ

ಲಡಾಖ್ ಒಂದು ಅತ್ಯುತ್ತಮವಾದ ಪ್ರವಾಸಿ ತಾಣವಾಗಿದೆ. ಈ ಪ್ರದೇಶಕ್ಕೆ ಹಲವಾರು ಪ್ರವಾಸಿಗರು ಭೇಟಿ ನೀಡುವ ಸುಂದರವಾದ ತಾಣ ಇದಾಗಿದೆ. ಲಡಾಖ್‍ನಲ್ಲಿ ನೀವು ನೋಡಲೇಬೇಕಾದ ವನ್ಯ ಜೀವಿಗಳಲ್ಲಿ ಹಿಮ ಚಿರತೆ ಮುಖ್ಯವಾದುದು. ಸಾಮಾನ್ಯವಾಗಿ ಹಿಮ ಚಿರತೆಯು ಅತ್ಯಂತ ಬಲಶಾಲಿ ಹಾಗು ಸುಂದರವಾಗಿರುತ್ತದೆ. ಈ ಚಿರತೆಯನ್ನು ಹೆಮಿಸ್ ರಾಷ್ಟೀಯ ಉದ್ಯಾನವನದಲ್ಲಿ ಕಾಣಬಹುದಾಗಿದೆ.

PC:J&K Wildlife Protection Department

ಲಡಾಖ್‍ನ ಪ್ರವಾಸಿ ತಾಣಗಳು

ಲಡಾಖ್‍ನ ಪ್ರವಾಸಿ ತಾಣಗಳು

ಲಡಾಖ್‍ನಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ಅವುಗಳಲ್ಲಿ ಪ್ರಸಿದ್ಧವಾದುದು ಎಂದರೆ ಪಂಗೊಂಗ್ ಸರೋವರ, ನುಬ್ರಾ ಕಣಿವೆ, ಲೇಹ್ ಅರಮನೆ ಹಾಗು ಖರ್ದುಂಗಾ ಪಾಸ್ ಇನ್ನು ಹಲವಾರು ತಾಣಗಳನ್ನು ಕಾಣಬಹುದಾಗಿದೆ.


PC:Samson Joseph

ಅರುಣಾಚಲ ಪ್ರದೇಶದಲ್ಲಿನ ಕೆಂಪು ಪಾಂಡಾಗಳು

ಅರುಣಾಚಲ ಪ್ರದೇಶದಲ್ಲಿನ ಕೆಂಪು ಪಾಂಡಾಗಳು

ಅರುಣಾಚಲ ಪ್ರದೇಶವನ್ನು "ಸೂರ್ಯೋದಯದ ನಾಡು" ಎಂದು ಕರೆಯುತ್ತಾರೆ. ಇಲ್ಲಿ ಸುಂದರವಾದ ವಾತಾವರಣದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿನ ಮತ್ತೊಂದು ವಿಶೇಷವೆನೆಂರೆ ಅತ್ಯಂತ ಅಪರೂಪದ ಕೆಂಪು ಪಾಂಡಾಗಳನ್ನು ಇಲ್ಲಿ ಕಾಣಬಹುದಾಗಿದೆ. ಇವುಗಳನ್ನು ನೋಡುವುದೇ ಒಂದು ಸಂತೋಷದಾಯಕವಾದುದು.

PC:wikipedia.org

ಅರುಣಾಚಲ ಪ್ರದೇಶದಲ್ಲಿನ ಪ್ರವಾಸಿ ತಾಣಗಳು

ಅರುಣಾಚಲ ಪ್ರದೇಶದಲ್ಲಿನ ಪ್ರವಾಸಿ ತಾಣಗಳು

ಅರುಣಾಚಲ ಪ್ರದೇಶದಲ್ಲಿ ಹಲವಾರು ಪ್ರವಾಸಿ ತಾಣಗಳು ಇದ್ದು, ಅವುಗಳಲ್ಲಿ ತವಾಂಗ್, ಬೊಂಬ್ಡಿಲಾ ಆಶ್ರಮ, ಸೇಲಾ ಪಾಸ್, ಪಂಗಟೆಂಗ್ ತ್ಸೊ ಸರೋವರ, ನುರಾನಂಗ್ ಜಲಪಾತಗಳು ಇನ್ನು ಹಲವಾರು...


PC:Ashwani Kumar

ಕೇರಳದ ವಿಚಿತ್ರ ಕೋತಿಗಳು

ಕೇರಳದ ವಿಚಿತ್ರ ಕೋತಿಗಳು

ಕೇರಳದಲ್ಲಿ ಒಂದು ಮೌನ ಕಣಿವೆ ಇದೆ. ಅಲ್ಲಿ ನೀಲಗಿರಿ ಬೆಟ್ಟಗಳಿಂದ ಅವೃತ್ತವಾಗಿರುವ ಮೌನ ಕಣಿವೆ ರಾಷ್ಟ್ರೀಯ ಉದ್ಯಾನವನವಿದೆ. ಇಲ್ಲಿ ಸಮೃದ್ಧವಾದ ವನ್ಯಜೀವಿ ಸಂಪತ್ತು ಇದೆ. ಇಲ್ಲಿ ವಿಚಿತ್ರವಾದ ಕೋತಿಗಳನ್ನು ಕಾಣಬಹುದಾಗಿದೆ. ಈ ಕೋತಿಗಳು ಕೂಡ ವಿನಾಶದಂಚಿನಲ್ಲಿರುವ ಪ್ರಾಣಿ ಪ್ರಬೇಧಗಳಲ್ಲಿ ಒಂದಾಗಿದೆ. ಆಶ್ಚರ್ಯ ಏನಪ್ಪ ಏಂದರೆ ಸಿಂಹದ ಬಾಲವನ್ನು ಹೊಂದಿರುವಂತಹ ಕೋತಿಗಳಾಗಿವೆ.

PC:N. A. Naseer

ಕೇರಳದ ಪ್ರಸಿದ್ಧ ಪ್ರವಾಸಿ ತಾಣಗಳು

ಕೇರಳದ ಪ್ರಸಿದ್ಧ ಪ್ರವಾಸಿ ತಾಣಗಳು

"ಗಾಡ್ಸ್ ಓನ್ ಕಂಟ್ರಿ" ಎಂದು ಕರೆಯಲಾಗುವ ಕೇರಳದಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಇಲ್ಲಿನ ಸೊಗಸಾದ ವಾತಾವರಣಕ್ಕೆ ಬೆರಗಾಗದೇ ಯಾರು ಇರಲಾರರು. ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳೆಂದರೆ ಅದು ತೆಕ್ಕಾಡಿ, ಮುಝಪ್ಪಿಲಂಗಡ್ ಬೀಚ್, ಕೋಚಿ ಕೋಟೆ, ಗುರುವಾಯೂರು ದೇವಾಲಯ, ಕುಮಾರಕೋ ಪಕ್ಷಿಧಾಮ, ಇಡಕ್ಕಲ್ ಗುಹೆಗಳು, ಅಥಿರಪಿಲ್ಲಿ ಜಲಪಾತಗಳು ಇನ್ನು ಹಲವಾರು.

PC:Framesnlight

ಗುಜರಾತ್‍ನ ಏಷ್ಯನ್ ಸಿಂಹ

ಗುಜರಾತ್‍ನ ಏಷ್ಯನ್ ಸಿಂಹ

ಈ ಅಪರೂಪದ ಏಷ್ಯನ್ ಸಿಂಹವನ್ನು ಕೇವಲ ಗುಜರಾತ್‍ನಲ್ಲಿನ ಸಾಸನ್-ಗಿರ್‍ನಲ್ಲಿ ಕಾಣಲು ಮಾತ್ರ ಸಾಧ್ಯವಾಗುವಂತಹದು. ಇಲ್ಲಿನ ನಿತ್ಯ ಹರಿದ್ವರ್ಣ ಅರಣ್ಯವು ಮನೋಹರವಾಗಿದ್ದು, ಸಂರಕ್ಷಿತವಾದ ತಾಣ ಎಂದು ಗುರುತಿಸಿಕೊಂಡಿದೆ. ಈ ಏಷ್ಯ ಸಿಂಹಗಳ ಏಕೈಕ ತಾಣವೆಂದರೆ ಗುಜರಾತ್ ಆಗಿದೆ.

PC:Mohsin alam3

ಗುಜರಾತ್‍ನಲ್ಲಿನ ಪ್ರಸಿದ್ಧವಾದ ಪ್ರವಾಸಿ ತಾಣಗಳು

ಗುಜರಾತ್‍ನಲ್ಲಿನ ಪ್ರಸಿದ್ಧವಾದ ಪ್ರವಾಸಿ ತಾಣಗಳು

ಗುಜರಾತ್‍ನಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಪ್ರಮುಖವಾದುವು ಎಂದರೆ ರಣ್ ಆಫ್ ಕಛ್, ದ್ವಾರಕಾ, ಥೋಲ್ ಲೇಕ್ ಪಕ್ಷಿಧಾಮ, ಮರೈನ್ ರಾಷ್ಟ್ರೀಯ ಉದ್ಯಾನವನ, ಸಪುತಾರಾ, ಧೊಲವೀರ, ಪೋರ್ ಬಂದರ್ ಇನ್ನೂ ಹಲವಾರು.

PC:Jyoti Chaurasia

ಮಧ್ಯಪ್ರದೇಶದ ರಾಯಲ್ ಬೆಂಗಾಲ್ ಟೈಗರ್

ಮಧ್ಯಪ್ರದೇಶದ ರಾಯಲ್ ಬೆಂಗಾಲ್ ಟೈಗರ್

ಮಧ್ಯ ಪ್ರದೇಶದಲ್ಲಿ ಬಂಧವ್ ಗರ್ಹ್ ಎಂಬ ವನ್ಯಜೀವಿ ತಾಣವಿದೆ. ಇಲ್ಲಿ ಹಲವಾರು ಜೀವವೈವಿದ್ಯತೆಗಳು, ಸಾಲ್ ಅರಣ್ಯಗಳನ್ನು ಕಾಣಬಹುದಾಗಿದೆ. ಟೈಗರ್ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲಿಯೂ ರಾಯಲ್ ಬೆಂಗಾಲ್ ಟೈಗರ್ ನೋಡಬೇಕು ಎಂದು ಹಲವಾರು ಪ್ರವಾಸಿಗರ ಮನದಾಸೆಯಾಗಿರುತ್ತದೆ. ಹಾಗಾದರೆ ಒಮ್ಮೆ ಮಧ್ಯ ಪ್ರದೇಶದಲ್ಲಿನ ವನ್ಯ ಜೀವಿ ಅಭಯಾರಣ್ಯಕ್ಕೆ ಭೇಟಿ ಕೊಡಿ.

PC:Dey.sandip

ಮಧ್ಯ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣಗಳು

ಮಧ್ಯ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣಗಳು

ಮಧ್ಯೆ ಪ್ರದೇಶದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ಅವುಗಳೆಂದರೆ ಭೇದಘಾಟ್‍ನ ಅಮೃತಶಿಲಾ ಬಂಡೆಯುಕ್ತ ಕಂದಕಗಳು, ಜಬಲ್ ಪುರ್‍ನ ಧೌನ್ ಧರ್ ಜಲಪಾತಗಳು, ಗ್ವಾಲಿಯರ್‍ನ ಕೋಟೆ, ಮಹಾಕಾಲೇಶ್ವರ ದೇವಾಲಯ, ಕನ್ಹ ರಾಷ್ಟ್ರೀಯ ಉದ್ಯಾನವನ, ಪೆಂಚ್ ಅಭಯಾರಣ್ಯ ಇನ್ನೂ ಹಲವಾರು.


PC:Kmohankar

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more