Search
  • Follow NativePlanet
Share
» »ನಿಗೂಢ ದೇವಾಲಯ; ಈ ವಿಗ್ರಹಗಳ ರಹಸ್ಯವನ್ನು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ!

ನಿಗೂಢ ದೇವಾಲಯ; ಈ ವಿಗ್ರಹಗಳ ರಹಸ್ಯವನ್ನು ಬಿಡಿಸಲು ಇನ್ನೂ ಸಾಧ್ಯವಾಗಿಲ್ಲ!

ಜಗತ್ತಿನಲ್ಲಿ ಅನೇಕ ನಿಗೂಢ ಸಂಗತಿಗಳಿವೆ. ಅವುಗಳ ಬಗ್ಗೆ ತಜ್ಞರಿಗೇ ಇಂದಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕೂಡ ಇಂತಹ ಅನೇಕ ಸ್ಥಳಗಳಿದ್ದು, ಅದರ ರಹಸ್ಯಗಳು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಅಂದಹಾಗೆ ಈ ಲೇಖನದಲ್ಲಿ ನಾವು ಇಂದು 99 ಲಕ್ಷದ 99 ಸಾವಿರದ 999 ಕಲ್ಲಿನ ವಿಗ್ರಹಗಳನ್ನು ಹೊಂದಿರುವ ಸ್ಥಳದ ಬಗ್ಗೆ ಹೇಳಲಿದ್ದೇವೆ.

ವಿಶೇಷವೆಂದರೆ ಆ ದೇವಾಲಯದ ವಿಗ್ರಹಗಳ ರಹಸ್ಯವನ್ನು ಇಂದಿಗೂ ಭೇದಿಸಲಾಗಿಲ್ಲ. ಈ ದೇವಾಲಯದ ರಹಸ್ಯವನ್ನು ಪರಿಹರಿಸಲು ಅನೇಕ ವಿದ್ವಾಂಸರು ಬಂದಿದ್ದರೂ, ಅವರೆಲ್ಲರೂ ವಿಫಲರಾದರು. ಹಾಗಾದರೆ ಈ ದೇವಾಲಯದ ವಿಶೇಷ ರಹಸ್ಯವೇನು ಅಂತೀರಾ?, ಮುಂದೆ ಓದಿ...

ಒಂದು ಕೋಟಿಗೆ ಒಂದು ವಿಗ್ರಹ ಕಡಿಮೆ

ಒಂದು ಕೋಟಿಗೆ ಒಂದು ವಿಗ್ರಹ ಕಡಿಮೆ

ಈ ಮೊದಲೇ ಹೇಳಿದ ಹಾಗೆ ದೇವಾಲಯದಲ್ಲಿ 99 ಲಕ್ಷದ 99 ಸಾವಿರದ 999 ವಿಗ್ರಹಗಳಿವೆ. ಆದರೆ ಈ ವಿಗ್ರಹಗಳನ್ನು ಯಾರು, ಯಾವಾಗ ಮತ್ತು ಏಕೆ ಮಾಡಿದರು. ಅಷ್ಟಕ್ಕೂ ದೇವಸ್ಥಾನದಲ್ಲಿ ಇಷ್ಟೊಂದು ವಿಗ್ರಹಗಳಿರುವುದೇಕೆ?, ಎಲ್ಲಕ್ಕಿಂತ ದೊಡ್ಡ ರಹಸ್ಯ ಅಂದರೆ ಇನ್ನೊಂದು ವಿಗ್ರಹ ಮಾಡಿದ್ದರೂ ಒಂದು ಕೋಟಿಯಾಗುತ್ತಿತ್ತು. ಆದರೇಕೆ ಮಾಡಲಿಲ್ಲ ಎಂಬುದು ನಿಗೂಢ ಸಂಗತಿಯಾಗಿದೆ.

ಶಿಲೆಯಾದ ದೇವತೆಗಳು!

ಶಿಲೆಯಾದ ದೇವತೆಗಳು!

ಭಾರತದಲ್ಲಿ ಅನೇಕ ನಿಗೂಢ ದೇವಾಲಯಗಳಿವೆ. ಅಂತೆಯೇ ಈ ದೇವಾಲಯವನ್ನೂ ನಿಗೂಢ ದೇವಾಲಯವೆಂದು ಪರಿಗಣಿಸಲಾಗಿದೆ. ಈ ದೇವಾಲಯದ ಪ್ರತಿಮೆಗಳ ಬಗ್ಗೆ ಅನೇಕ ಕಥೆಗಳನ್ನು ಹೇಳಲಾಗುತ್ತದೆ. ಈ ದೇವಾಲಯದ ರಹಸ್ಯವನ್ನು ತಿಳಿದುಕೊಳ್ಳುವ ಕುತೂಹಲ ಇಲ್ಲಿಗೆ ಬರುವ ಪ್ರತಿಯೊಬ್ಬರ ಭಕ್ತರ ಮನದಲ್ಲಿ ಮೂಡುತ್ತದೆ. ಆದರೆ ಈ ದೇವರ ಪ್ರತಿಮೆಗಳ ರಹಸ್ಯವನ್ನು ಇನ್ನೂ ಯಾರಿಗೂ ಬಿಡಿಸಲು ಸಾಧ್ಯವಾಗಿಲ್ಲ. ಮೂಲಗಳ ಪ್ರಕಾರ, ಒಮ್ಮೆ ಶಿವ ಸೇರಿದಂತೆ ಒಂದು ಕೋಟಿ ದೇವತೆಗಳು ಎಲ್ಲೋ ಹೋಗುತ್ತಿದ್ದರು.

ರಾತ್ರಿ ಆಯಿತೆಂದು ಉಳಿದ ದೇವತೆಗಳು ಶಿವನನ್ನು ಉನಕೋಟಿಯಲ್ಲಿ ನಿಲ್ಲಿಸಿ, ವಿಶ್ರಾಂತಿ ಪಡೆಯುವಂತೆ ಕೇಳಿಕೊಂಡರು. ಶಿವನು ಕೂಡ ಒಪ್ಪಿಕೊಂಡನು. ನಂತರ ಎಲ್ಲರೂ ಸೂರ್ಯೋದಯಕ್ಕೆ ಮುಂಚೆಯೇ ಈ ಸ್ಥಳವನ್ನು ಬಿಡಬೇಕು ಎಂದು ಶಿವನು ಹೇಳಿದನು. ಆದರೆ ಶಿವನು ಮಾತ್ರ ಸೂರ್ಯೋದಯಕ್ಕಿಂತ ಮುಂಚೆ ಎಚ್ಚರಗೊಂಡನು. ಉಳಿದ ಎಲ್ಲಾ ದೇವತೆಗಳು ನಿದ್ರಿಸುತ್ತಿದ್ದರು. ದೇವತೆಗಳು ನಿದ್ರಿಸುತ್ತಿರುವುದನ್ನು ಕಂಡು ಶಿವನು ಕೋಪಗೊಂಡು ಶಪಿಸಿದನು. ಎಲ್ಲಾ ದೇವತೆಗಳು ಶಿಲೆಯಾದರು. ಈ ಕಾರಣಕ್ಕಾಗಿ ಇಲ್ಲಿ 99 ಲಕ್ಷದ 99 ಸಾವಿರದ 999 ವಿಗ್ರಹಗಳಿವೆ, ಅಂದರೆ ಒಂದು ಕೋಟಿಗಿಂತ ಕಡಿಮೆ (ಶಿವನನ್ನು ಹೊರತುಪಡಿಸಿ).

‘ಉನಕೋಟಿ’ ಹೆಸರು ಬರಲು ಕಾರಣವೇನು?

‘ಉನಕೋಟಿ’ ಹೆಸರು ಬರಲು ಕಾರಣವೇನು?

ಈ ವಿಗ್ರಹಗಳ ಬಗ್ಗೆ ಇನ್ನೊಂದು ಕಥೆಯಿದೆ. ಕಲು ಎಂಬ ಕುಶಲಕರ್ಮಿಯೊಬ್ಬರು ಶಿವ ಮತ್ತು ತಾಯಿ ಪಾರ್ವತಿಯೊಂದಿಗೆ ಕೈಲಾಸ ಪರ್ವತಕ್ಕೆ ಹೋಗಲು ಬಯಸಿದ್ದರು ಎಂದು ಹೇಳಲಾಗುತ್ತದೆ. ಕೊನೆಗೆ ಕುಶಲಕರ್ಮಿಯ ಒತ್ತಾಯಕ್ಕೆ ಮಣಿದ ಶಿವನು ಒಂದೇ ರಾತ್ರಿಯಲ್ಲಿ ಒಂದು ಕೋಟಿ ದೇವತೆಗಳ ಮೂರ್ತಿಗಳನ್ನು ಮಾಡಿದರೆ ಕೈಲಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದನು.

ಇದನ್ನು ಕೇಳಿದ ಕುಶಲಕರ್ಮಿ ತನ್ನನ್ನು ತನ್ನ ಕೆಲಸದಲ್ಲಿ ತೊಡಗಿಸಿಕೊಂಡನು. ವೇಗವಾಗಿ ಒಂದೊಂದಾಗಿ ವಿಗ್ರಹಗಳನ್ನು ನಿರ್ಮಿಸಲು ಪ್ರಾರಂಭಿಸಿದನು. ರಾತ್ರಿಯಿಡೀ ವಿಗ್ರಹಗಳನ್ನು ನಿರ್ಮಿಸಿದನು. ಆದರೆ ಬೆಳಗ್ಗೆ ಎಣಿಸಿದಾಗ ಅದರಲ್ಲಿ ಒಂದು ವಿಗ್ರಹ ಕಡಿಮೆ ಇರುವುದು ಕಂಡುಬಂದಿದೆ. ಇದರಿಂದಾಗಿ ಶಿವನು ಆ ಕುಶಲಕರ್ಮಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲಿಲ್ಲ. ಈ ಕಾರಣದಿಂದ ಈ ಸ್ಥಳಕ್ಕೆ ‘ಉನಕೋಟಿ' ಎಂಬ ಹೆಸರು ಬಂದಿದೆ ಎಂದು ನಂಬಲಾಗಿದೆ.

ಈ ದೇವಾಲಯ ಎಲ್ಲಿದೆ?

ಈ ದೇವಾಲಯ ಎಲ್ಲಿದೆ?

ಉನಕೋಟಿ ದೇವಾಲಯವು ತ್ರಿಪುರದ ರಾಜಧಾನಿ ಅಗರ್ತಲಾದಿಂದ ಸುಮಾರು 145 ಕಿಮೀ ದೂರದಲ್ಲಿದೆ. ಇನ್ನೂ ಅನೇಕ ಜನರಿಗೆ ಈ ಸ್ಥಳದ ಹೆಸರೇ ತಿಳಿದಿಲ್ಲ. ಈಶಾನ್ಯ ಭಾರತದಲ್ಲಿರುವ ಅತ್ಯಂತ ದೊಡ್ಡ ರಹಸ್ಯಗಳ ಪೈಕಿ ಇದು ಒಂದೆಂದು ಪರಿಗಣಿಸಲಾಗಿದೆ. ಈ ಸ್ಥಳದ ಬಗ್ಗೆ ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಈ ನಿಗೂಢ ಸ್ಥಳವು ದಟ್ಟವಾದ ಕಾಡುಗಳು ಮತ್ತು ಜವುಗು ಪ್ರದೇಶಗಳಿಂದ ತುಂಬಿರುವ ಪರ್ವತ ಪ್ರದೇಶವಾಗಿದೆ. ಈ ಕಾಡಿನ ಮಧ್ಯದಲ್ಲಿ ಲಕ್ಷಾಂತರ ವಿಗ್ರಹಗಳನ್ನು ಹೇಗೆ ನಿರ್ಮಿಸಲಾಯಿತು?. ಏಕೆಂದರೆ ಇಷ್ಟೊಂದು ವಿಗ್ರಹಗಳನ್ನು ನಿರ್ಮಿಸಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮೊದಲು ಈ ಪ್ರದೇಶದ ಸುತ್ತಲೂ ಯಾರೂ ವಾಸಿಸುತ್ತಿರಲಿಲ್ಲ. ಹಾಗಾಗಿ ಇದು ದೀರ್ಘಕಾಲದವರೆಗೆ ಸಂಶೋಧನೆಯ ವಿಷಯವಾಗಿದೆ.

ಉನಕೋಟಿಗೆ ಹೋಗುವುದು ಹೇಗೆ?

ಉನಕೋಟಿಗೆ ಹೋಗುವುದು ಹೇಗೆ?

ಉನಕೋಟಿಗೆ ಹೋಗಬೇಕೆಂದರೆ ಟ್ಯಾಕ್ಸಿಗಳು, ಖಾಸಗಿ ವಾಹನಗಳು ಅಥವಾ ಹೆಲಿಕಾಪ್ಟರ್‌'ಗಳನ್ನು ಬಳಸಬಹುದು. ಅಗರ್ತಲಾ ಮತ್ತು ಕೈಲಾಶಹರ್‌ನಿಂದ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದೆ.

ಕಮಲಾಪುರವು ಉನಕೋಟಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದೆ. ಪ್ರಮುಖ ವಿಮಾನ ನಿಲ್ದಾಣವೆಂದರೆ ಅಗರ್ತಲಾ. ಇಲ್ಲಿಂದ ನೀವು ಬಸ್ ಅಥವಾ ಕ್ಯಾಬ್ ಮೂಲಕ ಉನಕೋಟಿಗೆ ಹೋಗಬಹುದು. ಸುಮಾರು ಮೂರೂವರೆ ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇದು ಗುವಾಹಟಿ, ಹೈದರಾಬಾದ್, ಬೆಂಗಳೂರು, ಮುಂಬೈ, ಕೋಲ್ಕತ್ತಾ, ನವದೆಹಲಿ, ಇಂಫಾಲ್ ಮತ್ತು ಸಿಲ್ಚಾರ್ ನಂತಹ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ರಸ್ತೆ ಮಾರ್ಗದಲ್ಲಿ ಹೋಗುವುದಾದರೆ ಹತ್ತಿರದ ನಗರಗಳು ಮತ್ತು ಪಟ್ಟಣಗಳಿಂದ ಉನಕೋಟಿಗೆ ಬಸ್ಸುಗಳು ಲಭ್ಯವಿದೆ. ಉನಕೋಟಿಗೆ ಕ್ಯಾಬ್ ಬಾಡಿಗೆಗೆ ಪಡೆಯುವುದು ಉತ್ತಮ.

ಹತ್ತಿರದ ರೈಲು ನಿಲ್ದಾಣವೆಂದರೆ ಕುಮಾರ್‌ಘಾಟ್ ಇದು ತ್ರಿಪುರಾದ ಎಲ್ಲಾ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ರೈಲು ನಿಲ್ದಾಣದಿಂದ, ಟ್ಯಾಕ್ಸಿಗಳು ಮತ್ತು ಬಸ್ಸುಗಳು ನಿಮ್ಮನ್ನು ಉನಕೋಟಿಗೆ ಕರೆದೊಯ್ಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X