Search
  • Follow NativePlanet
Share
» »ಆಗಸ್ಟ್‌ನಲ್ಲಿ ಯಾವೆಲ್ಲಾ ಹಬ್ಬ ಇದೆ, ಅದನ್ನು ಆಚರಿಸಲು ಎಲ್ಲಿಗೆ ಹೋದ್ರೆ ಬೆಸ್ಟ್

ಆಗಸ್ಟ್‌ನಲ್ಲಿ ಯಾವೆಲ್ಲಾ ಹಬ್ಬ ಇದೆ, ಅದನ್ನು ಆಚರಿಸಲು ಎಲ್ಲಿಗೆ ಹೋದ್ರೆ ಬೆಸ್ಟ್

ಭಾರತದಲ್ಲಿ ಪ್ರತಿ ತಿಂಗಳು ಏನಾದರೊಂದು ಉತ್ಸವ, ಹಬ್ಬ, ಹರಿದಿನಗಳು ನಡೆಯುತ್ತಾ ಇರುತ್ತವೆ. ಆಗಸ್ಟ್‌ನಲ್ಲೂ ಕೂಡಾ ಕೆಲವು ಹಬ್ಬಗಳು ಇವೆ. ಈ ಹಬ್ಬಗಳ ಸಂದರ್ಭ ನೀವು ಯಾವ ಊರಿನಲ್ಲಿದ್ದರೆ ಚೆನ್ನ ಎನ್ನವುದರ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

ಆಗಸ್ಟ್‌ನಲ್ಲಿನ ಪ್ರಮುಖ ಹಬ್ಬಗಳಲ್ಲಿ ಪ್ರಸಿದ್ಧ ರಕ್ಷಾ ಬಂಧನ್ ಮತ್ತು ಕೇರಳದ ಕೊಯ್ಲು ಉತ್ಸವವನ್ನು ಓಣಂ ಎಂದು ಕರೆಯಲಾಗುತ್ತದೆ. ನಂತರ, ನೀವು ಭಾರತದ ಸ್ವಾತಂತ್ರ್ಯ ದಿನವನ್ನು ಆಗಸ್ಟ್ ತಿಂಗಳ ಅತ್ಯಂತ ಪ್ರಮುಖ ಉತ್ಸವಗಳಲ್ಲಿ ಒಂದಾಗಿದೆ. ಆದ್ದರಿಂದ, ನೀವು ಆಗಸ್ಟ್‌ನಲ್ಲಿ ಈ ತಿಂಗಳಿನಲ್ಲಿ ಭಾರತದಲ್ಲಿದ್ದರೆ, ಅದರ ಕೆಲವು ಪ್ರಮುಖ ಘಟನೆಗಳು ಮತ್ತು ಉತ್ಸವಗಳನ್ನು ಅನ್ವೇಷಿಸಲು ನಿಮಗೆ ಉತ್ತಮ ಅವಕಾಶವಿದೆ.

ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ದಿನಾಚರಣೆ

PC:Michael Clarke

ಸ್ವಾತಂತ್ರ್ಯ ದಿನಾಚರಣೆಯು ನಮ್ಮ ದೇಶದ ಹಬ್ಬ ಎಂದೇ ಹೇಳಬಹುದು. ಸ್ವಾತಂತ್ರ್ಯ ಸಿಕ್ಕಿದ ದಿನವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆಗಸ್ಟ್ 15 ರಂದು ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡುವುದರ ಜೊತೆಗೆ ಸೇನಾ ರ್ಯಾಲಿ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಸಿಗುತ್ತದೆ. ಇಡೀ ದೇಶಾದ್ಯಂತ ಧ್ವಜಾರೋಹಣ ಮಾಡಿ ಸಿಹಿಹಂಚಲಾಗುತ್ತದೆ.

ಪ್ರತಿವರ್ಷ ಮಿಂಚು ಹೊಡೆದು ಛಿದ್ರವಾಗುತ್ತೆ ಇಲ್ಲಿನ ಶಿವಲಿಂಗ !ಪ್ರತಿವರ್ಷ ಮಿಂಚು ಹೊಡೆದು ಛಿದ್ರವಾಗುತ್ತೆ ಇಲ್ಲಿನ ಶಿವಲಿಂಗ !

ಮದ್ರಾಸ್ ವೀಕ್

ಮದ್ರಾಸ್ ವೀಕ್

PC: Vinoth Chandar

ಮದ್ರಾಸ್ ಅಥವಾ ಚೆನ್ನೈ ಆಗಸ್ಟ್ 22, 1639 ರಂದು ಸ್ಥಾಪನೆಯಾಗಿದೆ ಎಂದು ನಂಬಲಾಗಿದೆ. ಆದ್ದರಿಂದ, ಪ್ರತಿ ಆಗಸ್ಟ್, 22ರಂದು ಸಂಸ್ಥಾಪನಾ ದಿನವನ್ನಾಗಿ ಆಚರಿಸಲಾಗುತ್ತದೆ. ಇಡೀ ವಾರ ಆಚಣೆ ನಡೆಯುತ್ತದೆ. ಆಹಾರ ಉತ್ಸವಗಳು, ಫೋಟೋ ಉತ್ಸವಗಳು, ಬೈಕ್ ಪ್ರವಾಸಗಳು ಇನ್ನಿತರ ಉತ್ಸವಗಳನ್ನು ಏರ್ಪಡಿಸಲಾಗುತ್ತದೆ. ಈ ವರ್ಷ ಎರಡು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಶರ್ಟ್ ವಿನ್ಯಾಸ ಸ್ಪರ್ಧೆ ಮತ್ತು ಸಣ್ಣ ಕಥೆ ಸ್ಪರ್ಧೆ. ಆಗಸ್ಟ್ 19ರಿಂದ 26ರ ವರೆಗೆ ಇಲ್ಲಿ ಈ ಮದ್ರಾಸ್ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತದೆ.

ತೀಜ್ ಹಬ್ಬ

ತೀಜ್ ಹಬ್ಬ

PC:Ganesh Paudel

ಜೈಪುರ್ ಹಾಗೂ ರಾಜಸ್ಥಾನದಲ್ಲಿ ತೀಜ್ ಹಬ್ಬವನ್ನು ಆಚರಿಸಲಾಗುತ್ತದೆ. ವಿವಾಹಿತ ಸ್ತ್ರೀಯರ ಹಬ್ಬ ಇದಾಗಿದ್ದು, ತನ್ನ ಪತಿಗಾಗಿ ಸ್ತ್ರೀಯರು ಈ ಹಬ್ಬವನ್ನು ಆಚರಿಸುತ್ತಾರೆ. ಇದರಲ್ಲಿ ಶಿವ, ಪಾರ್ವತಿಯನ್ನು ಪೂಜಿಸಲಾಗುತ್ತದೆ. ವರ್ಷಕ್ಕೆ ಮೂರು ತೀಜ್ ಆಚರಿಸಲಾಗುತ್ತದೆ. ಹರ್ಯಾಲಿ ತೀಜ್, ಕಜಾರಿ ತೀಜ್, ಹರ್ತಾಲಿ ತೀಜ್ . ಎರಡನ್ನು ಆಗಸ್ಟ್‌ನಲ್ಲಿ ಆಚರಿಸಲಾಗುತ್ತದೆ. ಹಾಗೂ ಒಂದನ್ನು ಸೆಪ್ಟೆಂಬರ್‌ನಲ್ಲಿ ಆಚರಿಸಲಾಗುತ್ತದೆ. ಆಗಸ್ಟ್ 13-14 ಹಾಗೂ 25-29 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

ರಕ್ಷಾ ಬಂಧನ

ರಕ್ಷಾ ಬಂಧನ

PC:meenakshi madhavan

ಸಾಮಾನ್ಯವಾಗಿ ರಕ್ಷಾಬಂಧನವನ್ನು ದೇಶದಾದ್ಯಂತ ಆಚರಿಸುತ್ತಾರೆ. ಇದೊಂದು ಸಹೋದರ-ಸಹೋದರಿಯರ ಹಬ್ಬವಾಗಿರುವ ಇದು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ರಕ್ಷಾ ದಾರವನ್ನು ಸಹೋದರಿಯು ಸಹೋದರನ ಕೈಗೆ ಕಟ್ಟುವ ಮೂಲಕ ಆತನ ದೀರ್ಘಾಯಸ್ಸಿಗಾಗಿ ಪ್ರಾರ್ಥಿಸುತ್ತಾಳೆ. ಪ್ರತಿವರ್ಷ ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್‌ನಲ್ಲಿ ರಕ್ಷಾ ಬಂಧನ ಹಬ್ಬ ಬರುತ್ತದೆ. ಆಗಸ್ಟ್ 26ರಂದು ದೇಶಾದ್ಯಂತ ಈ ಹಬ್ಬವನ್ನು ಆಚರಿಸುತ್ತಾರೆ.

ಓಣಂ

ಓಣಂ

ಓಣಂ ಅಂದರೆ ಕೊಯ್ಲು ಉತ್ಸವ ಎನ್ನಲಾಗುತ್ತದೆ. ಕೇರಳದಲ್ಲಿ ಇದನ್ನು ಓಣಂ ಎನ್ನುತ್ತಾರೆ. ಓಣಂ ಹಬ್ಬದಲ್ಲಿ ನಿಮಗೆ ಹಲವಾರು ಸಂಪ್ರದಾಯಗಳನ್ನು ಕಾಣಲು ಸಿಗುತ್ತದೆ. ಈ ಹಬ್ಬದಂದು ಕೇರಳ ರಾಜ್ಯಾದ್ಯಂತ ರಜೆಯನ್ನು ಘೋಷಿಸಲಾಗುತ್ತದೆ. ಆನೆ ಸವಾರಿ, ನೃತ್ಯವನ್ನು ಕಾಣಲು ಸಿಗುತ್ತದೆ. ಬೋಟ್‌ ರೇಸ್, ಕಥಕ್ಕಲಿ ನಾಟ್ಯವನ್ನೂ ನೋಡಬಹುದು. ಓಣಂ ಸಾಧ್ಯ ತುಂಬಾನೇ ಫೇಮಸ್. ವಿವಿಧ ಬಗೆಯ ಅಡುಗೆಯನ್ನು ಸವಿಯಬಹುದು. ಹಾಗಾಗಿ ಓಣಂನ್ನು ಕೇರಳದಲ್ಲಿ ಆಚರಿಸಿದರೆ ಚೆನ್ನಾಗಿರುತ್ತದೆ. ಕೇರಳದಲ್ಲಿ ಓಣಂ ನ ವಾತಾವರಣವೇ ಒಂಥರಾ ಖುಷಿಯ ವಾತಾವರಣ ಕಂಡುಬರುತ್ತದೆ. ಕೇರಳದಲ್ಲಿ ಈ ವರ್ಷ ಆಗಸ್ಟ್ 15ರಿಂದ ಆಗಸ್ಟ್ 27ರ ವರೆಗೆ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X