Search
  • Follow NativePlanet
Share
» »ಟೂರ್‌ ಹೋಗುವಾಗ ಈ ರೀತಿ ಲಗೇಜ್ ಪ್ಯಾಕ್‌ ಮಾಡಿದ್ರೆ ಎಷ್ಟು ಬೇಕಾದ್ರೂ ತುಂಬಿಸಬಹುದು

ಟೂರ್‌ ಹೋಗುವಾಗ ಈ ರೀತಿ ಲಗೇಜ್ ಪ್ಯಾಕ್‌ ಮಾಡಿದ್ರೆ ಎಷ್ಟು ಬೇಕಾದ್ರೂ ತುಂಬಿಸಬಹುದು

ಪ್ರವಾಸಕ್ಕೆ ಹೋಗುವಾಗ ಅಥವಾ ಒಂದೆರಡು ದಿನಕ್ಕೆ ಪಿಕ್‌ನಿಕ್ ಹೋಗುವಾಗ ಬೇರೆ ಊರಿಗೆ ಹೋಗುವಾಗ ಎಷ್ಟು ದಿನಗಳ ಕಾಲಕ್ಕೆ ಪ್ರವಾಸ ಹೋಗುತ್ತೀವೋ ಅಷ್ಟು ದಿನಗಳ ಬಟ್ಟೆ ಬರೆ ನಮಗೆ ಬೇಕಾದ ವಸ್ತುಗಳನ್ನೆಲ್ಲಾ ಹಿಡಿದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಾವು ಪ್ಯಾಕಿಂಗ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬಹುತೇಕರಿಗೆ ಪ್ಯಾಕಿಂಗ್ ಮಾಡೋದಂದ್ರೆ ದೊಡ್ಡ ತಲೆನೋವಾಗಿ ಬಿಡುತ್ತದೆ. ಏನನ್ನು ಹಿಡಿದುಕೊಳ್ಳಬೇಕು, ಏನನ್ನು ಬೇಡ ಅನ್ನೋದನ್ನು ನಿರ್ಧರಿಸಬೇಕಾಗುತ್ತದೆ. ಎಲ್ಲಿಗೆ ಪ್ರವಾಸ ಹೋಗುವಾಗ ಆದಷ್ಟು ಕಡಿಮೆ ಲಗೇಜ್ ಇದ್ರೆನೇ ಆರಾಮವಾಗಿ ತಿರುಗಾಡಿಕೊಂಡು ಬರಬಹುದು. ಇಲ್ಲವಾದಲ್ಲಿ ನಮ್ಮ ಲಗೇಗ್ ನಮಗೆ ಹೊರೆ ಅನಿಸಿಬಿಡುತ್ತದೆ.

ಹೈದರಾಬಾದ್‌ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕುಹೈದರಾಬಾದ್‌ನ ಈ ಸ್ಥಳಗಳಲ್ಲೆಲ್ಲಾ ಇರಾನಿ ಚಾಯ್ ಕುಡಿಲೇ ಬೇಕು

ಇನ್ನು ನಮ್ಮ ಸಾಮಾನು ಎಷ್ಟೊಂದಿರುತ್ತೆ ಅಂದ್ರೆ ಬ್ಯಾಗ್‌ನಲ್ಲಿ ತುಂಬಿಸಲು ಸ್ಥಳ ಇಲ್ಲದಂತಾಗಿ ಬಿಡುತ್ತದೆ. ಅದಕ್ಕೆ ಮುಖ್ಯ ಕಾರಣ ನಾವು ನಮ್ಮ ಬಟ್ಟೆ ಬರೆಗಳನ್ನು ಮಡಿಚಿಡುವ ವಿಧಾನ. ಹಾಗಾದ್ರೆ ಬನ್ನಿ ನಿಮ್ಮ ಪ್ರಯಾಣಕ್ಕೆ ಬೇಕಾಗುವ ವಸ್ತುಗಳನ್ನು ಯಾವ ರೀತಿ ಲಗೇಜ್‌ನಲ್ಲಿ ಪ್ಯಾಕ್‌ ಮಾಡೋದು ಅನ್ನೋದಕ್ಕೆ ಇಲ್ಲಿದೆ ಕೆಲವು ಟಿಪ್ಸ್.

ರೋಲ್ ಮಾಡಿ

ರೋಲ್ ಮಾಡಿ

ಸಾಮಾನ್ಯವಾಗಿ ನಾವೆಲ್ಲರು ನಮ್ಮ ಬಟ್ಟೆಗಳನ್ನು ಬ್ಯಾಗ್‌ನಲ್ಲಿ ತುಂಬಿಸುವಾಗ ಅದನ್ನು ಮಡಚಿ ಇಟ್ಟುಬಿಡುತ್ತೇವೆ. ಆದರೆ ಮಡಚುವ ಬದಲಿಗೆ ಬಟ್ಟೆಯನ್ನು ರೋಲ್ ಮಾಡಿ ಇಡುವುದರಿಂದ ಬೇಗವೂ ಆಗುತ್ತದೆ ಜೊತೆಗೆ ಸ್ಥಳವೂ ದೊರೆಯುತ್ತದೆ.

ಉಲ್ಟಾ ಮಡಚಿ

ಉಲ್ಟಾ ಮಡಚಿ

ಬಟ್ಟೆಯನ್ನು ಮಡಚುವಾಗ ನಾವು ಸೀದಾ ಮಡಚಿಬಿಡುತ್ತೇವೆ. ಅದರ ಬದಲಿಗೆ ಬಟ್ಟೆಯನ್ನು ಉಲ್ಟಾ ಮಾಡಿ ಮಡಚಿದ್ರೆ ಬಟ್ಟೆಗೆ ಕಲೆಗಳಾಗುವುದರಿಂದ ರಕ್ಷಿಸಬಹುದಾಗಿದೆ. ಕಲೆಗಳಾಗುವುದಾದರೆ ಬಟ್ಟೆಯ ಒಳಗಿನ ಭಾಗಕ್ಕೆ ಆಗುತ್ತದೆ.

ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !ಇಲ್ಲಿ ರಾತ್ರಿ ಉಳಿಯಲು ಹೆದರ್ತಾರಂತೆ ಜನ್ರು, ಒಂದು ವೇಳೆ ಉಳ್ಕೊಂಡ್ರೆ ನೀವೂ ಹೀಗಾಗ್ಬಿಡ್ತೀರಾ !

 ತೂಕದ ವಸ್ತು

ತೂಕದ ವಸ್ತು

ಬ್ಯಾಗ್‌ನಲ್ಲಿ ತೂಕದ ವಸ್ತುಗಳನ್ನು ಇಡುವಾಗ ಬ್ಯಾಗ್‌ನ ಕೆಳಭಾಗದಲ್ಲಿಡಿ ಹೀಗೆ ಮಾಡುವುದರಿಂದ ಬ್ಯಾಗ್‌ನಲ್ಲಿ ವೈಟ್‌ ಡಿಸ್ಟ್ರಿಬ್ಯೂಶನ್ ಸರಿಯಾಗಿ ಆಗುತ್ತದೆ. ಜೊತೆಗೆ ವಸ್ತು ಚೆಲ್ಲಾಪಿಲ್ಲಿಯಾಗೋದಿಲ್ಲ.

ದಿನಬಳಕೆ ವಸ್ತು

ದಿನಬಳಕೆ ವಸ್ತು

ದಿನಬಳಕೆಯ ವಸ್ತುಗಳಾದ ಬ್ರಶ್, ಪೇಸ್ಟ್, ಸಾಬೂನ್‌ನಂತಹ ವಸ್ತುಗಳನ್ನು ಪಾರದರ್ಶಕ ಪ್ಲಾಸ್ಟಿಕ್‌ನೊಳಗೆ ಹಾಕಿ. ಹೀಗೆ ಮಾಡೋದರಿಂದ ಈ ವಸ್ತುಗಳು ಲೀಕ್‌ ಆಗಿ ನಿಮ್ಮ ಬ್ಯಾಗ್‌ನ್ನು ಹಾಳು ಮಾಡೋದಿಲ್ಲ.

 ಮೊಬೈಲ್ ಚಾರ್ಜರ್

ಮೊಬೈಲ್ ಚಾರ್ಜರ್

ಮೊಬೈಲ್ ಚಾರ್ಜರ್ ಇಡೋದನ್ನು ಮರೆಯಬೇಡಿ. ಮೊಬೈಲ್ ಚಾರ್ಜರ್ ಹಾಗೂ ಇನ್ನಿತರ ವಯರ್‌ನ ವಸ್ತುಗಳನ್ನು ಯಾವಾಗಲೂ ರೋಲ್‌ ಮಾಡಿ ಇಡಿ. ಹೀಗೆ ಮಾಡೋದರಿಂದ ಇದು ಬೇರೆ ವಸ್ತುಗಳ ಜೊತೆ ಸಿಕ್ಕಿಹಾಕೋದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X