Search
  • Follow NativePlanet
Share
» »ಧೋನಿ ,ಸಚಿನ್, ಕೊಹ್ಲಿ ಹುಟ್ಟಿದ್ದು ಎಲ್ಲೆಲ್ಲಿ ಗೊತ್ತಾ?

ಧೋನಿ ,ಸಚಿನ್, ಕೊಹ್ಲಿ ಹುಟ್ಟಿದ್ದು ಎಲ್ಲೆಲ್ಲಿ ಗೊತ್ತಾ?

ನಮ್ಮದೇಶದಲ್ಲಿ ಸಿನಿಮಾ ತಾರೆಯರನ್ನು ಇಷ್ಟಪಡೋವವರು ಎಷ್ಟು ಜನ ಇದ್ದಾರೋ ಅಷ್ಟೇ ಜನ ಕ್ರಿಕೆಟ್ ತಾರೆಯರನ್ನೂ ಇಷ್ಟ ಪಡ್ತಾರೆ. ಕ್ರಿಕೆಟ್ ದೇವರು ಎಂದೇ ಹೇಳಲಾಗುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ವಿರಾಟ್‌ ಕೊಹ್ಲಿಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ಗಳಿದ್ದರೆ. ಫ್ಯಾನ್ಸ್‌ಗಳಿಗೆ ತಮ್ಮ ನೆಚ್ಚಿನ ನಾಯಕನ ಬಗ್ಗೆ ಎಲ್ಲಾ ವಿಷ್ಯನೂ ತಿಳಿದಿರುತ್ತದೆ. ಹಾಗಾದ್ರೆ ಸಚಿನ್, ಧೋನಿ, ಕೊಹ್ಲಿ ಜನಿಸಿದ್ದು ಎಲ್ಲಿ ಅನ್ನೋದು ನಿಮಗೇನಾದ್ರೂ ಗೊತ್ತಾ? ಇಲ್ಲಾ ಅಂದ್ರೆ ಇಲ್ಲಿದೆ ...

ಲೈಫ್‌ನಲ್ಲಿ ಒಮ್ಮೆಯಾದ್ರೂ ಬೆಂಗ್ಳೂರಿಗೆ ಹೋಗಲೇ ಬೇಕು ಏಕೆ?ಲೈಫ್‌ನಲ್ಲಿ ಒಮ್ಮೆಯಾದ್ರೂ ಬೆಂಗ್ಳೂರಿಗೆ ಹೋಗಲೇ ಬೇಕು ಏಕೆ?

ಮಹೇಂದ್ರ ಸಿಂಗ್ ಧೋನಿ- ರಾಂಚಿ

ಮಹೇಂದ್ರ ಸಿಂಗ್ ಧೋನಿ- ರಾಂಚಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹುಟ್ಟಿದ್ದು ಜಾರ್ಖಂಡ್‌ನ ರಾಂಚಿಯಲ್ಲಿ . ಜಾರ್ಖಂಡ್ ಪೂರ್ವ ಭಾರತ ರಾಜ್ಯಗಳಲ್ಲೊಂದು. 15ನೇ ನವೆಂಬರ್, 2000ದಲ್ಲಿ ಬಿಹಾರ ರಾಜ್ಯದ ದಕ್ಷಿಣ ಪ್ರಾಂತ್ಯಗಳನ್ನು ಸೇರಿಸಿ ಇದನ್ನು ರಚಿಸಲಾಯಿತು. ಜೈನರ ಪವಿತ್ರ ಯಾತ್ರಾಸ್ಥಳ ಶಿಖರ್ಜಿಯು ಇರುವುದು ಜಾರ್ಖಂಡ್‌ನಲ್ಲೇ.

ಉದ್ಯಮ ವಲಯ

ಉದ್ಯಮ ವಲಯ

PC: Biswarup Ganguly

ಫೋರ್ಬ್ಸ ಸಂಗ್ರಹಿಸಿದ ಮಾಹಿತಿಯ ಪ್ರಕಾರ ವಿಶ್ವದ 10 ಅತಿ ಹೆಚ್ಚು ಆದಾಯ ಪಡೆಯುವ ಕ್ರಿಕೆಟಿಗರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಒಬ್ಬರಾಗಿದ್ದಾರೆ. ಜಾರ್ಖಂಡ್ ಉದ್ಯಮ ವಲಯ ಮಾತ್ರವಲ್ಲದೆ ಪ್ರವಾಸೋದ್ಯಮದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜಾರ್ಖಂಡ್ ರಾಜ್ಯದ ರಾಜಧಾನಿಯಾದ ರಾಂಜಿಯಲ್ಲಿ ನಾವು ಸುತ್ತಬೇಕಾದ ಸ್ಥಳಗಳು ಹಲವು ಇವೆ.

ರಾಂಚಿ ಪ್ರವಾಸೋದ್ಯಮಗಳು

ರಾಂಚಿ ಪ್ರವಾಸೋದ್ಯಮಗಳು

PC:Akash Guruji

ರಾಂಜಿಯನ್ನು ನಾವು 'ಜಲಪಾತದ ನಗರ' ಎಂದು ಕರೆಯಬಹುದು. ಇಲ್ಲಿ ಅನೇಕ ಜಲಪಾತಗಳು ಇವೆ. ಹ್ಯುನಾ ಜಲಪಾತ, ಜೋನ್ಹಾ ಜಲಪಾತ, ಸೀತಾ ಜಲಪಾತ ಇತ್ಯಾದಿಗಳು ನಾವು ಖಂಡಿತವಾಗಿಯೂ ಭೇಟಿ ನೀಡಬೇಕಾದಂತಹ ತಾಣಗಳು. ಬೇಸಿಗೆಯಲ್ಲಿ ಇಲ್ಲಿ ಸ್ನಾನ ಮಾಡುವ ಮೂಲಕ ಆನಂದವನ್ನು ಪಡೆಯಬಹುದು.

ಹ್ಯುಂಡರು ಜಲಪಾತ

ಹ್ಯುಂಡರು ಜಲಪಾತ

ನೈಸರ್ಗಿಕ ಎಳಲ್ಲಿ ಚಿಕ್ಕದು ರಾಂಚಿ ನಗರವು ಪ್ರಮುಖ ಪ್ರವಾಸಿ ತಾಣವಾಗಿದೆ. ಭಾರತದಲ್ಲಿ ಇರುವ ಎತ್ತರದ ಜಲಪಾತಗಳಲ್ಲಿ ಒಂದಾದ ಇದು ಸುವರ್ಣ ರೇಖಾ ನದಿಯಿಂದ 322 ಅಡಿ ಎತ್ತರದಿಂದ ಬೀಳುತ್ತದೆ. ಮಳೆಗಾಲದಲ್ಲಿ ಉಕ್ಕಿ ಹರಿಯುವ ಪ್ರವಾಹದಿಂದಾಗಿ ಪ್ರವಾಸಿಗರಿಗೆ ಭೇಟಿ ನೀಡಲು ಅನುಮತಿ ನೀಡಲಾಗುವುದಿಲ್ಲ. ಇದರ ಸುತ್ತಲೂ ಛಾಯಾಚಿತ್ರ ತೆಗೆದುಕೊಳ್ಳಲು ಅದ್ಭುತವಾದ ಸ್ಥಳವಿದೆ.

ಸಚಿನ್-ಮುಂಬೈ

ಸಚಿನ್-ಮುಂಬೈ

ಸಚಿನ್ ತೆಂಡೂಲ್ಕರ್ ಹುಟ್ಟಿದ್ದು ಮುಂಬೈನಲ್ಲಿ . ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ ವಾಸಿಸುತ್ತಿದ್ದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿ ಎಂದೇ ಪ್ರತೀತಿಯಲ್ಲಿದ್ದ ಈ ನಗರವನ್ನು ವಿಧ್ಯುಕ್ತವಾಗಿಮುಂಬಯಿಎಂದು 1995ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಕನ್ನಡದಲ್ಲಿ ಮುಂಬಯಿ ,ಬಾಂಬೆ ಹಾಗೂ ಬೊಂಬಾಯಿ ಎಂದು ಕರೆಯುವುದು ರೂಢಿಯಲ್ಲಿದೆ.

 ಮುಂಬೈನ ಪ್ರವಾಸಿ ತಾಣಗಳು

ಮುಂಬೈನ ಪ್ರವಾಸಿ ತಾಣಗಳು

PC: Anil Wadghule

ಮುಂಬೈನಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಗೇಟ್‌ ವೇ ಆಫ್ ಮುಂಬೈ, ತಾಜ್ ಹೋಟೆಲ್, ದರ್ಗಾ, ಜುಹೂ ಬೀಚ್ ಹೀಗೆ ಇನ್ನಿತರ ಸ್ಥಳಗಳಿವೆ. ಮುಂಬೈ ನಗರವು 24 ಗಂಟೆಯೂ ಜನರಿಂದ ತುಂಬಿರುತ್ತದೆ. ಮರೀನಾ ಡ್ರೈವ್ ಗೆ ಹೋಗಿ ಕತ್ತಲಲ್ಲಿ ಬೆಳಕಿನ ದೃಶ್ಯವನ್ನು ಪಡೆಯಬಹುದು.

ವಡಾ ಪಾವ್ ತಿನ್ನೋದು ಮರೆಯಬೇಡಿ

ವಡಾ ಪಾವ್ ತಿನ್ನೋದು ಮರೆಯಬೇಡಿ

PC: youtube

ಹೆಚ್ಚಿನ ಬಾಲಿವುಡ್ ತಾರೆಯರು ನೆಲೆಸಿರುವುದು ಇಲ್ಲೇ. ಮುಂಬಯಿಯ ಖಾದ್ಯಸಂಸ್ಕೃತಿಯ ಸಂಕೇತವೆಂದರೆವಡಾಪಾವ್ ಎನ್ನಬಹುದು. ಪಾನೀಪುರಿ, ಪಾವ್ ಭಾಜಿ, ಭೇಳ್ ಪುರಿ, ದಕ್ಣಿಣ ಭಾರತೀಯ, ಪಂಜಾಬೀ, ಚೈನೀಸ್ ತಿನಿಸುಗಳೂ ಮುಂಬಯಿಯಲ್ಲಿ ಬಹಳ ಜನಪ್ರಿಯವಾಗಿವೆ. ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬಯಿ, ದಾದರ್ ಪಶ್ಚಿಮ ದಲ್ಲಿದೆ. ಇಲ್ಲಿ ಬಿಸಿ-ಬಿಸಿ, ಬಟಾಟಾವಡ ತಿಂದು, ಚಹ- ಸೇವನೆಮಾಡುವ ಮಜವನ್ನು ಅನುಭವಿಸಬೇಕು.

ವಿರಾಟ್ ಕೊಹ್ಲಿ-ದೆಹಲಿ

ವಿರಾಟ್ ಕೊಹ್ಲಿ-ದೆಹಲಿ

ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗು ಭಾರತ ಕ್ರಿಕೆಟ್ ತ್೦ಡದ ನಾಯಕ ವಿರಾಟ್ ಕೊಹ್ಲಿ ಜನಿಸಿದ್ದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಭಾರತದಲ್ಲೇಅತಿ ದೊಡ್ಡಮಹಾನಗರಮತ್ತು ಜನಸಂಖ್ಯೆಯಲ್ಲಿಎರಡನೇ ಅತಿ ದೊಡ್ಡಮಹಾನಗರವಾಗಿದೆ. ಪ್ರಾಚೀನ ಮತ್ತು ಮದ್ಯಕಾಲೀನದ ಹಲವು ಸ್ಮಾರಕಗಳು, ಪುರಾತತ್ವ ಸ್ಥಳಗಳು ಹಾಗೂ ಹೀಗೆ ಇನ್ನೂ ಹಲವು ದೆಹಲಿಯಲ್ಲಿವೆ. ದೆಹಲಿಯಿಂದು ಭಾರತದ ಪ್ರಮುಖ ಸಾಂಸ್ಕೃತಿಕ, ರಾಜಕೀಯ ಮತ್ತು ವಾಣಿಜ್ಯ ಕೇಂದ್ರ. ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇರುವ ನಗರ­ಗ­ಳಲ್ಲಿ ದೆಹಲಿ ಎರಡನೇ ಸ್ಥಾನ ಪಡೆದು­ಕೊಂಡಿದೆ.

ರಾಜ್ ಘಾಟ್

ರಾಜ್ ಘಾಟ್

ರಾಜ್ ಘಾಟ್ ಯಮುನಾ ನದಿ ದಡದಲ್ಲಿರುವ ಮಹಾತ್ಮ ಗಾಂಧಿ ಮಾರ್ಗದಲ್ಲಿದೆ. ಇದೊಂದು ದೆಹಲಿಯ ಪ್ರಮುಖವಾದ ಪ್ರವಾಸಿ ತಾಣವಾಗಿದ್ದು, ಇದು ಮಹಾತ್ಮ ಗಾಂಧಿಯವರ ಅಂತ್ಯಸಂಸ್ಕಾರ ಮಾಡಿದ ಸ್ಥಳ ಮತ್ತು ಇದನ್ನು ಜನವರಿ 31, 1948 ರಂದು ಅವರ ಹತ್ಯೆಯಾದ ನಂತರ ನಿರ್ಮಿಸಲಾಯಿತು.ಈ ಸ್ಮಾರಕವು ಕಪ್ಪು ಅಮೃತಶಿಲೆಯಿಂದ ಕಟ್ಟಿದ ಚೌಕಾಕಾರದ ಚಪ್ಪಟೆ ವೇದಿಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X