Search
  • Follow NativePlanet
Share
» »ಭಾರತದರ್ಶನಕ್ಕೆ ಡಿಸೆಂಬರ್ ತಿಂಗಳೇ ಅತ್ಯುತ್ತಮ - ಸಾಬೀತುಪಡಿಸಲಿವೆ ಈ ಹತ್ತು ಅಂಶಗಳು

ಭಾರತದರ್ಶನಕ್ಕೆ ಡಿಸೆಂಬರ್ ತಿಂಗಳೇ ಅತ್ಯುತ್ತಮ - ಸಾಬೀತುಪಡಿಸಲಿವೆ ಈ ಹತ್ತು ಅಂಶಗಳು

By Arshad Hussain

ಡಿಸೆಂಬರ್ ಎಂದರೆ ಕೇವಲ ವರ್ಷದ ಕೊನೆಯ ತಿಂಗಳಲ್ಲ, ಇದರಲ್ಲಿ ಅತಿ ಹೆಚ್ಚಿನ ಸಾಂಸ್ಕೃತಿಯ ಸಂಭ್ರಮಾಚರಣೆಗಳೂ ಇವೆ. ವಿಶೇಷವಾಗಿ ಉತ್ತರ ಭಾರತದಲ್ಲಿ, ಸೆಖೆ ಮತ್ತು ಚಳಿ ಎರಡೂ ವೈಪರೀತ್ಯಗಳಿವೆ. ಅತ್ತ, ದಕ್ಷಿಣದಲ್ಲಿ ಸೆಖೆಯ ದಿನಗಳಲ್ಲಿ ಹೊರಹೋಗಲಾರದಷ್ಟು ಬೇಗೆ ಇದ್ದರೆ ಡಿಸೆಂಬರ್ ಅತ್ಯಂತ ಅಪ್ಯಾಯಮಾನವಾಗಿರುತ್ತದೆ. ಹಾಗಾಗಿ, ಇಡಿಯ ದೇಶದ ಪರ್ಯಟನೆ ಮಾಡುವುದಾದರೆ ಡಿಸೆಂಬರ್ ಅತ್ಯುತ್ತಮ ತಿಂಗಳಾಗಿದೆ.

ಡಿಸೆಂಬರ್ ತಿಂಗಳು ಈಗಾಗಲೇ ಪ್ರಾರಂಭವಾಗಿದೆ. ಮುಂದಿನ ಮೂವತ್ತು ದಿನಗಳಲ್ಲಿ ನಾವು ಹೊಸವರ್ಷಕ್ಕೆ ಪ್ರವೇಶಿಸಲಿದ್ದೇವೆ. ಹಾಗಾಗಿ, ಒಂದು ವೇಳೆ ಈ ವರ್ಷದ ಸಂಕಲ್ಪಗಳಲ್ಲಿ ಇನ್ನೂ ಪೂರೈಸಲಾಗಿರದ ಸಂಕಲ್ಪವೇನಾದರೂ ಇದ್ದರೆ ಇದನ್ನು ಪೂರೈಸಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಒಂದು ವೇಳೆ ಭಾರತದ ಪರ್ಯಟನೆ ಈ ಸಂಕಲ್ಪವಾಗಿದ್ದರೆ ಈ ತಿಂಗಳು ನಿಮಗೆ ಅತ್ಯುತ್ತಮವಾಗಿದೆ. ಏಕೆ? ಬನ್ನಿ, ಇದನ್ನು ಸಮರ್ಥಿಸುವ ಹತ್ತು ಅಂಶಗಳನ್ನು ನೋಡೋಣ:

1. ಶಿಲ್ಲಾಂಗ್ - ನೀವಿಲ್ಲಿ ಸಾಂಟಾ ಹ್ಯಾಟ್ ತೊಟ್ಟರೂ ಯಾರೂ ನಿಮಗೇನೂ ಅನ್ನುವುದಿಲ್ಲ

1. ಶಿಲ್ಲಾಂಗ್ - ನೀವಿಲ್ಲಿ ಸಾಂಟಾ ಹ್ಯಾಟ್ ತೊಟ್ಟರೂ ಯಾರೂ ನಿಮಗೇನೂ ಅನ್ನುವುದಿಲ್ಲ

ಡಿಸೆಂಬರ್ ಎಂದರೆ ಕ್ರಿಸ್ಮಸ್! ಕ್ರಿಸ್ಮಸ್ ಎಂದರೆ ಸಂಭ್ರಮ. ಈ ತಿಂಗಳಿಡೀ ಕ್ರಿಸ್ಮಸ್ ಹಬ್ಬಕ್ಕಾಗಿ ನಡೆಸುವ ತಯಾರಿಗಳೇ ಅತಿ ಸಂಭ್ರಮದ್ದಾಗಿವೆ. ವಿಶೇಷವಾಗಿ, ಮೇಘಾಲಯ ರಾಜ್ಯದ ಶಿಲ್ಲಾಂಗ್ ಈ ತಿಂಗಳಲ್ಲಿ ಅತ್ಯಂತ ಸುಂದರವಾಗಿ ಶೃಂಗರಿಸಿಕೊಳ್ಳುತ್ತದೆ ಹಾಗೂ ಇದರ ನೈಸರ್ಗಿಕೆ ಚೆಲುವು ನವವಧುವಿನಂತೆ ಭುಗಿಲೇಳುತ್ತದೆ. ಈ ನೋಟವನ್ನು ನೋಡಲಿಕ್ಕಾದರೂ ಈ ರಾಜ್ಯಕ್ಕೆ ಡಿಸೆಂಬರ್ ತಿಂಗಳಲ್ಲೇ ಬರಬೇಕು. ಅಂದ ಹಾಗೆ, ಈ ರಾಜ್ಯದಲ್ಲಿ ಕ್ರಿಸ್ಮಸ್ ಗೆ ಇಷ್ಟೊಂದು ಮಹತ್ವ ನೀಡುವುದಕ್ಕೆ ಇಲ್ಲಿನ ಜನಸಂಖ್ಯೆಯಲ್ಲಿ ಹೆಚ್ಚಿನವರು ಕ್ರೈಸ್ತರು ಎಂಬ ಕಾರಣವಲ್ಲ! ಇಲ್ಲಿನ ಜನತೆ ಈ ಹಬ್ಬವನ್ನು ತಮ್ಮ ರಾಜ್ಯದ ಹಬ್ಬವೆಂದು ಪರಿಗಣಿಸಿ ಸಹಕರಿಸುವುದೇ ಆಗಿದೆ. ಹಾಗಾಗಿ, ಡಿಸೆಂಬರ್ ತಿಂಗಳು ಈ ನಗರದ ಸಹಿತ ಇಡಿಯ ರಾಜ್ಯದಲ್ಲಿ ಸಂಭ್ರಮ ತುಂಬಿ ತುಳುಕುತ್ತದೆ. ಹಾಗಾಗಿ, ಈ ರಾಜ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ಆಗಮಿಸುವುದು ಅತ್ಯುತ್ತಮ ಸಮಯವಾಗಿದೆ.

2. ಊಟಿ, ಅತಿ ತಣ್ಣಗಿನ ಪರ್ವತಧಾಮ! ಡಿಸೆಂಬರ್ ತಿಂಗಳಲ್ಲಿ ಆರಾಮವೋ ಆರಾಮ

2. ಊಟಿ, ಅತಿ ತಣ್ಣಗಿನ ಪರ್ವತಧಾಮ! ಡಿಸೆಂಬರ್ ತಿಂಗಳಲ್ಲಿ ಆರಾಮವೋ ಆರಾಮ

ಡಿಸೆಂಬರ್ ತಿಂಗಳಲ್ಲಿ ದಕ್ಷಿಣದ ಪರ್ವತಧಾಮಗಳಲ್ಲಿ ಚಳಿ ಅತಿ ಹೆಚ್ಚಾಗುತ್ತದೆ ಮತ್ತು ವಿಶೇಷವಾಗಿ ಮುಗಿಲುಗಳು ಇವುಗಳನ್ನು ಆಚ್ಛಾದಿತಗೊಳಿಸುವ ಮೂಲಕ ಈ ತಾಣವನ್ನು ಸ್ವರ್ಗಸಮಾನವಾಗಿಸುತ್ತವೆ. ಸುಮಾರು ಹತ್ತು ಹನ್ನೊಂದು ಘಂಟೆಯವರೆಗೂ ಇರುವ ಇಬ್ಬನಿ, ಈ ಇಬ್ಬನಿಯ ಚಳಿಯಲ್ಲಿ ಹೀರುವ ಬಿಸಿ ಟೀ, ಊಟಿಯಲ್ಲಿರುವ ಸಮಯ ಸ್ಮರಣೀಯವಾಗಿಸುತ್ತದೆ.

3. ಮೋಜು, ಮಜಾ ಮತ್ತು ವಿಶೇಷವಾಗಿ ಸಮುದ್ರ ತೀರ - ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾಕ್ಕಿಂತ ಉತ್ತಮ ಸ್ಥಾನ ಇನ್ನೊಂದಿಲ್ಲ

3. ಮೋಜು, ಮಜಾ ಮತ್ತು ವಿಶೇಷವಾಗಿ ಸಮುದ್ರ ತೀರ - ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾಕ್ಕಿಂತ ಉತ್ತಮ ಸ್ಥಾನ ಇನ್ನೊಂದಿಲ್ಲ

ತನ್ನ ಸಮುದ್ರತೀರಗಳಿಗಾಗಿ ಗೋವಾ ಎಷ್ಟು ಪ್ರಸಿದ್ಧಿ ಪಡೆದಿದೆಯೋ ಅಷ್ಟೇ ಐತಿಹಾಸಿಕ ಸ್ಥಳಗಳಿಂದಲೂ ಪಡೆದಿದೆ. ಸಾಮಾನ್ಯವಾಗಿ ಬೇಸಿಗೆಯ ತಾಣವಾಗಿರುವ ಗೋವಾ ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಸಮರ್ಪಕ ತಾಪಮಾನವನ್ನು ಪಡೆಯುತ್ತದೆ. ಈ ದಿನಗಳಲ್ಲಿ ಸಮುದ್ರದ ನೀರಿನಲ್ಲಿ ಇಳಿಯುವವರಿಗಿಂತಲೂ ತೀರದಲ್ಲಿ ಅಡ್ಡಾಡುವವರೇ ಹೆಚ್ಚು. ಅಂತೆಯೇ ಸಂಜೆಯ ಪಾರ್ಟಿಗಳೂ, ಇಡಿಯ ರಾತ್ರಿ ನಡೆಯುವ ಸನ್ ಬರ್ನ್ ಫೆಸ್ಟಿವಲ್, ದೋಣಿಯ ಮೇಲೆ ನಡೆಯುವ ಔತಣಕೂಟ, ಮೊದಲಾದವುಗಳಿಂದ ಗೋವಾದ ತೀರಗಳಷ್ಟೂ ಜನಭರಿತವಾಗುತ್ತವೆ. ಹಾಗಾಗಿ, ನಿಮಗೆ ಮೋಜು, ಮಜಾ, ಪಾರ್ಟಿಗಳು ಇಷ್ಟವಾಗುವುದಿದ್ದರೆ ಗೋವಾ ಸಂದರ್ಶಿಸಲು ಡಿಸೆಂಬರ್ ಅತ್ಯುತ್ತಮ ತಿಂಗಳಾಗಿದೆ.

4. ಶಾಪಿಂಗ್ ನಿಮ್ಮ ಆಯ್ಕೆಯಾಗಿದ್ದರೆ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್ ನಿಮ್ಮ ಆಯ್ಕೆಯಾಗಬೇಕು

4. ಶಾಪಿಂಗ್ ನಿಮ್ಮ ಆಯ್ಕೆಯಾಗಿದ್ದರೆ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್ ನಿಮ್ಮ ಆಯ್ಕೆಯಾಗಬೇಕು

ಬೆಂಗಳೂರಿನಲ್ಲಿ ಡಿಸೆಂಬರ್ ತಿಂಗಳಲ್ಲಿ ವಾತಾವರಣ ಅತ್ಯಂತ ಅಪ್ಯಾಯಮಾನವಾಗಿರುತ್ತದೆ. ಆದರೆ ಬೆಂಗಳೂರನ್ನು ಸಂದರ್ಶಿಸಲು ಇದೊಂದೇ ಕಾರಣ ಸಾಲದು. ಈ ತಿಂಗಳಲ್ಲಿ ನಗರದಲ್ಲಿ ಹಲವಾರು ಮಾರಾಟದ ಆಕರ್ಷಣೆಗಳು ತೆರೆದುಕೊಳ್ಳುತ್ತವೆ. ಶಾಪಿಂಗ್ ಮಾಲ್ ಗಳು, ಮತ್ತು ಪ್ರಮುಖ ವಾಣಿಜ್ಯ ರಸ್ತೆಗಳು ಈ ಮಾರಾಟಕ್ಕಾಗಿ ಸಿಂಗರಿಸಿಕೊಳ್ಳುತ್ತವೆ. ವಿಶೇಷವಾಗಿ ಕಮರ್ಶಿಯಲ್ ಸ್ಟ್ರೀಟ್, ಇಲ್ಲಿ ನೀವು ಏನನ್ಜು ಕೊಳ್ಳದೇ ಹೋದರೂ ಇಲ್ಲಿನ ಸಂಭ್ರಮ, ಬೆಳಕಿನ ಉತ್ಸವ ಹಾಗೂ ಪಟಾಕಿಗಳನ್ನು ನೋಡಲಿಕ್ಕಾದರೂ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ಬರುವುದು ಉತ್ತಮ. ಅಗತ್ಯವಸ್ತುಗಳನ್ನು ಕೊಳ್ಳುವವರಿಗಂತೂ ಇದು ಕೇವಲ ವಸ್ತುಗಳ ಜೊತೆಗೇ ಅದ್ಭುತ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಒದಗಿಸುತ್ತದೆ.

5. ಕುಮಾರಕೋಮ್ - ದೋಣಿಮನೆಯಲ್ಲಿ ಸಂಗಾತಿಯ ಜೊತೆ ಕಳೆಯುವ ಈ ಸಮಯ ಜೀವನಪರ್ಯಂತ ನೆನಪಡಬೇಕಾದ ಕ್ಷಣ

5. ಕುಮಾರಕೋಮ್ - ದೋಣಿಮನೆಯಲ್ಲಿ ಸಂಗಾತಿಯ ಜೊತೆ ಕಳೆಯುವ ಈ ಸಮಯ ಜೀವನಪರ್ಯಂತ ನೆನಪಡಬೇಕಾದ ಕ್ಷಣ

ದಕ್ಷಿಣ ಕೇರಳದ ಹಿನ್ನೀರಿನ ಪ್ರದೇಶದಲ್ಲಿರುವ ಕುಮಾರಕೋಮ್ ಎಂಬ ಪುಟ್ಟ ಪಟ್ಟಣ ಡಿಸೆಂಬರ್ ನಲ್ಲಿ ಅಗತ್ಯವಾಗಿ ಸಂದರ್ಶಿಸಬೇಕಾದ ತಾಣವಾಗಿದೆ. ಈ ಸಮಯದಲ್ಲಿ ಇಲ್ಲಿನ ವಾತಾವರಣ ಅತ್ಯಂತ ಪ್ರಫುಲ್ಲವಾಗಿದ್ದು ಇಡಿಯ ದಿನ ದೋಣಿಮನೆಯೊಂದನ್ನು ಬಾಡಿಗೆಗೆ ಪಡೆದು ಕಳೆಯುವ ಸಮಯ ಜೀವನವಿಡೀ ನೆನಪಿಡಬೇಕಾದ ಕ್ಷಣವಾಗುತ್ತದೆ. ಸುತ್ತಲ ಕಲ್ಪವೃಕ್ಷಗಳಿಂದ ತುಂಬಿದ ಪರಿಸರ, ಅತಿ ತಣ್ಣಗೂ ಅಲ್ಲದ, ಅಪ್ಯಾಯಮಾನವಾದ ತಂಗಾಳಿ, ಜಿಹ್ವಾಚಾಪಲ್ಯವನ್ನು ತಣಿಸುವ ವೈವಿಧ್ಯಮಯ ಖಾದ್ಯಗಳು ಮತ್ತು ವಿಶೇಷವಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ರೆಸಾರ್ಟ್ ಗಳು ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಲು ಕಾರಣಗಳಾಗಿವೆ.

6. ಚಿಕ್ಕಮಗಳೂರಿನ ಕಾಫಿ - ಪರ್ವತದ ತಪ್ಪಲಿನ ಚಳಿಯಲ್ಲಿ ಮುದುಡುವ ಮನ

6. ಚಿಕ್ಕಮಗಳೂರಿನ ಕಾಫಿ - ಪರ್ವತದ ತಪ್ಪಲಿನ ಚಳಿಯಲ್ಲಿ ಮುದುಡುವ ಮನ

ಚಿಕ್ಕಮಗಳೂರು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಸುಂದರ ಪಟ್ಟಣವಾಗಿದ್ದು ವರ್ಷವಿಡೀ ಅಪ್ಯಾಯಮಾನ ವಾತಾವರಣ ಹೊಂದಿರುತ್ತದೆ. ಅರೇಬಿಯಾದಿಂದ ಬಂದ ಬಾಬಾ ಬುಡನ್ ತಮ್ಮೊಂದಿಗೆ ತಂದಿದ್ದ ಕಾಫಿ ಬೀಜಗಳನ್ನು ಈ ಬೆಟ್ಟಗಳಲ್ಲಿ ಮೊದಲ ಬಾರಿಗೆ ನೆಟ್ಟು ಕಾಫಿ ಬೆಳೆಸಿದರು ಎನ್ನುವ ಇತಿಹಾಸಪ್ರಸಿದ್ಧ ಸ್ಥಳವಾಗಿದೆ. ಆದರೆ ಚಿಕ್ಕಮಗಳೂರಿನಲ್ಲಿ ಕಾಫಿ ಎಷ್ಟು ಪ್ರಸಿದ್ಧವೋ ಅಷ್ಟೇ ಇಲ್ಲಿನ ಟೀ ಸಹಾ ರುಚಿಕರ! ಚಾರಣಿಗರಿಗಂತೂ ಇದು ಸ್ವರ್ಗಸಮಾನ ಸ್ಥಳ. ಹಸಿರು ಪರ್ವತಗಳು, ರಸ್ತೆಬದಿಯಲ್ಲಿಯೇ ಕಾಣಸಿಗುವ ಜಲಪಾತಗಳು, ಸುಂದರ ಕಣಿವೆಗಳು, ಧಾರ್ಮಿಕ ಕೇಂದ್ರಗಳು ಮೊದಲಾದವು ಚಿಕ್ಕಮಗಳೂರನ್ನು ಸಂದರ್ಶಿಸಲು ಇಡಿಯ ವರ್ಷ ಸೂಕ್ತವಾಗಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ಮುಗಿಲುಗಳೆಲ್ಲಾ ಧರೆಗಿಳಿದು ಬಂದಿವೆಯೇ ಎಂಬಂತೆ ಇಲ್ಲಿನ ವಾತಾವರಣ ಬದಲಾಗುತ್ತದೆ. ಚುಮುಚುಮು ಚಳಿ, ನಸುವಾಗಿ ಬೀಸುವ ತಂಗಾಳಿ, ಜೊತೆಗೆ ಬಿಸಿಬಿಸಿ ಕಾಫಿ ಅಥವಾ ಟೀ, ಡಿಸೆಂಬರ್ ನಲ್ಲಿ ಇಲ್ಲಿ ಕಳೆಯುವ ಸಮಯ ಅತ್ಯಂತ ಸ್ಮರಣೀಯವಾಗುವುದರಲ್ಲಿ ಸಂಶಯವಿಲ್ಲ.

7. ಮಂಜಿನ ಮೇಲೆ ಆಟವಾಡಿ, ಜಾರಿ ಬೀಳಿ ಅಥವಾ ತಿನ್ನಿ, ಸಿಮ್ಲಾ ನಗರದಲ್ಲಿ ಮೋಜಿಗೆ ಯಾವುದೇ ಕೊರತೆಯಿಲ್ಲ.

7. ಮಂಜಿನ ಮೇಲೆ ಆಟವಾಡಿ, ಜಾರಿ ಬೀಳಿ ಅಥವಾ ತಿನ್ನಿ, ಸಿಮ್ಲಾ ನಗರದಲ್ಲಿ ಮೋಜಿಗೆ ಯಾವುದೇ ಕೊರತೆಯಿಲ್ಲ.

ಭಾರತ ಉತ್ತರಾರ್ಧ ಗೋಳದಲ್ಲಿರುವ ದೇಶವಾಗಿರುವ ಕಾರಣ ಉತ್ತರಕ್ಕೆ ಹೋದಷ್ಟೂ ಇಲ್ಲಿ ಮಂಜು ಬೀಳುವ ಪ್ರದೇಶಗಳು ಹೆಚ್ಚು. ಇವೆಲ್ಲಾ ಉತ್ತರ ಭಾರತದ ಉತ್ತರದಲ್ಲಿರುವ ಜಿಲ್ಲೆಗಳಲ್ಲಿ ಮಾತ್ರವೇ ಮಂಜು ಬೀಳುತ್ತದೆ. ದಕ್ಷಿಣದವರಿಗೆ ಮಂಜಿನ ಭಾಗ್ಯವಿಲ್ಲ. ಆದರೇನಾಯಿತು? ಮಂಜು ಬೀಳುವ ಪ್ರದೇಶಗಳೂ ನಮ್ಮವೇ ಅಲ್ಲವೇ? ಪ್ರವಾಸಿಗರಾಗಿ ಮಂಜು ಬೀಳುವ ಪ್ರದೇಶಕ್ಕೆ ಭೇಟಿ ನೀಡಲು ಡಿಸೆಂಬರ್ ಅತ್ಯುತ್ತಮ ಸಮಯವಾಗಿದೆ. ಸಿಮ್ಲಾ ಇದಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಸಿಮ್ಲಾ ನಗರ ನಮ್ಮ ಮಡಿಕೇರಿಯಂತಹ ಪರ್ವತದ ಇಳಿಜಾರನ್ನು ಕಡಿದು ಕಟ್ಟಿದ ನಗರವಾಗಿದ್ದು ಡಿಸೆಂಬರ್ ನಲ್ಲಿ ಪ್ರವಾಸಿಗರಿಗಾಗಿ ಹೆಚ್ಚಿನ ಅಯ್ಕೆಗಳನ್ನು ನೀಡುತ್ತದೆ. ಎಲ್ಲಾ ವಯಸ್ಸಿನವರಿಗೂ ಇಲ್ಲಿ ಒಂದಲ್ಲಾ ಒಂದು ಸೌಲಭ್ಯಗಳು ಇದ್ದೇ ಇರುತ್ತವೆ. ಹಾಗಾಗಿ, ವಿಶೇಷವಾಗಿ ಮಂಜಿನ ಸವಿಯನ್ನು ಕುಟುಂಬಸಹಿತರಾಗಿ ಸವಿಯುವುದಾದರೆ ಸಿಮ್ಲಾ ನಗರಕ್ಕೆ ಭೇಟಿ ನೀಡಲು ಡಿಸೆಂಬರ್ ಉತ್ತಮ ಸಮಯವಾಗಿದೆ.

8. ಸ್ನಾರ್ಕೆಲ್ಲಿಂಗ್ ಅಥವಾ ಕಡಿಮೆ ಆಳದಲ್ಲಿರುವ ಜಲಜೀವಿಗಳನ್ನು ವೀಕ್ಷಿಸುವ ಬಯಕೆಯೇ - ಅಂಡಮಾನ್ ನಿಮಗೆ ಸೂಕ್ತ ಆಯ್ಕೆಯಾಗಿದೆ.

8. ಸ್ನಾರ್ಕೆಲ್ಲಿಂಗ್ ಅಥವಾ ಕಡಿಮೆ ಆಳದಲ್ಲಿರುವ ಜಲಜೀವಿಗಳನ್ನು ವೀಕ್ಷಿಸುವ ಬಯಕೆಯೇ - ಅಂಡಮಾನ್ ನಿಮಗೆ ಸೂಕ್ತ ಆಯ್ಕೆಯಾಗಿದೆ.

ಅಂಡಮಾನ್, ಕೇವಲ ಸೆಲ್ಯುಲರ್ ಜೈಲಿಗಾಗಿ ಮಾತ್ರವಲ್ಲ, ಸಾಗರ ಕ್ರೀಡೆಗಳಿಗೆ, ವಿಶ್ವ ಮಟ್ಟದ ಸಮುದ್ರದಾಳದ ಚಟುವಟಿಕೆಗಳಿಗೆ (ಡೈವಿಂಗ್) ಮತ್ತು ವಿಶೇಷವಾಗಿ ಸ್ನಾರ್ಕೆಲ್ಲಿಂಗ್ ಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ಇಲ್ಲಿನ ಸಮುದ್ರತೀರಗಳಂತೂ ಒಂದಕ್ಕಿಂತ ಇನ್ನೊಂದು ಭಿನ್ನವಾಗಿದೆ. ಪ್ರತಿ ತೀರದ ನೀರು ಭಿನ್ನವಾದ ಬಣ್ಣವನ್ನು ಹೊಂದಿದ್ದು ಸೂಕ್ಷ್ಮವಾಗಿ ಅವಲೋಕಿಸಿದರೆ ನೂರಕ್ಕೂ ಹೆಚ್ಚು ಬಣ್ಣಗಳನ್ನು ಇಲ್ಲಿನ ಸಮುದ್ರ ಪ್ರಕಟಿಸುತ್ತದೆ. ಇಂದು ಪ್ರವಾಸಿಗರಿಗಾಗಿ ಇಲ್ಲಿ ಹೆಚ್ಚಿನ ಸೌಲಭ್ಯಗಳಿವೆ ಹಾಗೂ ಪರ್ಯಟನೆಯೂ ಸುಲಭವಾಗಿರುವ ಕಾರಣ ವರ್ಷಾಂತ್ಯದ ದಿನಗಳಲ್ಲಿ ಹೆಚ್ಚಿನ ಜನರು ಇಲ್ಲಿ ಆಗಮಿಸುತ್ತಾರೆ. ಇನ್ನೂ ಉಳಿದುಕೊಂಡಿರುವ ದಟ್ಟ ಅರಣ್ಯಗಳಿಗಿಂತಲೂ ಸಮುದ್ರತೀರಗಳಿಗೇ ಹೆಚ್ಚಿನ ಜನರು ಲಗ್ಗೆಯಿಡುತ್ತಾರೆ. ಹಾಗಾಗಿ, ಸಮುದ್ರತೀರದ ಚಟುವಟಿಕೆಗಳು ನಿಮ್ಮ ಪ್ರಾಶಸ್ತ್ಯವಾಗಿದ್ದರೆ ಅಂಡಮಾನ್ ಗೆ ಭೇಟಿ ನೀಡಲು ಡಿಸೆಂಬರ್ ಉತ್ತಮ ಸಮಯವಾಗಿದೆ. ಈ ತಿಂಗಳಲ್ಲಿ ಸೂರ್ಯನ ಪ್ರಖರತೆ ಕಡಿಮೆ ಇರುವ ಕಾರಣ ಈ ಚಟುವಟಿಕೆಗಳನ್ನು ನಿರಾಯಾಸವಾಗಿ ನಿರ್ವಹಿಸಬಹುದು.

9. ಚಂಡೀಗಢ - ಚಳಿಗಾಲದಲ್ಲಿ ಮೈಬಿಸಿ ಮಾಡುವ ಮದ್ಯಕ್ಕೆ ಮನಸೋಲುವುದಾದರೆ ಇಲ್ಲಿ ಡಿಸೆಂಬರ್ ನಲ್ಲಿಯೇ ಬರಬೇಕು

9. ಚಂಡೀಗಢ - ಚಳಿಗಾಲದಲ್ಲಿ ಮೈಬಿಸಿ ಮಾಡುವ ಮದ್ಯಕ್ಕೆ ಮನಸೋಲುವುದಾದರೆ ಇಲ್ಲಿ ಡಿಸೆಂಬರ್ ನಲ್ಲಿಯೇ ಬರಬೇಕು

ಮದ್ಯದ ಮಾರಾಟದ ವಿಷಯದಲ್ಲಿ ಪಂಜಾಬ್ ರಾಜ್ಯಕ್ಕೆ ಒಂಭತ್ತನೆಯ ಸ್ಥಾನವಿದ್ದರೂ ಪ್ರತಿ ವ್ಯಕ್ತಿ ಸೇವಿಸುವ ಪ್ರಮಾಣವನ್ನು ಪರಿಗಣಿಸಿದರೆ ಮೂರನೆಯ ಸ್ಥಾನಕ್ಕೇರುತ್ತದೆ. ಅಲ್ಲದೇ ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚುವ ಚಳಿ ಮದ್ಯದ ಸೇವನೆಯ ಪ್ರಮಾಣವನ್ನೂ ಹೆಚ್ಚಿಸುತ್ತದೆ. ಈ ಮೂಲಕ ಚಂಡೀಗಢದ ಬಹುತೇಕ ಎಲ್ಲಾ ಸ್ಥಳಗಳಲ್ಲಿ ನೂರಾರು ಪಬ್ ಮತ್ತು ರೆಸ್ಟೋ ಬಾರ್ ಗಳು ತೆರೆದಿದ್ದು ಗ್ರಾಹಕರಿಗೆ ಇನ್ನಿಲ್ಲದಷ್ಟು ಆಯ್ಕೆಗಳನ್ನು ಒದಗಿಸುತ್ತವೆ. ಹಾಗಾಗಿ, ಮದ್ಯಪ್ರಿಯರಿಗೆ ಡಿಸೆಂಬರ್ ತಿಂಗಳಲ್ಲಿ ಭೇಟಿ ನೀಡಲು ಡಿಸೆಂಬರ್ ಅತ್ಯುತ್ತಮ ತಿಂಗಳಾಗಿದೆ.

10. ಶ್ವೇತ ಸ್ವರ್ಗದಾಣವಾಗುವ ಹಿಮಾಲಯ - ಆತ್ಮಾವಲೋಕನಕ್ಕೆ ಇದಕ್ಕಿಂತ ಉತ್ತಮ ಸ್ಥಳವಿಲ್ಲ

10. ಶ್ವೇತ ಸ್ವರ್ಗದಾಣವಾಗುವ ಹಿಮಾಲಯ - ಆತ್ಮಾವಲೋಕನಕ್ಕೆ ಇದಕ್ಕಿಂತ ಉತ್ತಮ ಸ್ಥಳವಿಲ್ಲ

ಒಂದು ವೇಳೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ನಿಮಗೆ ಬಂದಿದ್ದು ಇದಕ್ಕಾಗಿ ಅತ್ಯುತ್ತಮ ತಾಣದ ಹುಡುಕಾಟವಿದ್ದರೆ ಇದಕ್ಕೆ ವಿಶಾಲ ಹಿಮಾಲಯಕ್ಕಿಂತ ಅತ್ಯುತ್ತಮ ಸ್ಥಾನ ಇನ್ನೊಂದಿಲ್ಲ. ಹಿಮಾಲಯ ವರ್ಷವಿಡೀ ಹಿಮಾಚ್ಛಾದಿತವಾಗಿದ್ದರೂ ವಿಶೇಷವಾಗಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಹಿಮವನ್ನು ತುಂಬಿಕೊಂಡು ಇದರ ತಪ್ಪಲಿನಲ್ಲಿ ಶ್ವೇತಚಾದರ ಹರಡಿರುತ್ತದೆ. ನಿಸರ್ಗ ಈ ಚಳಿಯಲ್ಲಿ ಭಿನ್ನವಾದ ನೋಟವನ್ನು ನೀಡುತ್ತದೆ. ಎಲ್ಲೆಲ್ಲೂ ಹಿಮ, ಎಲ್ಲೆಲ್ಲೂ ಬಿಳಿ. ಈ ಕ್ಷಣವನ್ನು ಆಸ್ವಾದಿಸಲು ಜಗತ್ತಿನ ಎಲ್ಲೆಡೆಯಿಂದ ಲಕ್ಷಾಂತರ ಜನರು ಹಿಮಾಲಯದ ವಿವಿಧ ಭಾಗಗಳಿಗೆ ಆಗಮಿಸುತ್ತಾರೆ. ತೆರೆದ ಆಕಾಶಗಳು, ಎತ್ತರದ ಬಿಳಿ ಪರ್ವತಗಳು ಮತ್ತು ನೀವು, ವರ್ಷದ ನಿರ್ಣಯಗಳ ಬಗ್ಗೆ ನಿಮಗೆ ಯೋಚಿಸಲು ಮತ್ತು ಹೊಸಜೀವನದ ಬಗ್ಗೆ ನಿರ್ಧರಿಸಲು ಅತ್ಯುತ್ತಮವಾದ ಆಯ್ಕೆಯಾಗಿದೆ.

Read more about: india ಭಾರತ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more