Search
  • Follow NativePlanet
Share
» »ಶಿವನ ವಿಶಿಷ್ಟವಾದ ರೂಪಗಳು ಇರುವ ದೇವಾಲಯ ಎಲ್ಲಿದೆ ಗೊತ್ತ?

ಶಿವನ ವಿಶಿಷ್ಟವಾದ ರೂಪಗಳು ಇರುವ ದೇವಾಲಯ ಎಲ್ಲಿದೆ ಗೊತ್ತ?

ಒಂದೊಂದು ಪ್ರಾಂತ್ಯದಲ್ಲಿ ವಿಭಿನ್ನವಾದ ರೂಪಗಳ ಮೂಲಕ ಆಕರ್ಷಕವಾಗಿದ್ದು ಒಂದೊಂದು ರೀತಿ ಕರೆಸಿಕೊಳ್ಳುತ್ತಾ ಆರಾಧನೆ ಮಾಡಿಕೊಳ್ಳತ್ತಿರುವ ಶಿವಲಿಂಗವನ್ನು ಭಾರತ ದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಬಹುದು. ಹೀಗೆ ವಿವಿಧ ನಾಮಗಳೊಂದಿಗೆ ಪೂಜ

ಮಹಾಶಿವನೆಂದರೆ ಕೇವಲ ಲಿಂಗ ಸ್ವರೂಪಿ ಎಂದು ಭಾವಿಸುವುದು ಸಹಜ. ಏಕೆಂದರೆ ಶಿವನನ್ನು ಎಂದಿಗೂ ಮೂರ್ತಿಯಾಗಿ ಗರ್ಭಗುಡಿಯಲ್ಲಿ ಆರಾಧನೆ ಮಾಡುವುದಿಲ್ಲ. ದೇವಾಲಯಗಳ ಶಿಲ್ಪಗಳಲ್ಲಿ ಮಾತ್ರ ಶಿವನನ್ನು ನಟರಾಜನಾಗಿ, ಧ್ಯಾನದಲ್ಲಿ ತಲ್ಲೀನನಾಗಿ, ಶಿವನು ತನ್ನ ಪತ್ನಿಯಾದ ಪಾರ್ವತಿ ಹಾಗು ಮಗ ಗಣೇಶನೊಂದಿಗೆ ಇರುವಂತಹ ಹಲವಾರು ಶಿಲ್ಪಗಳನ್ನು ನಾವು ಕಾಣಬಹುದು.

ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!ಸಾವಿರ ವರ್ಷದ ಆ ದೇವಾಲಯದಲ್ಲಿ ಬಗೆಹರಿಸಲಾಗದ ರಹಸ್ಯಗಳು!

<strong></strong>ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!ನಿಮ್ಮ ಜೀವನದಲ್ಲಿ ಎಂದೂ ಕಂಡು ಕೇಳರಿಯದ ವಿಭಿನ್ನವಾದ ಶಿವಲಿಂಗಗಳು!

ಒಂದೊಂದು ಪ್ರಾಂತ್ಯದಲ್ಲಿ ವಿಭಿನ್ನವಾದ ರೂಪಗಳ ಮೂಲಕ ಆಕರ್ಷಕವಾಗಿದ್ದು ಒಂದೊಂದು ರೀತಿ ಕರೆಸಿಕೊಳ್ಳುತ್ತಾ ಆರಾಧನೆ ಮಾಡಿಕೊಳ್ಳತ್ತಿರುವ ಶಿವಲಿಂಗವನ್ನು ಭಾರತ ದೇಶದಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಬಹುದು. ಹೀಗೆ ವಿವಿಧ ನಾಮಗಳೊಂದಿಗೆ ಪೂಜಿಸಲ್ಪಡುತ್ತಿರುವ ಶಿವನು ನೆಲೆಸಿರುವ ಕೆಲವು ವಿಶೇಷವಾದ ಸ್ಥಳಗಳ ಬಗ್ಗೆ ಲೇಖನದ ಮೂಲಕ ತಿಳಿದು, ಅವಕಾಶವಿದ್ದರೆ ಒಮ್ಮೆ ಭೇಟಿ ನೀಡಿ ದರ್ಶನ ಭಾಗ್ಯ ಪಡೆಯೋಣ.

<strong>ಮೃತ್ಯು ಭಯವನ್ನು ಹೋಗಲಾಡಿಸುವ ಕಲ್ಯಾಣಿಯ ಮಹತ್ವ ಏನು ಗೊತ್ತ?</strong>ಮೃತ್ಯು ಭಯವನ್ನು ಹೋಗಲಾಡಿಸುವ ಕಲ್ಯಾಣಿಯ ಮಹತ್ವ ಏನು ಗೊತ್ತ?

ಆಕಾಶ ಭೈರವ

ಆಕಾಶ ಭೈರವ

ಭೈರವ ಎಂಬುದು ಶಿವನ ಒಂದು ವಿಶೇಷವಾದ ರೂಪವೇ ಆಗಿದೆ. ಹಲವು ಭೈರವ ಪೈಕಿ ಆಕಾಶ ಭೈರವ ಎಂಬುದು ಒಂದು ಸ್ವರೂಪ. ಈ ಆಕಾಶ ಭೈರವನನ್ನು ಅತ್ಯಂತ ನಿಷ್ಟೆ, ಭಕ್ತಿಯಿಂದ ಆರಾಧಿಸುತ್ತಾರೆ. ಇತನ ದೇವಾಲಯವು ನೇಪಾಳದ ಕಟ್ಮಂಡುವಿನಲ್ಲಿದೆ. ಆಗಸ್ಟ್ ಹಾಗು ಸೆಪ್ಟೆಂಬರ್ ತಿಂಗಳಿನಲ್ಲಿ ವಿಜೃಂಬಣೆಯಿಂದ ಉತ್ಸವಗಳನ್ನು ನಡೆಸಲಾಗುತ್ತದೆ. ಆ ಉತ್ಸವದ ಸಯದಲ್ಲಿ ಆಕಾಶ ಭೈರವನ ಮುಖವನ್ನು ಮೆರವಣಿಗೆ ಮಾಡಲಾಗುತ್ತದೆ.

Rabs003

ಅರ್ಧನಾರೀಶ್ವರ

ಅರ್ಧನಾರೀಶ್ವರ

ಆ ಮಹಾಶಿವನು ತನ್ನ ಅರ್ಥ ಭಾಗವನ್ನೇ ಪಾರ್ವತಿ ದೇವಿಗೆ ನೀಡಿರುವುದೇ ಅರ್ಥನಾರೀಶ್ವರ. ಅಂದರೆ ಅರ್ಧ ಪುರುಷನಾಗಿ ಮತ್ತು ಅರ್ಧ ಸ್ತ್ರೀರೂಪಿಯಾಗಿ ಪೂಜಿಸುವ ಶಿವನನ್ನೇ ಅರ್ಧನಾರೀಶ್ವರ ಎಂದು ಕರೆಯುತ್ತಾರೆ. ಒಂದೇ ದೇಹದಲ್ಲಿ ಶಿವ ಹಾಗು ಪಾರ್ವತಿ ಐಕ್ಯತೆಯನ್ನು ಸಾರುತ್ತದೆ ಈ ಶಿವನ ರೂಪ.

ಈ ಅರ್ಧನಾರೀಶ್ವನಿಗೆ ಮುಡಿಪಾದ ದೇವಾಲಯಗಳು ಇರುವುದು ಕಡಿಮೆ ಸಂಖ್ಯೆಯಲ್ಲಿಯೇ ಅದರಲ್ಲಿ ಪ್ರಮುಖವಾದುದು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯಲ್ಲಿರುವ ತಿರುಚೆಂಗೋಡೆ ಎಂಬಲ್ಲಿನ ಬೆಟ್ಟವೊಂದರ ಮೇಲಿರುವ ದೇವಾಲಯ.


kurumban

ಅಷ್ಟಮೂರ್ತಿ ಶಿವ

ಅಷ್ಟಮೂರ್ತಿ ಶಿವ

ವೇದಗಳ ಅನುಸಾರ, ರುದ್ರ ಅಥವಾ ಶಿವ ಹಲವು ಗುಣ ವಿಶೇಷಗಳನ್ನು ಹೊಂದಿದ್ದಾನೆ. ಇಲ್ಲಿ 8 ಗುಣಲಕ್ಷಣವನ್ನು ಹೊಂದಿರುವ ಮೂರ್ತಿಗೆ ಪ್ರತೀಕವಾಗಿ ಇತನನ್ನು ಪೂಜಿಸಲಾಗುತ್ತದೆ. ಇತನಿಗೆ ಅಷ್ಟಮೂರ್ತಿ ಶಿವ ಎಂದು ಕರೆಯಲಾಗುತ್ತದೆ. ಈ ವಿಶೇಷವಾದ ದೇವಾಲಯವಿರುವುದು ಛತ್ತೀಸಗಡ್ ರಾಜ್ಯದ ಜಂಜಗೀರ್-ಚಂಪಾ ಜಿಲ್ಲೆಯ ಖರೋದ್ ಎಂಬ ಪಟ್ಟಣದಲ್ಲಿದೆ. ಇದೊಂದು ಅಪರೂಪದ ದೇವಾಲಯವೇ ಆಗಿದೆ.

Ashwini Kesharwani

ಬೇತಾಳ

ಬೇತಾಳ

ಗೋವಾದ ಕೊಂಕಣಿ ಪ್ರದೇಶಗಳಲ್ಲಿ ಹಾಗು ಮಹಾರಾಷ್ಟ್ರದ ಸಿಂಧು ದುರ್ಗದ ಕೊಂಕಣ ಪ್ರದೇಶಗಳಲ್ಲಿ ಶಿವನ ಈ ಬೇತಾಳನ ಅವತಾರವನ್ನು ಮುಖ್ಯವಾಗಿ ಆರಾಧಿಸಲಾಗುತ್ತದೆ. ಇತನನ್ನು ಈ ಪ್ರದೇಶದವರು ಗ್ರಾಮ ದೇವತೆಯಾಗಿ ಆರಾಧಿಸುತ್ತಾರೆ. ಈ ರೂಪದಲ್ಲಿ ಮಹಾಶಿವನು ಅರೆ ಬೆತ್ತಲೆಯಲ್ಲಿದ್ದು, ಒಂದು ಕೈಯಲ್ಲಿ ಖಡ್ಗವನ್ನು ಹಾಗು ಇನ್ನೊಂದು ಕೈಯಲ್ಲಿ ಬಟ್ಟಲನ್ನು ಹಿಡಿದಿರುತ್ತಾನೆ.


Agawas

ಕಾಳಭೈರವ

ಕಾಳಭೈರವ

ಈ ಮೊದಲೇ ಹೇಳಿದಂತೆ ಕಾಲ ಭೈರವ ಶಿವನ ಒಂದು ಉಗ್ರ ಸ್ವರೂಪ. ಶಿವನ ಈ ಅವತಾರದ ಕುರಿತು ಸ್ವಾರಸ್ಯಕರವಾದ ಹಿನ್ನೆಲೆಯಿದೆ. ಅದೆನೆಂದರೆ ಒಂದೊಮ್ಮೆ ಬ್ರಹ್ಮನು ಆಲೋಚಿಸಿದನಂತೆ "ನನಗೂ ಸಹ ಶಿವನ ಹಾಗೆ 5 ತಲೆಗಳಿವೆ. ಶಿವನು ಏನು ಮಾಡಬಲ್ಲನೋ ಅದೇ ನಾನು ಸಹ ಮಾಡಬಲ್ಲೇ ಎಂದು ಅಂದುಕೊಳ್ಳುತ್ತಾನೆ. ಹಾಗಾಗಿ ನಾನು ಕೂಡ ಶಿವನೇ" ಎಂದು ಅಹಂಕಾರ ಮೂಡುತ್ತದೆ. ಹಾಗಾಗಿ ಶಿವನ ಎಲ್ಲಾ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುತ್ತಾನೆ. ಇದರಿಂದ ಕೋಪಗೊಂಡ ಶಿವ ತನ್ನ ಬೆರಳಿನ ಉಗುರಿನ ಒಂದು ತುದಿಯನ್ನು ಎತ್ತಿ ಒಗೆದನಂತೆ ಅದರಿಂದ ಉದ್ಬವಿಸಿದವನೆ ಕಾಳಭೈರವ.

ಈ ದೇವಾಲಯವು ಪ್ರಸ್ತುತ ತಮಿಳುನಾಡಿನ ತಿರುವಣ್ಣಾಮಲೈನ ಕಾಗಾ ಆಶ್ರಮದಲ್ಲಿ ಕಾಳಭೈರವನ ದೇವಾಲಯವನ್ನು ಕಾಣಬಹುದಾಗಿದೆ.


Vitbaisa

ಭಿಕ್ಷಾಟನ ಮೂರ್ತಿ

ಭಿಕ್ಷಾಟನ ಮೂರ್ತಿ

ಬ್ರಹ್ಮನ 4 ತಲೆಗಳಲ್ಲಿ 1 ಅನ್ನು ಕಡಿದ ಮಹಾಶಿವನು ಆ ಪಾಪದ ಪ್ರಾಯಶ್ಚಿತಕ್ಕಾಗಿ ಭೈರವನ ಇನ್ನೊಂದು ರೂಪವಾಗಿ ಭಿಕ್ಷಾಟನ ಮೂರ್ತಿಯಾಗಿ ಶಿವನು ಲೋಕದ ತುಂಬೆಲ್ಲಾ ಭಿಕ್ಷೆ ಬೇಡುತ್ತಾ ಅಲೆಯುತ್ತಿರುತ್ತಾನೆ. ತದನಂತರ ವಾರಾಣಾಸಿಗೆ ತಲುಪಿದ ನಂತರ ಆತನ ಪಾಪ ವಿಮೋಚನೆಯಾಗುತ್ತದೆ ಎಂಬುದು ಒಂದು ಪುರಾಣದ ಕಥೆಯಾಗಿದೆ. ಶಿವನು ಭೀಕ್ಷಾಟನಾ ಮೂರ್ತಿಯಾಗಿ ನೆಲೆಸಿರುವ ದೇವಾಲಯವಿರುವುದು ತಿರುವಣ್ಣಾಮಲೈನಲ್ಲಿರುವ ಅಣ್ಣಮಲೈಯಾರದ ದೇವಾಲಯದಲ್ಲಿ.


Redtigerxyz

ಭೂಡಸಿದ್ಧನಾಥ ದೇವಾಲಯ

ಭೂಡಸಿದ್ಧನಾಥ ದೇವಾಲಯ

ಈ ಮಾಹಿಮಾನ್ವಿತವಾದ ಶಿವನ ದೇವಾಲಯವು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಭೂಡ್ ಗ್ರಾಮದ ಪ್ರಭಾವಿ ದೈವನಾಗಿ ಭೂಡಸಿದ್ಧನಾಥನನ್ನು ಆರಾಧಿಸಲಾಗುತ್ತದೆ. ಈ ಭೂಡಸಿದ್ಧನಾಥ ಶಿವನ ಇನ್ನೊಂದು ರೂಪ. ಈ ಗ್ರಾಮದ ಕ್ಷೇತ್ರ ಪಾಲಕನಾಗಿ ಇತನನ್ನು ಆರಾಧಿಸಲಾಗುತ್ತದೆ. ವಾರ್ಷಿಕ ಉತ್ಸವವು ವರ್ಷಕ್ಕೆ 3 ಬಾರಿ ವಿಜೃಂಬಣೆಯಿಂದ ಆಚರಿಸಲಾಗುತ್ತದೆ.


Sujitkumarpatil

ದಕ್ಷಿಣ ಮೂರ್ತಿ ದೇವಾಲಯ

ದಕ್ಷಿಣ ಮೂರ್ತಿ ದೇವಾಲಯ

ಶಿವನ ಈ ಅವತಾರ ಅತ್ಯಂತ ಸೌಮ್ಯ ಸ್ವಭಾವದ್ದಾಗಿರುತ್ತದೆ. ಇದರ ಅರ್ಧ ಸ್ವಾಮಿಯು ದಕ್ಷಿಣಕ್ಕೆ ಮುಖ ಮಾಡಿರುವುದು ಎಂಬ ಅರ್ಥವನ್ನು ನೀಡುತ್ತದೆ. ಶಿವನ ಪವಿತ್ರವಾದ 12 ಜ್ಯೋತ್ರ್ಯಿಲಿಂಗಗಳಲ್ಲಿ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರನ ಶಿವ ದೇವಾಲಯವು ಒಂದು. ಅದೇ ದಕ್ಷಿಣ ಮೂರ್ತಿ ದೇವಾಲಯವಾಗಿದೆ. ಹೀಗಾಗಿ ಉತ್ತಮ ಶಿಕ್ಷಣದ ಆಕಾಂಶಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.


Rammohan65


ಗಜಾಂತಕ ದೇವಾಲಯ

ಗಜಾಂತಕ ದೇವಾಲಯ

ಗಜಾಸುರ ಎಂಬ ರಾಕ್ಷಸನನ್ನು ಶಿವನು ಸಂಹಾರ ಮಾಡಿದ ಕಾರಣ ಗಜಾಂತಕ ಎಂದು ಹೆಸರು ಬಂದಿತು. ಇತನ ದೇವಾಲಯವು ತಮಿಳುನಾಡಿನ ಮೈಲಾಡುತುರೈನಿಂದ 10 ಕಿ.ಮೀ ದೂರದಲ್ಲಿರುವ ವುಳುವೂರ್ ಎಂಬ ಸ್ಥಳದಲ್ಲಿ ಗಜಾಸುರಸಂಹಾರ ರೂಪಿ ಶಿವನ ಪ್ರಮುಖವಾದ ದೇವಾಲಯವಿದೆ.

Ravichandar84

ಖಂಡೋಬ ದೇವಾಲಯ

ಖಂಡೋಬ ದೇವಾಲಯ

ಶಿವನ ಮತ್ತೊಂದು ರೂಪವಾದ ಖಂಡೋಬದ ದೇವಾಲಯವಿರುವುದು ಮಹಾರಾಷ್ಟ್ರದಲ್ಲಿ ಪೂಜಿಸಲಾಗುತ್ತದೆ. ಈ ದೇವಾಲುವು ಪೂಣೆ ಜಿಲ್ಲೆಯಲ್ಲಿರುವ ಜೆಜುರಿಯು ಖಂಡೋಬನ ದೇವಾಲಯ ಎಂದೇ ಪ್ರಸಿದ್ಧವಾಗಿದೆ.


PratibhaS Pawar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X