India
Search
  • Follow NativePlanet
Share
» »ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ 55 ಗಂಟೆಯೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ ಎಲ್ಲಿ ಜನಿಸಿದ್ದು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಅವರ ಊರು ಯಾವುದು ಅಲ್ಲಿನ ವಿಶೇಷತೆ ಏನು ಅನ್ನೋದನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ. ಯಡಿಯೂರಪ್ಪ ಜನಿಸಿದ್ದು ಸಕ್ಕರೆನಾಡಿನಲ್ಲಿ. ಬಯಲು ಸೀಮೆಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಅಲ್ಲಿನ ಮಹತ್ವವೇನು ಅನ್ನೋದನ್ನು ತಿಳಿಯೋಣ.

ಕೆ.ಆರ್.ಪೇಟೆ

ಕೆ.ಆರ್.ಪೇಟೆ

PC: Prof tpms

ಯಡಿಯೂರಪ್ಪ ಫೆ. 27, 1943ರಂದುಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದರು. ತುಮಕೂರು ಜಿಲ್ಲೆಯ ಯಡಿಯೂರು ಊರಿನಲ್ಲಿರುವ ಸಿದ್ಧಲಿಂಗೇಶ್ವರ ದೇವರ ಹೆಸರನ್ನು ಇವರಿಗೆ ನಾಮಕರಣ ಮಾಡಲಾಗಿದೆ.ಯಡಿಯೂರಪ್ಪ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ.

ಮಾಂಡವ್ಯ ಋಷಿ

ಮಾಂಡವ್ಯ ಋಷಿ

ಮಂಡ್ಯ ಎಂಬ ಹೆಸರು 'ಮಾಂಡವ್ಯ ಋಷಿ'ಯಿಂದ ಬಂದದ್ದೆಂದು ಹೇಳಲಾಗುತ್ತದೆ. ಮಂಡ್ಯವುಮೈಸೂರುಮತ್ತುಬೆಂಗಳೂರುನಗರಗಳ ಮಧ್ಯದಲ್ಲಿದ್ದು ಬೆಂಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿದೆ. ಮಂಡ್ಯ ಜಿಲ್ಲೆಯ ಒಟ್ಟು 4850ಚ. ಕಿಮೀ. ವಿಸ್ತೀರ್ಣ ಹೊಂದಿದೆ.

ಏಳು ತಾಲೂಕುಗಳಿರುವ ಮಂಡ್ಯ

ಏಳು ತಾಲೂಕುಗಳಿರುವ ಮಂಡ್ಯ

ಮಂಡ್ಯಜಿಲ್ಲೆ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿದೆ. ಉತ್ತರದಲ್ಲಿ ತುಮಕೂರು ದಕ್ಷಿಣ ಹಾಗೂ ನೈರುತ್ಯದಲ್ಲಿ ಮೈಸೂರು, ಪೂರ್ವಕ್ಕೆ ರಾಮನಗರ, ವಾಯುವ್ಯಕ್ಕೆ ಹಾಸನ ಜಿಲ್ಲೆಗಳ ಗಡಿಗಳಿಂದ ಸುತ್ತುವರೆದಿದೆ. ಈ ಜಿಲ್ಲೆಯ ಒಟ್ಟು ವಿಸ್ತೀರ್ಣ 4958 ಚದರ ಕಿ.ಮೀ.ಗಳು ಅಂದರೆ 1924ಚದರ ಮೈಲಿ. ಸಮುದ್ರಮಟ್ಟಕ್ಕಿಂತ ಸುಮಾರು 762ರಿಂದ 914ಮೀಟರ್ ಎತ್ತರಕ್ಕಿದೆ. ಮಂಡ್ಯಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವು ಕೃಷ್ಣರಾಜಪೇಟೆ, ಮಂಡ್ಯ, ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳು. ಜಿಲ್ಲೆಯಲ್ಲಿ ಸುಮಾರು ಒಂದೂವರೆ ಸಾವಿರ ಹಳ್ಳಿಗಳಿದ್ದು ಪ್ರಮುಖ ಕಸುಬು ಬೇಸಾಯ.

ಪ್ರೇಕ್ಷಣಿಯ ಸ್ಥಳಗಳು

ಪ್ರೇಕ್ಷಣಿಯ ಸ್ಥಳಗಳು

PC- Prathyush Thomas

ಮಂಡ್ಯ ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣಿಯ ಸ್ಥಳಗಳಿವೆ. ಅವುಗಳಲ್ಲಿ ಮೇಲುಕೋಟೆ ಚೆಲುವ ನಾರಾಯಣ ದೇವಸ್ಥಾನ , ರಂಗನ ತಿಟ್ಟು ಪಕ್ಷಿಧಾಮ, ಶಿವನಸಮುದ್ರ ಜಲಾಶಯ, ಶ್ರೀರಂಗಪಟ್ಟಣ, ಕೃಷ್ಣ ರಾಜ ಸಾಗರ ಅಣೆಕಟ್ಟು, ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು, ರಂಗನಾಥಸ್ವಾಮಿ ದೇವಾಲಯ ಮುಖ್ಯವಾದೂದಾಗಿದೆ.

ಕೃಷ್ಣರಾಜಸಾಗರ

ಕೃಷ್ಣರಾಜಸಾಗರ

PC: YVSREDDY

ಮಂಡ್ಯ ಜಿಲ್ಲೆಗೆ ಪ್ರಮುಖ ನೀರು ಸರಬರಾಜಿನ ಆಗರ.ಕಾವೇರಿನದಿ, ಕೃಷ್ಣರಾಜಸಾಗರ ಅಣೆಕಟ್ಟಿನ ಮೂಲಕ. ಇಲ್ಲಿನ ಇತರ ಮುಖ್ಯ ನದಿಗಳೆಂದರೆ ಹೇಮಾವತಿ, ಲೋಕಪಾವನಿ, ಲಕ್ಷ್ಮಣ ತೀರ್ಥ ಮತ್ತು ಶಿಂಷಾ. ಇಲ್ಲಿ ಬೆಳೆಯಲ್ಪಡುವ ಬೆಳೆಗಳಲ್ಲಿ ಮುಖ್ಯವಾದವು ಭತ್ತ, ಕಬ್ಬು, ರಾಗಿ, ತೆಂಗು, ಅವರೆ, ಅಲಸಂದೆ, ಹುಚ್ಚೆಳ್ಳು ಮುಂತಾದವು. ಕಬ್ಬು ಮತ್ತು ಸಕ್ಕರೆ ಉತ್ಪಾದನೆಯ ಕಾರಣ ಮಂಡ್ಯಸಕ್ಕರೆಯ ಜಿಲ್ಲೆ, "ಮಧುರ ಮಂಡ್ಯ" ಎನಿಸಿಕೊಂಡಿದೆ.

ಶಿವನ ಸಮುದ್ರ ಜಲಪಾತ

ಶಿವನ ಸಮುದ್ರ ಜಲಪಾತ

PC: Anaamik

ಶಿವನ ಸಮುದ್ರ ಭಾರತದ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯಲ್ಲಿರುವ ಒಂದು ಸಣ್ಣ ನಗರ. ಕಾವೇರಿ ನದಿಯದಂಡೆಯಲ್ಲಿರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿಗಗನಚುಕ್ಕಿಮತ್ತು ಭರಚುಕ್ಕಿ ಎಂಬ ಜಲಪಾತವನ್ನು ಸೃಷ್ಠಿಸುತ್ತದೆ. 1902ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಯಿತು. ಇದು ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು.ಶಿವನ ಸಮುದ್ರ ಜಲಪಾತವು ಕಾವೇರಿ ನದಿ ನೀರಾಗಿದೆ, ನದಿ ಬಂಡೆಗಳ ಮತ್ತು ಡೆಕ್ಕನ್ ಪ್ರಸ್ಥಭೂಮಿಯ ಪ್ರಪಾತಗಳು ಮೂಲಕ ತನ್ನ ಹಾದಿಯನ್ನು ಸುತ್ತಿಕೊಂಡು ಮತ್ತು ಜಲಪಾತಗಳು ರೂಪಿಸಲು ಹರಿದು ಹೋಗುತ್ತದೆ.

ಮೇಲು ಕೋಟೆ

ಮೇಲು ಕೋಟೆ

ಮಂಡ್ಯ ಜಿಲ್ಲೆಯಲ್ಲಿರುವ ಮೇಲು ಕೋಟೆಗೆ 12 ಶತಮಾನದ ಇತಿಹಾಸವಿದೆ. ಸಂತ ರಾಮಾನುಜಾಚಾರ್ಯರು ಈ ಪಟ್ಟಣದಲ್ಲಿ ಸುಮಾರು 12 ವರ್ಷಗಳ ಕಾಲ ನೆಲೆಸಿದ್ದರಿಂದ ಆ ಸಮಯದ ನಂತರದಿಂದ ಈ ಸ್ಥಳವು ಮಹತ್ವದ ಧಾರ್ಮಿಕ ಕೇಂದ್ರವಾಯಿತು. ಚೆಲುವನಾರಾಯಣ ಸ್ವಾಮಿ ದೇವಸ್ಥಾನವು ಮೆಲುಕೋಟೆಯಲ್ಲಿ ಮೊದಲ ಮತ್ತು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ದೇಶದ ಎಲ್ಲೆಡೆಯ ಹಿಂದು ಭಕ್ತರಲ್ಲಿ ಹೆಸರುವಾಸಿಯಾಗಿರುವ ಈ ದೇವಾಲಯವು ಪ್ರತೀವರ್ಷ ಸಾವಿರಾರು ಜನ ಹಿಂದೂ ಭಕ್ತರು ಮತ್ತು ಪ್ರವಾಸಿಗರಿಂದ ಭೇಟಿ ಕೊಡಲ್ಪಡುತ್ತದೆ. ಈ ಪ್ರಾಚೀನ ದೇವಾಲಯವು ಯಾದವಗಿರಿಯ ಯದುಗಿರಿ ಬೆಟ್ಟದಲ್ಲಿದ್ದು, ವಿಷ್ಣುವಿನ ರೂಪವಾದ ಚೆಲುವನಾರಾಯಣ ದೇವರಿಗೆ ಅರ್ಪಿತವಾಗಿದೆ.

ಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯಇಲ್ಲಿದೆ ಬೆಲೆ ಬಾಳುವ ನಾಗಮಣಿ; ಏನಿದರ ರಹಸ್ಯ

 ರಂಗನಾಥಸ್ವಾಮಿ ದೇವಾಲಯ

ರಂಗನಾಥಸ್ವಾಮಿ ದೇವಾಲಯ

PC: Adam Jones

ಶ್ರೀ ರಂಗನಾಥಸ್ವಾಮಿ ದೇವಾಲಯವನ್ನು ದ್ರಾವಿಡ ವಾಸ್ತು ಶೈಲಿಯಲ್ಲಿ ಕಟ್ಟಲಾಗಿದೆ. ಇಲ್ಲಿ ಶ್ರೀ ರಂಗನಾಥಸ್ವಾಮಿಯನ್ನು "ಮಧ್ಯ ರಂಗ" ಎಂದು ಕರೆಯಲಾಗುತ್ತದೆ. ಶ್ರೀ ವೈಸ್ನವ ಭಕ್ತರು ಹೆಚ್ಚಾಗಿ ಪೂಜಿಸುತ್ತಾರೆ. ಎಲ್ಲಾ ಮೂರು ರಂಗಾ ನಡುವೆ, ಇಲ್ಲಿ ದೇವರ ವಿಗ್ರಹವನ್ನು ಪ್ರೀತಿಯಿಂದ 'ಮೋಹನ ರಂಗಾ' ಮತ್ತು 'ಜಗಮೋಹನ್ ರಂಗಾ' ಎಂದು ಕರೆಯಲಾಗುತ್ತದೆ.

ರ೦ಗನತಿಟ್ಟು ಪಕ್ಷಿಧಾಮ

ರ೦ಗನತಿಟ್ಟು ಪಕ್ಷಿಧಾಮ

PC: wikipedia

ರ೦ಗನತಿಟ್ಟು ಪಕ್ಷಿಧಾಮ ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ. ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳಗೊ೦ಡಿದೆ. ರಂಗನತಿಟ್ಟು ಪಕ್ಷಿಧಾಮವು ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ 16 ಕಿ.ಮಿ ಉತ್ತರದಲ್ಲಿದೆ .

ಮದ್ದೂರು

ಮದ್ದೂರು

PC: Apoorva lakshmi

ಮದ್ದೂರು ವಡೆಯನ್ನು ನೀವು ಕೇಳಿರಬಹುದು. ಇದು ಮಂಡ್ಯ ಜಿಲ್ಲೆಯಲ್ಲಿರುವುದು. ಮದ್ದೂರಿನ ಹತ್ತಿರದಲ್ಲಿರುವ ಶಿವಪುರದಲ್ಲಿ 1938ರಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು ಮತ್ತು ಮೈಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನ ನಡೆದಿದ್ದು ಇಲ್ಲೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X